ಏಕಾಂಗಿಯಾಗಿ ಬದುಕು ಬೋರಾಗಿದೆ. ಜೀವನದ ಸಂತಸದ ಕ್ಷಣಗಳನ್ನು ಸಂಗಾತಿ ಜೊತೆ ಕಳೆಯಬೇಕು ಎಂದು ನಿರ್ಧರಿಸಿದ 70ರ ಅಜ್ಜ ಗರ್ಲ್‌ಫ್ರೆಂಡ್ ಹುಡುಕಾಟಕ್ಕೆ ಪ್ರತಿ ವಾರ 33,000 ರೂಪಾಯಿ ಜಾಹೀರಾತು ನೀಡುತ್ತಿದ್ದಾರೆ.
ಟೆಕ್ಸಾಸ್(ಏ.29) ಪತ್ನಿ ಬೇಕಾಗಿದ್ದಾರೆ, ಪತಿ ಬೇಕಾಗಿದ್ದಾರೆ ಅನ್ನೋ ಜಾಹೀರಾತು ಹೊಸದೇನಲ್ಲ. ಆದರೆ ಈ ಜಾಹೀರಾತ ಮಾತ್ರ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಗರ್ಲ್‌ಫ್ರೆಂಡ್ ಬೇಕು ಅನ್ನೋ ಈ ಜಾಹೀರಾತಿನಲ್ಲಿ ಹಲವು ವಿಶೇಷತೆಗಳಿವೆ. ಈ ಜಾಹೀರಾತು ನೀಡಿರುವುದು 70ರ ವಯಸ್ಸಿನ ಅಜ್ಜ. ಗರ್ಲ್‌ಫ್ರೆಂಡ್ ಬೇಕಾಗಿದೆ, ಮದುವೆಯಾಗಲು ಜೊತೆಗೆ ಕರೋಕೆ ಹಾಡಲು ಎಂದು ಈ ಅಜ್ಜ ಜಾಹೀರಾತು ನೀಡಿದ್ದಾರೆ. ಅಜ್ಜನಿಗೆ ಯಾರು ಸಿಗುತ್ತಾರೆ ಎಂದುಕೊಳ್ಳಬೇಡಿ. ಜಾಹೀರಾತು ನೀಡಿದ ಎರಡೇ ವಾರದಲ್ಲಿ 400 ಕರೆ, 50ಕ್ಕೂ ಇಮೇಲ್ ಬಂದಿದೆ. ಇವೆಲ್ಲವನ್ನೂ ಅಜ್ಜ ರಿಜೆಕ್ಟ್ ಮಾಡಿ, ಭಾವಿ ಪತ್ನಿಗಾಗಿ ಕಾಯುತ್ತಿದ್ದಾರೆ. ಈ ಅಜ್ಜ ಅಮೆರಿಕ ನಿವಾಸಿ. ಮದುವೆಯಾಗಿ ತನ್ನ ಭಾವಿ ಪತ್ನಿ ಅಮೆರಿಕದ ಯಾವುದೇ ಮೂಲೆಗೆ ಸ್ಥಳಾಂತರ ಬಯಸಿದ್ದರೆ ಸಿದ್ಧ ಎಂದಿದ್ದಾರೆ.
70 ವರ್ಷದ ಅಜ್ಜನ ಹೆಸರು ಗಿಲ್‌ಬರ್ಟಿ. ಈ ತಾತ ಈಗಿನ ಸಾಮಾಜಿಕ ಜಾಲಾತಾಣ ಟ್ರೆಂಡ್‌ಗೆ ಜೋತು ಬಿದ್ದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತು ಹಾಕುವ ಪ್ರಯತ್ನ ಮಾಡಿಲ್ಲ. ಇದರ ಬದಲಾಗಿದೆ 20 ಅಡಿ ಎತ್ತರದಲ್ಲಿ ಬಿಲ್‌ಬೋರ್ಡ್ ಜಾಹೀರಾತು ನೀಡಿದ್ದಾರೆ. ಈ ಜಾಹೀರಾತನ್ನು ಟೆಕ್ಸಾಸ್‌ನ ಸ್ವೀಟ್‌ವಾಟರ್ ಬಳಿ ಹಾಕಲಾಗಿದೆ. ಏಕಾಂಗಿ ಪುರುಷ, ಎಲ್ಲಿಗೆ ಬೇಕಾದರೂ ಸ್ಥಳಾಂತರಗೊಳ್ಳಬಲ್ಲ ಮನಸ್ಸು, ಜೊತೆಯಾಗಿ ಹೆಜ್ಜೆ ಹಾಕಲು ಬೇಕಾಗಿದೆ ಸಂಗಾತಿ, ಮದುವೆಯಾಗಲು, ಕರೋಕೆ ಹಾಡಲು ಪ್ರೀತಿ ಮನಸ್ಸಿನ ವಧು ಬೇಕು ಎಂದು ದಪ್ಪ ಅಕ್ಷರಗಳಲ್ಲಿ ಪ್ರಿಂಟ್ ಮಾಡಿ ಜಾಹೀರಾತು ನೀಡಿದ್ದಾರೆ.
ಮಾಜಿ ಗರ್ಲ್ ಫ್ರೆಂಡ್ ಮನೆ ಮುಂದೆ ಜನವೋ ಜನ, ಹೀಗೆ ಸೇಡು ತೀರಿಸಿಕೊಳ್ಳೋದಾ ಎಕ್ಸ್?
ಈ ಜಾಹೀರಾತಿಗೆ ಪ್ರತಿ ವಾರ $400 ಡಾಲರ್ , ಭಾರತೀಯ ರೂಪಾಯಿಗಳಲ್ಲಿ 33,000 ರೂಪಾಯಿ ನೀಡಬೇಕು. ಜಾಹೀರಾತು ನೀಡಿದ 2 ವಾರದಲ್ಲಿ 400 ಕರೆಗಳು ಬಂದಿದೆ. 50ಕ್ಕೂ ಹೆಚ್ಚುಇಮೇಲ್ ಬಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಿಲ್‌ಬರ್ಟಿ, ಸದ್ಯ ಬಂದಿರುವ ಕರೆಗಳು, ಇಮೇಲ್‌ನಲ್ಲಿ ನೈಜ ಪ್ರೀತಿ ಕಾಣುತ್ತಿಲ್ಲ. ಹಣಕ್ಕಾಗಿ, ಆಸ್ತಿಗಾಗಿ ಬಂದಿರುವಂತಿದೆ. ಆದರೆ ನನಗೆ ವಿಶ್ವಾಸವಿದೆ, ನನ್ನ ಕನಸಿನ ಸಂಗಾತಿ ನನ್ನ ಕೈಹಿಡಿಯುತ್ತಾಳೆ ಎಂದು ಗಿಲ್‌ಬಾರ್ಟಿ ಹೇಳಿದ್ದಾರೆ.
ನನ್ನ ಕೈಹಿಡಿಯುವ ವಧುವಿನಲ್ಲಿ ಸಂಪತ್ತು ಇರಬೇಕು ಎಂದಿಲ್ಲ. ಸೌಂದರ್ಯ ನಗಣ್ಯ. ಆದರೆ ಪ್ರಾಮಾಣಿಕತೆ, ನಿಷ್ಠೆ, ನಿಷ್ಕಲ್ಮಷ ಪ್ರೀತಿ ಇರಬೇಕು. ಈ ವಿಚಾರದಲ್ಲಿ ರಾಜೀ ಇಲ್ಲ ಎಂದಿದ್ದಾರೆ. ಅಮೆರಿಕದಲ್ಲಿ ಯಾವುದೇ ಭಾಗಕ್ಕೆ ಸ್ಥಳಾಂತರಕ್ಕೆ ಬಯಸಿದ್ದರೆ ನಾನು ಸಿದ್ದ. ಆದರೆ ಲಂಡನ್ ಸಾಧ್ಯವಿಲ್ಲ ಎಂದು ಗಿಲ್‌ಬರ್ಟಿ ಹೇಳಿದ್ದಾರೆ.
ಗರ್ಲ್ ಫ್ರೆಂಡ್ ಬೇಕೆಂದು ಈತ ಎಲ್ಲಿ ಜಾಹೀರಾತು ನೀಡಿದ್ದಾನೆ ಗೊತ್ತಾ?