ನವದೆಹಲಿ (ಫೆ.5): ವಿಪಕ್ಷದ ಮಹಿಳಾ ಸಂಸದರು, ಲೋಕಸಭೆಯಲ್ಲಿ ಪ್ರಧಾನಿ ಕುಳಿತುಕೊಳ್ಳುವ ಸ್ಥಳಕ್ಕೆ ಮುತ್ತಿಗೆ ಹಾಕಿದ ಪರಿಣಾಮ ನರೇಂದ್ರ ಮೋದಿ ಅವರ ಭಾಷಣವನ್ನೇ ರದ್ದುಪಡಿಸಿದ ಅಪರೂಪದ ಬೆಳವಣಿಗೆಯೊಂದು ಬುಧವಾರ ನಡೆದಿದೆ.ಆದರೆ ಘಟನೆ ನಡೆದಾಗ ಮೋದಿ ಸ್ಥಳದಲ್ಲಿ ಹಾಜರಿರದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಲಾಪವನ್ನೇ ಗುರುವಾರಕ್ಕೆ ಮುಂದೂಡಲಾಯಿತು. ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:21 PM (IST) Feb 05
ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮತ್ತು ನೆಹರೂಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಗಾಂಧಿ ಕುಟುಂಬವು ಮಹಾತ್ಮ ಗಾಂಧಿಯವರ ಉಪನಾಮವನ್ನು ಕದ್ದಿದೆ ಎಂದು ಆರೋಪಿಸಿದ ಅವರು, ಕಳ್ಳತನ ಅವರ ಕುಟುಂಬ ವೃತ್ತಿ ಎಂದು ದೂಷಿಸಿದರು.
10:51 PM (IST) Feb 05
10:28 PM (IST) Feb 05
09:55 PM (IST) Feb 05
ರಾಜಸ್ಥಾನದಲ್ಲಿ, ಹಿಟ್ & ರನ್‌ನಂತೆ ಕಂಡುಬಂದ ನವವಿವಾಹಿತ ಅಶೀಶ್ ಸಾವಿನ ಪ್ರಕರಣವು ರೋಚಕ ತಿರುವು ಪಡೆದುಕೊಂಡಿದೆ. ಪೊಲೀಸರ ತನಿಖೆಯು ಇದು ಅಪಘಾತವಲ್ಲ, ಬದಲಿಗೆ ಆತನ ಪತ್ನಿ ಅಂಜು ತನ್ನ ಪ್ರಿಯಕರ ಸಂಜು ಮತ್ತು ಇತರರೊಂದಿಗೆ ಸೇರಿ ಮಾಡಿದ ಪೂರ್ವನಿಯೋಜಿತ ಕೊಲೆ ಎಂದು ಬಹಿರಂಗಪಡಿಸಿದೆ.
08:29 PM (IST) Feb 05
ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಾಜ್ಯಸಭೆಯಲ್ಲಿ ಅವರು ಆರೋಪಿಸಿದರು.
07:37 PM (IST) Feb 05
24 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಿಹಾರ ಮೂಲದ ಕುಖ್ಯಾತ ಅಪ್ಪ-ಮಗನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಿಹಾರದ ಸ್ಪೆಷಲ್ ಟಾಸ್ಕ್ ಫೋರ್ಸ್, ಬೆಂಗಳೂರು ಪೊಲೀಸರ ಸಹಕಾರದೊಂದಿಗೆ, ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಮಣಿಕ್ ಸಿಂಗ್ ಮತ್ತು ಮನೋಜ್ ಸಿಂಗ್ ಅವರನ್ನು ಸೆರೆಹಿಡಿದಿದೆ.
06:43 PM (IST) Feb 05
ಅಂಡರ್-19 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ 10ನೇ ಬಾರಿಗೆ ಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಭಾರತ ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಪಾಕಿಸ್ತಾನ ಹೆಸರಲ್ಲಿದ್ದ ದಾಖಲೆ ಮುರಿದಿದೆ.
06:26 PM (IST) Feb 05
06:24 PM (IST) Feb 05
06:13 PM (IST) Feb 05
05:59 PM (IST) Feb 05
ರಾಷ್ಟ್ರಪತಿ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಆರ್ಥಿಕ ಶಕ್ತಿ, ಯುವ ಸಮುದಾಯದ ಬಲ ಮತ್ತು ಜಾಗತಿಕ ವಿಶ್ವಾಸದ ಬಗ್ಗೆ ವಿವರಿಸಿದರು. ಕಾಂಗ್ರೆಸ್ ಆಳ್ವಿಕೆಯ ತಪ್ಪುಗಳನ್ನು ಟೀಕಿಸಿದ ಅವರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿ ವಿಪಕ್ಷಗಳು ಸಭಾತ್ಯಾಗ ಮಾಡಿದವು.
05:45 PM (IST) Feb 05
ಥೈರಾಯ್ಡ್ ಕೋಶಗಳ ಅನಿಯಂತ್ರಿತ ಬೆಳವಣಿಗೆಯೇ ಥೈರಾಯ್ಡ್ ಕ್ಯಾನ್ಸರ್. ಆರಂಭದಲ್ಲಿ, ಥೈರಾಯ್ಡ್ ಕ್ಯಾನ್ಸರ್ ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ಇರಬಹುದು ಹೀಗಿದ್ದರು ಈ ಕಾಯಿಲೆಯನ್ನು ಗುರುತಿಸುವುದು ಹೇಗೆ?
04:16 PM (IST) Feb 05
04:10 PM (IST) Feb 05
03:47 PM (IST) Feb 05
ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ, ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪುರುಷರಿಂದ ಬೇಸತ್ತ ನೂರಾರು ಮಹಿಳೆಯರು ಮದ್ಯದಂಗಡಿಯ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 15 ಲಕ್ಷ ಮೌಲ್ಯದ ಮದ್ಯವನ್ನು ರಸ್ತೆಗೆಸೆದು ನಾಶಪಡಿಸಿ, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ.
03:31 PM (IST) Feb 05
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ತಿರುವನಂತಪುರಂಗೆ ರಹಸ್ಯ ಭೇಟಿ ನೀಡಿದ್ದರು. ಈ ವೇಳೆ, ಅವರು ಸ್ಥಳೀಯ ಬೇಕರಿಯೊಂದರಲ್ಲಿ ಚಿಪ್ಸ್ ಖರೀದಿಸಿದ್ದಾರೆ. ಮಫ್ತಿಯಲ್ಲಿದ್ದ ಭದ್ರತಾ ಸಿಬ್ಬಂದಿ ಜೊತೆ ಸಾಮಾನ್ಯರಂತೆ ಬಂದ ದೋವಲ್, ಅಂಗಡಿಯಿಂದ ವಾಪಸ್ ಹೋಗುವ ವಿಡಿಯೋ ಈಗ ವೈರಲ್ ಆಗಿದೆ.
03:16 PM (IST) Feb 05
Rajasthan Honeymoon Murder: Wife Kills Husband with Boyfriend Help ಮೂರು ತಿಂಗಳ ಹಿಂದೆಯಷ್ಟೇ ಅಂಜು ಹಾಗೂ ಆಶಿಶ್ ಮದುವೆಯಾಗಿದ್ದರು. ಆದರ, ಮದುವೆಯ ಬಗ್ಗೆ ಅಂಜುಗೆ ಅತೃಪ್ತಿ ಇತ್ತು. ಕೆಲವೇ ದಿನದಲ್ಲಿ ಆಕೆ ತವರು ಮನೆಗೆ ವಾಪಸಾಗಿದ್ದರು ಎನ್ನಲಾಗಿದೆ.
03:04 PM (IST) Feb 05
ಹೋಟೆಲ್ ಒಂದರ ವಿಡಿಯೋ ವೈರಲ್ ಆಗಿದ್ದು, ಗ್ರಾಹಕರು ಖಾಲಿ ಮಾಡಿದ ಕೋಣೆಯ ಅವ್ಯವಸ್ಥೆಯನ್ನು ಹೌಸ್ ಕೀಪಿಂಗ್ ಸಿಬ್ಬಂದಿ ತೋರಿಸಿದ್ದಾರೆ. ಕೋಣೆಯಲ್ಲಿ ಊಟದ ಡಬ್ಬಗಳು, ಸಿಗರೇಟ್ ತುಂಡುಗಳ ಜೊತೆಗೆ ಬಳಸಿದ ಕಾಂಡೋಮ್‌ಗಳು ಪತ್ತೆಯಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
01:54 PM (IST) Feb 05
ಮುಂಬೈನಲ್ಲಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 20 ವರ್ಷದ ಯುವತಿಯ ಮೇಲೆ ಹಲವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆಕೆ ಐದು ತಿಂಗಳ ಗರ್ಭಿಣಿಯಾದ ನಂತರ ಘೋರ ಕೃತ್ಯ ಬೆಳಕಿಗೆ ಬಂದಿದ್ದು, ಡಿಎನ್‌ಎ ಪರೀಕ್ಷೆ ವರದಿ ನೋಡಿ ಕುಟುಂಬದವರು ಆಘಾತಕ್ಕೀಡಾಗಿದ್ದಾರೆ.
01:16 PM (IST) Feb 05
ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ AI ಅಭಿವೃದ್ಧಿಯ ಭವಿಷ್ಯದ ಕುರಿತು ಚರ್ಚಿಸಲಾಯಿತು. ಸಾರ್ವಭೌಮ ಕಂಪ್ಯೂಟ್ ಸಾಮರ್ಥ್ಯದ ಅಗತ್ಯತೆ, ಬಾಹ್ಯ ಅವಲಂಬನೆಯ ಅಪಾಯಗಳು, ಮತ್ತು AI ಮಾದರಿಗಳು ಸಾಂಸ್ಕೃತಿಕ ಮೌಲ್ಯಗಳನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂಬ ಪ್ರಮುಖ ವಿಷಯಗಳ ಮೇಲೆ ಈ ಚರ್ಚೆ ಬೆಳಕು ಚೆಲ್ಲಿದೆ.
12:38 PM (IST) Feb 05
ಭಾರತ ಮತ್ತು ದುಬೈನಲ್ಲಿನ ತೆರಿಗೆ ವ್ಯವಸ್ಥೆ ಮತ್ತು ಜೀವನಶೈಲಿಯನ್ನು ಹೋಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆಗಿದೆ. ಭಾರತದಲ್ಲಿ ಶೇ. 30ರಷ್ಟು ತೆರಿಗೆ ಪಾವತಿಸಿದರೂ ಕಳಪೆ ಸೌಲಭ್ಯಗಳು ಸಿಗುತ್ತಿವೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.
12:33 PM (IST) Feb 05
ವಾಷಿಂಗ್ಟನ್ ಪೋಸ್ಟ್ ತನ್ನ 300ಕ್ಕೂ ಹೆಚ್ಚು ಪತ್ರಕರ್ತರು ಮತ್ತು ಸಿಬ್ಬಂದಿಯನ್ನು ವಜಾಗೊಳಿಸಿದೆ, ಇದು ಸಂಪಾದಕೀಯ ತಂಡದ ಮೂರನೇ ಒಂದು ಭಾಗದಷ್ಟು ದೊಡ್ಡದಾಗಿದೆ. ಈ ಮಹಾ ವಜಾ ಪ್ರಕ್ರಿಯೆಯಲ್ಲಿ ಶಶಿ ತರೂರ್ ಅವರ ಪುತ್ರ ಇಶಾನ್ ತರೂರ್ ಕೂಡ ಸೇರಿದ್ದಾರೆ.
11:56 AM (IST) Feb 05
Mukesh Ambani's Advice to Gen Z: Convert Savings into Investments ಭಾರತವನ್ನು ಭವಿಷ್ಯದ $25-30 ಟ್ರಿಲಿಯನ್ ಆರ್ಥಿಕತೆ ಎಂದು ಕರೆದ ಮುಖೇಶ್ ಅಂಬಾನಿ, ಜನರು ತಮ್ಮ ಉಳಿತಾಯವನ್ನು ಹೂಡಿಕೆಗಳಾಗಿ ಪರಿವರ್ತಿಸಿಕೊಳ್ಳುವಂತೆ ಸಲಹೆ ನೀಡಿದರು.
11:37 AM (IST) Feb 05
11:10 AM (IST) Feb 05
ಕಳೆದ ವರ್ಷ ಯುವಜನರ ಬೃಹತ್ ಪ್ರತಿಭಟನೆಗೆ ಕಾರಣವಾಗಿ, ಹಿಂದಿನ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ವಿವಾದಿತ ಸಾಮಾಜಿಕ ಮಾಧ್ಯಮ ಬಿಲ್-2025 ಅನ್ನು ನೇಪಾಳದ ಹಾಲಿ ಸರ್ಕಾರ ಹಿಂತೆಗೆದುಕೊಂಡಿದೆ.
10:51 AM (IST) Feb 05
ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯ ಖಂಡಾಲಾ ಘಾಟ್ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ 32 ಗಂಟೆಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅನಿಲ ಸೋರಿಕೆಯ ಅಪಾಯದ ನಡುವೆ, ಕ್ರೇನ್‌ಗಳ ಸಹಾಯದಿಂದ ಟ್ಯಾಂಕರ್ ಅನ್ನು ತೆರವುಗೊಳಿಸಿದ ನಂತರ ಬುಧವಾರ ಮಧ್ಯರಾತ್ರಿ ಸಂಚಾರವನ್ನು ಪುನರಾರಂಭಿಸಲಾಯಿತು.
10:36 AM (IST) Feb 05
10:11 AM (IST) Feb 05
ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ ಸ್ಟೀನ್‌ನ ಕಡತದಲ್ಲಿ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಮತ್ತು ಅನುರಾಗ್ ಕಶ್ಯಪ್ ಅವರ ಹೆಸರುಗಳು ಉಲ್ಲೇಖವಾಗಿವೆ. ಬಚ್ಚನ್ ದಂಪತಿಗಳು ಸಹ-ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವೊಂದಕ್ಕೆ ಎಪ್‌ಸ್ಟೀನ್ ಆಹ್ವಾನಿತರಾಗಿದ್ದರು.
09:49 AM (IST) Feb 05
ರಣವೀರ್ ಸಿಂಗ್ ಅಭಿನಯದ ಬ್ಲಾಕ್‌ಬಸ್ಟರ್ ಚಿತ್ರ 'ಧುರಂಧರ್ 2' ಸಿನಿಮಾದ OTT ಡೀಲ್ ಡಿಜಿಟಲ್ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ವರದಿಗಳ ಪ್ರಕಾರ, ಈ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿದ್ದು, ಬಾಲಿವುಡ್‌ನ ಅತಿದೊಡ್ಡ ಡಿಜಿಟಲ್ ಡೀಲ್‌ಗಳಲ್ಲಿ ಒಂದೆನಿಸಿದೆ.
09:45 AM (IST) Feb 05
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ 'ಭಾರತ್ ಟ್ಯಾಕ್ಸಿ'ಗೆ ಚಾಲನೆ ನೀಡಲಿದ್ದಾರೆ. ಓಲಾ, ಉಬರ್‌ಗೆ ಸ್ಪರ್ಧಿಯಾಗಿರುವ ಈ ಸೇವೆಯು 'ಸಾರಥಿಯೇ ಮಾಲೀಕ' ಎಂಬ ಆಶಯದೊಂದಿಗೆ, ಕಮಿಷನ್ ಹಾಗೂ ಸರ್ಜ್ ದರವಿಲ್ಲದೆ ಕಾರ್ಯನಿರ್ವಹಿಸಲಿದೆ.
08:56 AM (IST) Feb 05
4ನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಆರ್‌ಸಿಬಿ ಹಾಗೂ ಕಳೆದ 3 ಆವೃತ್ತಿಗಳ ರನ್ನರ್-ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ನೇರವಾಗಿ ಫೈನಲ್‌ಗೇರಿದ ಆರ್‌ಸಿಬಿ ಸಂಘಟಿತ ಆಟವನ್ನು ನೆಚ್ಚಿಕೊಂಡಿದೆ.
08:10 AM (IST) Feb 05
3 Sisters Die Ghaziabad Due to Korean Game Addiction ಅಪ್ಪಾ... ನಮ್ಮನ್ನು ಕ್ಷಮಿಸಿ, ನಮ್ಮನ್ನು ಕೊರಿಯಾದಿಂದ ದೂರ ಮಾಡಲಾಗದು ಎಂದು ಪತ್ರ ಬರೆದಿಟ್ಟು 9ನೇ ಮಹಡಿಯಿಂದ ಬಾಲಕಿಯರು ಜಿಗಿದಿದ್ದಾರೆ. ನೂರಾರು ಮಕ್ಕಳ ಬಲಿ ಪಡೆದಿದ್ದ ಬ್ಲ್ಯೂವೇಲ್ ಬಳಿಕ ಮತ್ತೊಂದು ಮಾದರಿ ಆಟದ ಆತಂಕ ಶುರುವಾಗಿದೆ.
07:52 AM (IST) Feb 05
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದತ್ತು ಪುತ್ರನೆಂದು ಹೇಳಿಕೊಂಡು ವಂಚಿಸುತ್ತಿದ್ದ ಸುಜಯ್ ಅಲಿಯಾಸ್ ಸುಜಯೇಂದ್ರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈತ ರಾಜ್ಯಪಾಲರ ಲೆಟರ್‌ಹೆಡ್‌ನಲ್ಲಿ ನಕಲಿ ಸಹಿ ಮಾಡಿ ವಿಐಟಿ ವಿವಿ ಕುಲಪತಿ ಹುದ್ದೆಗೆ ನೇಮಕಾತಿ ಪತ್ರ ನೀಡಿ ವಂಚಿಸಿದ್ದಾನೆ..
07:51 AM (IST) Feb 05
ಐಸಿಸಿ ಅಂಡರ್-19 ವಿಶ್ವಕಪ್ ಸೆಮಿಫೈನಲ್‌ನಲ್ಲಿ, ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಐತಿಹಾಸಿಕ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. 311 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ, ಕಿರಿಯರ ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆ ಬರೆಯಿತು.
07:50 AM (IST) Feb 05
ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಉಡುಪಿ ಜಿಲ್ಲೆಯ ಶಂತನು ಶೆಟ್ಟಿಗಾರ್ ಅಬುದಾಭಿಯಲ್ಲಿ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ 49 ಕೋಟಿ ( (20 ಮಿಲಿಯನ್ ದಿರಮ್ ) ರು. ಮೊತ್ತದ ಲಾಟರಿ ಗೆದ್ದಿದ್ದಾರೆ.
07:50 AM (IST) Feb 05
ವ್ಯಾಪಾರ ಒಪ್ಪಂದದ ಭಾಗವಾಗಿ, ರಷ್ಯಾದಿಂದ ತೈಲ ಖರೀದಿ ಸ್ಥಗಿತಕ್ಕೆ ಭಾರತ ನಿರ್ಧರಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಇದೀಗ ಅಮೆರಿಕ ಮತ್ತು ರಷ್ಯಾ ನಡುವೆ ಜಟಾಪಟಿಗೆ ಕಾರಣವಾಗಿದೆ.
07:50 AM (IST) Feb 05
ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ಘೋಷಿಸಿದ್ದ ರೈಲ್ವೆ ಯೋಜನೆ ವಿರೋಧಿಸಿ 7 ಲಕ್ಷ ಸೇಬು ಮರಗಳ ಉಳಿವಿಗೆ ಜನ ಚಿಪ್ಕೋ ಚಳವಳಿ ನಡೆದದ್ದು, ಇದಕ್ಕೆ ಮಣಿದ ಸರ್ಕಾರ ಮೂರು ಯೋಜನೆಗಳನ್ನು ರದ್ದುಪಡಿಸಿದೆ.
07:49 AM (IST) Feb 05
ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಸ್ವತಃ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ವಾದ ಮಂಡಿಸಿದ ಅಪರೂಪದ ಘಟನೆಗೆ ಸುಪ್ರೀಂಕೋರ್ಟ್ ಬುಧವಾರ ಸಾಕ್ಷಿಯಾಯಿತು.
07:49 AM (IST) Feb 05
ವಿಪಕ್ಷದ ಮಹಿಳಾ ಸಂಸದರು, ಲೋಕಸಭೆಯಲ್ಲಿ ಪ್ರಧಾನಿ ಕುಳಿತುಕೊಳ್ಳುವ ಸ್ಥಳಕ್ಕೆ ಮುತ್ತಿಗೆ ಹಾಕಿದ ಪರಿಣಾಮ ನರೇಂದ್ರ ಮೋದಿ ಅವರ ಭಾಷಣವನ್ನೇ ರದ್ದುಪಡಿಸಿದ ಅಪರೂಪದ ಬೆಳವಣಿಗೆಯೊಂದು ಬುಧವಾರ ನಡೆದಿದೆ.