ನವದೆಹಲಿ (ಏ.11): 40 ದಿನಗಳ ಮಧ್ಯಪ್ರಾಚ್ಯ ಯುದ್ಧಕ್ಕೆ ಪೂರ್ಣವಿರಾಮ ಹಾಕುವ ಹುಟ್ಟಿನಲ್ಲಿ ಶನಿವಾರ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಸಂಧಾನ ಸಭೆಗೂ ಮುನ್ನ ಇರಾನ್‌ಗೆ ಮತ್ತೆ 24 ಗಂಟೆಗಳ ಡೆಡ್‌ಲೈನ್ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಇರಾನಿಯನ್ನರ ಮುಂದೆ ಬೇರೆ ಯಾವುದೇ ಅವಕಾಶವೇ ಉಳಿದಿಲ್ಲ. ಇರಾನಿಯನ್ನರು ಬದುಕಿರೋದೇ ನಮ್ಮ ಜೊತೆ ಸಂಧಾನ ಮಾತುಕತೆ ನಡೆಸಲು. ಪಾಕಿಸ್ತಾನದ ಮಾತುಕತೆಯಲ್ಲಿ ಯಾವುದೇ ಡೀಲ್ ಹೊರಹೊಮ್ಮದೇ ಇದ್ದರೆ ನಾವು ಇರಾನ್ ಮೇಲೆ ಹಿಂದೆಂದಿಗಿಂತಲೂ ಭೀಕರ ದಾಳಿ ನಡೆಸುತ್ತೇವೆ' ಎಂದು ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:39 PM (IST) Apr 11
10:33 PM (IST) Apr 11
10:12 PM (IST) Apr 11
10:05 PM (IST) Apr 11
10:03 PM (IST) Apr 11
ರಾಜಸ್ತಾನದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕಿವಿಯಲ್ಲಿದ್ದ ಜೆಬಿಎಲ್ ಇಯರ್‌ಬಡ್ ಸ್ಫೋಟಗೊಂಡು ಕಿವಿಗೆ ಹಾನಿಯಾಗಿದೆ. ಈ ಘಟನೆಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರ್‌ಲೆಸ್ ಇಯರ್‌ಬಡ್‌ಗಳ ಸುರಕ್ಷತೆಯ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
09:42 PM (IST) Apr 11
ಅನನ್ಯಾ ಪಾಂಡೆ ನಿಕ್ ಚಾನೆಲ್‌ನ ಜನಪ್ರಿಯ ಪಾತ್ರಗಳಾದ ಚಿಕೂ ಮತ್ತು ಬಂಟಿ ಜೊತೆ ಒಂದು ಚಟುವಟಿಕೆಯಲ್ಲಿ ಭಾಗವಹಿಸಿದರು. ಮಕ್ಕಳು ತಮ್ಮ ಪರೀಕ್ಷೆಯ ಚಿಂತೆಗಳನ್ನು ಬಲೂನ್‌ಗಳ ಮೇಲೆ ಬರೆದು..
09:41 PM (IST) Apr 11
09:16 PM (IST) Apr 11
ತೃಪ್ತಿ ದಿಮ್ರಿ ವಿಕ್ಟೋರಿಯಾ'ಸ್ ಸೀಕ್ರೆಟ್‌ನ ಮೊದಲ ಭಾರತೀಯ ರಾಯಭಾರಿಯಾಗಿರುವುದು ಕೇವಲ ಸೆಲೆಬ್ರಿಟಿ ಒಪ್ಪಂದವಲ್ಲ.ಇದೊಂದು ಸಾಂಸ್ಕೃತಿಕ ಮೈಲಿಗಲ್ಲು. ದಶಕಗಳಿಂದ ಪಾಶ್ಚಿಮಾತ್ಯ ಸೌಂದರ್ಯವನ್ನೇ..
09:00 PM (IST) Apr 11
ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿರುವ ಬಿಗ್ ಬಜೆಟ್ ಚಿತ್ರಕ್ಕೆ 'ರಾಕಾ' ಎಂದು ಹೆಸರಿಡಲಾಗಿದೆ. ಈ ಪದದ ಅರ್ಥವೇನು ಮತ್ತು ಈ ಚಿತ್ರದ ಕುರಿತ ಇನ್ನಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
08:26 PM (IST) Apr 11
ನಯನತಾರಾ ಬಗ್ಗೆ ಗೊತ್ತಿರುವವರಿಗೆ ಅವರ ಒಂದು ರೂಲ್ಸ್ ಕೂಡ ಚೆನ್ನಾಗಿ ಗೊತ್ತು. ಅದೇನೆಂದರೆ, ಅವರು ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಇದು ಅವರ ಸಿನಿಮಾ ಕಾಂಟ್ರ್ಯಾಕ್ಟ್‌ನಲ್ಲಿರೋ ಒಂದು ಕಡ್ಡಾಯ ಷರತ್ತು ಕೂಡ.
08:18 PM (IST) Apr 11
08:04 PM (IST) Apr 11
ಸೂಪರ್‌ಸ್ಟಾರ್ ಶಾರುಖ್ ಖಾನ್, ನಿರ್ದೇಶಕ ಅಟ್ಲಿ ಅವರ ಮುಂಬರುವ 'ರಾಕಾ' ಸಿನಿಮಾದ ಫಸ್ಟ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲು ಅರ್ಜುನ್ ಅವರ ಲುಕ್ 'ಇಂಟರೆಸ್ಟಿಂಗ್ ಮತ್ತು ಅದ್ಭುತವಾಗಿದೆ' ಎಂದು ಅವರು ಹೊಗಳಿದ್ದಾರೆ.
07:43 PM (IST) Apr 11
ಹಡಗಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸಿದರೆ ಅದು ಹೇಗೆ ಮುಳುಗುವುದೋ ಹಾಗೆಯೇ ಭೂಮಿ ಮೇಲಿನ ಮಿತಿ ಮೀರಿದ ಜನಸಂಖ್ಯೆಯಿಂದಾಗಿ ಭೂಮಿಯ ಮೇಲೆ ಅತೀವ ಒತ್ತಡ ಉಂಟಾಗಿದೆಯಂತೆ. ಹಾಗಿದ್ದರೆ ಭೂಮಿಯ ಸಾಮರ್ಥ್ಯ ಎಷ್ಟು ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ.
07:11 PM (IST) Apr 11
ನಟಿ ಪೂಜಾ ಹೆಗ್ಡೆ, 'ಜನ ನಾಯಗನ್' ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ಶ್ರಮಕ್ಕೆ ಬೆಲೆ ಕೊಡಿ, ಪೈರಸಿ ಪ್ರೋತ್ಸಾಹಿಸಬೇಡಿ, ವಿಜಯ್ ಅವರ ಕೊನೆಯ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
06:47 PM (IST) Apr 11
ಯುವಕರು ತಮ್ಮ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಸ್ಟಾರ್‌ಗಳ ಮೇಲಿನ ಅತಿಯಾದ ಅಭಿಮಾನದ ಬಗ್ಗೆ ಸೂಪರ್‌ಸ್ಟಾರ್ ರಜನಿಕಾಂತ್ ಯುವಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
06:44 PM (IST) Apr 11
ಐಪಿಎಲ್ ಪಂದ್ಯಗಳ ವೇಳೆ ಮೊಬೈಲ್ ಕದಿಯಲೆಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹೈಟೆಕ್ ಕಳ್ಳರ ಜಾಲವನ್ನು ಅಹ್ಮದಾಬಾದ್ ಪೊಲೀಸರು ಭೇದಿಸಿದ್ದಾರೆ. ಬೆಂಗಳೂರು ಮತ್ತು ಅಹ್ಮದಾಬಾದ್ ಸ್ಟೇಡಿಯಂಗಳಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು.
06:25 PM (IST) Apr 11
ತೆಲುಗು ನಟ ನಾನಿ ಅಭಿನಯದ 'ದಿ ಪ್ಯಾರಡೈಸ್' ಚಿತ್ರದ 'ಆಯಾ ಶೇರ್' ಹಾಡು ಯೂಟ್ಯೂಬ್‌ನಲ್ಲಿ 101 ಮಿಲಿಯನ್ ವೀಕ್ಷಣೆ ದಾಟಿದೆ. 'ದಸರಾ' ಬಳಿಕ ನಾನಿ-ಶ್ರೀಕಾಂತ್ ಒಡೆಲಾ ಕಾಂಬೋದಲ್ಲಿ ಬರುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
06:02 PM (IST) Apr 11
'ಕಸಬ' ಸಿನಿಮಾ ಬಗ್ಗೆ ಟೀಕೆ ಮಾಡಿದ ನಂತರ ನಡೆದ ವಿವಾದಗಳ ಬಗ್ಗೆ ಮಿಲನ ನಟಿ ಪಾರ್ವತಿ ತಿರುವೊತ್ತು ಮಾತನಾಡಿದ್ದಾರೆ. ಮಮ್ಮುಟ್ಟಿ ಜೊತೆ ಮಾತನಾಡಿದರೂ, ಅವರ ಪ್ರತಿಕ್ರಿಯೆ ತಡವಾದ ಕಾರಣ ಪರಿಸ್ಥಿತಿ ಕೈಮೀರಿ ಹೋಯಿತು ಎಂದು ಪಾರ್ವತಿ ಹೇಳಿದ್ದಾರೆ.
05:45 PM (IST) Apr 11
ನಟ ಆರ್ಯ ಅವರು 'ನಾನ್ ಕಡವುಳ್' ಸಿನಿಮಾ ಶೂಟಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಾರಣಾಸಿಯಲ್ಲಿರುವ ಸಾಧುಗಳಲ್ಲಿ ಶೇ. 40ರಷ್ಟು ಮಂದಿ, ಅಪರಾಧ ಮಾಡಿ ತಲೆಮರೆಸಿಕೊಂಡಿರುವ ಕ್ರಿಮಿನಲ್‌ಗಳು ಎಂದು ಆರ್ಯ ಗಂಭೀರ ಆರೋಪ ಮಾಡಿದ್ದಾರೆ.
05:32 PM (IST) Apr 11
05:07 PM (IST) Apr 11
05:04 PM (IST) Apr 11
ಇನ್‌ಸ್ಟಾಗ್ರಾಂ ಮಾಡೆಲ್ ಸೋಫಿಯಾ ಅನ್ಸಾರಿ ತಮ್ಮ ಎಕ್ಸ್‌ಕ್ಲೂಸಿವ್ ವಿಡಿಯೋ ವೀಕ್ಷಣೆಗಾಗಿ ಪಾವತಿ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ. ಸೋಫಿಯಾ ಅನ್ಸಾರಿ ಈ ನಿರ್ಧಾರದಿಂದ ಅವರು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
04:59 PM (IST) Apr 11
03:30 PM (IST) Apr 11
ಖಾಸಗಿ ಬ್ಯಾಂಕ್ ಮ್ಯಾನೇಜರ್ ಪತ್ನಿಯೊಬ್ಬಳು ತನ್ನ ಪ್ರಿಯಕರನಾದ ಟ್ಯಾಕ್ಸಿ ಚಾಲಕನೊಂದಿಗೆ ಸೇರಿ, ಗಂಡ ಮತ್ತು ಅತ್ತೆಗೆ ಜೀವ ಬೆದರಿಕೆ ಹಾಕಿದ್ದಾಳೆ. 50 ಲಕ್ಷ ರೂಪಾಯಿಗಾಗಿ ಬೇಡಿಕೆಯಿಟ್ಟು, ಕೊಲೆ ಯತ್ನವನ್ನೂ ನಡೆಸಿದ್ದಾರೆ ಎನ್ನಲಾಗಿದೆ.
03:18 PM (IST) Apr 11
03:06 PM (IST) Apr 11
02:43 PM (IST) Apr 11
ವಾರ್ಷಿಕ 40 ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್, ಐಟಿ ಲೇ-ಆಫ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ತಮ್ಮ 1.4 ಕೋಟಿ ರೂ. ಬೆಲೆಯ ಫ್ಲಾಟ್‌ನ 95,000 ರೂ. ಇಎಂಐ ಪಾವತಿಸಲು, ಅವರು ಈಗ ರಾಪಿಡೋ ಬೈಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.
01:16 PM (IST) Apr 11
ಕೇರಳ ಸರ್ಕಾರದ ವಿವಾದಾತ್ಮಕ ನಿರ್ಧಾರದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇಮಕಗೊಂಡಿದ್ದ ಬಾಡಿಬಿಲ್ಡರ್ ಚಿತ್ತರೇಶ್ ನಟೇಶನ್ ಅವರಿಗೆ ವೈದ್ಯಕೀಯ ಪರೀಕ್ಷೆಯಲ್ಲಿ 'ಫ್ಲಾಟ್ ಫೂಟ್' ಇರುವುದು ಪತ್ತೆಯಾಗಿದೆ. ಈ ಕಾರಣದಿಂದ ಅವರ ನೇಮಕಾತಿ ತಡೆಹಿಡಿಯಲಾಗಿದೆ.
12:49 PM (IST) Apr 11
ಇಸ್ರೇಲ್‌ನ ಮಾಜಿ ವಕ್ತಾರ ಐಲಾನ್ ಲೆವಿ, ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುವ, ಅಣ್ವಸ್ತ್ರ ಹೊಂದಿರುವ ಆಕ್ರಮಣಕಾರಿ ದೇಶ. ಇರಾನ್ ಜೊತೆ ಸೇರಿ ಇಸ್ಲಾಮಿಕ್ ಒಕ್ಕೂಟ ರಚಿಸಿ ಭಾರತ ಮತ್ತು ಇಸ್ರೇಲ್‌ಗೆ ಅಪಾಯ ತರಲು ನೋಡುತ್ತಿದೆ
12:41 PM (IST) Apr 11
ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ (yuzvendra chahal) ಅವರನ್ನು ಹೋಲುವ ವ್ಯಕ್ತಿಯೊಬ್ಬರು ಧೂಮಪಾನ (smoking) ಮಾಡಿ, ಸಿಗರೇಟ್ ತುಂಡನ್ನು ರಸ್ತೆಗೆ ಎಸೆದ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾರ್ವಜನಿಕರಿಂದ ತೀವ್ರ ಟೀಕೆಗೆ (controversy) ಗುರಿಯಾಗಿದ್ದಾರೆ.
12:11 PM (IST) Apr 11
12:10 PM (IST) Apr 11
ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಯುವ ಓಪನರ್ ವೈಭವ್ ಸೂರ್ಯವಂಶಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದ ಅಬ್ಬರಿಸುತ್ತಿರುವ ಇವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
11:47 AM (IST) Apr 11
China-Taiwan Conflict: ಚೀನಾದ 15 ಯುದ್ಧ ವಿಮಾನಗಳು ಗಡಿರೇಖೆ ದಾಟಿ ತೈವಾನ್‌ನ ವಾಯುಪ್ರದೇಶಕ್ಕೆ ನುಗ್ಗಿವೆ. ಈ ಮೂಲಕ ಚೀನಾ ಮತ್ತೆ ತೈವಾನ್‌ಗೆ ಪ್ರಚೋದನೆ ನೀಡಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.
11:21 AM (IST) Apr 11
11:17 AM (IST) Apr 11
10:52 AM (IST) Apr 11
ಮಹಾತ್ಮ ಜ್ಯೋತಿಬಾ ಫುಲೆ ಅವರ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಆತ್ಮೀಯವಾಗಿ ಮಾತನಾಡಿಕೊಂಡರು. ರಾಜಕೀಯ ವೈರಿಗಳ ಈ ಅಪರೂಪದ ಕ್ಷಣವನ್ನು ನೆಟ್ಟಿಗರು ಪ್ರಜಾಪ್ರಭುತ್ವದ ಸೌಂದರ್ಯ ಎಂದು ಶ್ಲಾಘಿಸಿದರು. ಇ
10:51 AM (IST) Apr 11
10:24 AM (IST) Apr 11
ಯುವ ಕ್ರಿಕೆಟಿಗ ವೈಭವ್, ಬುಮ್ರಾರಂತಹ ಬೌಲರ್‌ಗಳನ್ನು ನಿರ್ಭೀತಿಯಿಂದ ಎದುರಿಸಿ ಕೇವಲ 15 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. ಪಂದ್ಯದ ನಂತರವೂ ಸಂಭ್ರಮಕ್ಕಿಂತ ಶಿಸ್ತಿಗೆ ಆದ್ಯತೆ ನೀಡಿದ ಅವರ ವೃತ್ತಿಪರತೆ ಮತ್ತು ತಂದೆ-ಕೋಚ್‌ರ ಮಾರ್ಗದರ್ಶನವನ್ನು ನೆನಪಿಸಿಕೊಂಡಿದ್ದಾರೆ.
10:04 AM (IST) Apr 11
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಆಟಕ್ಕೆ ಮನಸೋತ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆ ನೀಡಿ ಪ್ರಶಂಸಿಸಿದ್ದಾರೆ.
09:51 AM (IST) Apr 11