ವಿನೋದ್‌ ಅಸೂಟಿರನ್ನ ಹರಕೆಯ ಕುರಿಯಾಗಿಸಿದ ಕಾಂಗ್ರೆಸ್: ಜೋಶಿ ಗೆಲುವು ಖಚಿತ, ಬೈರತಿ ಬಸವರಾಜ

By Girish Goudar  |  First Published May 3, 2024, 5:49 PM IST

ಕಳೆದ ಎರಡು ದಿನಗಳಿಂದ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದು, ಹಾಲು ಮತ ಬಾಂಧವರು ಸೇರಿದಂತೆ ಎಲ್ಲ ಸಮಾಜ ಬಾಂಧವರು ಜೋಶಿಯವರ ಅಭಿವೃದ್ಧಿ ಕಾರ್ಯ ಕುರಿತು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅತ್ಯಧಿಕ‌ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ: ಮಾಜಿ ಸಚಿವ ಬೈರತಿ ಬಸವರಾಜ 


ಹುಬ್ಬಳ್ಳಿ(ಮೇ.03): ಕಾಂಗ್ರೆಸ್ ಪಕ್ಷವು ವಿನೋದ್‌ ಅಸೂಟಿ ಅವರನ್ನು ಹರಕೆಯ ಕುರಿಯಾಗಿಸಿದೆ. ಧಾರವಾಡ ಬಿಜೆಪಿಯ ಭದ್ರಕೋಟೆಯಾಗಿದೆ. ಕಳೆದ 20 ವರ್ಷಗಳಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಈ ವಿಷಯ ಕಾಂಗ್ರೆಸ್‌ನವರಿಗೆ ಗೊತ್ತಿದ್ದರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕುರುಬ ಸಮಾಜದ ಯುವ ಮುಖಂಡ ವಿನೋದ್ ಅಸೂಟಿಗೆ ಟಿಕೆಟ್ ನೀಡಿದೆ. ಜೋಶಿ ಎದುರು ಅಸೂಟಿ ಸೋಲು ಖಚಿತವಾಗಿದ್ದು, ಕಾಂಗ್ರೆಸ್ ಪಕ್ಷ ಅವರನ್ನು ಹರಕೆಯ ಕುರಿಯನ್ನಾಗಿಸಿದೆ ಎಂದು ಮಾಜಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ. 

ಇಂದು(ಶುಕ್ರವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಬೈರತಿ ಬಸವರಾಜ ಅವರು, ಕಾಂಗ್ರೆಸ್ ಪಕ್ಷದಿಂದ ಅಸೂಟಿಗೆ ಟಿಕೆಟ್ ಕೊಡುವ ಇಚ್ಚೆಯಿದ್ದರೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕಿತ್ತು. ಆದರೆ, ಅಂದು ಟಿಕೆಟ್ ಕೈತಪ್ಪಿಸಿ ಇದೀಗ ಜೋಶಿ ಎದುರು ಸೋಲುವ ಅಭ್ಯರ್ಥಿಯನ್ನು ಸ್ಪರ್ಧೆಗೆ ನಿಲ್ಲಿಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನೆ ಮಾಡಿದ್ದಾರೆ. 

Tap to resize

Latest Videos

ವಿದೇಶಗಳಲ್ಲಿನ ಯುದ್ಧ ನಿಲ್ಲಿಸಿದ ಮೋದಿಗೆ ಮಹದಾಯಿ ಯೋಜನೆ ಜಾರಿಗೆ ತರಲು ಆಗಿಲ್ಲ: ಸಂತೋಷ್ ಲಾಡ್

ಕಳೆದ ಎರಡು ದಿನಗಳಿಂದ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದು, ಹಾಲು ಮತ ಬಾಂಧವರು ಸೇರಿದಂತೆ ಎಲ್ಲ ಸಮಾಜ ಬಾಂಧವರು ಜೋಶಿಯವರ ಅಭಿವೃದ್ಧಿ ಕಾರ್ಯ ಕುರಿತು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅತ್ಯಧಿಕ‌ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ತಿಳಿಸಿದ್ದಾರೆ. 

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಭೈರತಿ ಬಸವರಾಜ ಅವರು, ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದೆ. ಆರೋಪ ಸಾಬೀತಾದಲ್ಲಿ ಪ್ರಜ್ವಲ್‌ಗೆ ಕಠಿಣವಾದ ಶಿಕ್ಷೆ ನೀಡಲು ಒತ್ತಾಯಿಸುವೆ. ಈ ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂಬುದರ ಸ್ಪಷ್ಟ ಮಾಹಿತಿ ಹೊರಬರಬೇಕಾದಲ್ಲಿ ಇದನ್ನು ಸಿಬಿಐಗೆ ವಹಿಸಲು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ. 

click me!