ಕುಕನೂರು: 'ನಿಮಗೆ ಅಕ್ಕಿ ಬ್ಯಾಡ, ಇನ್ನೊಂದು ಬ್ಯಾಡ ಅಂದ್ರ ಆ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡೋಣ. ನಿಂಗೆ ರಸ್ತೆ ಬೇಕು ಅಂದ್ರೆ ಅಕ್ಕಿ ಸೇರಿದಂತೆ ಎಲ್ಲವೂ ಬಂದ್ ಆಗತ್ತಾವ' ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಆ ಮೂಲಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬಳಿಕ ರಾಜ್ಯ ದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇದೆ ಎಂದು ಮತ್ತೊಮ್ಮೆ ಪರೋಕ್ಷವಾಗಿ ಅವರು ಹೇಳಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ರಾವಣಿಕದಲ್ಲಿ ಶನಿವಾರ ಪ್ರೌಢಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಯರಡ್ಡಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ರೈತರೊಬ್ಬರು, 'ನಮ್ಮ ಹೊಲಕ್ಕ ಹೋಗುವ ರಸ್ತೆ ಮಾಡಿಕೊಡ್ರಿ' ಎಂದು ಮನವಿ ಮಾಡಿದರು. ಈ ವೇಳೆ ಶಾಸಕರು ಹೀಗೆ ಉತ್ತರಿಸಿ ಶಾಕ್ ನೀಡಿದ್ದಾರೆ.

10:54 PM (IST) Jul 06
ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ 336 ರನ್ ಗೆಲುವು ದಾಖಲಿಸಿದೆ. ಈ ಗೆಲುವಿನ ಜೊತೆ ಟೀಂ ಇಂಡಿಯಾ ಕೆಲ ದಾಖಲೆ ಬರೆದಿದೆ. ಇಷ್ಟೇ ಅಲ್ಲ ನಾಯಕ ಶುಬಮನ್ ಗಿಲ್ ಕೂಡ ದಾಖಲೆ ಬರೆದಿದ್ದಾರೆ.
10:25 PM (IST) Jul 06
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಜಾತಿ ತಾರತಮ್ಯದ ಆರೋಪದ ಮೇರೆಗೆ 10 ದಲಿತ ಪ್ರಾಧ್ಯಾಪಕರು ತಮ್ಮ ಆಡಳಿತಾತ್ಮಕ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
10:04 PM (IST) Jul 06
ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಅಲರ್ಟ್ ನೀಡಲಾಗಿದೆ. ಈಗಾಗಲೇ ಸುರಿಯುತ್ತಿರುವ ಭಾರಿ ಮಳೆಯಿಂದ ರಾಜ್ಯದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.
09:45 PM (IST) Jul 06
ಬರೋಬ್ಬರಿ 58 ವರ್ಷಗಳ ಬಳಿಕ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿ ಇತಿಹಾಸ ರಚಿಸಿದೆ. ಇಂಗ್ಲೆಂಡ್ ವಿರುದ್ದ 336 ರನ್ ಗೆಲುವು ದಾಖಲಿಸಿದ ಭಾರತ ದಾಖಲೆ ಬರೆದಿದೆ.
09:19 PM (IST) Jul 06
ಬೆಳಗಾವಿಯಲ್ಲಿ ಸರಣಿ ಅಪಘಾತ ನಡೆದಿದೆ. ಟಾಟಾ ಏಸ್, ಎರಡು ಬೈಕ್, ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
08:35 PM (IST) Jul 06
ರಾಹುಲ್ ಗಾಂಧಿ ಅವರ ಚಿತ್ರವನ್ನು ಮಾರ್ಪ್ ಮಾಡಿ ಸ್ಯಾನಿಟರಿ ಪ್ಯಾಡ್‌ನೊಂದಿಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ರತನ್ ರಂಜನ್ ವಿರುದ್ಧ ಎಫ್‌ಐಆರ್ ದಾಖಲು. ಯೂತ್ ಕಾಂಗ್ರೆಸ್ ಕಾರ್ಯಕರ್ತೆ ಪ್ರಿಯಾಂಕ ದೇವಿ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
08:03 PM (IST) Jul 06
ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹಗಳನ್ನು ಕಾಲಿನಿಂದ ಒದ್ದು, ಚರಂಡಿಗೆ ಎಸೆದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
07:47 PM (IST) Jul 06
ಮಗಳ ಜೊತೆ ನಟಿ ಅದಿತಿ ಪ್ರಭುದೇವ ಕ್ಯೂಟ್ ವಿಡಿಯೋ ಶೇರ್ ಮಾಡಿದರೆ, ನಟಿಯ ವಿರುದ್ಧ ಅಸಂಖ್ಯ ಅಭಿಮಾನಿಗಳು ಸಿಟ್ಟಾಗಿದ್ಯಾಕೆ? ಇಲ್ಲಿದೆ ನೋಡಿ ಅಸಲಿಯತ್ತು!
07:33 PM (IST) Jul 06
ಕೊಡಗಿನ ಗಿರೀಶ್, ಗಯಾನಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಕೋಮಾಕ್ಕೆ ಜಾರಿದ್ದಾರೆ. ಬಡ ಕುಟುಂಬದಿಂದ ಬಂದ ಗಿರೀಶ್‌ರನ್ನು ಭಾರತಕ್ಕೆ ಕರೆತರಲು ಹಣವಿಲ್ಲದೆ ಕುಟುಂಬ ಪರದಾಡುತ್ತಿದೆ.
07:11 PM (IST) Jul 06
ಮಗುವಿನ ಪ್ರತಿಯೊಂದು ದಾಖಲೆಯಲ್ಲಿಯೂ ಅಪ್ಪನ ಹೆಸರೇ ಕಡ್ಡಾಯವಾಗಿರುವ ನಮ್ಮ ಕಾನೂನಿನಲ್ಲಿ ದಾನಿಯ ಮೂಲಕ ಹುಟ್ಟಿದ IVF ಮಗುವಿನ ಅಪ್ಪನ ಹೆಸರು ಏನಿರುತ್ತೆ? ಕೋರ್ಟ್ ಹೇಳಿದ್ದೇನು? ಇಲ್ಲಿದೆ ವಿವರ...
07:01 PM (IST) Jul 06
ಸರ್ಕಾರಿ ಶಾಲೆಯ ಪೈಟಿಂಗ್ ಹಗರಣವೊಂದು ಬಯಲಾಗಿದೆ. ಕೇವಲ 4 ಲೀಟರ್ ಪೈಂಟ್ ಬಳಿಯಲು ಬರೋಬ್ಬರಿ 443 ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಪೈಟಿಂಗ್ ಬಿಲ್ ಬರೋಬ್ಬರಿ 3.38 ಲಕ್ಷ ರೂಪಾಯಿ
06:59 PM (IST) Jul 06
06:35 PM (IST) Jul 06
ನಟ ಯುವರಾಜ್ ಕುಮಾರ್ ಅವರು 'ಎಕ್ಕ' ಚಿತ್ರದ ಬಿಡುಗಡೆಗೂ ಮುನ್ನ ರಾಯಚೂರಿನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ, ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು. ನಟ ಸುದೀಪ್, ಪುನೀತ್ ಬಳಿಕ ಯುವ ಇಲ್ಲಿಗೆ ಭೇಟಿ ನೀಡಿದ್ದಾರೆ.
06:16 PM (IST) Jul 06
ಬೆಳದಿಂಗಳ ಬಾಲೆಯಾಗಿ ಎಲ್ಲರ ಮನಗೆದ್ದ ನಟಿ ಸುಮನ್ ನಗರ್ಕರ್ ಮತ್ತು ಅವರ ಪತಿ ಮಕ್ಕಳೇ ಬೇಡ ಎಂದು ಡಿಸೈಡ್ ಮಾಡಿದ್ಯಾಕೆ? ನಟಿ ಏನ್ ಹೇಳಿದ್ರು ಕೇಳಿ...
06:03 PM (IST) Jul 06
ಕಾಮಿಡಿ ಶೋ ಮೂಲಕ ಕಪಿಲ್ ಶರ್ಮಾ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದೀಗ ಕಪಿಲ್ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ವಿದೇಶದಲ್ಲಿ ಕಪಿಲ್ ಶರ್ಮಾ ಕ್ಯಾಪ್ಸ್ ಕೆಫೆ ಆರಂಭಿಸಿದ್ದಾರೆ.
05:54 PM (IST) Jul 06
05:48 PM (IST) Jul 06
ಚಿನ್ನದ ದರವನ್ನು ಗಗನಕ್ಕೆ ಏರುತ್ತಲೇ ಇದೆ. ಇಂಥ ಸಮಯದಲ್ಲಿ ಎಲ್ಐಸಿಯ ಗೋಲ್ಡ್ ಇಟಿಎಫ್ ಯೋಜನೆ ವರದಾನವಾಗಿದೆ. ಮಾಸಿಕ 10 ಸಾವಿರ ಇಟ್ಟರೆ ಐದು ವರ್ಷಕ್ಕೆ 10 ಲಕ್ಷದಷ್ಟು ಪಡೆಯುವ ಯೋಜನೆ ಇದು. ಡಿಟೇಲ್ಸ್ ಇಲ್ಲಿದೆ...
05:45 PM (IST) Jul 06
05:32 PM (IST) Jul 06
05:25 PM (IST) Jul 06
05:06 PM (IST) Jul 06
ಸಾಕಿದ ನಾಯಿಯನ್ನು ಆರೈಕೆ ಮಾಡದ ಮಾಲೀಕ ದೂರದ ಬೀದಿಯಲ್ಲಿ ಬಿಟ್ಟು ಕಾರಿನಲ್ಲಿ ವೇಗವಾಗಿ ತೆರಳಿದ್ದಾನೆ. ಆದರೆ ಮಾಲೀಕನ ಕಾರಿನ ಹಿಂದೆ ಓಡುತ್ತಿರುವ ದೃಶ್ಯ ಸೆರೆಯಾಗಿದೆ. ಈ ಮನಕಲುವ ವಿಡಿಯೋ ಹಲವರನ್ನು ಭಾವುಕರನ್ನಾಗಿ ಮಾಡಿದೆ.
04:53 PM (IST) Jul 06
ಸಾಲ ಒಳ್ಳೆಯದೋ ಕೆಟ್ಟದ್ದೋ ಅನ್ನೋದು ಅದನ್ನ ಹೇಗೆ ಉಪಯೋಗಿಸ್ತೀರಿ, ಅದರ ನಿಯಮಗಳ ಮೇಲೆ ಅವಲಂಬಿತವಾಗಿದೆ.
04:37 PM (IST) Jul 06
ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಶುಭ್‌ಮನ್ ಗಿಲ್ ಅವರ ನೈಕಿ ಜೆರ್ಸಿ ಧರಿಸುವಿಕೆ ಚರ್ಚೆಗೆ ಗ್ರಾಸವಾಗಿದೆ. ಬಿಸಿಸಿಐ Adidas ಜೊತೆ ಕಿಟ್ ಸ್ಪಾನ್ಸರ್ ಒಪ್ಪಂದ ಹೊಂದಿದ್ದರೂ, ಗಿಲ್ ನೈಕ್ ಜೆರ್ಸಿ ಧರಿಸಿದ್ದರಿಂದ 250 ಕೋಟಿ ರೂಪಾಯಿ ಒಪ್ಪಂದ ರದ್ದಾಗುವ ಸಾಧ್ಯತೆಯಿದೆ.
04:31 PM (IST) Jul 06
04:20 PM (IST) Jul 06
ತಮ್ಮ ಪಾಲಿನ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಿದ್ದ ನಾಯಿಗಳನ್ನು ಓಡಿಸಲು ಆನೆಗಳು ಸೊಂಡಿಲಿನಿಂದ ಮಣ್ಣನ್ನು ಬಾಚಿ ಎಸೆದವು. ಈ ತಮಾಷೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
04:06 PM (IST) Jul 06
ಮಂಡ್ಯದ ಯುವತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡ ಪತಿ ನವೀನ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತುಮಕೂರಿನ ಅಂತರಸನಹಳ್ಳಿಯಲ್ಲಿ ನಡೆದ ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಬಾರಿ ಚುಚ್ಚಿ ಹತ್ಯೆ ಮಾಡಲಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
04:03 PM (IST) Jul 06
ಜನಪ್ರಿಯ ಹಾಗೂ ಐಷಾರಾಮಿ ಬ್ರ್ಯಾಂಡ್ ಲೂಯಿಸ್ ವಿಟಾನ್ ಇದೀಗ ಭಾರತ ಹಾಗೂ ಏಷ್ಯಾದಲ್ಲಿ ಆಟೋ ರಿಕ್ಷಾ ಹ್ಯಾಂಡ್ ಬ್ಯಾಗ್ ಬಿಡುಡೆ ಮಾಡುತ್ತಿದೆ. ಬಡವರ ಬದುಕಾಗಿರುವ ಆಟೋ ಇದೀಗ ಶ್ರೀಮಂತರ ಫ್ಯಾಶನ್ ಆಗಿದೆ. ವಿಶೇಷ ಅಂದರೆ ಒಂದು ಆಟೋ ಬ್ಯಾಗ್ ಬೆಲೆಯಲ್ಲಿ ಅಸಲಿ 14 ರಿಕ್ಷಾ ಖರೀದಿಸಬಹುದು.
03:41 PM (IST) Jul 06
02:52 PM (IST) Jul 06
02:40 PM (IST) Jul 06
ಝಾನ್ಸಿ ರೈಲು ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸೇನಾ ವೈದ್ಯರೊಬ್ಬರು ಸಕಾಲಕ್ಕೆ ಸಹಾಯ ಮಾಡಿದ್ದಾರೆ.ಸುಲಭ ಹೆರಿಗೆಗೆ ನೆರವಾದ ಯೋಧನ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
02:23 PM (IST) Jul 06
ನಟನಾ ಕ್ಷೇತ್ರದಲ್ಲಿ ದಾಖಲೆ ಮೇಲೆ ದಾಖಲೆ ಸಾಧಿಸಿದ ಮಾಸ್ಟರ್ ಕಿಶನ್ ಇದೀಗ ವೈದ್ಯಕೀಯ ಲೋಕದಲ್ಲಿಯೂ ಮ್ಯಾಜಿಕ್ ಮಾಡಿದ್ದಾರೆ. ಏನಿದು ಹೊಸ ಆವಿಷ್ಕಾರ? ಅವರ ಬಾಯಲ್ಲೇ ಕೇಳಿ..
02:11 PM (IST) Jul 06
ಜೆಡಿಎಸ್ ಶಾಸಕರು ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದವರೇ ಮೊದಲು ತಮ್ಮ ಕಾಂಗ್ರೆಸ್ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
01:42 PM (IST) Jul 06
01:27 PM (IST) Jul 06
ನಾನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಸದ್ಯ ಮೂಕಿ ರೀತಿಯಲ್ಲಿ ನಟನೆ ಮಾಡಿ ಎಲ್ಲರನ್ನೂ ಮೋಡಿ ಮಾಡ್ತಿರೋ ಪುಟಾಣಿ ಹಿತಾ ಉರ್ಫ್ ಮಹಿತಾ ಸುಮಧುರ ಕಂಠದಿಂದ 'ಮುಕ್ತ ಮುಕ್ತ' ಟೈಟಲ್ ಸಾಂಗ್ ಹಾಡಿದ್ದಾಳೆ ಕೇಳಿ...
01:22 PM (IST) Jul 06
ವಾರಾಂತ್ಯದಲ್ಲಿ ರುಚಿಕರವಾದ ಮಾಂಸಾಹಾರ ಬಯಸುವವರಿಗೆ, ಈ ಕೇರಳದ ಮಟನ್ ಕರಿ ರೆಸಿಪಿ ಒಂದು ಉತ್ತಮ ಆಯ್ಕೆ. ಖಾರ ಪ್ರಿಯರಿಗೆ ಈ ರೆಸಿಪಿ ತುಂಬಾ ಇಷ್ಟವಾಗುತ್ತದೆ. ಮಟನ್, ತೆಂಗಿನಕಾಯಿ, ಮತ್ತು ವಿವಿಧ ಮಸಾಲೆಗಳ ಸಮ್ಮಿಲನದಿಂದ ತಯಾರಾಗುವ ಈ ಖಾದ್ಯ ನಿಮ್ಮ ಊಟವನ್ನು ವಿಶೇಷವಾಗಿಸುತ್ತದೆ.
12:54 PM (IST) Jul 06
ಬೇರೆಯವರ ಮನೆಮಂದೆ ತಮ್ಮ ಜಾತಿ ನಾಯಿಗಳನ್ನು ನಿಲ್ಲಿಸಿ ಮಲ-ಮೂತ್ರ ಮಾಡಿಸುವ 'ಅನಾಗರಿಕರಿಗೆ' ಹೀಗೊಂದು ಬುದ್ಧಿ ಹೇಳುವ ಬೋರ್ಡ್ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಕಮೆಂಟ್ಸ್ ನೋಡಿದ್ರೆ ಸುಸ್ತಾಗೋದು ಗ್ಯಾರೆಂಟಿ!
12:39 PM (IST) Jul 06
ಮೂರು ಮಂದಿ ಪ್ರಿಯಕರರಿದ್ದ ಹೆಂಡತಿ, ಕ್ಷಮಿಸಿದ ಗಂಡನನ್ನೇ ಪ್ರಿಯಕರನೊಂದಿಗೆ ಸೇರಿ ಕೊಲೆಗೈದ ಘಟನೆ ನಡೆದಿದೆ. ಇನ್ನುಮುಂದೆ ಹೆಂಡತಿ ಯಾರ ಸಹವಾಸವೂ ಸಿಗದಂತೆ ಮಾಡಬೇಕೆಂದು ತನ್ನ ಪತ್ನಿಗೆ ಕಟ್ಟುನಿಟ್ಟು ಮಾಡಿದ್ದರಿಂದ ಬೇಸತ್ತಿದ್ದಳು. ಇದರಿಂದ ಪ್ರಿಯಕರನೊಂದಿಗೆ ಸೇರಿ ಗಂಡನ ಕಥೆಯನ್ನೇ ಮುಗಿಸಿದ್ದಾಳೆ.
12:19 PM (IST) Jul 06
ಶಾರುಖ್ ಖಾನ್ ನನ್ನ ಬೂಟು ನೆಕ್ಕುತ್ತಿದ್ದಾನೆ, ನಮ್ಮನು ನಾಯಿಗೆ ಅವನು ಹೆಸ್ರು ಇಟ್ಟಿದ್ದೆ ಎನ್ನುವ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ ನಟ ಆಮೀರ್ ಖಾನ್. ಅಷ್ಟಕ್ಕೂ ಆಗಿದ್ದೇನು?
12:08 PM (IST) Jul 06
11:55 AM (IST) Jul 06
ನನಗೆ ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲ ತಾಲೂಕುಗಳೂ ಮುಖ್ಯ. ಹೇಮಾವತಿ ನದಿ ನೀರಿನ ವಿಚಾರವಾಗಿ ಯಾವುದೇ ತಾಲೂಕುಗಳಿಗೆ ಅನ್ಯಾಯ ಮಾಡುವುದಿಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.