ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಸಿಐಡಿ ಪೊಲೀಸ್ ಠಾಣೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಸ್ ಕೊಟ್ಟಿದ್ದಾರೆ.
ಬೆಂಗಳೂರು (ಮೇ.3): ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಸಿಐಡಿ ಪೊಲೀಸ್ ಠಾಣೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ನೀಡಿದ ದೂರಿನ ಹಿನ್ನೆಲೆ ಪ್ರಕರಣ ದಾಖಲಾಗಿದೆ.
2016-2021 ರವರೆಗೆ ಜಿಲ್ಲಾ ಪಂಚಾಯಿತಿಯೊಂದರ ಸದಸ್ಯೆಯಾಗಿದ್ದ ಸಂತ್ರಸ್ಥೆ ಸಾರ್ವಜನಿಕರ ಕೆಲಸ ಮಾಡಿಕೊಡುವುದಕ್ಕಾಗಿ ಎಂಎಲ್ಎ ಮತ್ತು ಎಂ.ಪಿ. ಹತ್ತಿರ ಹೋಗಿದ್ದರು. 2021 ರಲ್ಲಿ, ಬಿ.ಸಿ.ಎಂ ಇಲಾಖೆಯ ಕಾಲೇಜು ವಿದ್ಯಾರ್ಥಿನಿಯರ ಭವಿಷ್ಯಕ್ಕಾಗಿ ಪ್ರಜ್ವಲ್ ರೇವಣ್ಣ ಅವರನ್ನು ಭೇಟಿ ಮಾಡಿದ್ದರು. ವಿಧ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟ್ ಕೊಡಿಸುವುದಕ್ಕೆ, ಎಂಪಿ ಆದಂತಹ ಪ್ರಜ್ವಲ್ ರೇವಣ್ಣ ಅವರನ್ನು ಭೇಟಿ ಮಾಡಿದ್ದರು. ಆಗ ನಾಳೆ ಬನ್ನಿ ಅಂತ ಹೇಳಿ ಕಳುಹಿಸಿದರು.
Prajwal Revanna Obscene Video Case: ಎಚ್‌ಡಿ ರೇವಣ್ಣಗೆ ಮತ್ತೆ ಬಂಧನ ಭೀತಿ, ಜಾಮೀನಿಗೆ ಅರ್ಜಿ ಸಲ್ಲಿಕೆ
ಮರುದಿನ ಎಂ.ಪಿ ಕಛೇರಿಗೆ ತೆರಳಿದಾಗ ಪ್ರಜ್ವಲ್ ಮೇಲೆ ಹಾಲ್ ಇದೆ ಅಲ್ಲಿ ಇರಿ ಅಂತ ಹೇಳಿದ್ರು. ನನಗಿಂತ ಮುಂಚೆ ಹೋಗಿ ಕೂತಿದ್ದಂತಹ ಮಹಿಳೆಯರನ್ನು ಮೊದಲು ಮಾತನಾಡಿಸಿ ಕಳುಹಿಸಿದರು. ಕೊನೆಗೆ ನಾನು ಒಬ್ಬಳೇ ಉಳಿದುಕೊಂಡೆ, ಆಗ ಅವರು ನನ್ನನ್ನು ಮೇಲೆ ಅವರ ರೂಂ ಒಳಗಡೆ ಕರೆದರು. ನಾನು ಒಳಗೆ ಹೋದೆ, ಆಗ ಅವರು ನನ್ನ ಕೈ ಹಿಡಿದು ಎಳೆದು ರೂಂ ಬಾಗಿಲು ಮುಚ್ಚಿದರು. ಅವಾಗ ನಾನು ಬೇಡ ಯಾಕೆ ಬಾಗಿಲು ಹಾಕುತ್ತಿದ್ದೀರಾ ಎಂದು ಕೇಳಿದೆ. ಆಗ ಅವರು ಏನು ಅಗಲ್ಲ, ಅಂತ ಹೇಳಿ ನನ್ನನ್ನು ಬೆಡ್ ಮೇಲೆ ಕೂರಿಸಿಕೊಂಡರು.
ಅಮೇಲೆ ಅವರು ನಿನ್ನ ಗಂಡ ತುಂಬಾ ಜೋರು ಸ್ಮಲ್ಪ ಕಡಿಮೆ ಮಾತನಾಡಿಲಿಕ್ಕೆ ಹೇಳು, ಇಲ್ಲವಾದರೆ ಅವನನ್ನು ಬಿಡಲ್ಲ ಅಂತ ಹೇಳಿ ಅವನಿಂದ ನಮ್ಮ ಅಮ್ಮನಿಗೆ ಎಂಎಲ್ಎ ಟಿಕೆಟ್ ತಪ್ಪೋಯ್ತು ಎಂದು ಬೆದರಿಕೆ ಹಾಕಿದರು. ನಿನ್ನ ಗಂಡ ರಾಜಕೀಯದಲ್ಲಿ ಬೆಳೆಯಬೇಕು ಅಂದರೆ ನಾನು ಹೇಳಿದ ಹಾಗೆ ಮಾಡು ಎಂದು ಹೇಳುತ್ತಾ, ನನ್ನನ್ನು ಮಂಚದ ಮೇಲೆ ಬಟ್ಟೆ ಬಿಚ್ಚು ಅಂತ ಹೇಳಿದರು, ನಾನು ಬಿಚ್ಚಿಲ್ಲ ಅಂತ ಹೇಳಿದೆ ಅವರು ಬಿಚ್ಚು ಅಂತ ಒತ್ತಾಯ ಮಾಡಿದರು. ನಾನು ಕೂಗುತ್ತೇನೆ ಎಂದು ಹೇಳಿದರೆ, ನನ್ನ ಹತ್ತಿರ ಗನ್ ಇದೆ ನಾನು ಹೇಳಿದ ಹಾಗೆ ಕೇಳಲಿಲ್ಲ ಅಂದರೆ ನಿನ್ನ ಗಂಡನನ್ನು ನಿನ್ನನ್ನು, ಬಿಡುವುದಿಲ್ಲ, ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದರು.
ಪ್ರಜ್ವಲ್ ಪ್ರಕರಣದ ಸಂತ್ರಸ್ಥೆ ಅಪಹರಣ, ಸಿಎಂ ಆದೇಶ ಬೆನ್ನಲ್ಲೇ ಕಾಣೆಯಾದ ಮೈಸೂರು ಮಹಿಳೆಯ ತೀವ್ರ ಹುಡುಕಾಟ
ಬಳಿಕ ನನ್ನನ್ನು ಬಲತ್ಕಾರ ಮಾಡಲು ಪ್ರಯತ್ನ ಪಟ್ಟನು. ಆಗ ನಾನು ಎಷ್ಟೇ ಬಿಡಿಸಿಕೊಂಡರು ಬಿಡದೇ ಬಿಗಿಯಾಗಿ ನನ್ನ ಕೈಯನ್ನು ಹಿಡಿದುಕೊಂಡರು, ಕೂಗಬೇಡ ಅಂತ ಬೆದರಿಕೆ ಹಾಕಿದರು, ಆಗ ನಾನು ಭಯಪಟ್ಟೆ ಆಗ ಅವರು ಅವರ ಮೊಬೈಲ್ ತೆಗೆದರು ಆ ಭಯದಿಂದ ನಾನು ಹೆದರಿ ಅವರು ಹೇಳಿದ ಹಾಗೆ ಕೇಳಿದೆ ಹಾಗೂ ಅವರು ಹೇಳಿದಂತೆ ಅವರ ಜೊತೆ ನಡೆದುಕೊಂಡೆ, ಹೀಗೆ ಅವರು ನನ್ನನ್ನು ಬಲತ್ಕಾರ ಮಾಡುತ್ತಾ ಲೈಂಗಿಕ ದೌರ್ಜನ್ಯ ಮಾಡಿ ಅದನ್ನು ಅವರ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡರು. ಆಮೇಲೆ ನೀನೇನಾದರೂ ಈ ವಿಚಾರವನ್ನು ಬಾಯಿ ಬಿಟ್ಟರೆ ನಿನ್ನ ವಿಡಿಯೋವನ್ನು ಸಾರ್ವಜನಿಕರಿಗೆ ಬಿಡುತ್ತೇನೆ ಈ ವಿಡಿಯೋದಲ್ಲಿ, ನನ್ನ ಮುಖ ಇಲ್ಲ. ನಿನ್ನದೇ ಮಾನ ಮರ್ಯಾದೆ ಹೋಗೋದು ಎಂದು ಹೇಳಿ ನನ್ನನ್ನು ಭಯಪಡಿಸಿ, ಈ ವಿಡಿಯೋವನ್ನು ಹೀಗೆ ಇಟ್ಟುಕೊಂಡಿರುತ್ತೇನೆ ನಾನು
ಕರೆದಾಗಲೆಲ್ಲಾ ನೀನು ನನ್ನ ಜೊತೆ ಮಲಗಲು ಬರಬೇಕು ಇಲ್ಲ, ಅಂದರೆ ವಿಡಿಯೋವನ್ನು ಬಹಿರಂಗಪಡಿಸುತ್ತೇನೆ ಎಂದು ಬ್ಲ್ಯಾಕ್ ಮೇಲೆ ಮಾಡಿದನು.
ಜೊತೆಗೆ ನಿನ್ನ ಗಂಡ ನನ್ನ ಜೊತೆಯಲಿ, ಇರುತ್ತಾನೆ ಅವನನ್ನು ಮುಗಿಸುತ್ತೇನೆ ಎಂದು ನನ್ನನ್ನು ಬೆದರಿಸಿ ಭಯಪಡಿಸುತ್ತಾ, ಪದೇ ಪದೇ ನನಗೆ ಫೋನ್ ಮಾಡಿ ವಿಡಿಯೋ ಕಾಲ್ ಮಾಡಿ ನಿನ್ನ ದೇಹವನ್ನು ನಗ್ನವಾಗಿ ತೋರಿಸು ಬಟ್ಟೆ ಬಿಚ್ಚು ಎಂದು ಪದೇ ಪದೇ ಪೀಡಿಸಿ ಮಾನಸಿಕವಾಗಿ ಹಿಂಸೆ ನೀಡಿ, ದೈಹಿಕವಾಗಿ ಅನೇಕ ಬಾರಿ ನನ್ನನ್ನು ಬಲವಂತವಾಗಿ ಬಲತ್ಕಾರ ಮಾಡಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುತ್ತಾನೆ. ಆದ್ದರಿಂದ ಹಾಸನದ ಎಂ.ಪಿ ಆದ ಪ್ರಜ್ವಲ್ ರೇವಣ್ಣನ ನನ್ನನ್ನು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೊಲೆ ಬೆದರಿಕೆ ಹಾಕಿ ಭಯಪಡಿಸಿ ಬಲವಂತವಾಗಿ ಬಲತಾರ ಮಾಡುತ್ತಾ ಲೈಂಗಿಕ ದೌರ್ಜನ್ಯ ಮಾಡಿ ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾರ್ವಜನಿಕವಾಗಿ ಬಹಿರಂಗ ಮಾಡಿ ನನ್ನ ಮಾನ ಮರ್ಯಾದೆ ಹಾಳು ಮಾಡುತ್ತೇನೆಂದು ಬ್ಲಾಕ್ ಮೇಲ್ ಮಾಡಿ ಹೆದರಿಸಿ ಪದೇ ಪದೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋವನ್ನು ಪ್ರಸಾರ ಮಾಡಿ ನನ್ನ ಮರ್ಯಾದೆ ಹಾಳು ಮಾಡಿರುವವರ ಮೇಲೆ ಕಾನೂನು ಕ್ರಮಕೈಗೊಳ್ಳಲು ಕೋರುತ್ತೇನೆ.
ಇಷ್ಟು ದಿನ ನಾನು ಅವರು ಬೆದರಿಕೆ ಹಾಕಿದ್ದ ಭಯದಿಂದ ಹೆದರಿ ನನ್ನ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿರಲಿಲ್ಲ. ಈಗ ಎಸ್.ಐ.ಟಿ. ರಚನೆಯಾಗಿ ತನಿಖೆಯಾಗುತ್ತಿರುವುದರಿಂದ ನನಗಾಗಿರುವ ದೌರ್ಜನ್ಯ, ಈ ದಿನ ಬಂದು ದೂರು ನೀಡುತ್ತಿದ್ದೇನೆ ಎಂದು ದೂರಿನಲ್ಲಿ ಸಂಕ್ಷಿಪ್ತವಾಗಿ ಸಂತ್ರಸ್ಥೆ ಉಲ್ಲೇಖಿಸಿದ್ದಾರೆ.