LIVE NOW
Published : Jan 29, 2026, 07:44 AM ISTUpdated : Jan 29, 2026, 10:44 AM IST

India News Live: IND vs NZ - ವೈಜಾಗ್‌ನಲ್ಲಿ ಟೀಂ ಇಂಡಿಯಾ ಸೋತಿದ್ದೇ ಈ ಕಾರಣಕ್ಕೆ!

ಸಾರಾಂಶ

ನವದೆಹಲಿ (ಜ.29): ಅಜಿತ್‌ ಪವಾರ್ ಅಗಲಿಕೆ ಯಿಂದ ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಆಧಾರಸ್ತಂಭ ಕುಸಿದಂತಾಗಿದ್ದರೆ, ಅತ್ತ ಅವರ ಎನ್‌ಸಿಪಿ ಅತಂತ್ರ ಸ್ಥಿತಿಗೆ ತಲುಪಿದೆ. ಅದರ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳೇಳುತ್ತಿದ್ದು, ಅಜಿತ್ ಇಲ್ಲದೆ ಎನ್‌ಸಿಪಿ ಶಾಸಕರಿಗೆ ಅನಾಥ ಭಾವ ಕಾಡತೊಡಗಿದೆ. ಈ ನಡುವೆ ಅಜಿತ್ ಅನುಪಸ್ಥಿತಿಯಲ್ಲಿ ಭವಿಷ್ಯದ ದೃಷ್ಟಿಯಿಂದ ಶಾಸಕರು ಅನ್ಯ ಪಕ್ಷದತ್ತ ಹೆಜ್ಜೆ ಇಟ್ಟರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:44 AM (IST) Jan 29

IND vs NZ - ವೈಜಾಗ್‌ನಲ್ಲಿ ಟೀಂ ಇಂಡಿಯಾ ಸೋತಿದ್ದೇ ಈ ಕಾರಣಕ್ಕೆ!

IND vs NZ: ನಾಲ್ಕನೇ ಟಿ20ಯಲ್ಲಿ ನ್ಯೂಜಿಲೆಂಡ್ 50 ರನ್‌ಗಳಿಂದ ಭಾರತವನ್ನು ಸೋಲಿಸಿತು. ಶಿವಂ ದುಬೆ (65) ಹೋರಾಡಿದರೂ, ಟಾಪ್ ಆರ್ಡರ್ ವೈಫಲ್ಯ ಮತ್ತು ಬೌಲಿಂಗ್ ದೋಷಗಳಿಂದ ಟೀಂ ಇಂಡಿಯಾ ಸೋತಿತು. ಸರಣಿಯು ಭಾರತದ ಕೈಯಲ್ಲಿದೆ. ಭಾರತ ತಂಡದ ಸೋಲಿಗೆ ಕಾರಣಗಳೇನು?

Read Full Story

10:33 AM (IST) Jan 29

ಸಿಗರೇಟ್‌, ಫಾಸ್ಟ್‌ಟ್ಯಾಗ್‌ನಿಂದ ಸಿಲಿಂಡರ್‌ವರೆಗೆ..ಫೆ.1 ರಿಂದ ಬದಲಾಗಲಿರುವ ನಿಯಮಗಳು!

From LPG to cigarettes… These big changes from February 1 ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಇದೇ ದಿನದಿಂದ ಹಲವು ನಿಯಮಗಳು ಬದಲಾಗಲಿವೆ. ಎಲ್‌ಪಿಜಿ ಸಿಲಿಂಡರ್ ಬೆಲೆ, ಪಾನ್ ಮಸಾಲ ಮತ್ತು ಸಿಗರೇಟ್ ದರಗಳು ಹಾಗೂ ಫಾಸ್ಟ್‌ಟ್ಯಾಗ್ ನಿಯಮಗಳಲ್ಲಿ ಬದಲಾವಣೆಗಳಾಗುವ ನಿರೀಕ್ಷೆಯಿದೆ.

Read Full Story

10:29 AM (IST) Jan 29

ಆಸ್ಟ್ರೇಲಿಯನ್ ಓಪನ್ - ನಾವು ಟೆನಿಸ್‌ ಆಟಗಾರರೇ, ಮೃಗಾಲಯದ ಪ್ರಾಣಿಗಳೇ? - ಟೆನಿಸರ್‌ ತಾರೆ ಇಗಾ ಕಿಡಿ!

ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಆಟಗಾರ್ತಿ ಕೊಕೊ ಗಾಫ್‌ರ ಗೌಪ್ಯತೆ ಉಲ್ಲಂಘಿಸಿದ್ದಕ್ಕೆ ಇಗಾ ಸ್ವಿಯಾಟೆಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ನೋವಾಕ್‌ ಜೋಕೋವಿಚ್‌ ಮತ್ತು ಯಾನಿಕ್‌ ಸಿನ್ನರ್‌ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
Read Full Story

09:46 AM (IST) Jan 29

ಚುನಾವಣಾ ಪ್ರಚಾರಕ್ಕೆ ಹೊರಟಿದ್ದ ನಾಯಕರಿಗೆ ಮೃತ್ಯುಪಾಶ; ಕೊಲಂಬಿಯಾದಲ್ಲಿ ಭೀಕರ ವಿಮಾನ ದುರಂತ!

ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದಲ್ಲಿ ಸಟೇನಾ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ, ಸಂಸದರೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 15 ಜನರು ಸಾವನ್ನಪ್ಪಿದ್ದಾರೆ. ಕುಕುಟಾದಿಂದ ಓಕಾನಾಗೆ ತೆರಳುತ್ತಿದ್ದ ವಿಮಾನವು ಇಳಿಯುವ ಸ್ವಲ್ಪ ಸಮಯದ ಮೊದಲು ಸಂಪರ್ಕ ಕಳೆದುಕೊಂಡಿದೆ.

Read Full Story

09:44 AM (IST) Jan 29

ಅಜಿತ್ ಪವಾರ್ ತಾಯಿ ಟಿವಿ ನೋಡ್ತಿದ್ದಾಗಲೇ ಬಂತು ವಿಮಾನ ಅಪಘಾತ ಸುದ್ದಿ - ಟಿವಿ ಕೇಬಲ್ ಕಟ್ ಮಾಡಿದ ಸಿಬ್ಬಂದಿ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಈ ದುರಂತದ ಸುದ್ದಿ ಅವರ ತಾಯಿಗೆ ತಿಳಿಯದಂತೆ ತಡೆಯಲು ಸಿಬ್ಬಂದಿ  ಮನೆಯ ಕೇಬಲ್ ಸಂಪರ್ಕವನ್ನು ಕಡಿತಗೊಳಿಸಿದ್ದರು ಎಂದು ವರದಿಯಾಗಿದೆ.

Read Full Story

09:33 AM (IST) Jan 29

ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ನ ₹1800 ಕೋಟಿ ಆಸ್ತಿ ಇ.ಡಿ. ಮುಟ್ಟುಗೋಲು

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹಕ್ಕೆ ಸೇರಿದ 1,885 ಕೋಟಿ ರು. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಯೆಸ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.

Read Full Story

08:19 AM (IST) Jan 29

ಹೆಣ್ಣು ಮಕ್ಕಳಿಗೆ ಮಾಲ್ ಮಾಲ್ ಎಂದು ಕರೆದು ಚುಡಾಯಿಸ್ತಿದ್ದ ಬೀದಿ ಕಾಮಣ್ಣರಿಗೆ ಬೆಂಡೆತ್ತಿದ್ದ ಪೊಲೀಸರು

ಬೈಕ್‌ನಲ್ಲಿ ಹೋಗುತ್ತಾ ಯುವತಿಯರನ್ನು 'ಮಾಲ್ ಮಾಲ್' ಎಂದು ಚುಡಾಯಿಸುತ್ತಿದ್ದ ಇಬ್ಬರು ಯುವಕರನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಅವರಿಗೆ ವಿಶಿಷ್ಟ ರೀತಿಯಲ್ಲಿ ಶಿಕ್ಷೆ ನೀಡಿ, ಬೀದಿಯಲ್ಲಿ ಮೆರವಣಿಗೆ ಮಾಡಿಸಿ ಕ್ಷಮೆ ಕೇಳಿಸಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದೆ.
Read Full Story

07:48 AM (IST) Jan 29

ದೇಶಹಿತ ವಿಚಾರದಲ್ಲಿ ಒಗ್ಗಟ್ಟು: ಎಲ್ಲ ಪಕ್ಷಗಳಿಗೆ ಮುರ್ಮು ಕರೆ

ವಿಕಸಿತ ಭಾರತ, ಸ್ವದೇಶಿ ಅಭಿಯಾನ ಮತ್ತು ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಎಲ್ಲ ಪಕ್ಷಗಳೂ ತಮ್ಮಲ್ಲಿನ ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಿನಿಂದ ನಿಲ್ಲಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಒತ್ತಾಯಿಸಿದ್ದಾರೆ.

 

Read Full Story

07:48 AM (IST) Jan 29

ವಿಮಾನ ದಿಢೀರ್‌ ನೆಲಕ್ಕಪ್ಪಳಿಸಿ ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿತು!

ದುರಂತಕ್ಕೀಡಾದ ವಿಮಾನ ಲ್ಯಾಂಡಿಂಗ್‌ಗೂ ಮುನ್ನ ಆಗಸದಲ್ಲಿ ಕೊಂಚ ನಿಯಂತ್ರಣ ಕಳೆದುಕೊಂಡಂತಿತ್ತು. ಬಳಿಕ ವಿಮಾನ ದಿಢೀರ್‌ ನೆಲಕ್ಕಪ್ಪಳಿಸಿದ್ದು ಅದರ ಬೆನ್ನಲ್ಲೇ ಭಾರೀ ಸ್ಫೋಟದ ಸದ್ದು ಕೇಳಿಸಿತು. ಸ್ಫೋಟದ ತೀವ್ರತೆಗೆ ಬೆಂಕಿಯ ಕೆನ್ನಾಲಗೆ ಮುಗಿಲೆತ್ತರಕ್ಕೆ ಚಿಮ್ಮಿತು!

 

Read Full Story

07:48 AM (IST) Jan 29

ಮಹಾರಾಷ್ಟ್ರ ಪಾಲಿನ ‘ಶಾಶ್ವತ ಡಿಸಿಎಂ’ ಅಜಿತ್‌ ದಾದಾ : 6 ಬಾರಿ ಡಿಸಿಎಂ ಹುದ್ದೆ

ಮಹಾರಾಷ್ಟ್ರ ರಾಜಕಾರಣದ ಭೀಷ್ಮ, ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಅವರಿಗೇ ಸೆಡ್ಡು ಹೊಡೆದು ಪ್ರತ್ಯೇಕ ಗುರುತು ಮೂಡಿಸಿದ್ದ, ಮಹಾರಾಷ್ಟ್ರದ ಪಾಲಿನ ‘ಶಾಶ್ವತ ಉಪಮುಖ್ಯಮಂತ್ರಿ’ಯೆಂದೇ ಕರೆಯಲ್ಪಡುತ್ತಿದ್ದ ಅಜಿತ್‌ ಅನಂತರಾವ್‌ ಪವಾರ್‌ ಅವರು ನೆಲಮೂಲದಿಂದ ಬೆಳೆದು ಬಂದ ನಾಯಕ.

 

Read Full Story

07:47 AM (IST) Jan 29

ಪವಾರ್‌ ವಿಮಾನ ದುರಂತ : ಸುಪ್ರೀಂ ನಿಗಾದಲ್ಲಿ ತನಿಖೆಗೆ ಮಮತಾ, ಖರ್ಗೆ ಆಗ್ರಹ

ಅಜಿತ್‌ ಪವಾರ್‌ ವಿಮಾನ ದುರಂತದ ತನಿಖೆಯನ್ನು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಏಕೆಂದರೆ ಈ ದೇಶಲ್ಲಿ ಯಾರೂ ಸೇಫ್‌ ಅಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

 

Read Full Story

07:45 AM (IST) Jan 29

ಅಜಿತ್‌ ಅಗಲಿಕೆಯಿಂದ ಎನ್‌ಸಿಪಿ ಅತಂತ್ರ

ಡಿಸಿಎಂ ಅಜಿತ್‌ ಪವಾರ್‌ ಅವರ ಅಗಲಿಕೆಯಿಂದ ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಆಧಾರಸ್ತಂಭ ಕುಸಿದಂತಾಗಿದ್ದರೆ, ಅತ್ತ ಅವರು ಕಟ್ಟಿ ಬೆಳೆಸಿದ್ದ ಎನ್‌ಸಿಪಿ ಅತಂತ್ರ ಸ್ಥಿತಿಗೆ ತಲುಪಿದೆ. ಅದರ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳೇಳುತ್ತಿದ್ದು, ಅಜಿತ್‌ ಇಲ್ಲದೆ ಅವರ ಬಣದ ಶಾಸಕರಿಗೆ ಅನಾಥ ಭಾವ ಕಾಡತೊಡಗಿದೆ.

 

Read Full Story

More Trending News