LIVE NOW
Published : Nov 13, 2026, 08:23 AM IST

India News Today Live Updates: ಹಬ್ಬದ ಋತುವಿನಲ್ಲಿ 52 ಟನ್‌ ಚಿನ್ನ, 350 ಟನ್‌ ಬೆಳ್ಳಿ ಮಾರಾಟ!

ಸಾರಾಂಶ

ನವದೆಹಲಿ: ಗಗನಕ್ಕೇರಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆ ಈ ವರ್ಷ ಅಕ್ಷಯ ತೃತೀಯಾ ಹಾಗೂ ದೀಪಾವಳಿ ಖರೀದಿ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂಬ ಊಹೆ ಸುಳ್ಳಾಗಿದೆ. ಅಕ್ಷಯ ತೃತೀಯಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ ದೇಶಾದ್ಯಂತ 77400 ಕೋಟಿ ರು. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಮಾರಾಟವಾಗಿದೆ.

ಭಾರತೀಯ ಬುಲಿಯನ್‌ ಮತ್ತು ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌ ನೀಡಿರುವ ಮಾಹಿತಿ ಅನ್ವಯ ಹಬ್ಬದ ಋತುವಿನಲ್ಲಿ 72000 ಕೋಟಿ ರು. ಮೌಲ್ಯದ ಚಿನ್ನ ಮತ್ತು 5400 ಕೋಟಿ ರು. ಮೌಲ್ಯದ 350 ಬೆಳ್ಳಿ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಮಾರಾಟ ಶೇ.30 ಮತ್ತು ಬೆಳ್ಳಿಯ ಮಾರಾಟದಲ್ಲಿ ಶೇ.10ರಷ್ಟು ಏರಿಕೆ ಕಂಡುಬಂದಿದೆ.

ಹಬ್ಬ ಆರಂಭದ ವಾರಗಳಲ್ಲಿ ಉಭಯ ಲೋಹಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಜನ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಮುಂದಾಗಲು ಕಾರಣವೆನ್ನಲಾಗಿದೆ. ಕಳೆದ ವರ್ಷ ಅಕ್ಷಯ ತೃತೀಯಾ ಮತ್ತು ಹಬ್ಬದ ಅವಧಿಯಲ್ಲಿ ಅಂದಾಜು 60000 ಕೋಟಿ ರು. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಮಾರಾಟವಾಗಿತ್ತು.


More Trending News