Published : May 19, 2026, 07:57 AM ISTUpdated : May 19, 2026, 10:46 PM IST

India News Live: ಇರಾನ್ ಮೇಲಿನ ದಾಳಿ ಪ್ಲಾನ್ ಗೊತ್ತಿಲ್ಲ - ಟ್ರಂಪ್ ವಾದವನ್ನು ಸಾರಾಸಗಟಾಗಿ ತಳ್ಳಿದ ಗಲ್ಫ್ ರಾಷ್ಟ್ರಗಳು!

ಸಾರಾಂಶ

ಸಾಮಾನ್ಯ ಜನರಿಗೆ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ 3.25 ರೂ. ದರ ಹೆಚ್ಚಳವಾಗಿದ್ದು, ಇದೀಗ ಮಂಗಳವಾರ ಮತ್ತೆ ಸುಮಾರು 90 ಪೈಸೆಗಳಷ್ಟು ಇಂಧನ ದರವನ್ನು ಹೆಚ್ಚಿಸಲಾಗಿದೆ. ಕಳೆದ ಒಂದು ವಾರದಲ್ಲಿ ಇಂಧನ ದರದಲ್ಲಿ ಆಗುತ್ತಿರುವ ಎರಡನೇ ಭಾರಿ ಏರಿಕೆ ಇದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮವಾಗಿ ಈ ದರ ಏರಿಕೆ ಕಂಡುಬಂದಿದೆ.

Trump Claims US Will Take Cuba ‘Almost Immediately’ | USS Lincoln Deployed

10:46 PM (IST) May 19

ಇರಾನ್ ಮೇಲಿನ ದಾಳಿ ಪ್ಲಾನ್ ಗೊತ್ತಿಲ್ಲ - ಟ್ರಂಪ್ ವಾದವನ್ನು ಸಾರಾಸಗಟಾಗಿ ತಳ್ಳಿದ ಗಲ್ಫ್ ರಾಷ್ಟ್ರಗಳು!

ಗಲ್ಫ್ ನಾಯಕರ ಮನವಿಗೆ ಇರಾನ್ ಮೇಲಿನ ದಾಳಿ ನಿಲ್ಲಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಆ ರಾಷ್ಟ್ರಗಳೇ ನಿರಾಕರಿಸಿದ್ದು, ಇದು ತೀವ್ರ ರಾಜತಾಂತ್ರಿಕ ವಿವಾದಕ್ಕೆ ಕಾರಣವಾಗಿದೆ. 

Read Full Story

10:21 PM (IST) May 19

ನಿವೃತ್ತಿ ನಂತರದ ನೆಮ್ಮದಿ ಜೀವನಕ್ಕೆ ಬರೀ ಪಿಎಫ್‌ ಹಣ ಸಾಕಾ, ಏನಂತಾರೆ ಆರ್ಥಿಕ ತಜ್ಞರು!

ಉದ್ಯೋಗಿಗಳ ಭವಿಷ್ಯ ನಿಧಿ (EPF) ಜನಪ್ರಿಯ ಉಳಿತಾಯ ಮಾರ್ಗವಾದರೂ, ನಿವೃತ್ತಿ ಜೀವನಕ್ಕೆ ಕೇವಲ ಅದರ ಮೇಲೆ ಅವಲಂಬಿತರಾಗುವುದು ಸುರಕ್ಷಿತವಲ್ಲ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಭವಿಷ್ಯದಲ್ಲಿ ಈ ನಿಧಿ ಸಾಕಾಗದೇ ಇರಬಹುದು. 

Read Full Story

09:18 PM (IST) May 19

ಮಗ ಡಾಕ್ಟರ್‌ ಆಗ್ಲಿ ಎಂದು ಅಪ್ಪ 10 ಲಕ್ಷ ಲಂಚ ಕೊಟ್ಟು ನೀಟ್‌ ಪೇಪರ್‌ ತಗೊಂಡ - ಮಗ ಡುಮ್ಕಿ ಹೊಡೆದ

ನೀಟ್‌ ಯುಜಿ ಪತ್ರಿಕೆ ಸೋರಿಕೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಪರೀಕ್ಷೆ ರದ್ದಾಗಿದೆ. ಸೋರಿಕೆಯಾದ ಪತ್ರಿಕೆಗೆ 10 ಲಕ್ಷ ರೂ. ನೀಡಿದ್ದರೂ, ವಿದ್ಯಾರ್ಥಿಯೊಬ್ಬ ಕೇವಲ 107 ಅಂಕ ಗಳಿಸಿರುವುದು ಈ ಹಗರಣಕ್ಕೆ ಹೊಸ ತಿರುವು ನೀಡಿದೆ. ಇದೀಗ ಸಿಬಿಐ ಈ ಬೃಹತ್ ಜಾಲದ ಬಗ್ಗೆ ತನಿಖೆ ನಡೆಸುತ್ತಿದೆ.
Read Full Story

09:07 PM (IST) May 19

ಪಿಎಫ್ ಆಫೀಸ್‌ಗೆ ಅಲೆಯುವ ಜಂಜಾಟ ಇರಲ್ಲ - ವಾಟ್ಸಾಪ್‌ನಲ್ಲೇ ಸಿಗಲಿದೆ ಬ್ಯಾಲೆನ್ಸ್, ಕ್ಲೈಮ್ ಸ್ಟೇಟಸ್ ವಿವರ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಶೀಘ್ರದಲ್ಲೇ ವಾಟ್ಸಾಪ್ ಆಧಾರಿತ ಸೇವೆಗಳನ್ನು ಆರಂಭಿಸಲಿದೆ. ಈ ಮೂಲಕ ಸದಸ್ಯರು ಪಿಎಫ್ ಬ್ಯಾಲೆನ್ಸ್, ಕ್ಲೈಮ್ ಸ್ಟೇಟಸ್‌ನಂತಹ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದು. 

Read Full Story

09:05 PM (IST) May 19

ಆಗ 90 ಲಕ್ಷದ ಮಾವು, ಈಗ ಚಿನ್ನದ ಬಟ್ಟೆ - ಲೇಡಿ ಗಾಗಾ ಡ್ರೆಸ್​ನಲ್ಲಿ ಮಿಂಚಿದ ಇಶಾ ಅಂಬಾನಿ ಲುಕ್​ಗೆ ಸುಸ್ತಾದ ಫ್ಯಾಷನ್​ ಲೋಕ

ಉದ್ಯಮಿ ಇಶಾ ಅಂಬಾನಿ, ಕಾರ್ಲ್ ಲ್ಯಾಗರ್‌ಫೆಲ್ಡ್ ಅವರ 1996ರ ಚಾನೆಲ್ ಹಾಟ್ ಕೌಚರ್ ಸಂಗ್ರಹದ ಅಪರೂಪದ ಗೋಲ್ಡನ್ ಪ್ಯಾಂಟ್-ಸೂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 2011ರಲ್ಲಿ ಪಾಪ್ ತಾರೆ ಲೇಡಿ ಗಾಗಾ ಇದೇ ಉಡುಪನ್ನು ಧರಿಸಿದ್ದರು.

Read Full Story

08:54 PM (IST) May 19

'ಖತ್ರೋನ್ ಕೆ ಖಿಲಾಡಿ' ಶೋಗಾಗಿ ಬಿಕಿನಿ ವ್ಯಾಕ್ಸ್ ಮಾಡಿಸಿಕೊಂಡ ಓರಿ - ಅಷ್ಟಕ್ಕೂ ಯಾರೀತ?

ಖತ್ರೋನ್ ಕೆ ಖಿಲಾಡಿ 15 ಶೋಗೆ ಓರ್ಹಾನ್ ವಿಚಿತ್ರ ರೀತಿಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. ತಮ್ಮ ನೋವು ಸಹಿಸಿಕೊಳ್ಳುವ ಸಾಮರ್ಥ್ಯ ಪರೀಕ್ಷಿಸಲು ಅವರು ಮಾಡಿಕೊಂಡ 'ಪೇನ್ ಟೆಸ್ಟ್' ಬಗ್ಗೆ ಹೇಳಿಕೊಂಡಿದ್ದು, ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

Read Full Story

07:52 PM (IST) May 19

ಏನಾಯಿತೆಂದು ಅಮ್ಮ ಕೇಳುತ್ತಿದ್ದಾರೆ - ನಟ ಸಲ್ಮಾನ್ ಖಾನ್ ಪೋಸ್ಟ್‌ಗೆ ಆತಂಕಗೊಂಡ ಫ್ಯಾನ್ಸ್!

ತಮ್ಮ ಇತ್ತೀಚಿನ "ಒಂಟಿ ಮತ್ತು ಏಕಾಂಗಿ" ಪೋಸ್ಟ್‌ನಿಂದ ಆನ್‌ಲೈನ್‌ನಲ್ಲಿ ಶುರುವಾಗಿದ್ದ ಚರ್ಚೆಗಳಿಗೆ ನಟ ಸಲ್ಮಾನ್ ಖಾನ್ ತೆರೆ ಎಳೆದಿದ್ದಾರೆ. ಭಾನುವಾರ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

Read Full Story

07:32 PM (IST) May 19

ಡ್ಯಾನ್ಸ್ ಸ್ಟೆಪ್ ಮರೆತ್ರಾ 'ಮೆಗಾ ಪವರ್ ಸ್ಟಾರ್'? ವೈರಲ್ ವಿಡಿಯೋ ಬಗ್ಗೆ ಫ್ಯಾನ್ಸ್ ವಾರ್!

ಮೇ 18ರಂದು ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ 'ಪೆದ್ದಿ' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ.

Read Full Story

07:29 PM (IST) May 19

ರಕ್ಷಣಾ ವಲಯದಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು, ಮೊದಲ ಸ್ವದೇಶಿ ಸೇನಾ ವಿಮಾನ ವಡೋದರದಲ್ಲಿ ಹಾರಾಟಕ್ಕೆ ರೆಡಿ

ಮೇಕ್ ಇನ್ ಇಂಡಿಯಾ ಉಪಕ್ರಮದಡಿ, ವಡೋದರಾದಲ್ಲಿ ದೇಶೀಯವಾಗಿ ಜೋಡಿಸಲಾದ ಮೊದಲ ಏರ್‌ಬಸ್ ಸಿ-295 ಮಿಲಿಟರಿ ಸಾರಿಗೆ ವಿಮಾನವು ತನ್ನ ಮೊದಲ ಪರೀಕ್ಷಾರ್ಥ ಹಾರಾಟಕ್ಕೆ ಸಿದ್ಧವಾಗಿದೆ. ಟಾಟಾ ಮತ್ತು ಏರ್‌ಬಸ್ ಸಹಯೋಗದಲ್ಲಿ ನಿರ್ಮಾಣವಾದ ಈ ವಿಮಾನ, ಭಾರತದಲ್ಲಿ ಖಾಸಗಿ ವಲಯದಿಂದ ತಯಾರಾದ ಮೊದಲ ಸಂಪೂರ್ಣ ಮಿಲಿಟರಿ ವಿಮಾನವಾಗಿದೆ.
Read Full Story

07:11 PM (IST) May 19

'ಪೆದ್ದಿ'ಯಲ್ಲಿ ಜಾನ್ವಿ ಹೊಸ ಅವತಾರ ನೋಡಿ ಬಾಯ್‌ಫ್ರೆಂಡ್ ಹೇಳಿದ್ದು ಇದೊಂದೇ ಮಾತು - ಪೋಸ್ಟ್ ವೈರಲ್

ನಟಿ ಜಾನ್ವಿ ಕಪೂರ್ ಅವರ ಬಾಯ್‌ಫ್ರೆಂಡ್ ಎಂದು ಹೇಳಲಾಗುವ ಶಿಖರ್ ಪಹಾಡಿಯಾ, ಜಾನ್ವಿ ನಟನೆಯ 'ಪೆದ್ದಿ' ಚಿತ್ರದ ಬಗ್ಗೆ ಸಖತ್ ಎಕ್ಸೈಟ್ ಆಗಿದ್ದಾರೆ. ಮೇ 18 ರಂದು ಮುಂಬೈನಲ್ಲಿ ಈ ಚಿತ್ರದ ಟ್ರೇಲರ್ ಲಾಂಚ್ ಆಗಿತ್ತು.

Read Full Story

06:37 PM (IST) May 19

ಚಿತ್ರರಂಗಕ್ಕೆ ಶಾಕ್, ಗಾಯಕಿ ಯಶಿಂದರ್ ಕೌರ್ ಶವವಾಗಿ ಪತ್ತೆ - ಮದುವೆ ಪ್ರಪೋಸಲ್ ತಿರಸ್ಕರಿಸಿದ್ದೇ ಕೊಲೆಗೆ ಕಾರಣವಾಯ್ತಾ?

ಗಾಯಕಿ ಯಶಿಂದರ್ ಕೌರ್ ಅಲಿಯಾಸ್ ಇಂದರ್ ಕೌರ್ ಅವರ ಮೃತದೇಹ ಮೇ 19ರಂದು ಪಂಜಾಬ್‌ನ ನೀಲೋ ಕಾಲುವೆಯಲ್ಲಿ ಪತ್ತೆಯಾಗಿದೆ. ಈ ದುರಂತ ಘಟನೆಯಿಂದ ಪಂಜಾಬಿ ಸಂಗೀತ ಲೋಕ ಮತ್ತು ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ.

Read Full Story

06:28 PM (IST) May 19

IPL Playoffs - ಕ್ಯಾಲ್ಕುಲೇಟರ್ ಟೈಂ! 7 ಮ್ಯಾಚ್ ಸೋತರೇನಂತೆ ಈಗಲೂ ಇದೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಪ್ಲೇ ಆಫ್‌ಗೇರುವ ಚಾನ್ಸ್!

ಬೆಂಗಳೂರು: ಪ್ಲೇಆಫ್‌ನಲ್ಲಿ ಇರೋದು ಒಂದೇ ಒಂದು ಸ್ಪಾಟ್. ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ ಬೇಜಾರ್ ಆಗ್ಬೇಡಿ. ನಿಮ್ಮ ಕ್ಯಾಲ್ಕುಲೇಟರ್‌ಗಳನ್ನು ಹೊರತೆಗೆಯಿರಿ. ಯಾಕಂದ್ರೆ, CSK ಪ್ಲೇಆಫ್‌ಗೆ ಹೋಗೋ ಚಾನ್ಸ್ ಇನ್ನೂ ಮುಗಿದಿಲ್ಲ.

 

Read Full Story

06:11 PM (IST) May 19

'ಮುಂದಿನ ವರ್ಷ ನೀನು ಆಡಲೇಬೇಕು'; ಧೋನಿಗೆ ಸುರೇಶ್ ರೈನಾ ಒತ್ತಾಯ, 'ತಲಾ' ಕೊಟ್ಟ ಉತ್ತರಕ್ಕೆ ಫ್ಯಾನ್ಸ್ ಶಾಕ್!

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ, ಎಂಎಸ್ ಧೋನಿ ಮುಂದಿನ ಐಪಿಎಲ್‌ನಲ್ಲಿ ಆಡುವ ಬಗ್ಗೆ ಅನಿಶ್ಚಿತತೆ ಮೂಡಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ, ತಮ್ಮ ದೇಹ ಮೊದಲಿನಂತಿಲ್ಲ ಎಂದು ಆಪ್ತ ಸ್ನೇಹಿತ ಸುರೇಶ್ ರೈನಾಗೆ ತಿಳಿಸಿದ್ದಾರೆ. ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ಧೋನಿಯ ಭವಿಷ್ಯದ ನಿರ್ಧಾರವನ್ನು ಮ್ಯಾನೇಜ್‌ಮೆಂಟ್‌ಗೆ ಬಿಟ್ಟಿದ್ದಾರೆ, ಇದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
Read Full Story

06:07 PM (IST) May 19

ಟ್ರೋಲ್ ಮಾಡಿದವರಿಗೆ ಆರ್ಯ ಬಡಾಯಿ ಕೊಟ್ಟ ಉತ್ತರವೇನು? - ವೈರಲ್ ಆಯ್ತು ನಟಿಯ ಮಾತು!

ಅಮೆರಿಕದಲ್ಲಿ ನಡೆದ ಶೋ ಒಂದರಲ್ಲಿ ಮಾಡಿದ ಡ್ಯಾನ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಟ್ರೋಲ್ ಮಾಡಲಾಗ್ತಿತ್ತು. ಇದಕ್ಕೆ ನಟಿ ಆರ್ಯ ಬಡಾಯಿ ಉತ್ತರ ಕೊಟ್ಟಿದ್ದಾರೆ. ಕಾಲಿಗೆ ಗಾಯವಾಗಿದ್ದರೂ ನಾನು ಡ್ಯಾನ್ಸ್ ಮಾಡಿದ್ದೆ ಅಂತ ಹೇಳಿಕೊಂಡಿದ್ದಾರೆ.

Read Full Story

05:26 PM (IST) May 19

ಹಳೆಯ ಚಿನ್ನಕ್ಕೆ ಶುಭಕಾಲ, ಭಾರತದ ಗ್ರಾಹಕರ ಬುದ್ದಿವಂತಿಕೆ ಮೆಚ್ಚಿದ ಮಾರುಕಟ್ಟೆ ತಜ್ಞರು!

ಚಿನ್ನದ ಬೆಲೆ ಏರಿಕೆಯಿಂದಾಗಿ, ಭಾರತೀಯರು ತಮ್ಮ ಹಳೆಯ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದಾರೆ ಅಥವಾ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಈ ಬದಲಾವಣೆಯು ಚಿನ್ನವನ್ನು ಭಾವನಾತ್ಮಕ ಆಸ್ತಿಯಿಂದ ಆರ್ಥಿಕ ಆಸ್ತಿಯಾಗಿ ನೋಡುವ ಹೊಸ ದೃಷ್ಟಿಕೋನವನ್ನು ತೋರಿಸುತ್ತದೆ.

Read Full Story

05:15 PM (IST) May 19

ಅಫ್ಘಾನಿಸ್ತಾನ ಸರಣಿಗೆ ಟೀಮ್ ಇಂಡಿಯಾ ಪ್ರಕಟ - ಟೆಸ್ಟ್‌ ತಂಡದಲ್ಲಿ ಮೂವರು ಕನ್ನಡಿಗರು; 3 ವರ್ಷಗಳ ಬಳಿಕ ಏಕದಿನಕ್ಕೆ ಇಶಾನ್‌!

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ, ಹಿರಿಯ ಆಟಗಾರರಾದ ಬುಮ್ರಾ ಮತ್ತು ಜಡೇಜಾಗೆ ವಿಶ್ರಾಂತಿ ನೀಡಲಾಗಿದ್ದು, ಇಶಾನ್ ಕಿಶನ್ ಪುನರಾಗಮನ ಮಾಡಿದ್ದಾರೆ.

Read Full Story

04:18 PM (IST) May 19

ಮೌನಿ ರಾಯ್‌ಗೆ ದಿಶಾ ಪಟಾನಿ ಜೊತೆ ಸಲಿಂಗ ಸಂಬಂಧವಿದ್ಯಾ? ಮಾಜಿ ಪತಿ ಸೂರಜ್ ಹೀಗಾ ಹೇಳೋದು?

ನಟಿ ಮೌನಿ ರಾಯ್ ಜೊತೆಗಿನ ವಿಚ್ಛೇದನದ ನಂತರ ಹಬ್ಬಿದ್ದ ಹಲವು ವದಂತಿಗಳಿಗೆ ಅವರ ಮಾಜಿ ಪತಿ ಸೂರಜ್ ನಂಬಿಯಾರ್ ತೆರೆ ಎಳೆದಿದ್ದಾರೆ. ಮೌನಿ 100 ಕೋಟಿ ಜೀವನಾಂಶ ಕೇಳಿದ್ದಾರೆ, ನಟಿ ದಿಶಾ ಪಟಾನಿ ಜೊತೆ ಸಂಬಂಧ ಹೊಂದಿದ್ದಾರೆ.

Read Full Story

04:17 PM (IST) May 19

ಬ್ರ್ಯಾಂಡೆಡ್‌ ಶೂ ಬೆಲೆಯಲ್ಲಿ ಸಿಗ್ತಿತ್ತು ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಇಂಟರ್ನೆಟ್‌ನಲ್ಲಿ ವೈರಲ್‌ ಆದ 1986ರ ಬಿಲ್‌!

ಸುಮಾರು 40 ವರ್ಷಗಳ ಹಿಂದಿನ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್‌ನ ಬಿಲ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 1986ರಲ್ಲಿ ಈ ಬೈಕಿನ ಬೆಲೆ ಕೇವಲ 18,700 ರೂಪಾಯಿಗಳಾಗಿತ್ತು ಎಂದು ಈ ಬಿಲ್ ಬಹಿರಂಗಪಡಿಸಿದ್ದಾರೆ.

Read Full Story

03:52 PM (IST) May 19

ಟ್ರಂಪ್‌, ನೆತನ್ಯಾಹು ಹ*ತ್ಯೆ ಮಾಡಿದರೆ 500 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದ ಇರಾನ್‌

ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಹ*ತ್ಯೆಗೆ 500 ಕೋಟಿ ಬಹುಮಾನ ಘೋಷಿಸುವ ವಿಧೇಯಕವನ್ನು ಇರಾನ್ ಸಂಸತ್ತು ಸಿದ್ಧಪಡಿಸುತ್ತಿದೆ. ಈ ನಡುವೆ, ಅಮೆರಿಕ ಇರಾನ್ ಮೇಲಿನ ದಾಳಿಯನ್ನು ಮುಂದೂಡಿದೆ.

Read Full Story

02:51 PM (IST) May 19

ಋಷಿಕೇಶದಲ್ಲಿ ಗೋಡೆಗೆ ಗುದ್ದಿಕೊಂಡು ಬಂದ ಉಜ್ಜಯಿನಿ ಎಕ್ಸ್‌ಪ್ರೆಸ್ ರೈಲು; ನಟ್ಟ ನಡುವೆ ಮುರಿದು ಬಿದ್ದ ಬೋಗಿ!

ಉತ್ತರಾಖಂಡದ ಋಷಿಕೇಶದಲ್ಲಿ ಉಜ್ಜಯಿನಿ ಎಕ್ಸ್‌ಪ್ರೆಸ್ ರೈಲು ಶಂಟಿಂಗ್ ವೇಳೆ ನಿಯಂತ್ರಣ ತಪ್ಪಿ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಬ್ರೇಕ್ ಸಿಸ್ಟಮ್‌ನ ತಾಂತ್ರಿಕ ದೋಷವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರೈಲು ಖಾಲಿಯಿದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Read Full Story

02:26 PM (IST) May 19

"ಮನೆಗೆ ಹೋಗಿ ವಿಸಿಲ್ ಹೊಡೆಯಿರಿ" ಚೆಪಾಕ್ ಮೈದಾನದಲ್ಲೇ ಚೆನ್ನೈ ಫ್ಯಾನ್ಸ್ ಕಾಲೆಳೆದ ಇಶಾನ್ ಕಿಶನ್! ವಿಡಿಯೋ ವೈರಲ್

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಕನಸು ಭಗ್ನಗೊಂಡಿದೆ. ಪಂದ್ಯದ ಹೀರೋ ಇಶಾನ್ ಕಿಶನ್, ಸಿಎಸ್‌ಕೆ ಅಭಿಮಾನಿಗಳನ್ನು 'ವಿಸಿಲ್ ಪೋಡು' ಎಂದು ಸನ್ನೆ ಮಾಡಿ ಗೇಲಿ ಮಾಡಿದ್ದು, ಈ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Read Full Story

01:37 PM (IST) May 19

ಪಾಕಿಸ್ತಾನದಲ್ಲೂ ಘರ್ ವಾಪ್ಸಿ; ರಾಜಧಾನಿ ಲಾಹೋರ್‌ನಲ್ಲಿ ಇಸ್ಲಾಂಪುರ ಈಗ ಕೃಷ್ಣನಗರ, ಆ ಚೌಕದ ಹೆಸರೂ ಬದಲು!

ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಲಾಹೋರ್‌ನಲ್ಲಿ, ಮರ್ಯಮ್ ನವಾಜ್ ಸರ್ಕಾರವು ವಿಭಜನೆ ಪೂರ್ವದ ಐತಿಹಾಸಿಕ ಹೆಸರುಗಳನ್ನು ಮರುಸ್ಥಾಪಿಸುತ್ತಿದೆ. ಈ ಯೋಜನೆಯ ಭಾಗವಾಗಿ, ಇಸ್ಲಾಂಪುರವನ್ನು 'ಕೃಷ್ಣನಗರ' ಮತ್ತು 'ಬಾಬರಿ ಮಸೀದಿ ಚೌಕ್' ಅನ್ನು 'ಜೈನ ಮಂದಿರ ಚೌಕ್' ಎಂದು ಮರುನಾಮಕರಣ ಮಾಡಲಾಗಿದೆ.  

Read Full Story

01:30 PM (IST) May 19

3 ತಂಡ IPL ಪ್ಲೇ-ಆಫ್‌ಗೆ ಲಗ್ಗೆ - ಇನ್ನು 1 ಸ್ಥಾನಕ್ಕೆ 5 ತಂಡಗಳ ನಡುವೆ ಬಿಗ್ ಫೈಟ್, ಯಾರಿಗಿದೆ ಬೆಸ್ಟ್ ಚಾನ್ಸ್?

ಚೆನ್ನೈ: ಈ ಬಾರಿ ಐಪಿಎಲ್‌ನ 4 ಪ್ಲೇ-ಆಫ್‌ ಸ್ಥಾನಗಳ ಪೈಕಿ 3 ಸ್ಥಾನ ಭರ್ತಿಯಾಗಿದ್ದು, ಇನ್ನೊಂದು ಸ್ಥಾನಕ್ಕೆ 5 ತಂಡಗಳ ನಡುವೆ ಪೈಪೋಟಿಯಿವೆ. ಈ ಐದು ತಂಡಗಳ ಪೈಕಿ ಯಾವ ತಂಡಕ್ಕೆ ಹೆಚ್ಚಿನ ಚಾನ್ಸ್ ಇದೆ ನೋಡೋಣ ಬನ್ನಿ.

 

Read Full Story

11:10 AM (IST) May 19

ಅಲ್ಪಸಂಖ್ಯಾತರ ಹಕ್ಕು ಮೊಟಕೆಂದ ನೆದರ್ಲೆಂಡ್‌ಗೆ ಅವರದ್ದೇ ನೆಲದಲ್ಲಿ ಭಾರತ ತರಾಟೆ!

ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಕುಸಿತದ ಬಗ್ಗೆ ಡಚ್ ಪ್ರಧಾನಿ ರಾಬ್ ಜೆಟ್ಟನ್ ವ್ಯಕ್ತಪಡಿಸಿದ ಕಳವಳವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಭಾರತದ ವೈವಿಧ್ಯಮಯ ಪ್ರಜಾಪ್ರಭುತ್ವದ ಬಗ್ಗೆ ಅರಿವಿನ ಕೊರತೆಯಿಂದ ಈ ಹೇಳಿಕೆ ಬಂದಿದೆ ಎಂದು ಭಾರತ ತಿರುಗೇಟು ನೀಡಿದೆ.

Read Full Story

10:31 AM (IST) May 19

Noida Dowry Death Case - 50 ಲಕ್ಷದ ಚಿನ್ನ, ಸ್ಕಾರ್ಪಿಯೋ ಕಾರು ಕೊಟ್ಟರೂ ತೀರದ ವರದಕ್ಷಿಣೆ ದಾಹ!

ನೋಯ್ಡಾದಲ್ಲಿ 24 ವರ್ಷದ ದೀಪಿಕಾ ಎಂಬ ನವವಿವಾಹಿತೆ ವರದಕ್ಷಿಣೆ ಕಿರುಕುಳದಿಂದಾಗಿ ಆತ್ಮ೧ಹತ್ಯೆ . ಮದುವೆಯಲ್ಲಿ ಸ್ಕಾರ್ಪಿಯೋ ಕಾರು, 50 ಲಕ್ಷದ ಚಿನ್ನ ನೀಡಿದ್ದರೂ, ಫಾರ್ಚುನರ್‌ ಕಾರು ಹಾಗೂ ಹೆಚ್ಚುವರಿ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದು, ಪತಿ, ಮಾವನನ್ನು ಬಂಧಿಸಲಾಗಿದೆ.

Read Full Story

09:37 AM (IST) May 19

CSK ಪರ ಆಡಿದ ಮೊದಲ ಸೀಸನ್‌ನಲ್ಲೇ 13 ವರ್ಷಗಳಿಂದ ಧೋನಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಸಂಜು ಸ್ಯಾಮ್ಸನ್!

ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಸಂಜು ಸ್ಯಾಮ್ಸನ್, ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ಎಂ.ಎಸ್. ಧೋನಿಯ 13 ವರ್ಷಗಳ ದಾಖಲೆಯನ್ನು ಮುರಿದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ವೈಯಕ್ತಿಕ ಸಾಧನೆಯ ಹೊರತಾಗಿಯೂ, ಸಿಎಸ್‌ಕೆ ತಂಡವು ಹೈದರಾಬಾದ್ ವಿರುದ್ಧ ಸೋಲುಂಡು ಪ್ಲೇ ಆಫ್ ಹಾದಿಯನ್ನು ಕಠಿಣ ಮಾಡಿಕೊಂಡಿದೆ.
Read Full Story

09:13 AM (IST) May 19

IPL 2026 - ನಿನ್ನೆ ನಡೆದ ಸಿಎಸ್‌ಕೆ-ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಹೈವೋಲ್ಟೇಜ್ ಮ್ಯಾಚ್ ಗೆದ್ದಿದ್ದು ಯಾರು?

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಐಪಿಎಲ್ ಪ್ಲೇ-ಆಫ್‌ಗೆ ಅಧಿಕೃತವಾಗಿ ಪ್ರವೇಶಿಸಿದೆ. ಈ ಸೋಲಿನೊಂದಿಗೆ ಸಿಎಸ್‌ಕೆ ತಂಡದ ಪ್ಲೇ-ಆಫ್ ಕನಸು ಬಹುತೇಕ ಅಂತ್ಯಗೊಂಡಿದ್ದು, ಇಶಾನ್‌ ಕಿಶನ್‌ ಅವರ ಅರ್ಧಶತಕ ಹೈದರಾಬಾದ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
Read Full Story

08:36 AM (IST) May 19

USA Vs China - ಪ್ರಾಬಲ್ಯಕ್ಕಾಗಿ ಗುದ್ದಾಡುವ ಬದಲು ವಿಶ್ವವನ್ನೇ 2 ತುಂಡಾಗಿಸಿ ಹಂಚಿಕೊಂಡು ಆಳುವ ಇಂಗಿತ ಟ್ರಂಪ್‌, ಕ್ಸಿಗೆ!

ಇತ್ತೀಚಿನ ಟ್ರಂಪ್-ಕ್ಸಿ ಭೇಟಿಯು, ಅಮೆರಿಕ ಮತ್ತು ಚೀನಾ ಜಾಗತಿಕ ಪ್ರಾಬಲ್ಯಕ್ಕಾಗಿ ಕಿತ್ತಾಡುವ ಬದಲು ವಿಶ್ವವನ್ನು ಹಂಚಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಈ ಅಘೋಷಿತ ಅಧಿಕಾರ ಹಂಚಿಕೆಯು ಭಾರತದಂತಹ ದೇಶಗಳಿಗೆ ದೊಡ್ಡ ಸವಾಲನ್ನು ಒಡ್ಡಿದ್ದು, ಯಾರ ಪರ ನಿಲ್ಲಬೇಕೆಂಬ ಗೊಂದಲವನ್ನು ಸೃಷ್ಟಿಸಿದೆ.
Read Full Story

08:19 AM (IST) May 19

ವಾರದಲ್ಲಿ 2ನೇ ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ! ಬೆಂಗಳೂರು ಸೇರಿದಂತೆ ಮಹಾನಗರಗಳ ಇಂಧನ ದರ ಹೀಗಿದೆ

ಕಳೆದ ಒಂದು ವಾರದಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ ಸುಮಾರು 90 ಪೈಸೆ ಹೆಚ್ಚಳವಾಗಿದೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆ ಇದಕ್ಕೆ ಕಾರಣವಾಗಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 106 ರೂ. ಗಡಿ ದಾಟಿದೆ. ಇತರ ನಗರಗಳ ಮಾಹಿತಿ ಇಲ್ಲಿದೆ.

Read Full Story

More Trending News