ಇತ್ತೀಚಿನ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಭಾರೀ ಮುಜುಗರಕ್ಕೆ ಒಳಗಾಗಿರುವ ಕೇಂದ್ರ ಸರ್ಕಾರ ಜೂ.21ರಂದು ನಡೆಯಲಿರುವ ನೀಟ್ ಮರುಪರೀಕ್ಷೆಯನ್ನು ದೋಷರಹಿತವಾಗಿ ನಡೆಸುವ ಉದ್ದೇಶದಿಂದ ಭಾರತೀಯ ಸೇನೆಯ ನೆರವು ಪಡೆಯುವ ಬಗ್ಗೆ ಚಿಂತನೆ ನಡೆಸಿದೆ.ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸಿ ದೇಶಾದ್ಯಂತ ಸಾಗಿಸಲು ಸಾಧ್ಯವೇ ಎಂಬುದರ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
₹10 ಲಕ್ಷ ಕೋಟಿ ಒಡೆಯ ಅಂಬಾನಿ ಸತತ 6ನೇ ವರ್ಷ ವೇತನ ಪಡೀಲಿಲ್ಲ
ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ (69) ಸತತ 6ನೇ ವರ್ಷವೂ ಕಂಪನಿಯಿಂದ ಯಾವುದೇ ವೇತನ ಪಡೆದುಕೊಂಡಿಲ್ಲ. ಕೋವಿಡ್‌ಗೂ ಮುನ್ನ ಮುಕೇಶ್ ತಮ್ಮ ವಾರ್ಷಿಕ ವೇತನವನ್ನು 15 ಕೋಟಿ ರು. ದಾಟದಂತೆ ಮಿತಿ ಹೇರಿದ್ದರು. ಆದರೆ ಕೋವಿಡ್ ಸಮಯದಲ್ಲಿ ಇತರರಿಗೆ ಮಾದರಿಯಾಗು ಹಿನ್ನೆಲೆಯಲ್ಲಿ ಅವರು ವೇತನ ಪಡೆಯುವುದನ್ನು ಕೈಬಿಟ್ಟಿದ್ದು, ಈ ವರ್ಷವೂ ಅದನ್ನು ಮುಂದುವರೆಸಿದ್ದಾರೆ. ಕಂಪನಿಯ ವಾರ್ಷಿಕ ವರದಿಯಲ್ಲಿ ಈ ಅಂಶಗಳಿವೆ. ರಿಲಯನ್ಸ್‌ನಲ್ಲಿ ಮುಕೇಶ್ ಸ್ವತಃ 1.61 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಇದರ ಹೊರತಾಗಿ ಪ್ರವರ್ತಕರ ಕಂಪನಿ ರಿಲಯನ್ಸ್‌ನಲ್ಲಿ 664.5 ಕೋಟಿ ಅಥವಾ ಶೇ.50.07ರಷ್ಟು ಷೇರು ಪಾಲು ಹೊಂದಿದೆ. ಈ ಲೆಕ್ಕಾಚಾರದಲ್ಲಿ ಮುಕೇಶ್ ಅಂಬಾನಿ ಒಟ್ಟು 10 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದಾರೆ.
08:55 PM (IST) May 29
08:36 PM (IST) May 29
ಕ್ವಾಲಿಫೈಯರ್ 2 ಪಂದ್ಯದಲ್ಲಿ ಒಂದಲ್ಲ ಎರಡು ಬಾರಿ ಟಾಸ್ ಹಾಕಲಾಗಿದೆ. ಮೊದಲ ಬಾರಿಗೆ ಗುಜರಾತ್ ಪರ ಟಾಸ್ ಬಿದ್ದರೆ, ಎರಡನೇ ಬಾರಿಗೆ ರಾಜಸ್ಥಾನ ರಾಯಲ್ಸ್ ಪರವಾಗಿತ್ತು. ಅಷ್ಟಕ್ಕೂ 2 ಬಾರಿ ಟಾಸ್ ಹಾಕಿ ಟೈಟಾನ್ಸ್‌ಗೆ ಅನ್ಯಾಯ ಮಾಡಿದ್ರಾ?
08:12 PM (IST) May 29
ಐಪಿಎಲ್ 2026ರಲ್ಲಿ ಲಕ್ನೋ ತಂಡದ ಹೀನಾಯ ಪ್ರದರ್ಶನದ ನಂತರ ರಿಷಭ್ ಪಂತ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮ್ಯಾನೇಜ್‌ಮೆಂಟ್ ಜೊತೆಗಿನ ಭಿನ್ನಾಭಿಪ್ರಾಯ, ನಿರ್ಧಾರಗಳಲ್ಲಿ ಸ್ವಾತಂತ್ರ್ಯದ ಕೊರತೆ ಮತ್ತು ತಮ್ಮ ಬ್ಯಾಟಿಂಗ್ ಮೇಲೆ ಗಮನಹರಿಸುವ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
07:44 PM (IST) May 29
06:50 PM (IST) May 29
ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು 'ಟಂಟನ್' ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯ ನಕಲಿ ಪ್ರಣಯದ ಬಲೆಗೆ ಬಿದ್ದಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ, ಆನ್‌ಲೈನ್ ಹೂಡಿಕೆ ಯೋಜನೆಯಲ್ಲಿ ಹಣ ತೊಡಗಿಸುವಂತೆ ಪ್ರೇರೇಪಿಸಿದ ಆಕೆ, ಯುವಕನಿಂದ 1.66 ಕೋಟಿ ರೂಪಾಯಿ ಜೊತೆ ಪರಾರಿಯಾಗಿದ್ದಾಳೆ.
05:28 PM (IST) May 29
05:02 PM (IST) May 29
2026ರಲ್ಲಿ ಧುರಂಧರ್ 2 ಮೂಲಕ ಬಾಲಿವುಡ್ ಸಿನಿಮಾದಲ್ಲಿ ಹಂಗಾಮ ಸೃಷ್ಟಿಯಾಗಿದೆ. ಇದೀಗ 2026ರಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಆದರೆ IMDb ರೇಟಿಂಗ್ ಪ್ರಕಾರ 2026ರ ಬಹುನಿರೀಕ್ಷಿತ ಚಿತ್ರದಲ್ಲಿ ಯಾವ ಸೂಪರ್ ಸ್ಟಾರ್‌ಗಳು ಇಲ್ಲ.
04:25 PM (IST) May 29
03:12 PM (IST) May 29
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿವಾದದ ನಂತರ, ಕೇಂದ್ರ ಸರ್ಕಾರವು ಜೂನ್ 21ರ ಮರುಪರೀಕ್ಷೆಯನ್ನು ಸೋರಿಕೆ-ನಿರೋಧಕವಾಗಿ ನಡೆಸಲು ಐತಿಹಾಸಿಕ ಕ್ರಮ ಕೈಗೊಂಡಿದೆ. ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಲುಪಿಸಲು ಭಾರತೀಯ ವಾಯುಪಡೆಯ ವಿಶೇಷ ವಿಮಾನಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ
02:55 PM (IST) May 29
ಜಾಗತಿಕ ಟೆಕ್ ದೈತ್ಯ ಕಾಗ್ನಿಜೆಂಟ್, ಟ್ರಾವೆಲ್‌ಪೋರ್ಟ್ & ಎಐ ಸಂಶೋಧನಾ ಸಂಸ್ಥೆ ಆಂಥ್ರೋಪಿಕ್, ಪ್ರವಾಸೋದ್ಯಮ ಕ್ಷೇತ್ರವನ್ನು ಸಂಪೂರ್ಣವಾಗಿ ಎಐ ಯುಗಕ್ಕೆ ಕೊಂಡೊಯ್ಯಲು ಕೈಜೋಡಿಸಿವೆ. ಆಂಥ್ರೋಪಿಕ್‌ನ 'ಕ್ಲೌಡ್' ಎಐ ಮಾಡೆಲ್ ಬಳಸಿ, ಟ್ರಾವೆಲ್‌ಪೋರ್ಟ್‌ನ ಬುಕ್ಕಿಂಗ್ ತಂತ್ರಜ್ಞಾನ ಆಧುನೀಕರಿಸಲಾಗುತ್ತಿದೆ.
02:41 PM (IST) May 29
ಮುಲ್ಲನ್‌ಪುರ್: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ಎದುರು ಗುಜರಾತ್ ಟೈಟಾನ್ಸ್ ತಂಡವು ಎರಡು ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲು ರೆಡಿಯಾಗಿದೆ.
02:03 PM (IST) May 29
'ಕಾಕ್ರೋಚ್ ಜನತಾ ಪಾರ್ಟಿ'ಯ 'ಎಕ್ಸ್' ಖಾತೆ ಬ್ಯಾನ್ ಪ್ರಶ್ನಿಸಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸಲ್ಲಿಸಿದ್ದ ಅರ್ಜಿಗೆ ದೆಹಲಿ ಹೈಕೋರ್ಟ್ ತಕ್ಷಣದ ರಿಲೀಫ್ ನೀಡಿಲ್ಲ. ಪ್ರಕರಣದ ಗಂಭೀರತೆ ಪರಿಗಣಿಸಿ, ಕೇಂದ್ರದ ವಾದ ಕೇಳಿದ ನಂತರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿ, ವಿಚಾರಣೆ ಜುಲೈ 6ಕ್ಕೆ ಮುಂದೂಡಿದೆ.
01:32 PM (IST) May 29
01:08 PM (IST) May 29
ಮೆಟಾ ತನ್ನ ಜನಪ್ರಿಯ ಆ್ಯಪ್ಗಳಾದ ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ಗಳಿಗಾಗಿ ಹೊಸ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸುತ್ತಿದೆ. ಈ ಪ್ಲಸ್ ಯೋಜನೆಗಳ ಮೂಲಕ, ಬಳಕೆದಾರರು ಹಣ ಪಾವತಿಸಿ ವಿಶೇಷ AI ವೈಶಿಷ್ಟ್ಯಗಳು, ಕಸ್ಟಮೈಸೇಶನ್ ಆಯ್ಕೆಗಳು ಮತ್ತು ಇತರ ಪ್ರೀಮಿಯಂ ಸೌಲಭ್ಯ ಪಡೆಯಬಹುದು.
01:05 PM (IST) May 29
ಮುಲ್ಲನ್‌ಪುರ: 2026ರ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬನ್ನಿ ಸದ್ಯ ನ್ಯೂ ಚಂಡೀಗಢದಲ್ಲಿ ಹವಾಮಾನ ಪರಿಸ್ಥಿತಿ ಹೇಗಿದೆ ನೋಡೋಣ.
11:12 AM (IST) May 29
11:04 AM (IST) May 29
10:51 AM (IST) May 29
ತಮ್ಮದೇ ಪಕ್ಷದ ಸಂಸದ ಕಲ್ಯಾಣ್ ಬ್ಯಾನರ್ಜಿ ತಮ್ಮನ್ನು ನಿಂದಿಸಿದ್ದಾರೆ ಸ್ತ್ರೀದ್ವೇಷದ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಟಿಎಂಸಿ ಸಂಸದೆ ಕಾಕೋಲಿ ಘೋಷ್ ಲೋಕಸಭಾಧ್ಯಕ್ಷ ಓಂ ಬಿರ್ಲಾಗೆ ಪತ್ರ ಬರೆದಿದ್ದಾರೆ. ಚುನಾವಣಾ ಸೋಲಿನಿಂದ TMC ಯಲ್ಲಿ ಹೆಚ್ಚುತ್ತಿರುವ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ.
09:49 AM (IST) May 29
08:46 AM (IST) May 29
08:27 AM (IST) May 29
08:03 AM (IST) May 29