ನವದೆಹಲಿ (ಡಿ.19): ಪರಮಾಣು ಇಂಧನ ಕ್ಷೇತ್ರವನ್ನು ಖಾಸಗಿಯವರಿಗೂ ತೆರೆಯುವ ‘ಶಾಂತಿ’ ಮಸೂದೆಗೆ ಸಂಸತ್ತಿನ ಅನುಮೋದನೆ ಲಭಿಸಿದೆ. ಬುಧವಾರ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಈ ಬಿಲ್‌ಗೆ ಗುರುವಾರ ರಾಜ್ಯಸಭೆಯಲ್ಲೂ ಧ್ವನಿಮತದ ಮೂಲಕ ಹಸಿರುನಿಶಾನೆ ತೋರಲಾಗಿದೆ. ರಾಷ್ಟ್ರಪತಿಯ ಅಂಕಿತದಿಂದಿಗೆ ಅದು ಕಾಯ್ದೆಯಾಗುವುದಷ್ಟೇ ಬಾಕಿ ಇದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
01:25 PM (IST) Dec 19
Shriram Finance: MUFG Invests ₹39,600 Crore for 20% Stake ಶ್ರೀರಾಮ್ ಫೈನಾನ್ಸ್ ಮಂಡಳಿಯಲ್ಲಿ ಇಬ್ಬರು ನಾಮನಿರ್ದೇಶಿತ ನಿರ್ದೇಶಕರನ್ನು ನೇಮಿಸುವ ಹಕ್ಕನ್ನು MUFG ಹೊಂದಿರುತ್ತದೆ.
01:15 PM (IST) Dec 19
12:44 PM (IST) Dec 19
ಬಾಂಗ್ಲಾದೇಶದ ಮೈಮೆನ್‌ಸಿಂಗ್‌ನಲ್ಲಿ ಪ್ರವಾದಿ ನಿಂದನೆ ಆರೋಪದ ಮೇಲೆ ದೀಪು ಚಂದ್ರ ದಾಸ್ ಎಂಬ ಹಿಂದೂ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿದೆ. ಹಲ್ಲೆಕೋರರು ನಂತರ ಆತನ ದೇಹವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
12:29 PM (IST) Dec 19
ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯ ಅಂತ್ಯಸಂಸ್ಕಾರದ ವಿಚಾರವಾಗಿ ಆದಿವಾಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳ ನಡುವೆ ತೀವ್ರ ಹಿಂಸಾಚಾರ ನಡೆದಿದೆ. ಈ ಘರ್ಷಣೆಯಲ್ಲಿ ಚರ್ಚ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವರು ಗಾಯಗೊಂಡಿದ್ದಾರೆ ಮತ್ತು ಪರಿಸ್ಥಿತಿ ನಿಯಂತ್ರಿಸಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
12:22 PM (IST) Dec 19
ಅಮೆರಿಕದ ಸ್ಟೇಟ್ಸ್‌ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಸೆಸ್ನಾ ಸಿ550 ವಿಮಾನವು ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಗಿದೆ. ಈ ದುರಂತದಲ್ಲಿ ಖ್ಯಾತ ನ್ಯಾಸ್ಕಾರ್ ರೇಸಿಂಗ್ ಚಾಲಕ ಗ್ರೆಗ್ ಬಿಫಲ್ ಮತ್ತು ಅವರ ಕುಟುಂಬ ಸಾವನ್ನಪ್ಪಿದ್ದಾರೆ.
12:13 PM (IST) Dec 19
12:00 PM (IST) Dec 19
ಒಡಿಶಾ ಶಾಸಕರ ವೇತನ ಮತ್ತು ಭತ್ಯೆಗಳನ್ನು ಮೂರು ಪಟ್ಟು ಹೆಚ್ಚಿಸುವ ಪ್ರಸ್ತಾವನೆಗೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಆಡಳಿತಾರೂಢ ಬಿಜೆಪಿ ಶಾಸಕರೇ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರಿಗೆ ಈ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
11:19 AM (IST) Dec 19
ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಸ್ನಿಕೋ ಮೀಟರ್ ತಂತ್ರಜ್ಞಾನವು ವಿವಾದಕ್ಕೆ ಕಾರಣವಾಗಿದೆ. ಅಡಿಲೇಡ್ ಟೆಸ್ಟ್‌ನಲ್ಲಿ 3 ಬಾರಿ ತಪ್ಪಾದ ತೀರ್ಪು ನೀಡಿದ್ದು, ಆಸೀಸ್ ವೇಗಿ ಸ್ಟಾರ್ಕ್ ಸೇರಿದಂತೆ ಹಲವು ಆಟಗಾರರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
11:14 AM (IST) Dec 19
ತೀವ್ರಗಾಮಿ ನಾಯಕ ಷರೀಫ್ ಉಸ್ಮಾನ್ ಹಾದಿಯ ಹತ್ಯೆಯ ನಂತರ ಬಾಂಗ್ಲಾದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ. ಢಾಕಾ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನಾಕಾರರು ಮಾಧ್ಯಮ ಸಂಸ್ಥೆಗಳು ಮತ್ತು ರಾಜಕೀಯ ಕಚೇರಿಗಳಿಗೆ ಬೆಂಕಿ ಹಚ್ಚಿದ್ದು, ಆ ದೇಶದಲ್ಲಿ ಭಾರತ ವಿರೋಧಿ ಭಾವನೆಗಳು ತೀವ್ರಗೊಂಡಿವೆ.
10:55 AM (IST) Dec 19
10:20 AM (IST) Dec 19
ಎಪ್ಸ್ಟೀನ್ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ 68 ಹೊಸ ಫೋಟೋಗಳು ಬಿಡುಗಡೆಯಾಗಿದ್ದು, ಇದರಲ್ಲಿ ಬಿಲ್ ಗೇಟ್ಸ್, ವುಡಿ ಅಲೆನ್, ಸೆರ್ಗೆ ಬ್ರಿನ್ ಸೇರಿದಂತೆ ಹಲವು ಪ್ರಮುಖರು ಕಾಣಿಸಿಕೊಂಡಿದ್ದಾರೆ. ಮಹಿಳೆಯ ದೇಹದ ಮೇಲೆ 'ಲೋಲಿಟಾ' ಪುಸ್ತಕದ ಸಂದೇಶಗಳನ್ನು ಬರೆದಿರುವ ಚಿತ್ರಗಳು ಬಹಿರಂಗಗೊಂಡಿದೆ.
07:46 AM (IST) Dec 19
ವಿದೇಶಿ ಸಾಲದ ನೆರವಿನಿಂದಲೇ ಸರ್ಕಾರ ನಡೆಸುತ್ತಿರುವ ಪಾಕಿಸ್ತಾನ ಇದೀಗ ಕಾಂಡೋಮ್ ಸೇರಿದಂತೆ ಗರ್ಭನಿರೋಧಕಗಳ ಮೇಲಿನ ತೆರಿಗೆ ಕಡಿತ ಮಾಡಲಾಗದ ಪರಿಸ್ಥಿತಿ ತಲುಪಿದೆ. ನಿಜ. ಐಎಂಎಫ್‌ನಿಂದ ಸಾಲ ಪಡೆದಿರುವ ಪಾಕಿಸ್ತಾನ, ಇದೀಗ ಆ ಹಣಕಾಸು ಸಂಸ್ಥೆಯ ಸೂಚನೆ ಅನ್ವಯವೇ ನಡೆದುಕೊಳ್ಳಬೇಕಾಗಿ ಬಂದಿದೆ.
07:46 AM (IST) Dec 19
ಕೇರಳ ಸರ್ಕಾರದ ಆರ್ಥಿಕ ನಿರ್ವಹಣೆ ಹಳಿ ತಪ್ಪಿದ ಕಾರಣ ನೀಡಿ, 2025-26ನೇ ಆರ್ಥಿಕ ವರ್ಷದ ಕೊನೆಯ 3 ತಿಂಗಳಲ್ಲಿ ರಾಜ್ಯ ಸಾಲ ಪಡೆಯಬಹುದಾದ ಮೊತ್ತದ ಮಿತಿಯಲ್ಲಿ ಕೇಂದ್ರ ಸರ್ಕಾರ ಸುಮಾರು 6,000 ಕೋಟಿ ರು.ಗಳಷ್ಟು ಕಡಿತ ಮಾಡಿದೆ. ಇದು ಕೇರಳ ಮತ್ತು ಕೇಂದ್ರದ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.
07:45 AM (IST) Dec 19
ಭಾರತ ಮತ್ತು ಒಮಾನ್ ದೇಶಗಳು ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಗುರುವಾರ ಇಲ್ಲಿ ಸಹಿಹಾಕಿವೆ. ಇದರನ್ವಯ ಇನ್ನುಮುಂದೆ ಭಾರತದಿಂದ ಆಮದಾಗುವ ಶೇ.98 ವಿಧದ ವಸ್ತುಗಳ ಮೇಲಿನ ತೆರಿಗೆಯನ್ನು ಒಮಾನ್ ಶೂನ್ಯಕ್ಕೆ ಇಳಿಸಿದೆ.
07:45 AM (IST) Dec 19
ಪರಮಾಣು ಇಂಧನ ಕ್ಷೇತ್ರವನ್ನು ಖಾಸಗಿಯವರಿಗೂ ತೆರೆಯುವ ‘ಶಾಂತಿ’ ಮಸೂದೆಗೆ ಸಂಸತ್ತಿನ ಅನುಮೋದನೆ ಲಭಿಸಿದೆ. ಬುಧವಾರ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಈ ಬಿಲ್‌ಗೆ ಗುರುವಾರ ರಾಜ್ಯಸಭೆಯಲ್ಲೂ ಧ್ವನಿಮತದ ಮೂಲಕ ಹಸಿರುನಿಶಾನೆ ತೋರಲಾಗಿದೆ. ರಾಷ್ಟ್ರಪತಿಯ ಅಂಕಿತದಿಂದಿಗೆ ಅದು ಕಾಯ್ದೆಯಾಗುವುದಷ್ಟೇ ಬಾಕಿ ಇದೆ.
07:45 AM (IST) Dec 19
ಶಬರಿಮಲೆ ಚಿನ್ನ ಕಳವು ಪ್ರಕರಣದಿಂದಾಗಿ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನಗಾದ ಹಿನ್ನಡೆಯಿಂದ ಹತಾಶೆಗೊಂಡಿರುವ ಕೇರಳದ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರ, ಚುನಾವಣೆ ವೇಳೆ ವೈರಲ್ ಆಗಿದ್ದ ಅಯ್ಯಪ್ಪನ ಭಕ್ತಿಗೀತೆ ಹೋಲುವ ವೈರಲ್ ಗೀತೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
07:44 AM (IST) Dec 19
15 ಅಮಾಯಕ ಯಹೂದಿಗಳನ್ನು ಬಲಿ ಪಡೆದ ಬೋಂಡಿ ಬೀಚ್ ಉಗ್ರ ದಾಳಿಯ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಮುನ್ನವೇ ಆಸ್ಟ್ರೇಲಿಯಾ ಪೊಲೀಸರು ಮತ್ತೊಂದು ಸಂಭವನೀಯ ದಾಳಿಯ ಸಂಚು ವಿಫಲಗೊಳಿಸಿದ್ದಾರೆ.
07:44 AM (IST) Dec 19
ಮರುಭೂಮಿ ದೇಶ ಸೌದಿ ಅರೇಬಿಯಾದಲ್ಲಿ ಅಪರೂಪದ ಹಿಮಪಾತ ಮತ್ತು ಗುಡುಗುಸಹಿತ ಮಳೆಯಾಗಿದೆ. ಉತ್ತರದ ತಬೂಕ್ ಪ್ರದೇಶದ ಜಬಲ್ ಅಲ್ ಲಾವ್ಜ್ ಬೆಟ್ಟ ಮತ್ತು ಇತರ ಬೆಟ್ಟಗಳು ಹಿಮದಿಂದ ಆವೃತವಾದ ಅದ್ಭುತ ದೃಶ್ಯಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.