ಬಿಎಸ್‌ವೈ ಬೆಂಬಲಿಗರಲ್ಲಿ ಟೆನ್ಶನ್; ಒಲಿಂಪಿಕ್ಸ್ ಆರಂಭಕ್ಕೆ ಕೌಂಟ್‌ಡೌನ್; ಜು.22ರ ಟಾಪ್ 10 ಸುದ್ದಿ!

By Suvarna NewsFirst Published Jul 22, 2021, 4:56 PM IST
Highlights

ಸಿಎಂ ಬಿಎಸ್ ಯಡಿಯೂರಪ್ಪ ಪದತ್ಯಾಗ ಸುಳಿವು ನೀಡಿರುವುದು ಬೆಂಬಲಿರ ಆತಂಕ ಹೆಚ್ಚಿಸಿದೆ. ಇತ್ತ ಪೋರ್ನ್ ಕೇಸ್‌ನಲ್ಲಿ ಬಂಧನ ತಪ್ಪಿಸಲು ರಾಜ್‌ ಕುಂದ್ರಾ 25 ಲಕ್ಷ ರೂಪಾಯಿ ಲಂಚ ನೀಡಿರುವುದು ಬೆಳಕಿಗೆ ಬಂದಿದೆ. ಅತಿದೊಡ್ಡ ಕ್ರೀಡಾಜಾತ್ರೆ ಟೋಕಿಯೋ ಒಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಸಲ್ಮಾನ್ ಖಾನ್‌ಗೆ ಹದಿನೇಳು ವರ್ಷದ ಮಗಳಿದ್ದಾಳಂತೆ ಅನ್ನೋ ಮಾತುಗಳು ಕೇಳಿಬಂದಿದೆ. ದುಬೈನಲ್ಲಿ ಡ್ರೋನ್ ಮೂಲಕ ಕೃತಕ ಮಳೆ, ಸತ್ತ ಮೇಲೂ ಸಿದ್ದಿಕಿ ತಲೆ ಮೇಲೆ ವಾಹನ ಹರಿಸಿದ್ದ ತಾಲಿಬಾನಿಗಳು ಸೇರಿದಂತೆ ಜುಲೈ 22ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಅರೆಸ್ಟ್‌ ಆಗೋದ್ರಿಂದ ಪಾರಾಗಲು ಪೊಲೀಸ್ ಅಧಿಕಾರಿಗೆ 25 ಲಕ್ಷ ಕೊಟ್ಟಿದ್ದ ಕುಂದ್ರಾ!

ಪೋರ್ನೋಗ್ರಫಿ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿಚಾರವಾಗಿ ಆರೋಪಿಯೊಬ್ಬ ಶಾಕಿಂಗ್ ಮಾಹಿತಿ ಬಾಯ್ಬಿಟ್ಟಿದ್ದಾನೆ. ಹೌದು ಈ  ಪ್ರಕರಣದ ವಾಂಟೆಡ್ ಆರೋಪಿ ಯಶ್ ಠಾಕೂರ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಾಲ್ಕು ಮೇಲ್‌ ಕಳುಹಿಸಿ, ತಾನು ಅರೆಸ್ಟ್‌ ಆಗುವುದನ್ನು ತಪ್ಪಿಸಲು ರಾಜ್ ಕುಂದ್ರಾ ಮುಂಬೈ ಪೊಲೀಸರಿಗೆ 25 ಲಕ್ಷ ಲಂಚ ನೀಡಿದ್ದಾರೆ. 

ಜು.26ಕ್ಕೆ ಪದತ್ಯಾಗದ ಸುಳಿವು ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ?

 ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಕಾವೇರುತ್ತಿದೆ. ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. 

ಸತ್ತ ಮೇಲೂ ಸಿದ್ದಿಕಿ ತಲೆ ಮೇಲೆ ವಾಹನ ಹರಿಸಿದ್ದ ತಾಲಿಬಾನಿಗಳು!

ಇತ್ತೀಚೆಗೆ ಆಷ್ಘಾನಿಸ್ತಾನದಲ್ಲಿ ಹತರಾದ ಪುಲಿಟ್ಜರ್‌ ಪುರಸ್ಕೃತ ಭಾರತೀಯ ಫೋಟೋ ಜರ್ನಲಿಸ್ಟ್‌ ಡ್ಯಾನಿಷ್‌ ಸಿದ್ದಿಕಿಯನ್ನು ತಾಲಿಬಾನಿ ಉಗ್ರರು ಅತ್ಯಂತ ಭೀಕರವಾಗಿ ಹತ್ಯೆಗೈದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ ಭರತೀಯರ ಕುರಿತ ತಾಲಿಬಾನಿಗಳ ದ್ವೇಷವನ್ನು ಘಟನೆ ಎತ್ತಿ ತೋರಿಸಿದೆ.

ಅತಿದೊಡ್ಡ ಕ್ರೀಡಾಜಾತ್ರೆ ಟೋಕಿಯೋ ಒಲಿಂಪಿಕ್ಸ್‌ಗೆ ಕ್ಷಣಗಣನೆ

2020ರ ಒಲಿಂಪಿಕ್ಸ್‌ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ‘ನಿಹೋನ್‌ ಎ ಯುಕೋಸೋ’ (ಜಪಾನ್‌ಗೆ ಸುಸ್ವಾಗತ!).

ಸಲ್ಮಾನ್ ಖಾನ್‌ಗೆ ಹದಿನೇಳು ವರ್ಷದ ಮಗಳಿದ್ದಾಳಂತೆ, ಹೌದಾ!

ಬಾಲಿವುಡ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಸಲ್ಮಾನ್ ಖಾನ್ ಎಂದೆ ಈವರೆಗೆ ಭಾವಿಸಲಾಗಿತ್ತು. ಆ ಮಾತನ್ನು ಜನ ಈಗ ಸಂಶಯದಿಂದ ನೋಡಲು ಶುರು ಮಾಡಿದ್ದಾರೆ. ಇದಕ್ಕೆ ಕಾರಣ ಸಲ್ಮಾನ್ ಖಾನ್‌ ಗೆ 17 ವರ್ಷದ ಹೆಣ್ಣು ಮಗು ಇದೆ ಎಂಬ ಸುದ್ದಿ.

ಎಲ್‌ಐಸಿಯಿಂದ ಹೊಸ ವಿಮಾ ಯೋಜನೆ ‘ಆರೋಗ್ಯ ರಕ್ಷಕ್‌’

ಭಾರತೀಯ ಜೀವ ವಿಮಾ ನಿಗಮವು(ಎಲ್‌ಐಸಿ) ಆರೋಗ್ಯ ರಕ್ಷಕ್‌ ಎಂಬ ನೂತನ ಆರೋಗ್ಯ ವಿಮಾ ಯೋಜನೆಯನ್ನು ಜು.19 ರಿಂದ ಪರಿಚಯಿಸಿದೆ. ಆರೋಗ್ಯ ಸಂಬಂಧಿ ತುರ್ತು ಸಮಯಗಳಲ್ಲಿ ಪಾಲಿಸಿದಾರರು ಮತ್ತು ಅವರ ಕುಟುಂಬದವರಿಗೆ ಈ ಪಾಲಿಸಿಯು ನೆರವಿಗೆ ಬರಲಿದೆ ಎಂದು ನಿಗಮ ತಿಳಿಸಿದೆ.

ಬಾಯಲ್ಲಿ ನಿರೂರಿಸುವ ಜಿಲೇಬಿ ತಿನ್ನಲು ಪತ್ನಿ ಬಿಡುತ್ತಿಲ್ಲ, IPS ಅಧಿಕಾರಿ ಟ್ವೀಟ್ ವೈರಲ್!

ಬಿಸಿ ಬಿಸಿ ಜಿಲೇಬಿ ನೋಡಿದರೆ ತಿನ್ನದೆ ಇರಲು ಸಾಧ್ಯವಿಲ್ಲ. ಆದರೆ ಇದೀಗ ಐಪಿಎಎಸ್ ಅಧಿಕಾರಿ ತಮ್ಮ ಜಿಲೇಬಿ ತಿನ್ನುವ ಆಸೆಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಎಲ್ಲವೂ ಎದುರಿಗಿದ್ದರೂ ಜಿಲೇಬಿ ತಿನ್ನಲು ಮಾತ್ರ ಪತ್ನಿ ಬಿಡುತ್ತಿಲ್ಲ ಅನ್ನೋ ಟ್ವೀಟ್ ಇದೀಗ ವೈರಲ್ ಆಗಿದೆ.

ಬಿಸಿಲ ಬೇಗೆ ತಡೆಯಲು ಡ್ರೋನ್ ಮೂಲಕ ಕೃತಕ ಮಳೆ ಸುರಿಸಿದ ದುಬೈ!

ದುಬೈನಲ್ಲಿ ಬಿಸಿಲ ಬೇಗೆ ತಡೆಯಲಾಗದೆ ಪ್ರಾಣ ಜನ ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ತಾಪಮಾನ 50 ಡಿಗ್ರಿ ಸೆಲ್ಶಿಯಸ್ ತಲುಪಿದೆ. ಇದಕ್ಕೆ ದುಬೈ ಆಧುನಿಕ ಹಾಗೂ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಂಡಿದೆ. ಡ್ರೋನ್ ಬಳಸಿ ಕೃತಕ ಮಳೆ ಸುರಿಸಿ ತಂಪೆರೆದಿದ್ದಾರೆ.

15,000 ಹಳೆಯ ಹಿಮಗಡ್ಡೆಯಲ್ಲಿ ವೈರಸ್ ಪತ್ತೆ, ವಿಜ್ಞಾನಿಗಳಿಗೂ ಶಾಕ್!

ಚೀನಾದ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿರುವ 15 ಸಾವಿರ ವರ್ಷಗದ ಹಳೆಯ ಹಿಮಗಡ್ಡೆಯಲ್ಲಿ ಮಾದರಿಗಳಲ್ಲಿ ವೈರಸ್‌ಗಳು ಪತ್ತೆಯಾಗಿವೆ. ಆದರೆ ಈ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ ಎಂಬುವುದು ಉಲ್ಲೇಖನೀಯ.
 

click me!