ಹುಬ್ಬಳ್ಳಿಯ ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಸಿಐಡಿ ತಂಡ ಆರೋಪಿ ಫಯಾಜ್‌ನನ್ನ ಜೈಲಿಗೆ ಕಳುಹಿಸಿದೆ. ಸಿಐಡಿ ಅಧಿಕಾರಿಗಳು ಆರೋಪಿ ಫಯಾಜ್‌ನನ್ನ ಆರು ದಿನ ತನ್ನ ವಶಕ್ಕೆ ಪಡೆದಿದ್ದರು. ಆರು ದಿನದಲ್ಲಿ ಫಯಾಜ್ ವಿಚಾರಣೆ ಪೂರ್ಣಗೊಂಡಿದೆ.
ಧಾರವಾಡ(ಏ.30): ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ಸಿಐಡಿ ಕಸ್ಟಡಿ ಅಂತ್ಯವಾಗಿದೆ. ಹೀಗಾಗಿ ಸಿಐಡಿ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಆರೋಪಿ ಫಯಾಜ್‌ನನ್ನ ರವಾನೆ ಮಾಡಲಾಗಿದೆ.
ಹುಬ್ಬಳ್ಳಿಯ ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಸಿಐಡಿ ತಂಡ ಆರೋಪಿ ಫಯಾಜ್‌ನನ್ನ ಜೈಲಿಗೆ ಕಳುಹಿಸಿದೆ. ಸಿಐಡಿ ಅಧಿಕಾರಿಗಳು ಆರೋಪಿ ಫಯಾಜ್‌ನನ್ನ ಆರು ದಿನ ತನ್ನ ವಶಕ್ಕೆ ಪಡೆದಿದ್ದರು. ಆರು ದಿನದಲ್ಲಿ ಫಯಾಜ್ ವಿಚಾರಣೆ ಪೂರ್ಣಗೊಂಡಿದೆ.
ನೇಹಾಳಂತ ಕೋಟ್ಯಂತರ ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕಿದೆ, ಹೊಸಪೇಟೆಯಲ್ಲಿ ಕಾಂಗ್ರೆಸ್ ಕುಟುಕಿದ ಮೋದಿ!
ಈ ಹಿನ್ನೆಲೆಯಲ್ಲಿ ಸಿಐಡಿ ಪರ ವಕೀಲರು ಮತ್ತೆ ಆರೋಪಿಯನ್ನ ಕಸ್ಟಡಿಗೆ ಕೇಳಿಲ್ಲ. ಹೀಗಾಗಿ ಕೋರ್ಟ್ ಫಯಾಜ್‌ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಹಸ್ತಾಂತರಿಸಿದ್ದಾರೆ.