ಎಲ್ಲ ಕಾಮುಕರು ಯಾಕೆ ನಿನ್ನ ಪಾರ್ಟಿಯಲ್ಲಿ ಸೇರುತ್ತಿದ್ದಾರೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ಏಕ ವಚನದಲ್ಲೇ ವಾಗ್ದಾಳಿ

By Girish Goudar  |  First Published Apr 30, 2024, 10:10 PM IST

ಅವನಿಗೂ ನನಗೂ ಸಂಬಂಧ ಇಲ್ಲ.. ಪ್ರಜ್ವಲ್ ಅಣ್ಣನ ಮಗ ಅಂತಾ ಕುಮಾರಸ್ವಾಮಿ ಹೇಳ್ತಾರೆ. ವೇದಿಕೆ ಮೇಲೆ ಇವ ಮಗ ಇದ್ದಂಗ ಅಂತಾ ಹೇಳಿದ್ದು ನಾವ್ ಕೇಳಿಸಿಕೊಂಡಿಲ್ವಾ..? ಎಂದು ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಮೋದಿ, ಕುಮಾರಸ್ವಾಮಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ ಪ್ರಕಾಶ್ ರಾಜ್ 


ಗದಗ(ಏ.30):  ಬ್ರಿಜ್ ಭೂಷಣ್‌ನಿಂದ ಹಿಡಿದು ಪ್ರಜ್ವಲ್‌ವರೆಗೆ ಎಲ್ಲ ಕಾಮುಕರು ಯಾಕೆ ನಿನ್ನ ಪಾರ್ಟಿಯಲ್ಲಿ ಸೇರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. 

ಇಂದು(ಮಂಗಳವಾರ) ಗದಗನಲ್ಲಿ ನಡೆದ ಪ್ರಕಾಶ್ ರಾಜ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಣಿ ಪ್ರಶ್ನೆಗಳನ್ನ ಕೇಳಿದ್ದಾರೆ. ಅವನಿಗೂ ನನಗೂ ಸಂಬಂಧ ಇಲ್ಲ.. ಪ್ರಜ್ವಲ್ ಅಣ್ಣನ ಮಗ ಅಂತಾ ಕುಮಾರಸ್ವಾಮಿ ಹೇಳ್ತಾರೆ. ವೇದಿಕೆ ಮೇಲೆ ಇವ ಮಗ ಇದ್ದಂಗ ಅಂತಾ ಹೇಳಿದ್ದು ನಾವ್ ಕೇಳಿಸಿಕೊಂಡಿಲ್ವಾ..? ಎಂದು ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಮೋದಿ, ಕುಮಾರಸ್ವಾಮಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ. 

Latest Videos

undefined

ಸಿಬಿಐಗಿಂತ ವಿಶೇಷ ಸಾಮರ್ಥ್ಯ ರಾಜ್ಯ ಪೊಲೀಸರಿಗಿದೆ: ಎಚ್‌ಕೆ ಪಾಟೀಲ್

ಯಾವುದೋ ಸರ್ಕಾರ ಬಂದೇತಿ ಹೆಣ್ ಮಕ್ಕಳಿಗೆ ಉಚಿತ ಬಸ್ ಕೊಟ್ಟಾರ. ಉಚಿತ ಬಸ್ ತಗೊಂಡು ಹೆಣ್ಣಮಕ್ಕಳು ದಾರಿ ತಪ್ಪತಾರನ..?. ಹೆಣ್ಣಮಕ್ಕಳು ದಾರಿ ತಪ್ಪೋದು ಅಂದ್ರ ಹಳ್ಳಿಯೊಳಗ ಏನ್ ಅರ್ಥ ಗೊತ್ತನ ಆ ಮನುಷ್ಯನಿಗೆ. ಸರಿನಪ್ಪ ಹೆಣ್ಣಮಕ್ಕಳು‌ದಾರಿ ತಪ್ಪಿದ್ರು. ನಿನ್ ಮನಿ ಮಗ ದಾರಿ ತಪ್ಪಿದ್ನಲ್ಲ. ಅವಾ ಎಲ್ಲದಾನ್ ಹೇಳು ಎಂದು ಪ್ರಶ್ನಿಸಿದ್ದಾರೆ. 

ಕಲ್ಯಾಣ ಕರ್ಮಾಟಕಕ್ಕೆ ಮೋದಿ ಬಂದಿದ್ರು.. ನಾವು ಕಾಯಕದ ಕಲ್ಯಾಣ ಅಂತೇವಿ. ಅವ್ರು ಕಾವಿ ಕಲ್ಯಾಣ ಮಾಡಾಕ್ ಬಂದಾನ. ಅಲ್ಲಿ ಬಂದು ನೇಹಾ ಪ್ರಕರಣ ಮಾತಾಡ್ತಾನ. ನೇಹಾ ಪ್ರಕರಣ ನಮಗ ಎದಿ ಚುರ್ ಅನ್ನೋದಿಲ್ಲೇರ್ರಿ. ನೇಹಾ, ಅದಕ್ಕೂ ಮುಂಚೆ ಒಂದು ಮುಸ್ಲಿಂ ಹೆಣ್ಣುಮಗಳು ಹತ್ ಕೇಸ್ ನಡೆದಾವು‌. ಸಮಾಜದಲ್ಲಿ ಯಾಕೆ ಈ ದೌರ್ಜನ್ಯ ನಡ್ಯಾಕತ್ತೇತಿ ಅಂತಾ ಯೋಚ್ನೆ ಮಾಡ್ಬೇಕು. ಅದು ಬಿಟ್ಟು ಅದ್ಕೊಂದು ಜಾತಿ, ಧರ್ಮದ ಲೇಪನ ಹಾಕ್ತಿನ..?. ಹೆಣದ ಮೇಲೆ ರಾಜಕೀಯ ಮಾಡ್ತೀನ ಅಂತಾ ಮೋದಿಗೆ ಪ್ರಶ್ನೆ ಮಾಡಿದ್ದಾರೆ. 

ಬಿಜೆಪಿ ಮಹಿಳಾ ಸದಸ್ಯರಿಗೆ ಕೇಳ್ತೇನಿ. ಅವ್ನು ಯಾವ್ನಾದ್ರೂ ಇರ್ಲಿ ವಿಕೃತ ಕಾಮುಕ. ಅಶ್ಲೀಲ ಚಿತ್ರ ಅಲ್ಲ, ವಿಕೃತ ಕಾಮ. ಎರಡು ಸಾವಿರ ಹಣ್ಣು ಮಕ್ಕಳಯ ಕಾಣೋದಿಲ್ಲನ ನಿಮಗ. ಅವ್ರು ಹಿಂದೂಗಳಲ್ಲೇನು. ಅದ್ರ ಬಗ್ಗೆ ಪ್ರತಿಭಟನೆ ಮಾಡೋದಿಲ್ಲ ನೀವು..?. ನಾವು ಯೋಚ್ನೆ ಮಾಡದಿದ್ರೆ ಎಲ್ಲ ರಾಜಕೀಯ ಪಕ್ಷಗಳು ನಮ್ಮನ್ನ ಮಂಗನ್ನ ಮಾಡೋದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

click me!