LIVE NOW
Published : Nov 20, 2026, 07:59 AM IST

India News Today Live Updates: ತಮಿಳುನಾಡು ಹೂಡಿಕೆ ವಿವರ ಆಂಧ್ರಕ್ಕೆ ಸೋರಿಕೆ! 15 ಅಧಿಕಾರಿಗಳು ವಜಾ

ಸಾರಾಂಶ

ಚೆನ್ನೈ: ಮಾಧ್ಯಮ ವರದಿಗಳ ಪ್ರಕಾರ, ತಮಿಳುನಾಡು ಸರ್ಕಾರದ ಬಂಡವಾಳ ಹೂಡಿಕೆಯ ಗೌಪ್ಯ ಮಾಹಿತಿಯನ್ನು ಆಂಧ್ರಪ್ರದೇಶಕ್ಕೆ ಸೋರಿಕೆ ಮಾಡಿದ ಶಂಕೆಯ ಮೇಲೆ, ತಮಿಳುನಾಡಿನ ಹೂಡಿಕೆ ಉತ್ತೇಜನಾ ಸಂಸ್ಥೆಯಾದ ‘ಗೈಡೆನ್ಸ್ ತಮಿಳುನಾಡು’ ಸಂಸ್ಥೆಯ 15 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ

ತಮಿಳುನಾಡಿನ ಕೈಗಾರಿಕಾ ಸಚಿವ ಎಸ್. ಕೀರ್ತನಾ ಅವರ ಇಲಾಖೆಯ ಅಡಿಯಲ್ಲಿ ಬರುವ ಈ ಸಂಸ್ಥೆಯಲ್ಲಿ ಆಂತರಿಕ ತನಿಖೆ ನಡೆದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯು ತಮಿಳುನಾಡು ಮತ್ತು ಆಂಧ್ರಪ್ರದೇಶದ ನಡುವೆ ದೊಡ್ಡ ಮಟ್ಟದ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.


More Trending News