ನವದೆಹಲಿ (ಅ.7): ಬಹುನಿರೀಕ್ಷಿತ ಬಿಹಾರ ವಿಧಾನಸಭೆ ಚುನಾವಣೆಗಳು ಘೋಷಣೆ ಆಗಿದ್ದು, ಚುನಾವಣಾ ಕದನದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ ಮಹಾಘಠಬಂಧನ್ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
07:17 PM (IST) Oct 07
dog's ultimate sacrifice: ಸಾಕು ನಾಯಿಯೊಂದು ಹಾವಿನೊಂದಿಗೆ ಕಾದಾಡಿ ಹಾವನ್ನು ಸಾಯಿಸಿ ತಾನು ಪ್ರಾಣ ಬಿಟ್ಟಿದೆ. ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
06:19 PM (IST) Oct 07
ಇಂಗ್ಲೆಂಡ್‌ನಲ್ಲೂ ಕಾಂತಾರಾ ಮೋಡಿ, ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡದ ಪೋಸ್ಟರ್ ಭಾರಿ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ ಜಾಗದಲ್ಲಿ ಮ್ಯಾಂಚೆಸ್ಟರ್ ಸಿಟಿ ಸ್ಟ್ರೈಕರ್ ಎರ್ಲಿಂಗ್ ಹಾಲಾಂಡ್ ಫೋಟೋ ಇರುವ ಕಾಂತಾರ ಸಿನಿಮಾ ಶೈಲಿಯ ಪೋಸ್ಟರ್‌ನ್ನು ಮ್ಯಾಂಚೆಸ್ಟರ್ ಸಿಟಿ ಪೋಸ್ಟ್ ಮಾಡಿದೆ.
05:13 PM (IST) Oct 07
Jaipur street harassment: ಅಂಗಡಿಯೊಂದರ ಮುಂದೆ ನಿಂತಿದ್ದ ಮಹಿಳೆಯನ್ನು ಮಧ್ಯವಯಸ್ಕ ವ್ಯಕ್ತಿಯೊಬ್ಬ ಅಸಭ್ಯವಾಗಿ ಮುಟ್ಟಿದ ಘಟನೆ ನಡೆದಿದ್ದು, ಇದರಿಂದ ಕುಪಿತಗೊಂಡ ಸಾರ್ವಜನಿಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
05:07 PM (IST) Oct 07
ಗುಡ್ ನ್ಯೂಸ್ ಕೊಟ್ಟ ನಿತಿನ್ ಗಡ್ಕರಿ, 6 ತಿಂಗಳಲ್ಲಿ ಪೆಟ್ರೋಲ್ ವಾಹನ ದರದಲ್ಲಿ ಸಿಗಲಿದೆ ಎಲೆಕ್ಟ್ರಿಕ್ ವೆಹಿಕಲ್, ಈಗಾಗಲೇ ಜಿಎಸ್‌ಟಿ ಕಡಿತದಿಂದ ವಾಹನ ಬೆಲೆ ಬಾರಿ ಇಳಿಕೆಯಾಗಿದೆ. ಇದೀಗ ಎಲೆಕ್ಟ್ರಿಕ್ ವಾಹನ ಬೆಲೆ ಇನ್ನೋ ಪೆಟ್ರೋಲ್ ವಾಹನ ಬೆಲೆಯಲ್ಲೇ ಲಭ್ಯವಾಗುತ್ತಿದೆ.
04:22 PM (IST) Oct 07
ಜಾವಾ ಯೆಝಡಿ ಬೈಕ್ ಈಗ ಅಮೇಜಾನ್‌ನಲ್ಲಿ ಲಭ್ಯ; ನೋ ಕಾಸ್ಟ್ ಇಎಂಐ, ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ. ಅತೀ ಸರಳ ಹಾಗೂ ಸುಲಭವಾಗಿ ಅಮೇಜಾನ್ ಮೂಲಕ ಬೈಕ್ ಖರೀದಿ ಹೇಗೆ, ಯಾವೆಲ್ಲಾ ಆಫರ್ ಲಭ್ಯವಿದೆ.
04:22 PM (IST) Oct 07
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಘಟನೆ ನ್ಯಾಯಾಂಗ ವ್ಯವಸ್ಥೆಯನ್ನೇ ಅಲುಗಾಡಿಸಿದೆ. ವಿಷ್ಣು ವಿಗ್ರಹ ಮರುಸ್ಥಾಪನೆ ಅರ್ಜಿಯ ಕುರಿತ ಸಿಜೆಐ ಹೇಳಿಕೆ ಮತ್ತು ದರ್ಗಾ ಪ್ರಕರಣಗಳಲ್ಲಿನ ತೀರ್ಪುಗಳ ನಡುವಿನ ವ್ಯತ್ಯಾಸವು ಈ ವಿವಾದಕ್ಕೆ ಕಾರಣವಾಗಿದೆ.
03:39 PM (IST) Oct 07
ವರ್ಗಾವಣೆಗೊಂಡ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಜಿಲ್ಲಾಧಿಕಾರಿ ಸಂಸ್ಕೃತಿ ಜೈನ್ ಅವರಿಗೆ ಅಲ್ಲಿನ ಜನ ಬಹಳ ಭಾವಪೂರ್ಣವಾದ ಹಾಗೂ ವಿಭಿನ್ನವಾದ ವಿದಾಯ ಕೂಟವನ್ನು ಏರ್ಪಡಿಸಿ ಅವರನ್ನು ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
03:36 PM (IST) Oct 07
Biometric UPI Payments Face/Fingerprint Roll Out Across India from Oct 8 ಅಕ್ಟೋಬರ್ 8 ರಿಂದ, ಬಳಕೆದಾರರು ಫೇಶಿಯಲ್ ರೆಕಗ್ನಿಷನ್ ಮತ್ತು ಫಿಂಗರ್‌ಪ್ರಿಂಟ್ ಬಳಸಿ ಯುಪಿಐ ಪಾವತಿಗಳನ್ನು ಅನುಮೋದಿಸಬಹುದು.
02:53 PM (IST) Oct 07
PM Modi Enters 25th Year as Head of Government ಪ್ರಧಾನಿ ಮೋದಿ ಸರ್ಕಾರದ ಮುಖ್ಯಸ್ಥರಾಗಿ 25ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಎದುರಿಸಿದ ಸವಾಲುಗಳು, ಭಾರತದ ಅಭಿವೃದ್ಧಿಯ ಪಯಣವನ್ನು ಸ್ಮರಿಸಿಕೊಂಡಿದ್ದಾರೆ.
02:52 PM (IST) Oct 07
₹ 11 ಲಕ್ಷ ಕಾರು ವರ್ಷಗಳ ಬಳಿಕ ₹1.2 ಲಕ್ಷಕ್ಕೆ ಮಾರಾಟ, ಆದರೂ ಬೆಂಗ್ಳೂರು ಸಿಎಗೆ ₹2 ಲಕ್ಷ ಲಾಭ ಮಾಡಿದ್ದಾರೆ. ಇದು ಹೇಗೆ ಅನ್ನೋ ಚರ್ಚೆಗೆ ಖುದ್ದು ಚಾರ್ಟೆಡ್ ಅಕೌಂಟ್ ಉತ್ತರ ನೀಡಿದ್ದಾರೆ. ಹೀಗಾಗಿ ಕಾರಿನ ಮೇಲೆ ಹೂಡಿಕೆ ಉತ್ತಮಲ್ಲ ಅನ್ನೋ ವಾದಕ್ಕೆ ಇದು ವಿರುದ್ಧವಾಗಿದೆ.
01:29 PM (IST) Oct 07
Advocate Rakesh Kishore Questions CJI Gavais Dalit Identity Post Buddhism Conversion ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ದಲಿತರೆಂಬ ಕಾರಣಕ್ಕೆ ಶೂ ಎಸೆದಿಲ್ಲ, ಬದಲಿಗೆ ಖಜುರಾಹೊ ವಿಗ್ರಹದ ತೀರ್ಪಿನಿಂದಾಗಿ ಎಂದು ವಕೀಲ ರಾಕೇಶ್ ಕಿಶೋರ್ ಹೇಳಿದ್ದಾರೆ.
12:45 PM (IST) Oct 07
Advocate Rakesh Kishore Slams CJI Gavai on Constitutional Dignity ದೇಶದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸಿದ ಹಿರಿಯ ವಕೀಲ ರಾಕೇಶ್ ಕಿಶೋರ್, ಸಿಜೆಐ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಕಾಪಾಡಬೇಕು ಎಂದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
12:41 PM (IST) Oct 07
Woman Dragged by Man in Street: ಬೀದಿಯಲ್ಲಿ ಓಡಾಡ್ತಿದ್ದ ಮಹಿಳೆಯೊಬ್ಬಳನ್ನು ಯುವಕನೋರ್ವ ನೀನು ನನ್ನ ಗರ್ಲ್‌ಫ್ರೆಂಡ್ ಆಗು ಅಂತ ತಬ್ಬಿಕೊಂಡು ಎಳೆದಾಡಿದಂತಹ ಆಘಾತಕಾರಿ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
12:40 PM (IST) Oct 07
ಭಾರತ ವಿರೋಧಿ ಹೇಳಿಕೆ ನೀಡಿದ್ದ ಪಾಕಿಸ್ತಾನಿ ಮಾಡೆಲ್ ಅಲಿಶ್ಬಾ ಖಾಲಿದ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಿದ್ದಕ್ಕಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತೀವ್ರ ವಿವಾದಕ್ಕೆ ಸಿಲುಕಿದೆ. ಕಂಪನಿಯು ಬಾಂಬೆ ಹೈಕೋರ್ಟ್ ಮೊರೆ ಹೋಗಿ ತಾತ್ಕಾಲಿಕ ತಡೆಯಾಜ್ಞೆ ಪಡೆದಿದೆ.
12:28 PM (IST) Oct 07
ವ್ಯಾಟ್ಸಾಪ್‌ನಲ್ಲಿ ಬಂದ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡಿ 97,000 ರೂ ಕಳ್ಕೊಂಡ ಯುವಕ, ನಿಮಗೂ ಇದೇ ರೀತಿ ವ್ಯಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಪತ್ರಿಕೆ ಬಂದಿದೆಯಾ? ಎಚ್ಚರ, ಸೈಬರ್ ಫ್ರಾಡ್ಸ್ ಇದೀಗ ಹೊಸ ಮಾದರಿ ಮೂಲಕ ನಿಮ್ಮ ಖಾತೆ ಖಾಲಿ ಮಾಡಲಿದೆ.
12:02 PM (IST) Oct 07
Stray Dog Bites Artist:ರೇಬಿಸ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಆಯೋಜಿಸಿದ್ದ ಬೀದಿ ನಾಟಕದಲ್ಲೇ ಕಲಾವಿದರೊಬ್ಬರಿಗೆ ಬೀದಿ ನಾಯಿ ಕಡಿದಂತಹ ವಿಪರ್ಯಾಸದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
11:49 AM (IST) Oct 07
Advocate Rakesh Kishore Has No Regret ಮಧ್ಯಪ್ರದೇಶದ ಖಜುರಾಹೊ ದೇವಾಲಯಗಳಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಸಲ್ಲಿಸಲಾದ ಅರ್ಜಿಯ ಕುರಿತು ಸೆಪ್ಟೆಂಬರ್ 16 ರಂದು ನ್ಯಾಯಾಲಯವು ನೀಡಿದ ಆದೇಶದ ಆಧಾರದ ಮೇಲೆ ತಮ್ಮ ಪ್ರತಿಕ್ರಿಯೆ ಎಂದು ಕಿಶೋರ್ ಹೇಳಿದ್ದಾರೆ.
11:25 AM (IST) Oct 07
ಮುಕೇಶ್ ಅಂಬಾನಿ ಪ್ರತಿ ದಿನ ಪರ್ಸ್‌ನಲ್ಲಿ ಎಷ್ಟು ಹಣ ಇಟ್ಟುಕೊಂಡಿರುತ್ತಾರೆ? ಸೀಕ್ರೆಟ್ ಬಹಿರಂಗವಾಗಿದೆ.ಜನಸಾಮಾನ್ಯರು ಯುಪಿಐ ಕ್ರಾಂತಿ ಬಳಿಕವೂ ಕನಿಷ್ಠ 100 ರೂಪಾಯಿ ಆದರೂ ಇಟ್ಟುಕೊಳ್ಳುತ್ತಾರೆ,, ದೇಶದ ಶ್ರೀಮಂತ ಮುಕೇಶ್ ಅಂಬಾನಿ ಪರ್ಸ್‌ನಲ್ಲಿ ಎಷ್ಟಿರುತ್ತೆ ಹಣ?
11:05 AM (IST) Oct 07
Goldman Sachs Forecasts Gold Price to Hit $4,900 by December 2026: 2025 ರಲ್ಲಿ ಕೇಂದ್ರ ಬ್ಯಾಂಕ್ ಖರೀದಿ ಸರಾಸರಿ 80 ಮೆಟ್ರಿಕ್ ಟನ್ ಮತ್ತು 2026 ರಲ್ಲಿ 70 ಟನ್ ಆಗುವ ನಿರೀಕ್ಷೆಯಿದೆ ಎಂದು ಗೋಲ್ಡ್‌ಮನ್ ನಿರೀಕ್ಷೆ ಮಾಡಿದೆ.
10:28 AM (IST) Oct 07
Advocate Rakesh Kishore Tried to Throw Shoe at CJI Gavai in Supreme Court ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲ ರಾಕೇಶ್ ಕಿಶೋರ್, ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದಾರೆ.
09:59 AM (IST) Oct 07
India Slams Pakistan at UN ವಿಶ್ವಸಂಸ್ಥೆಯಲ್ಲಿ ಕಾಶ್ಮೀರಿ ಮಹಿಳೆಯರ ಬಗ್ಗೆ ಮಾತನಾಡಿದ ಪಾಕಿಸ್ತಾನಕ್ಕೆ ಭಾರತ ತಕ್ಕ ತಿರುಗೇಟು ನೀಡಿದೆ. 1971ರ 'ಆಪರೇಷನ್ ಸರ್ಚ್‌ಲೈಟ್' ಸಂದರ್ಭದಲ್ಲಿ ಪಾಕಿಸ್ತಾನಿ ಸೇನೆಯು 400,000 ಮಹಿಳೆಯರ ಮೇಲೆ ನಡೆಸಿದ ಜನಾಂಗೀಯ ಹತ್ಯೆ ನೆನಪಿಸಿದೆ.
07:59 AM (IST) Oct 07
ಬಹುನಿರೀಕ್ಷಿತ ಬಿಹಾರ ವಿಧಾನಸಭೆ ಚುನಾವಣೆಗಳು ಘೋಷಣೆ ಆಗಿದ್ದು, ಚುನಾವಣಾ ಕದನದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ ಮಹಾಘಠಬಂಧನ್ ನಡುವೆ ನೇರ ಸ್ಪರ್ಧೆ ನಡೆಯಲಿದೆ.
07:59 AM (IST) Oct 07
ಜೈಪುರದ ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಐಸಿಯುನಲ್ಲಿದ್ದ 6 ರೋಗಿಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ.
07:58 AM (IST) Oct 07
ಕೆಮ್ಮು ನಿವಾರಕ ಕೋಲ್ಡ್ರಿಫ್ ಸಿರಪ್ ಸೇವಿಸಿದ್ದರಿಂದ 14 ಮಕ್ಕಳು ಮೃತಪಟ್ಟಿರುವ ಪ್ರಕರಣದ ತನಿಖೆ ನಡೆಸಲು ಮಧ್ಯಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದ್ದಾರೆ. ಅತ್ತ ಇಬ್ಬರು ಔಷಧ ನಿರೀಕ್ಷಕರು ಹಾಗೂ ಆಹಾರ ಮತ್ತು ಔಷಧಿ ಆಡಳಿತದ ಉಪ ನಿರ್ದೇಶಕರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ
07:58 AM (IST) Oct 07
ಪಶ್ಚಿಮ ಬಂಗಾಳದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಅದರಿಂದಾಗುತ್ತಿರುವ ಅನಾಹುತಗಳು ಮುಂದುವರೆದಿದ್ದು, ಈವರೆಗೆ 28 ಮಂದಿ ಬಲಿಯಾಗಿದ್ದಾರೆ. ಈ ಸಂಖ್ಯೆ ಹೆಚ್ಚುವ ಆತಂಕವಿದೆ. ಅತ್ತ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಕಾಣೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ.
07:58 AM (IST) Oct 07
ಉತ್ಕೃಷ್ಟ ಸಾಧನೆ ಮಾಡಿದವರಿಗೆ ಕೊಡಮಾಡುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯ ಘೋಷಣೆ ಸೋಮವಾರದಿಂದ ಅಧಿಕೃತವಾಗಿ ಆರಂಭವಾಗಿದೆ. ಈ ಬಾರಿ ವೈದ್ಯಕೀಯ ನೊಬೆಲ್‌ಗೆ ಅಮೆರಿಕದ ಮೆರಿ ಇ ಬ್ರುನ್ಕೋವ್, ಫ್ರೆಡ್ ರಾಮ್ಸ್‌ಡೆಲ್ ಮತ್ತು ಜಪಾನ್‌ನ ಹಿರಿಯ ಸಂಶೋಧಕ ಶಿಮೋನ್ ಸಕಾಗುಚಿ ಅವರು ಆಯ್ಕೆ
07:57 AM (IST) Oct 07
ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯು ಏರುಗತಿಯಲ್ಲಿಯೇ ಮುಂದುವರಿದಿದ್ದು, ಮತ್ತೊಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿವೆ.ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂಗೆ 9700 ರು. ಏರಿ ದಾಖಲೆಯ 1.30 ಲಕ್ಷ ರು.ಗೆ ತಲುಪಿದೆ.
07:57 AM (IST) Oct 07
ಪಶ್ಚಿಮ ಬಂಗಾಳದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ದುಷ್ಕರ್ಮಿಗಳು ಬಿಜೆಪಿ ಸಂಸದ ಖಗೇನ್ ಮುರ್ಮು ಹಾಗೂ ಶಾಸಕ ಶಂಕರ್ ಘೋಷ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಾಗರಕಟಾ ಪ್ರದೇಶದಲ್ಲಿ ಸೋಮವಾರ ನಡೆದಿದೆ.
07:48 AM (IST) Oct 07
ಕ್ಯಾನ್ಸರ್ ಜಾಗತಿಕ ಮಟ್ಟದಲ್ಲಿ ಪಿಡುಗಾಗಿ ಕಾಡುತ್ತಿರುವ ಹೊತ್ತಿನಲ್ಲಿ, ತಲೆ ಹಾಗು ಕುತ್ತಿಗೆಯ ಕ್ಯಾನ್ಸರ್‌ಅನ್ನು ಅದರ ಲಕ್ಷಣಗಳು ಕಾಣಿಸಿಕೊಳ್ಳುವ 10 ವರ್ಷ ಮೊದಲೇ ಪತ್ತೆ ಮಾಡಬಲ್ಲ ಮಾದರಿಯ ರಕ್ತ ಪರೀಕ್ಷಾ ವಿಧಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
07:48 AM (IST) Oct 07
ಆಪರೇಷನ್ ಸಿಂದೂರದ ಬಳಿಕ ಅಮೆರಿಕವನ್ನು ಮೆಚ್ಚಿಸಲು ಹೆಣಗಾಡುತ್ತಿರುವ ಪಾಕಿಸ್ತಾನ ಇದೀಗ ಅಪರೂಪದ ಖನಿಜಗಳನ್ನು ಅಮೆರಿಕಕ್ಕೆ ಕಳಿಸುವ ಮೂಲಕ ಮತ್ತೊಂದು ಹಂತದ ಸಂಬಂಧ ಬಲವರ್ಧನೆಗೆ ಯತ್ನಿಸಿದೆ.
07:48 AM (IST) Oct 07
ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಯೋಜನೆಯನ್ನು ಹಮಾಸ್ ಭಾಗಶಃ ಸ್ವಾಗತಿಸುವುದಾಗಿ ಘೋಷಿಸಿದ್ದರೂ, ಈ ಬಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಫೋನ್‌ನಲ್ಲಿ ಟ್ರಂಪ್ ತರಾಟೆ
07:47 AM (IST) Oct 07
‘ನಿಮ್ಮ ಹುಡುಗಿ ಲವ್ ಜಿಹಾದ್‌ನ ಸಂತ್ರಸ್ತೆಯಾಗಿದ್ದು, ಸ್ವಧರ್ಮಕ್ಕೆ ಮರಳಲು ಒಪ್ಪದಿದ್ದರೆ ಆಕೆಗೆ ವಿಷ ಕೊಟ್ಟುಬಿಡಿ’ ಎಂದು ತೆಲಂಗಾಣದ ಉಚ್ಚಾಟಿತ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಹೇಳಿಕೆ ನೀಡಿದ್ದಾರೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
07:47 AM (IST) Oct 07
ಬಹುನಿರೀಕ್ಷಿತ ಬಿಹಾರ ವಿಧಾನಸಭೆ ಚುನಾವಣೆಗಳು ಘೋಷಣೆ ಆಗಿದ್ದು, ಚುನಾವಣಾ ಕದನದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ ಮಹಾಘಠಬಂಧನ್ ನಡುವೆ ನೇರ ಸ್ಪರ್ಧೆ ನಡೆಯಲಿದೆ.