ನವದೆಹಲಿ (ಮಾ.6): ಭಾರತದ ಬುಡದಲ್ಲಿಯೇ ತನ್ನ ಯುದ್ಧನೌಕೆ ನಾಶವಾದ ಬೆನ್ನಲ್ಲಿಯೇ ಅಮೆರಿಕ ವಿರುದ್ಧದ ಯುದ್ಧಕ್ಕೆ ಭಾರತವನ್ನೂ ಇರಾನ್ ಎಳೆದಿದೆ. ನಮ್ಮ ಯುದ್ಧನೌಕೆ ಭಾರತದ ಅತಿಥಿಯಾಗಿತ್ತು. ಅದರ ಮೇಲೆ ಅಮೆರಿಕ ತನ್ನ ಕ್ರೌರ್ಯ ಮೆರೆದಿದೆ. ನೆನಪಿಟ್ಟುಕೊಳ್ಳಿ ಇದಕ್ಕಾಗಿ ಅಮೆರಿಕ ಪಶ್ಚಾತ್ತಾಪ ಪಡುವ ದಿನ ಖಂಡಿತಾ ಬರಲಿದೆ ಎಂದು ಇರಾನ್ ಕಿಡಿಕಾರಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:19 PM (IST) Mar 06
ಪ್ರತಿದಿನ ಸಾವಿರಾರು ಭಕ್ತರು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಾರೆ. ದೇವಾಲಯದ ಪಾವಿತ್ರ್ಯತೆ ಕಾಪಾಡಲು ಟಿಟಿಡಿ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇತ್ತೀಚೆಗೆ ನಡೆದ ಒಂದು ವಿವಾದ ಈಗ ಚರ್ಚೆಗೆ ಗ್ರಾಸವಾಗಿದೆ.
10:43 PM (IST) Mar 06
2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ? ಚಂದ್ರಗ್ರಹಣಕ್ಕೆ ಅಭ್ಯಾಸ ಮುಂದೂಡಿಕೆಯಿಂದ ಹಿಡಿದು ಈ ಬಾರಿಯ ಟೀಂ ಇಂಡಿಯಾ ಶುಭಶಕುನಕ್ಕಾಗಿ ಭಾರಿ ಕಸರತ್ತು ನಡೆಸಿದೆ.
09:50 PM (IST) Mar 06
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ ವೃತ್ತಿಜೀವನದಲ್ಲಿ ಕೆಲವು ಸಿನಿಮಾಗಳನ್ನು ತಿರಸ್ಕರಿಸಿದ್ದಾರೆ. ಚರಣ್ ಬೇಡ ಅಂದ ಕಥೆಗಳು ನಾನಿ, ರವಿತೇಜರಂತಹ ಹೀರೋಗಳ ಪಾಲಾದವು. ಆ ಸಿನಿಮಾಗಳ ರಿಸಲ್ಟ್ ಏನಾಯ್ತು ಅಂತ ಈ ಫೋಟೋ ಸ್ಟೋರಿಯಲ್ಲಿ ನೋಡೋಣ.
09:42 PM (IST) Mar 06
ರಹಸ್ಯ ಸ್ಥಳದಲ್ಲಿ ಜೀವಂತವಾಗಿದ್ದಾರಾ ಖಮೇನಿ? ಅಧಿಕೃತ ಎಕ್ಸ್ ಖಾತೆಯಿಂದ ಪ್ರತೀಕಾರದ ಮೊದಲ ಪೋಸ್ಟ್ ಮಾಡಲಾಗಿದೆ. ಖಮೇನಿ ಹತ್ಯೆಯಾದ ಬಳಿಕ ಇದೀಗ ಪ್ರತೀಕಾರದ ಪೋಸ್ಟ್ ಖಮೇನಿ ಅಧಿಕೃತ ಖಾತೆಯಿಂದ ಪೋಸ್ಟ್ ಆಗಿದೆ.
09:26 PM (IST) Mar 06
ಶೂಟಿಂಗ್ ಶುರುವಾದ ಮೇಲೆ ಸ್ಟಾರ್ ನಟಿಯೊಬ್ಬರಿಗೆ ನಿರ್ಮಾಪಕರು ಬಿಕಿನಿ ಧರಿಸುವಂತೆ ಹೇಳಿದ್ರಂತೆ. ಇದಕ್ಕೆ ಆ ನಟಿಯ ಪ್ರತಿಕ್ರಿಯೆ ಹೇಗಿತ್ತು? ಅಷ್ಟಕ್ಕೂ ಅದು ಯಾವ ಸಿನಿಮಾ? ಈ ಬಗ್ಗೆ ಇಲ್ಲಿದೆ ಮಾಹಿತಿ.
07:53 PM (IST) Mar 06
ತ್ರಿಶಾ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳೋ ಮೊದಲೇ ನಟ ವಿಜಯ್ ಬಾಡಿಗಾರ್ಡ್ ಕೊಟ್ಟ ಸುಳಿವು, ವಿಜಯ್ ಹಾಗೂ ತ್ರಿಶಾ ಜೋಡಿ ಒಂದೇ ಕಾರಿನಲ್ಲಿ ಮ್ಯಾಚಿಂಗ ಡ್ರೆಸ್ ಹಾಕಿ ಕಾಣಿಸಿಕೊಳ್ಳವ ಮೊದಲೇ ನಟನ ಬಾಡಿಗಾರ್ಡ್ ಮಹತ್ವದ ಸುಳಿವು ನೀಡಿದ್ದರು.
07:08 PM (IST) Mar 06
ಮಹಿಳೆಯರು ಟಿಂಡರ್ ಡೇಟಿಂಗ್ ಆ್ಯಪ್ ಬಳಸೋದು ಹೀಗಾ? ವಿಡಿಯೋ ನೋಡಿಯೇ ಸುಸ್ತಾದ ಜನ, ಡೇಟಿಂಗ್ ಆ್ಯಪ್ ಮೂಲಕವೇ ಇದೀಗ ಜನ ಹೆಚ್ಚು ಸಕ್ರಿಯವಾಗಿದ್ದಾರೆ. ಇದೀಗ ಮಹಿಳೆಯರು ಡೇಟಿಂಗ್ ಆ್ಯಪ್ ಬಳಕೆ ಕುರಿತು ಭಾರಿ ಚರ್ಚೆಯಾಗುತ್ತಿದೆ.
06:57 PM (IST) Mar 06
ಕೇಂದ್ರ ಸರ್ಕಾರವು ರಾಷ್ಟ್ರೀಯ ಜಾನುವಾರು ಮಿಷನ್ (NLM) ಅಡಿಯಲ್ಲಿ ಕತ್ತೆ ಸಾಕಾಣಿಕೆಯನ್ನು ಉತ್ತೇಜಿಸಲು ಬಂಪರ್ ಆಫರ್ ನೀಡಿದೆ. ಈ ಯೋಜನೆಯಡಿ, ಉದ್ಯಮಿಗಳು ತಳಿ ಸಾಕಣೆ ಕೇಂದ್ರಗಳನ್ನು ಸ್ಥಾಪಿಸಲು 50 ಲಕ್ಷದವರೆಗೆ ಬಂಡವಾಳ ಸಬ್ಸಿಡಿಯನ್ನು ಪಡೆಯಬಹುದು.
06:18 PM (IST) Mar 06
06:16 PM (IST) Mar 06
ಕಳರಿ ಪಯಟ್ಟು ಪಟ್ಟು ಕಲಿತ ರಾಹುಲ್ ಗಾಂಧಿ, ನಾಯಕರ ಕಸರತ್ತಿಗೆ ಕಾಂಗ್ರೆಸ್ಸಿಗರೇ ಸುಸ್ತು, ಕಾಲೇಜು ಭೇಟಿ ವೇಳೆ ವಿದ್ಯಾರ್ಥಿನಿ ಸೂಚನೆ ಮೇರೆಗೆ ರಾಹುಲ್ ಗಾಂಧಿ ಕೇರಳದ ಪುರಾತನ ಮಾರ್ಷಲ್ ಆರ್ಟ್ಸ್ ಕಲೆ ಕಳರಿ ಪಯಟ್ಟು ಪಟ್ಟುಗಳನ್ನು ಪ್ರದರ್ಶಿಸಿದ್ದಾರೆ.
06:15 PM (IST) Mar 06
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಅಕ್ಷರ್ ಪಟೇಲ್ ಅದ್ಭುತ ಕ್ಯಾಚ್ ಹಿಡಿದು ಪಂದ್ಯದ ಗತಿಯನ್ನೇ ಬದಲಿಸಿದರು. ಹ್ಯಾರಿ ಬ್ರೂಕ್ ವಿಕೆಟ್ ಪಡೆಯಲು 24 ಮೀಟರ್ ಓಡಿ ಹಿಡಿದ ಕ್ಯಾಚ್ ಭಾರತದ ಗೆಲುವಿಗೆ ಕಾರಣವಾಯಿತು. ಇದಕ್ಕೂ ಮುನ್ನ ವರ್ಲ್ಡ್ ಕಪ್ ಟರ್ನಿಂಗ್ ಪಾಯಿಂಟ್ ಕ್ಯಾಚ್‌ಗಳು ಇಲ್ಲಿವೆ ನೋಡಿ.
05:46 PM (IST) Mar 06
05:31 PM (IST) Mar 06
ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ 'ಪೇಟ್ರಿಯಾಟ್' ಚಿತ್ರದ ಬಿಡುಗಡೆಯನ್ನು ಕೇರಳದ ಚಿತ್ರ ಪ್ರದರ್ಶಕರ ಸಂಘಟನೆ (FEUOK) ನಿಷೇಧಿಸಿದೆ. ಸಂಘಟನೆಯು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಪ್ರದರ್ಶಿಸದಂತೆ ಚಿತ್ರಮಂದಿರಗಳ ಮಾಲೀಕರಿಗೆ ನಿರ್ದೇಶನ ನೀಡಿದೆ.
05:10 PM (IST) Mar 06
52ರ ಹರೆಯದ ನಟಿ ಮಲೈಕಾ ಅರೋರಾ ತಮ್ಮ ಫಿಟ್ನೆಸ್ಗಾಗಿ ಒಂದು ಸೂಪರ್ ಚೈನೀಸ್ ವ್ಯಾಯಾಮವನ್ನು ಪರಿಚಯಿಸಿದ್ದಾರೆ. ಈ ವ್ಯಾಯಾಮವು ದೇಹದ ಕೊಬ್ಬನ್ನು ಕರಗಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿ ಎಂದು ಅವರು ಹೇಳಿದ್ದಾರೆ.
04:48 PM (IST) Mar 06
ಬಾಯ್‌ಫ್ರೆಂಡ್ ಕ್ಯಾಂಪೇನ್, ವಿದ್ಯಾರ್ಥಿನಿಯರ ಕೂಪಕ್ಕೆ ತಳ್ಳಿ ಹುಡುಗರ ಜೊತೆ ವಿಡಿಯೋ ಕಾಲ್ ಲೈಂಗಿಕತೆ, ವಿದ್ಯಾರ್ಥಿನಿ ಒಬ್ಬಳು ಈ ಅಭಿಯಾನ ಆರಂಭಿಸಿದ್ದಾಳೆ. ಬಳಿಕ ಆಕೆಯ ಗೆಳತಿಯರು ಸೇರಿದಂತೆ ಹಲವರನ್ನು ಒತ್ತಾಯಪೂರ್ವಕವಾಗಿ ಕೂಪಕ್ಕೆ ತಳ್ಳಿದ್ದಾಳೆ.
04:01 PM (IST) Mar 06
2026ರ ಟಿ20 ವಿಶ್ವಕಪ್‌ನ 'ಟೂರ್ನಿಯ ಶ್ರೇಷ್ಠ ಆಟಗಾರ' ಪ್ರಶಸ್ತಿಗಾಗಿ ಐಸಿಸಿ ನಾಮನಿರ್ದೇಶಿತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದಿಂದ ಸಂಜು ಸ್ಯಾಮ್ಸನ್ ಮಾತ್ರ ಈ ಗೌರವಕ್ಕೆ ಪಾತ್ರರಾಗಿದ್ದು, ನಿರ್ಣಾಯಕ ಪಂದ್ಯಗಳಲ್ಲಿ ಅವರ ಪ್ರದರ್ಶನವನ್ನು ಪರಿಗಣಿಸಲಾಗಿದೆ.
03:59 PM (IST) Mar 06
ಪರೀಕ್ಷೆ ಬರೆದು ಟಾಯ್ಲೆಟ್‌ನಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಮಗುವನ್ನು ಡಸ್ಟ್‌ಬಿನ್ ಎಸೆದ ತಾಯಿ, ಪರೀಕ್ಷೆ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಾಯಿ ಜೊತೆ ಆಸ್ಪತ್ರೆ ತೆರಳಿದ ವಿದ್ಯಾರ್ಥಿನಿ ಡೆಲಿವರಿಯಾಗಿದ್ದಾಳೆ.
03:47 PM (IST) Mar 06
ಯುದ್ಧದ ಭೀತಿಯಿಂದಾಗಿ, ವಿಶ್ವದ ಪ್ರಮುಖ ಚಿನ್ನದ ದಾಸ್ತಾನುದಾರ ದೇಶವಾದ ಪೋಲೆಂಡ್ ತನ್ನ ರಕ್ಷಣಾ ಪಡೆಯನ್ನು ಬಲಪಡಿಸಲು ಮುಂದಾಗಿದೆ. ಇದಕ್ಕಾಗಿ, ಗಗನಕ್ಕೇರಿರುವ ಚಿನ್ನದ ಬೆಲೆಯ ಲಾಭ ಪಡೆದು, ಸುಮಾರು ₹1.1 ಲಕ್ಷ ಕೋಟಿ ಮೌಲ್ಯದ ಬಂಗಾರವನ್ನು ಮಾರಿ ಯುದ್ಧೋಪಕರಣಗಳನ್ನು ಖರೀದಿಸಲು ನಿರ್ಧರಿಸಿದೆ.
03:29 PM (IST) Mar 06
ತಮ್ಮ ಮೊದಲ ವಿಶ್ವಕಪ್ ಫೈನಲ್‌ಗೆ ಸಜ್ಜಾಗಿರುವ ಸಂಜು ಸ್ಯಾಮ್ಸನ್, ಕಳೆದ ಆರು ತಿಂಗಳ ಸವಾಲುಗಳನ್ನು ಮತ್ತು ತಂಡದಲ್ಲಿನ ತಮ್ಮ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ. ಫಾರ್ಮ್ ಕೊರತೆಯಿಂದ ವಿಶ್ವಕಪ್ ಸ್ಥಾನವೇ ಅನಿಶ್ಚಿತವಾಗಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
03:19 PM (IST) Mar 06
03:03 PM (IST) Mar 06
ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕದ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತುರ್ತು ಅಧಿಕಾರ ಚಲಾಯಿಸಿದೆ. ದೇಶದ ಎಲ್ಲಾ ತೈಲ ಸಂಸ್ಕರಣಾಗಾರಗಳು ಪೆಟ್ರೋಕೆಮಿಕಲ್ ಉತ್ಪಾದನೆ ನಿಲ್ಲಿಸಿ, ಕೇವಲ ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠಗೊಳಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
02:45 PM (IST) Mar 06
ಚೀನಾದಲ್ಲಿ, ಮಾಂಸಕ್ಕಾಗಿ ಬಾತುಕೋಳಿಯನ್ನು ಕತ್ತರಿಸಿದಾಗ ಅದರ ಹೊಟ್ಟೆಯಲ್ಲಿ ಸುಮಾರು 1.6 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ತುಣುಕುಗಳು ಪತ್ತೆಯಾಗಿವೆ. ಈ ಬಾತುಕೋಳಿಯು ಹತ್ತಿರದ ನದಿಯಲ್ಲಿ ಆಹಾರ ಹುಡುಕುವಾಗ ಚಿನ್ನದ ಕಣಗಳನ್ನು ನುಂಗಿರಬಹುದೆಂದು ಶಂಕಿಸಲಾಗಿದೆ.
02:36 PM (IST) Mar 06
02:24 PM (IST) Mar 06
02:23 PM (IST) Mar 06
ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್, ಉದ್ಯಮಿ ಸಾನಿಯಾ ಚಂದೋಕ್ ಅವರನ್ನು ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ಈ ಮದುವೆಗೆ ಕ್ರಿಕೆಟ್ ಮತ್ತು ಬಾಲಿವುಡ್ ತಾರೆಯರು ಸಾಕ್ಷಿಯಾಗಿದ್ದು, ಆರತಕ್ಷತೆ ವೇಳೆ ಅರ್ಜುನ್ ಭಾವನೆರಹಿತವಾಗಿ ನಿಂತಿದ್ದ ವಿಡಿಯೋ ವೈರಲ್ ಆಗಿದೆ.
01:23 PM (IST) Mar 06
ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. 2019ರಲ್ಲಿ 'ಡಿಯರ್ ಕಾಮ್ರೇಡ್' ಚಿತ್ರಕ್ಕಾಗಿ ವಿಜಯ್ ಅವರು ರಶ್ಮಿಕಾಗೆ ಚಿನ್ನದ ಪದಕ ತೊಡಿಸಿದ್ದರು, ಇದೀಗ ಅವರೇ ಮಾಂಗಲ್ಯ ಕಟ್ಟಿದ್ದಾರೆ.
01:22 PM (IST) Mar 06
ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ, ಸಾಕ್ಷಿ ಧೋನಿ ಅವರು ಬೌನ್ಸ್ ಆದ ಚೆಂಡನ್ನು ಕ್ಯಾಚ್ ಎಂದು ಭಾವಿಸಿ ಸಂಭ್ರಮಿಸಿದರು. ಇದನ್ನು ಕಂಡ ಎಂ.ಎಸ್. ಧೋನಿ, ಅದು ವಿಕೆಟ್ ಅಲ್ಲ ಎಂದು ಮುಗುಳ್ನಗುತ್ತಲೇ ಸನ್ನೆ ಮಾಡಿ ತಿಳಿಸಿದರು.
01:14 PM (IST) Mar 06
12:58 PM (IST) Mar 06
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಭಿಷೇಕ್ ಶರ್ಮಾ ಕೇವಲ 9 ರನ್‌ಗಳಿಗೆ ಔಟಾಗಿ ತೀವ್ರ ನಿರಾಸೆ ಮೂಡಿಸಿದ್ದಾರೆ. ಟೂರ್ನಿಯುದ್ದಕ್ಕೂ ಕಳಪೆ ಫಾರ್ಮ್ ಪ್ರದರ್ಶಿಸಿದ ಅವರ ಈ ವೈಫಲ್ಯಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
12:20 PM (IST) Mar 06
ಮುಂಬೈ ವಿಮಾನ ನಿಲ್ದಾಣದ ಬಳಿ ರಮ್ಜಾನ್ ಸಮಯದಲ್ಲಿ ನಮಾಜ್ ಮಾಡಲು ಅನುಮತಿ ಕೋರಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ವಿಮಾನ ನಿಲ್ದಾಣದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಧರ್ಮಕ್ಕಿಂತ ಭದ್ರತೆಯೇ ಮುಖ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು,
11:50 AM (IST) Mar 06
Celebrities ExtraMarital Affair: ಅನೇಕ ನಟ, ನಟಿಯರು ಮದುವೆಯಾದ ಬಳಿಕ ಕೂಡ ಅಕ್ರಮ ಸಂಬಂಧ ಹೊಂದಿರುವ ಉದಾಹರಣೆಗಳು ಸಾಕಷ್ಟಿವೆ. ಇದೇ ಕಾರಣಕ್ಕೆ ಸ್ಟಾರ್ ನಟರು ಡಿವೋರ್ಸ್ ಕೂಡ ಪಡೆದಿದ್ದುಂಟು. ಹಾಗಾದರೆ ಯಾರು? ಯಾರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಲೇಖನ ಓದಿ.
11:11 AM (IST) Mar 06
ದೆಹಲಿ ವಿಧಾನಸಭೆಯ 'ಫಾನ್ಸಿ ಘರ್' ವಿವಾದಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಹಕ್ಕುಬಾಧ್ಯತಾ ಸಮಿತಿ ಮುಂದೆ ಹಾಜರಾಗಲಿದ್ದಾರೆ. ಈ ವಿಚಾರಣೆಯನ್ನು ನೇರ ಪ್ರಸಾರ ಮಾಡುವಂತೆ ವಿಪಕ್ಷ ನಾಯಕಿ ಅತಿಶಿ ಸ್ಪೀಕರ್ ವಿಜೇಂದರ್ ಗುಪ್ತಾಗೆ ಸವಾಲು ಹಾಕಿದ್ದಾರೆ.
10:55 AM (IST) Mar 06
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 7 ರನ್‌ಗಳ ರೋಚಕ ಜಯ ಸಾಧಿಸಿ ಭಾರತ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂದ್ಯದ ನಂತರ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಅವರ ಇನ್ನಿಂಗ್ಸ್ ಮತ್ತು ಬೌಲರ್‌ಗಳ ಪ್ರದರ್ಶನವನ್ನು ಶ್ಲಾಘಿಸಿದರು.
10:13 AM (IST) Mar 06
ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ನಟ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಮದುವೆ ಆರತಕ್ಷತೆಯೊಂದಕ್ಕೆ ಜೊತೆಯಾಗಿ ಬಂದಿದ್ದು, ಒಂದೇ ಬಣ್ಣದ ಬಟ್ಟೆ ಧರಿಸಿ, ಒಂದೇ ಕಾರಿನಲ್ಲಿ ಬಂದಿದ್ದು, ಇವರಿಬ್ಬರ ವಿವಾಹೇತರ ಸಂಬಂಧದ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
09:54 AM (IST) Mar 06
09:49 AM (IST) Mar 06
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ರೋಚಕ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. 89 ರನ್ ಗಳಿಸಿ ಪಂದ್ಯಶ್ರೇಷ್ಠರಾದ ಸಂಜು ಸ್ಯಾಮ್ಸನ್, ಈ ಪ್ರಶಸ್ತಿಯನ್ನು ಜಸ್ಪ್ರೀತ್ ಬುಮ್ರಾಗೆ ಅರ್ಪಿಸಿದ್ದಾರೆ. ಬುಮ್ರಾ ಅವರ ಅದ್ಭುತ ಡೆತ್ ಓವರ್ ಬೌಲಿಂಗ್ ಇಲ್ಲದಿದ್ದರೆ ಕಷ್ಟವಾಗ್ತಿತ್ತು.
08:45 AM (IST) Mar 06
ಇರಾನ್-ಇಸ್ರೇಲ್ ಯುದ್ಧದಿಂದ ಹಾರ್ಮುಜ್ ಜಲಸಂಧಿ ಬಂದ್ ಆಗಿ ಭಾರತಕ್ಕೆ ತೈಲ ಸಂಕಷ್ಟ ಎದುರಾಗಿತ್ತು. ಈ ಬಿಕ್ಕಟ್ಟಿನ ನಡುವೆ, ಜಾಗತಿಕ ಇಂಧನ ಮಾರುಕಟ್ಟೆ ಸ್ಥಿರಗೊಳಿಸಲು ಅಮೆರಿಕವು ಭಾರತಕ್ಕೆ ರಷ್ಯಾದ ತೈಲ ಖರೀದಿಸಲು 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಿದೆ.
08:35 AM (IST) Mar 06
07:42 AM (IST) Mar 06
ಭಾರತ, ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಸಂಜು ಸ್ಯಾಮ್ಸನ್ (89) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 253 ರನ್ ಗಳಿಸಿದರೆ, ಜೇಕಬ್ ಬೆಥೆಲ್ (105) ಶತಕದ ಹೊರತಾಗಿಯೂ ಇಂಗ್ಲೆಂಡ್ ಸೋಲೊಪ್ಪಿಕೊಂಡಿತು.
07:41 AM (IST) Mar 06
ಇರಾನ್ ವಿರುದ್ಧದ ಯುದ್ಧವು 100 ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದ್ದು, ಅಮೆರಿಕ ಸೇನೆಯು ಹೆಚ್ಚುವರಿ ಗುಪ್ತಚರ ಅಧಿಕಾರಿಗಳನ್ನು ಕೋರಿದೆ. ಈ ಸಂಘರ್ಷದಿಂದಾಗಿ ಅಮೆರಿಕ ಮತ್ತು ಇಸ್ರೇಲ್ ಭಾರೀ ಆರ್ಥಿಕ ನಷ್ಟವನ್ನು ಅನುಭವಿಸುತ್ತಿವೆ.