ಗ್ರಾಮ ಪಂಚಾಯ್ತಿ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ, ವಿವಿಧ ಪುರಸಭೆ ಹಾಗೂ ನಗರಸಭೆ ಸೇರಿದಂತೆ 6500ಕ್ಕೂ ಹೆಚ್ಚು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2026ರ ಏಪ್ರಿಲ್‌ನಲ್ಲಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳ ಲಾಗಿದೆ. ಕಳೆದ 4 ವರ್ಷಗಳಿಂದ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆದಿರಲಿಲ್ಲ. ಜತೆಗೆ ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದೆ.

10:59 PM (IST) Dec 12
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪ್ರೇಮಿಗಳ ವಿಚಾರವಾಗಿ ನಡೆದ ಜಗಳವು ಇಬ್ಬರ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಸ್ಥಳೀಯರಾದ ಮಂಜುನಾಥ್ ಮತ್ತು ಕಿರಣ್ ಎಂಬುವವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
10:29 PM (IST) Dec 12
ಬೆಂಗಳೂರಿನ ಆಟೋ ಚಾಲಕರೊಬ್ಬರು ತಮ್ಮ ಆಟೋದಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ 'ನಾನೊಬ್ಬ ತಂದೆ, ಅಣ್ಣ.. ನಿಮ್ಮ ಸುರಕ್ಷತೆ ನನಗೂ ಮುಖ್ಯ' ಎಂಬ ಸಂದೇಶ ಬರೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಬೆಂಗಳೂರು ನಗರ ಪೊಲೀಸರು, ಈ ಚಾಲಕನನ್ನು ಗುರುತಿಸಿ ಗೌರವಿಸಲು ಸಾರ್ವಜನಿಕರ ಸಹಾಯ ಕೋರಿದ್ದಾರೆ.
09:57 PM (IST) Dec 12
09:01 PM (IST) Dec 12
ತುರ್ಕಮೆನಿಸ್ತಾನದಲ್ಲಿ ನಡೆದ ಅಂತರರಾಷ್ಟ್ರೀಯ ವೇದಿಕೆಯ ಸಭೆಯಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗಾಗಿ 40 ನಿಮಿಷಗಳ ಕಾಲ ಕಾದ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್, ಕೊನೆಗೆ ಪುಟಿನ್ ಹಾಗೂ ಟರ್ಕಿಶ್ ಅಧ್ಯಕ್ಷ ಎರ್ಡೋಗನ್ ನಡೆಸುತ್ತಿದ್ದ ಸಭೆಗೆ ನುಗ್ಗಿದ್ದಾರೆ.
09:01 PM (IST) Dec 12
08:33 PM (IST) Dec 12
'ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್' ಎಂದೇ ಖ್ಯಾತರಾದ ಬಾಬಾ ವಂಗಾ ಅವರ 2026 ರಿಂದ 5079 ರವರೆಗೆ ಬೆಚ್ಚಿ ಬೀಳಿಸುವಂಥ ಭವಿಷ್ಯವಾಣಿಗಳನ್ನು ನೀಡಿದ್ದಾರೆ. ಅವುಗಳ ಪಟ್ಟಿ ಇಲ್ಲಿದೆ. ಇವು ಜಗತ್ತಿನ ಅಂತ್ಯದವರೆಗಿನ ಘಟನೆಗಳನ್ನು (Baba Vanga Prediction) ವಿವರಿಸುತ್ತವೆ.
08:25 PM (IST) Dec 12
ರಾಯಚೂರಿನಲ್ಲಿ ನಡೆಯುತ್ತಿದ್ದ ಮದುವೆಯನ್ನು ಯುವತಿ ನಿಲ್ಲಿಸಿ ‘ಇವನು ನನ್ನ ಗಂಡ’ ಎಂದಿದ್ದರು. ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ಇದೀಗ ಮಧ್ಯಸ್ಥಿಕೆಯ ನಂತರ, ಮದುಮಗನೇ ತನ್ನ ಮೊದಲ ಪ್ರೇಯಸಿಯೊಂದಿಗೆ ಸಂಸಾರ ನಡೆಸಲು ಒಪ್ಪಿಕೊಂಡಿದ್ದಾನೆ.
08:15 PM (IST) Dec 12
ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿಯ ಡಬಲ್-ಡೆಕ್ಕರ್ ಫ್ಲೈಓವರ್ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಇದು ಎಚ್‌ಎಸ್‌ಆರ್-ಬಿಟಿಎಂ ಲೇಔಟ್ ನಡುವಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ.
07:50 PM (IST) Dec 12
07:44 PM (IST) Dec 12
ನಟಿ ತ್ರಿಷಾ 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಜೊತೆಗಿನ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದರು. ಇದಾದ ಹಲವು ವರ್ಷಗಳ ನಂತರ, ಅದೇ ವರುಣ್ ಜೊತೆ ಬಿಗ್ ಬಾಸ್ ವಿಜೇತೆ ಡೇಟಿಂಗ್ ಮಾಡಿದ್ದಾಗಿ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ.
07:19 PM (IST) Dec 12
ಶಾಸಕ ರಾಜು ಕಾಗೆ ಅವರು ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ಪ್ರತ್ಯೇಕ 'ಕಿತ್ತೂರು ಕರ್ನಾಟಕ' ರಾಜ್ಯಕ್ಕೆ ಆಗ್ರಹಿಸಿದ್ದಾರೆ. ಕಲ್ಯಾಣ ಕರ್ನಾಟಕದಂತೆ 5 ಸಾವಿರ ಕೋಟಿ ಅನುದಾನ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
07:17 PM (IST) Dec 12
ಯುಎಸ್‌ಬಿ ಕಾಂಡೋಮ್‌ಗಳು ಈಗ ಮಾರುಕಟ್ಟೆಯಲ್ಲಿ ಮತ್ತು ವಿವಿಧ ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಇಂದು ಅವುಗಳನ್ನು ಹೇಗೆ ಬಳಸುವುದು ಮತ್ತು ಅವುಗಳ ಪ್ರಯೋಜನಗಳೇನು ಅನ್ನೋದರ ವಿವರ ತಿಳಿದುಕೊಳ್ಳೋಣ
06:42 PM (IST) Dec 12
ಏಷ್ಯಾನೆಟ್ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ನೇತೃತ್ವದಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಅಂಗವಾಗಿ ಕೊಡಗಿನಲ್ಲಿ ಜಿಲ್ಲಾಮಟ್ಟದ ಸ್ಪರ್ಧೆ ನಡೆಯಿತು. 'ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆ' ವಿಷಯದಡಿ ವಿದ್ಯಾರ್ಥಿಗಳು ತಮ್ಮ ಕಲ್ಪನೆಯನ್ನು ಚಿತ್ರಗಳ ಮೂಲಕ ಅದ್ಭುತಗೊಳಿಸಿದರು.
06:39 PM (IST) Dec 12
ಅಂಕೋಲಾ ತಾಲೂಕಿನಲ್ಲಿ ಯುವಜನರಲ್ಲಿ, ವಿಶೇಷವಾಗಿ 22 ವರ್ಷದೊಳಗಿನವರಲ್ಲಿ ಎಚ್‌ಐವಿ ಸೋಂಕು ಆತಂಕಕಾರಿಯಾಗಿ ಹೆಚ್ಚುತ್ತಿದೆ. ಹದಿಹರೆಯದ ಕುತೂಹಲ, ಮೊಬೈಲ್ ಗೀಳು ಮತ್ತು ಅಸುರಕ್ಷಿತ ನಡವಳಿಕೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿದೆ.
06:34 PM (IST) Dec 12
ಬೆಂಗಳೂರಿನ ಓಕಳೀಪುರಂ ರೈಲ್ವೇ ಪ್ಯಾರಲೆಲ್ ರಸ್ತೆ ಬಳಿ ಟ್ರಕ್ ಡಿಕ್ಕಿಯಾಗಿ ಏಷ್ಯಾನೆಟ್ ಸುವರ್ಣನ್ಯೂಸ್ ನ ಹೌಸ್ ಕೀಪಿಂಗ್ ಸಿಬ್ಬಂದಿ ಲಲಿತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶೇಷಾದ್ರಿಪುರಂ ಸಂಚಾರ ಪೊಲೀಸರಿಂದ ತನಿಖೆ.
06:33 PM (IST) Dec 12
06:08 PM (IST) Dec 12
ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಅವರು ಆರು ವರ್ಷಗಳ ನಂತರ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕಾಲೋನಿಗೆ ಆಗಮಿಸಿದ್ದು, ಕಾಲೋನಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
05:35 PM (IST) Dec 12
ಬಿಗ್ ಬಾಸ್ ಸೀಸನ್ 12 ರಲ್ಲಿ ಚೈತ್ರಾ ಕುಂದಾಪುರ ಮತ್ತು ರಜತ್ ಇನ್ನೂ ಮನೆಯಲ್ಲಿದ್ದಾರೆ. ಇತ್ತೀಚಿನ ಪ್ರೊಮೋದಲ್ಲಿ, ಕುಂಟೆಬಿಲ್ಲೆ ಆಟದ ವೇಳೆ ಅವರಿಗೂ ಮತ್ತು ಅಶ್ವಿನಿ ಗೌಡ ಅವರಿಗೂ ನಡೆದ ಜಗಳವನ್ನು ತೋರಿಸಲಾಗಿದೆ. ಈ ಜಗಳದ ಮೂಲಕ, ಇವರಿನ್ನೂ ಯಾಕೆ ಇದ್ದಾರೆ ಎನ್ನುವುದನ್ನು ನೆಟ್ಟಿಗರು ತಿಳಿಸಿದ್ದಾರೆ.
05:32 PM (IST) Dec 12
05:31 PM (IST) Dec 12
ಕಳೆದ 15 ವರ್ಷಗಳಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 17 ಲಕ್ಷ ಮಕ್ಕಳ ದಾಖಲಾತಿ ಕುಸಿದಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ಆಂಗ್ಲ ಮಾಧ್ಯಮದತ್ತ ಒಲವು, ವಲಸೆ ಮತ್ತು ಖಾಸಗಿ ಶಾಲೆಗಳ ಹೆಚ್ಚಳವೇ ಇದಕ್ಕೆ ಕಾರಣವಾಗಿದ್ದು, ದಾಖಲಾತಿ ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
05:29 PM (IST) Dec 12
ಹೆಣ್ಣು ಸಿಗುತ್ತಿಲ್ಲವೆಂಬ ಬೇಸರದಿಂದ ಮಂಡ್ಯದ ರೈತರ ಮಕ್ಕಳು ಹಣೆಗೆ ಬಾಸಿಂಗ ಧರಿಸಿ, ತಲೆಗೆ ಪೇಟ ಹಾಕಿಕೊಂಡು, ತಾಂಬೂಲ ಸಮೇತವಾಗಿ ಜಿಲ್ಲಾಧಿಕಾರಿ ಕಚೇರಿಗೆ ಹೆಣ್ಣು ಕೇಳಲು ಬಂದಿದ್ದಾರೆ. ರೈತರ ಮದುವೆಯಾಗುವ ಹೆಣ್ಣು ಮಕ್ಕಳಿಗೆ ₹5 ಲಕ್ಷ ಸಹಾಯಧನ ನೀಡಲು ಮನವಿ ಮಾಡಿದ್ದಾರೆ.
05:01 PM (IST) Dec 12
ಕೋಲಾರ ಮತ್ತು ಬೀದರ್ ಜಿಲ್ಲಾಧಿಕಾರಿ ಕಚೇರಿಗಳಿಗೆ ಇಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆ ಬಂದಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಸ್ಫೋಟಿಸುವುದಾಗಿ ಹೇಳಲಾಗಿದ್ದು, ಚೆನ್ನೈ ಮೂಲದ ಬಾಲಕಿಯ ಹೆಸರಿನಲ್ಲಿ ಮೇಲ್ ಬಂದಿದ್ದು, ಎರಡೂ ಜಿಲ್ಲೆಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿ, ಬಾಂಬ್ ನಿಗ್ರಹ ದಳದಿಂದ ತಪಾಸಣೆ.
04:31 PM (IST) Dec 12
ಮೈಸೂರು, ಮಂಡ್ಯ ಸೇರಿದಂತೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ವರ್ಷ ಬಾಲ್ಯ ವಿವಾಹ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ ಸಾರ್ವಜನಿಕ ಜಾಗೃತಿ, ಪೊಲೀಸ್ ಇಲಾಖೆಯ ಕಠಿಣ ನಿಗಾ ಮತ್ತು ಮಕ್ಕಳ ರಕ್ಷಣಾ ಇಲಾಖೆಯ ತಕ್ಷಣದ ಹಸ್ತಕ್ಷೇಪದಿಂದಾಗಿ ಈ ಯಶಸ್ಸು ಸಾಧ್ಯವಾಗಿದೆ.
04:29 PM (IST) Dec 12
ಹೊಸೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬೀದಿ ಬದಿ ವ್ಯಾಪಾರಿಯೊಂದಿಗೆ ಜಗಳವಾಡಿದ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ, ವ್ಯಾಪಾರಿಯು ತನ್ನ ಮೇಲಿದ್ದ ಕುದಿಯುವ ಎಣ್ಣೆಯನ್ನು ಯುವಕನೊಬ್ಬನ ಮೇಲೆ ಎಸೆದು ಪ್ರತೀಕಾರ ತೀರಿಸಿಕೊಂಡಿದ್ದಾನೆ.
04:09 PM (IST) Dec 12
ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಚಳಿಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿಯಲಿದ್ದು, ಬೆಂಗಳೂರಿನಲ್ಲೂ ಕನಿಷ್ಠ ತಾಪಮಾನ 12°C ವರೆಗೆ ಇಳಿಯುವ ಸಾಧ್ಯತೆಯಿದೆ.
04:02 PM (IST) Dec 12
03:26 PM (IST) Dec 12
03:19 PM (IST) Dec 12
ಮೈಸೂರಿನಲ್ಲಿ ಉದ್ದೇಶಿತ ಏಕತಾ ಮಹಲ್ ನಿರ್ಮಾಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಜಾಗವು ತಮ್ಮ ಪೂರ್ವಜರಿಗೆ ಸೇರಿದ್ದು ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಂಸದ ಯದುವೀರ್ ಒಡೆಯರ್ ಕಾಮಗಾರಿ ಪರಿಶೀಲಿಸಿದ್ದು, ಒಂದೇ ಕುಟುಂಬದಲ್ಲಿ ಭಿನ್ನ ನಿಲುವು ವ್ಯಕ್ತವಾಗಿದೆ.
02:46 PM (IST) Dec 12
ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್ಬಿ'ಯ ಭಾರ್ಗವಿ, ಜೀ ಕನ್ನಡದ 'ಕರ್ಣ' ಸೀರಿಯಲ್ನ ನಿಧಿ ಸುಳ್ಳು ಆರೋಪಗಳ ಮೇಲೆ ಜೈಲು ಸೇರಿದ್ದಾರೆ. ಈ ಹಿಂದೆ 'ಬ್ರಹ್ಮಗಂಟು' ಧಾರಾವಾಹಿಯ ದೀಪಾ ಕೂಡ ಇದೇ ರೀತಿ ಅರೆಸ್ಟ್ ಆಗಿದ್ದಳು. ಧಾರಾವಾಹಿಗಳಲ್ಲಿ ನಾಯಕಿಯರು ಸಂಕಷ್ಟಕ್ಕೆ ಸಿಲುಕುತ್ತಿರುವ ಪ್ರಸಂಗಗಳು ನಡೆಯುತ್ತಿವೆ.
02:21 PM (IST) Dec 12
02:18 PM (IST) Dec 12
01:58 PM (IST) Dec 12
ಈ ವರ್ಷ ಪ್ರಭಾಸ್ ಅವರಿಂದ ಒಂದೇ ಒಂದು ಸಿನಿಮಾ ಕೂಡ ಬಂದಿಲ್ಲ. 'ರಾಜಾ ಸಾಬ್' ಬಿಡುಗಡೆಯಾಗಬೇಕಿದ್ದರೂ ಮುಂದೂಡಲ್ಪಟ್ಟಿದೆ. 'ರಾಜಾ ಸಾಬ್' ಚಿತ್ರ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. 'ರಾಜಾ ಸಾಬ್' ನಂತರ ಪ್ರಭಾಸ್ ನಟಿಸುತ್ತಿರುವ ಸಿನಿಮಾಗಳ ಬ್ಯುಸಿನೆಸ್ ಯಾವ ಮಟ್ಟದಲ್ಲಿದೆ.
01:48 PM (IST) Dec 12
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಗುಪ್ತ ಭೋಜನಕೂಟವು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಶೀಘ್ರದಲ್ಲೇ ದೆಹಲಿಯಿಂದ ಕರೆ ಬರಲಿದೆ ಎಂದು ಡಿಕೆಶಿ ತಮ್ಮ ಆಪ್ತರಿಗೆ ಸೂಚ್ಯವಾಗಿ ತಿಳಿಸಿದ್ದು, ಯಾವುದೇ ಕ್ಷಣದಲ್ಲಾದರೂ ಅವರು ಸಿಎಂ ಆಗುತ್ತಾರೆ ಎಂದು ಶಾಸಕ ಉದಯ ಕದಲೂರು ಹೇಳಿದ್ದಾರೆ.
01:42 PM (IST) Dec 12
ಬೆಂಗಳೂರಿನ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರವರೆಗಿನ ಹೊರವರ್ತುಲ ರಸ್ತೆ ಅಭಿವೃದ್ಧಿಗೆ ಸಚಿವ ಸಂಪುಟ ₹307 ಕೋಟಿ ಅನುಮೋದನೆ ನೀಡಿದೆ. ಇದರೊಂದಿಗೆ, ಸರ್ಕಾರಿ ಶಾಲೆ ಮತ್ತು ಪಿಯು ಕಾಲೇಜುಗಳ ಮೂಲಸೌಕರ್ಯಕ್ಕಾಗಿ ₹585 ಕೋಟಿ ಬಿಡುಗಡೆ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.
01:32 PM (IST) Dec 12
ಬೋಯಪಟಿ ಶ್ರೀನು ನಿರ್ದೇಶನದಲ್ಲಿ ಬಾಲಯ್ಯ ಮತ್ತು ಗಾಡ್ ಆಫ್ ಮಾಸಸ್ ಎಂಬ ಹೆಸರುಗಳಿಂದ ನಂದಮೂರಿ ಬಾಲಕೃಷ್ಣ ನಟಿಸಿರುವ 'ಅಖಂಡ 2' ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಅದರ ವಿಮರ್ಶೆಯನ್ನು ನೋಡೋಣ.
01:11 PM (IST) Dec 12
12:54 PM (IST) Dec 12
12:53 PM (IST) Dec 12
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ವಿದೇಶದಿಂದ ಅಕ್ರಮವಾಗಿ ಎರಡು ಅಳಿವಿನಂಚಿನಲ್ಲಿರುವ ರೆಡ್-ಶ್ಯಾಂಕ್ಡ್ ಡೌಕ್ ಪ್ರೈಮೇಟ್‌ಗಳನ್ನು ಸಾಗಿಸುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈ ಅಪರೂಪದ ಜೀವಿಗಳನ್ನು ತಕ್ಷಣವೇ ಮರಳಿ ಬ್ಯಾಂಕಾಕ್‌ಗೆ ಕಳುಹಿಸಲಾಗಿದೆ.
12:52 PM (IST) Dec 12
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳಿ ಪರವಾನಗಿ ಪಡೆದ ಎರಡು ಶಸ್ತ್ರಾಸ್ತ್ರಗಳಿದ್ದವು. ಬೆಂಗಳೂರು ಪೊಲೀಸರು ಪಿಸ್ತೂಲನ್ನು ವಶಪಡಿಸಿಕೊಂಡಿದ್ದರೂ, ಮೈಸೂರಿನಲ್ಲಿ ಪರವಾನಗಿ ಪಡೆದ .22 mm ರೈಫಲ್ ಮತ್ತು ಬುಲೆಟ್‌ಗಳು ಇನ್ನೂ ಸೀಜ್ ಆಗಿಲ್ಲ.
12:42 PM (IST) Dec 12