ಬೆಂಗಳೂರಿನ ನಿಗೂಢ ಶಬ್ದದ ಅಸಲಿ ಕಾರಣ, ಯಾಮಿಗೆ ಸಂಕಷ್ಟ ತಂದ ಕೋಟಿ ಹಣ; ಜು.2ರ ಟಾಪ್ 10 ಸುದ್ದಿ!

By Suvarna NewsFirst Published Jul 2, 2021, 5:55 PM IST
Highlights

ಬೆಂಗಳೂರಿನಲ್ಲಿಂದು ನಿಗೂಢ ಶಬ್ದವೊಂದು ಕೇಳಿಸಿದೆ. ಶಬ್ಧದ ತೀವ್ರತೆಗೆ ಜನ ಹೊರಗೋಡಿ ಬಂದಿದ್ದಾರೆ. ದೊಡ್ಡಬಳ್ಳಾಪುರದ ಅನಾಥ ವೃದ್ಧ ದಂಪತಿ ಹೊಣೆಯನ್ನು ನಟ ಕಿಚ್ಚ ಸುದೀಪ್ ಹೊತ್ತುಕೊಂಡಿದ್ದಾರೆ. ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿ ಮಾಧ್ಯಮ ಸಂವಾದ ನಡೆಸಿದ್ದಾರೆ. ಕೋಟಿಗಟ್ಟಲೆ ವರ್ಗಾವಣೆಯಿಂದ ಯಾಮಿಗೆ ED ನೋಟಿಸ್, ಸಿಖ್ ಯುವತಿಯರ ಅಪಹರಿಸಿ ಮತಾಂತರ ಮಾಡಿ ವೃದ್ಧರ ಜತೆ ಮದುವೆ ಸೇರಿದಂತೆ ಜುಲೈ 2ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ ನಿಗೂಢ ಶಬ್ದ; ಹಲವರಿಗೆ ಭೂಕಂಪನದ ಅನುಭವ!...

ಕೊರೋನಾ ವೈರಸ್ ಮಾರ್ಗಸೂಚಿ, ವರ್ಕ್ ಫ್ರಮ್ ಹೋಮ್ ಸೇರಿದಂತೆ ಹಲವು ಕಾರಣಗಳಿಂದ ಬೆಂಗಳೂರಿನಲ್ಲಿ ಈ ಹಿಂದಿನ ಟ್ರಾಫಿಕ್, ವಾಹನಗಳ ಶಬ್ದ ಕೊಂಚ ಮಟ್ಟಿಗೆ ಕಡಿಮೆ. ಶಾಂತವಾಗಿದ್ದ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ನಿಗೂಢ ಶಬ್ದವೊಂದು ಕೇಳಿಸಿದೆ. ಸುಮಾರು 5 ಸೆಕೆಂಡ್‌ಗಳ ಕಾಲ ಕೇಳಿಸಿದ ಈ ಭಾರಿ ಶಬ್ದಕ್ಕೆ ಬೆಂಗಳೂರಿನ ಜನ ಬೆಚ್ಚಿ ಬಿದ್ದಿದ್ದಾರೆ.

ಅಪಾಕಾರಿ ಡೆಲ್ಟಾ ವೈರಸ್‌ ವಿರುದ್ಧ ಜಾನ್ಸನ್ ಲಸಿಕೆ ಪರಿಣಾಮಕಾರಿ; ಅಧ್ಯಯನ ವರದಿ!...

ಕೊರೋನಾ ವೈರಸ್ ವಿರುದ್ಧ ಹೋರಾಡಲು ಈಗಾಲೇ ಬಹುತೇಕ ರಾಷ್ಟ್ರಗಳಲ್ಲಿ ಲಸಿಕಾ ಅಭಿಯಾನ ಆರಂಭಗೊಂಡಿದೆ. ಆದರೆ ಈ ಲಸಿಕೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಕೊರೋನಾ ರೂಪಾಂತರಿ ವೈರಸ್ ಡೆಲ್ಟಾ ಹರಡುತ್ತಿದೆ. ಆದರೆ ಡೆಲ್ಟಾ ಎಂದು ಆತಂಕ ಪಡುವ ಅಗತ್ಯವಿಲ್ಲ. ಕಾರಣ ಡೆಲ್ಟಾ ಸೇರಿದಂತೆ ಕೊರೋನಾ ಡಬಲ್ ಮ್ಯೂಟೇಶನ್ ವೈರಸ್ ವಿರುದ್ಧ ಹೋರಾಡಬಲ್ಲ ಶಕ್ತಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗೆ ಇದೆ ಎಂದು ಅಧ್ಯಯನ ವರದಿ ಹೇಳಿದೆ.

ಮಹಾರಾಷ್ಟ್ರ ಮೈತ್ರಿಯಲ್ಲಿ ಬಿರುಕು ಮೂಡಿಸಿದ ಕಲ್ಲಿದ್ದಲು ಒಪ್ಪಂದ: ತಿವಿದ ಬಿಜೆಪಿ!...

ಮಹಾರಾಷ್ಟ್ರದ ಪ್ರಾದೇಶಿಕ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಈ ವಿಚಾರವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿಗೆ ಪತ್ರ ಬರೆದಿದ್ದಾರೆ. ತಮ್ಮ ಈ ಪತ್ರದಲ್ಲಿ ಒಪ್ಪಂದ ರದ್ದುಗೊಳಿಸಿ ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗಿರುವಾಗ ಅತ್ತ ಬಿಜೆಪಿಯೂ ಈ ವಿಚಾರವಾಗಿ ವಾಗ್ದಾಳಿ ನಡೆಸಿದೆ. 

ವ್ಯಾಕ್ಸಿನ್ ಬಂದಿಲ್ಲ ಎಂದ ರಾಹುಲ್: ಅಜ್ಞಾನಕ್ಕೆ ವ್ಯಾಕ್ಸಿನ್ ಇಲ್ಲ ಎಂದ ಆರೋಗ್ಯ ಸಚಿವ!...

ಕೊರೋನಾ ಸಂಕಟ ಇಡೀ ವಿಶ್ವವನ್ನೇ ಬಾಧಿಸುತ್ತಿದೆ. ದೇಶದಲ್ಲೂ ಈ ಕೊರೋನಾ ಹಾವಳಿ ಜನರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದೆ. ಹೀಗಿರುವಾಗ ಕೊರೋನಾಗೆ ಮೂಗುದಾರ ಹಾಕಲು ಸರ್ಕಾರ ಲಸಿಕೆ ಅಭಿಯಾನ ಆರಂಭಿಸಿದೆ. ಮೊದಲ ಅಲೆ ಸಂದರ್ಭದಲ್ಲಿ ಕೊಂಚ ನಿಧಾನವಾಗಿ ನಡೆಯುತ್ತಿದ್ದ ಈ ಅಭಿಯಾನ, ಎರಡನೇ ಅಲೆ ಬಳಿಕ ಬಹಳ ವೇಗವಾಗಿ ಸಾಗುತ್ತಿದೆ. ಹೀಗಿದ್ದರೂ ಈ ಲಸಿಕಾ ಅಭಿಯಾನದ ಬಗ್ಗೆ ರಾಜಕೀಯ ಪಕ್ಷಗಳ ಪರ ವಿರೋಧಗಳ ಮಾತು ಎಗ್ಗಿಲ್ಲದೆ ಮುಂದುವರೆದಿದೆ.

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದ ಮಾನಾ ಪಟೇಲ್‌...

ಭಾರತದ ಮಹಿಳಾ ಈಜುಪಟು ಮಾನಾ ಪಟೇಲ್‌ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಈಜುಗಾರ್ತಿ ಎನ್ನುವ ಇತಿಹಾಸ ನಿರ್ಮಿಸಿದ್ದಾರೆ

ದೊಡ್ಡಬಳ್ಳಾಪುರದ ಅನಾಥ ವೃದ್ಧ ದಂಪತಿ ಹೊಣೆ ಹೊತ್ತ ಕಿಚ್ಚ ಸುದೀಪ್!...

ಸುದೀಪ್ ಚಾರಿಟಿಯಿಂದ ಮತ್ತೊಂದು ಮಾನವೀಯ ಕೆಲಸ. ಕೊನೆ ಕ್ಷಣದವರೆಗೂ ವೃದ್ಧ ದಂಪತಿಗೆ ಆಸರೆಯಾದ ಸುದೀಪ್...

ಕೋಟಿಗಟ್ಟಲೆ ವರ್ಗಾವಣೆ: ಯಾಮಿಗೆ ED ನೋಟಿಸ್...

ಇತ್ತೀಚೆಗಷ್ಟೇ ಮದುವೆಯಾದ ಬಾಲಿವುಡ್ ನಟಿ ಯಾಮಿ ಗೌತಮ್ ಅವರು ತೊಂದರೆಗೆ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಬಾಲಿವುಡ್‌ ನಟಿಗೆ ಸಮನ್ಸ್ ನೀಡಿದೆ.

ಆರೋಗ್ಯ ಕ್ಷೇತ್ರಕ್ಕೆ ಅನುದಾನ; ದರ ಏರಿಕೆಗೆ ಇದೆ ಕಾರಣ; ಬೆಂಗಳೂರಿನಲ್ಲಿ ನಿರ್ಮಲಾ ಮಾಧ್ಯಮ ಸಂವಾದ!...

ಕೊರೋನಾ ವೈರಸ್ ಕಾರಣ ದೇಶದ ಆರ್ಥಿಕತೆಗೆ ದೊಡ್ಡ ಹೊಡೆದ ಬಿದ್ದಿದೆ. ಆದರೆ ಆರೋಗ್ಯ ಕ್ಷೇತ್ರದ ಮೂಲ ಭೂತ ಸೌಲಭ್ಯಗಳನ್ನು ಸುಧಾರಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ಕಾರಣ ದೇಶದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

DRDO ಮಾಜಿ ವಿಜ್ಞಾನಿ, ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ ಇನ್ನಿಲ್ಲ!...

ಅನಾರೋಗ್ಯದಿಂದ ಬಳಲುತ್ತಿದ್ದ DRDO ಮಾಜಿ ವಿಜ್ಞಾನಿ, HAL ಹಿರಿಯ ನಿವೃತ್ತ ಇಂಜಿನಿಯರ್ ಹಾಗೂ ಸುಪ್ರಸಿದ್ಧ ವಿಜ್ಞಾನ ಬರಹಗಾರ​ ಸುಧೀಂದ್ರ ಹಾಲ್ದೊಡ್ಡೇರಿ ಕೊನೆಯುಸಿರೆಳೆದಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ತೀವ್ರ ಹೃದಯಾಘಾತಕ್ಕೀಡಾಗಿದ್ದ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು.ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಕನ್ನಡಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಿಗೆ ವಿಜ್ಞಾನ ಬರಹಗಾರರಾಗಿದ್ದರು.

ಸಿಖ್ ಯುವತಿಯರ ಅಪಹರಿಸಿ ಮತಾಂತರ ಮಾಡಿ ವೃದ್ಧರ ಜತೆ ಮದುವೆ!...

ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ) ನಿಯೋಗ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿದೆ. ಅಪಹರಣಕ್ಕೆ ಒಳಗಾಗ ಬಲವಂತವಾಗಿ  ಮತಾಂತರ ಮಾಡಲಾದ ಬಾಲಕಿಯರನ್ನು ಸುರಕ್ಷಿತವಾಗಿ ತವರಿಗೆ ಕರೆತರಬೇಕು ಎಂದು ಮನವಿ ಮಾಡಿಕೊಂಡಿದೆ.

click me!