LIVE NOW
Published : Sep 24, 2026, 07:44 AM ISTUpdated : Sep 24, 2026, 10:01 AM IST

India News Live: ಏಷ್ಯನ್ ಗೇಮ್ಸ್‌ 2026 - ಭಾರತಕ್ಕೆ ಬೆಳ್ಳಿ-ಕಂಚಿನ ಹರಿವು, ಬಂಗಾರಕ್ಕೆ ಬರ..! ಐತಿಹಾಸಿಕ ಪದಕ ಗೆದ್ದ ಮೀರಾಬಾಯಿ ಚಾನು

ಸಾರಾಂಶ

ನವದೆಹಲಿ: ದೇಶದ ಆಡಳಿತದಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ಹಾಗೂ 2047ರ ಹೊತ್ತಿಗೆ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮೊದಲ ದಿನದ ಚಿಂತನ ಶಿಬಿರ ಬುಧವಾರ ನಡೆಯಿತು.

ಎಲ್ಲಾ ಕೇಂದ್ರ ಸಚಿವರು ಭಾಗವಹಿಸಿದ್ದ 4 ತಾಸುಗಳ ಸಭೆಯಲ್ಲಿ, ಆಡಳಿತ, ಸುಧಾರಣೆ, ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಮಹಿಳೆಯರು ಮತ್ತು ಯುವಜನರನ್ನು ತಲುಪುವ ಕಾರ್ಯಕ್ರಮಗಳು ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ, ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ನಡುವೆ ಸಮನ್ವಯದೊಂದಿಗೆ ಸರ್ಕಾರದ ಸೇವಾ ವಿತರಣಾ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆಯೂ ಚಿಂತನೆ ನಡೆಯಿತು ಎಂದು ಮೂಲಗಳಿಂದ ತಿಳಿದುಬಂದಿದೆ. ನಾಳೆಯೂ ಈ ಶಿಬಿರ ಪ್ರಧಾನಿ ನಿವಾಸದಲ್ಲಿ ನಡೆಯಲಿದೆ.

ಮೋದಿ ಸಲಹೆ:

ಸಚಿವರನ್ನು 8 ಗುಂಪುಗಳಾಗಿ ವಿಂಗಡಿಸಿದ್ದು, ಪ್ರತಿ ಗುಂಪಿನೊಂದಿಗೆ ಪ್ರಧಾನಿ ಮೋದಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ ವೇಳೆ ಸಚಿವರ ಅಭಿಪ್ರಾಯ ಪಡೆದುಕೊಂಡು, ಸರ್ಕಾರದ ವಿವಿಧ ವಿಷಯಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

10:01 AM (IST) Sep 24

ಏಷ್ಯನ್ ಗೇಮ್ಸ್‌ 2026 - ಭಾರತಕ್ಕೆ ಬೆಳ್ಳಿ-ಕಂಚಿನ ಹರಿವು, ಬಂಗಾರಕ್ಕೆ ಬರ..! ಐತಿಹಾಸಿಕ ಪದಕ ಗೆದ್ದ ಮೀರಾಬಾಯಿ ಚಾನು

ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದರೆ, ಸಾಫ್ಟ್‌ ಟೆನಿಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಒಲಿದಿದೆ. ಶೂಟಿಂಗ್ ಮತ್ತು ಬ್ಯಾಡ್ಮಿಂಟನ್‌ನಲ್ಲೂ ಭಾರತ ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದೆ.
Read Full Story

09:54 AM (IST) Sep 24

SIR ವಿವಾದ, 13 ಕೋಟಿ ಮತದಾರರ ಹೆಸರು ಡಿಲೀಟ್‌ - ಸಿಇಸಿ ವಜಾಗೆ ವಿಪಕ್ಷಗಳ ಆಗ್ರಹ; ಸುಪ್ರೀಂ ಜಡ್ಜ್‌ಗಳ ಭಿನ್ನಾಭಿಪ್ರಾಯ!

13 ಕೋಟಿ ಮತದಾರರ ಹೆಸರು ಡಿಲೀಟ್ ಆದ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಇತರ ಇಬ್ಬರು ಆಯುಕ್ತರ ಆಕ್ಷೇಪಗಳನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ವಿಪಕ್ಷಗಳು ಜ್ಞಾನೇಶ್ ವಜಾ ಮತ್ತು ಬಂಧನಕ್ಕೆ ಆಗ್ರಹಿಸಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಸಿಇಸಿ ಆಯ್ಕೆ ಸಮಿತಿ ಕಾಯ್ದೆ ಕುರಿತು ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.
Read Full Story

09:11 AM (IST) Sep 24

ರಸ್ತೆ ಬದಿಯಲ್ಲಿ ₹1250ಗೆ ಖರೀದಿಸಿದ್ದಳು , ಹರಾಜಿನಲ್ಲಿ 2 ಕೋಟಿಗೆ ಮಾರಾಟ; ಅದೃಷ್ಟ ಬಂದರೆ ಹೀಗೆ ಬರಬೇಕು

ಅದೃಷ್ಟ ಬಂದರೆ ಹೀಗೆ ಬರಬೇಕು! ಒಬ್ಬ ಮಹಿಳೆ ರಸ್ತೆ ಬದಿಯಲ್ಲಿ ಒಂದು ಹಾರವನ್ನು ಖರೀದಿಸಿದ್ದಳು. ಈ ಆ ವಸ್ತುವಿನಿಂದ ಆಕೆಯ ಬದುಕೇ ಬದಲಾಗಿ ಹೋಗಿದೆ. ಇಂಟರೆಸ್ಟಿಂಗ್‌ ಆಗಿರುವ ಸ್ಟೋರಿ ಇಲ್ಲಿದೆ.

Read Full Story

09:01 AM (IST) Sep 24

Rowing Star Salman khan - ಅಂದು ಉಬರ್ ಕ್ಯಾಬ್ ಚಾಲಕ, ಇಂದು ಏಷ್ಯನ್ ಗೇಮ್ಸ್ ಪದಕ ವಿಜೇತ! ಯಾರು ಈ ಸಲ್ಮಾನ್ ಖಾನ್?

Rowing Star Salman khan: ಕುಟುಂಬ ನಿರ್ವಹಣೆಗಾಗಿ ಉಬರ್ ಕ್ಯಾಬ್ ಓಡಿಸುತ್ತಿದ್ದ ಸಲ್ಮಾನ್ ಖಾನ್, ಸೇನೆಗೆ ಸೇರಿದ ಬಳಿಕ ರೋಯಿಂಗ್ ಕ್ರೀಡೆಯಲ್ಲಿ ಮಿಂಚಿದ್ದಾರೆ. ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಇವರು ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

Read Full Story

08:54 AM (IST) Sep 24

ವಾಯುಭಾರ ಕುಸಿತ - ಒಡಿಶಾ, ಆಂಧ್ರ, ಬಂಗಾಳದಲ್ಲಿ ಭಾರೀ ಮಳೆ, ರೆಡ್ ಅಲರ್ಟ್! ಎಲ್-ನಿನೋ ಪ್ರಕೋಪಕ್ಕೆ 4.5 ಲಕ್ಷ ಜೀವ ಬಲಿ ಅಂದಾಜು!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗುತ್ತಿದ್ದು, 'ಅರ್ನಬ್' ಚಂಡಮಾರುತ ಸೃಷ್ಟಿಯಾಗುವ ಭೀತಿ ಎದುರಾಗಿದೆ. ಮತ್ತೊಂದೆಡೆ, ಮುಂಬರುವ ದಿನಗಳಲ್ಲಿ ಎಲ್-ನಿನೋ ಪ್ರಭಾವದಿಂದ ಜಾಗತಿಕವಾಗಿ 4.5 ಲಕ್ಷಕ್ಕೂ ಹೆಚ್ಚು ಜನ ಬಲಿಯಾಗಲಿದ್ದಾರೆ ಎಂದು ವರದಿಯೊಂದು ಎಚ್ಚರಿಸಿದೆ.
Read Full Story

07:56 AM (IST) Sep 24

ಮುಖೇಶ್ ಅಂಬಾನಿ ಹಿಂದಿಕ್ಕಿ ಭಾರತದ ನಂ.1 ಶ್ರೀಮಂತರಾದ ಗೌತಮ್ ಅದಾನಿ; ಹಣವೆಷ್ಟಿದೆ ನೋಡಿ!

ಎಂ3ಎಂ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026 ಬಿಡುಗಡೆಯಾಗಿದ್ದು, ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಗೌತಮ್ ಅದಾನಿ ಭಾರತದ ನಂ.1 ಶ್ರೀಮಂತರಾಗಿದ್ದಾರೆ. ದೇಶದಲ್ಲಿ 1,000 ಕೋಟಿ ರೂ.ಗೂ ಅಧಿಕ ಸಂಪತ್ತು ಹೊಂದಿರುವವರ ಸಂಖ್ಯೆ 1,810ಕ್ಕೆ ಏರಿಕೆಯಾಗಿದೆ.

Read Full Story

More Trending News