LIVE NOW
Published : Jul 19, 2026, 07:41 AM ISTUpdated : Jul 19, 2026, 09:37 PM IST

National News Live: ಹಾಲಿವುಡ್ ದಿಗ್ಗಜನ ಬಾಯಲ್ಲಿ RRR ಮಾತು - ರಾಜಮೌಳಿಗೆ ಹ್ಯಾಟ್ಸಾಫ್ ಹೇಳಿದ ಕ್ರಿಸ್ಟೋಫರ್ ನೋಲನ್

ಸಾರಾಂಶ

ನವದೆಹಲಿ (ಜು.19): ಅಯೋಧ್ಯೆ ಸೇರಿ ಉತ್ತರ ಭಾರತದ ದೇಗುಲಗಳಲ್ಲಿ ಭಾರೀ ಪ್ರಮಾಣದ ಹುಂಡಿ ಕಳವು ಪ್ರಕರಣ ಬಯಲಾದ ಬೆನ್ನಲ್ಲೇ, ತಮಿಳುನಾಡಿನ ದಿಂಡಿಗಲ್ ಜಿಲ್ಲೆ ಪಳನಿಯ ಖ್ಯಾತ ಶ್ರೀ ದಂಡಾಯುಧ ಪಾಣಿ ಸ್ವಾಮಿ ದೇಗುಲದ ಜಮೀನನ್ನೇ ಆಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.100 ಕೋಟಿ ಮೌಲ್ಯದ ಆಸ್ತಿಯನ್ನು 2 ಕೋಟಿ ಮೊತ್ತಕ್ಕೆ ರೆಜಿಸ್ಟರ್ ಮಾಡಿಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಬ್ ರಿಜಿಸ್ಟ್ರಾರ್ ಸೇರಿ ಹಲವು ಅಧಿಕಾರಿಗಳು, ಬ್ರೋಕರ್‌ಗಳ ಮನೆ ಮೇಲೆ ಶನಿವಾರ ಸಿಬಿ-ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

09:37 PM (IST) Jul 19

ಹಾಲಿವುಡ್ ದಿಗ್ಗಜನ ಬಾಯಲ್ಲಿ RRR ಮಾತು - ರಾಜಮೌಳಿಗೆ ಹ್ಯಾಟ್ಸಾಫ್ ಹೇಳಿದ ಕ್ರಿಸ್ಟೋಫರ್ ನೋಲನ್

Nolan Praises RRR: ಇಡೀ ಜಗತ್ತೇ ನೋಲನ್ ಅವರನ್ನು ಹೊಗಳುತ್ತಿದ್ದರೆ, ಕ್ರಿಸ್ಟೋಫರ್ ನೋಲನ್ ಭಾರತೀಯ ಸಿನಿಮಾವನ್ನು ಮೆಚ್ಚಿ ಮಾತನಾಡಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ.

Read Full Story

08:54 PM (IST) Jul 19

ಒಂದೇ ಚಾರ್ಜ್‌ನಲ್ಲಿ 500 ಕಿ.ಮೀ.ಗೂ ಅಧಿಕ ಮೈಲೇಜ್ ನೀಡುವ 3 ಹೊಸ ಇವಿ; ಬೆಲೆ ಎಷ್ಟು?

Upcoming Electric Cars India 2026: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ 500 ಕಿಮೀಗೂ ಅಧಿಕ ಮೈಲೇಜ್ ನೀಡುವ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಪ್ರವೇಶಿಸಲಿವೆ. ಮಹಿಂದ್ರಾ, ಟಾಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ತಮ್ಮ ಬಜೆಟ್ ಫ್ರೆಂಡ್ಲಿ ಹಾಗೂ ಪ್ರೀಮಿಯಂ ಇವಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿವೆ.

Read Full Story

08:25 PM (IST) Jul 19

YASH - ದೆಹಲಿ 'ರಾಮಾಯಣ' ಈವೆಂಟ್'ನಲ್ಲಿ ಯಶ್ ಪುಟ್ಟ ಎಡವಟ್ಟು; ಆದ್ರೂ ಎಲ್ರೂ 'ರಾಕಿ ಬಾಯ್' ಮೆಚ್ಚಿ ಕೊಂಡಾಡಿದ್ದು ಈ ಕಾರಣಕ್ಕೆ!

ದೆಹಲಿಯ ಈ ಸಮಾರಂಭದಲ್ಲಿ ಯಶ್ ಅವರ ಸರಳತೆ ಮತ್ತು ಪ್ರಾಮಾಣಿಕತೆ ಎಲ್ಲರ ಹೃದಯ ಗೆದ್ದಿದೆ. ಸಣ್ಣ ಭಾಷಾ ಎಡವಟ್ಟು ಆದರೂ, ಅವರು ತೋರಿದ ಆಪ್ತತೆ ಮತ್ತು ಸಿನಿಮಾ ಮೇಲಿನ ಅವರ ಬದ್ಧತೆ ‘ರಾಮಾಯಣ’ ಚಿತ್ರದ ಮೇಲಿನ ನಿರೀಕ್ಷೆಯನ್ನು ಹತ್ತರಷ್ಟು ಹೆಚ್ಚಿಸಿದೆ. ರಾಕಿಂಗ್ ಸ್ಟಾರ್ ಈಗ ರಾವಣನಾಗಿ ವಿಶ್ವವನ್ನೇ ಗೆಲ್ಲಲು ಸಜ್ಜಾಗಿದ್ದಾರೆ!

Read Full Story

07:32 PM (IST) Jul 19

'ರಾಮಾಯಣ' ಕಾರ್ಯಕ್ರಮದಲ್ಲಿ ನಟಿ ರಕುಲ್ ಕದ್ದದ್ದು ಎಲ್ಲರ ಗಮನ - ಕಾರಣ ಇದೇ!

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಕಾರ್ಯಕ್ರಮದಲ್ಲಿ ಶೂರ್ಪಣಖಿ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಸಾಂಪ್ರದಾಯಿಕ ಲುಕ್ ಮೂಲಕ ಎಲ್ಲರ ಗಮನ ಸೆಳೆದರು.

Read Full Story

07:17 PM (IST) Jul 19

3 ಕೋಟಿ ರೂ.ಕಾರಲ್ಲಿ ಮನೆಗೆಲಸ ಮಾಡಲು ಬರುವಾಕೆ! ಜಾಲತಾಣದಲ್ಲಿ ಈಕೆಯದ್ದೇ ಹವಾ

ಶ್ರೀಮಂತ ಮಹಿಳೆಯೊಬ್ಬಳು ತನ್ನ 3 ಕೋಟಿ ರೂಪಾಯಿ ಮೌಲ್ಯದ ಬೆಂಟ್ಲಿ ಕಾರಿನಲ್ಲಿ ಬಂದು ರೆಸ್ಟೋರೆಂಟ್‌ಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾಳೆ. ಈಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತನ್ನ ಸಂಪತ್ತಿನ ಹೊರತಾಗಿಯೂ ಕೆಲಸ ಮಾಡಲು ಇಷ್ಟಪಡುವ ಈಕೆಯ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Read Full Story

06:26 PM (IST) Jul 19

Rakul Preet Singh - "ಇದು ಕೇವಲ ಸಿನಿಮಾ ಅಲ್ಲ'.. 'ಶೂರ್ಪನಖಿ' ಪಾತ್ರಧಾರಿ ರಾಮಾಯಣ ಚಿತ್ರದ ಬಗ್ಗೆ ಹೇಳಿರೋ ಮಾತೀಗ ವೈರಲ್!

ನಿರ್ದೇಶಕ ನಿತೇಶ್ ತಿವಾರಿ ಅವರ ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಅವರು ರಾವಣನ ತಂಗಿ, ಶಕ್ತಿಶಾಲಿ ಮತ್ತು ತೀಕ್ಷ್ಣ ಸ್ವಭಾವದ 'ಶೂರ್ಪನಖಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕುಲ್ ರಾಮಾಯಣದ ಬಗ್ಗೆ ಆಡಿರುವ ಮಾತೀಗ ವೈರಲ್ ಆಗುತ್ತಿದೆ.

Read Full Story

06:21 PM (IST) Jul 19

ಮಗ ವಿಹಾನ್ ಪುಟ್ಟ ಕೈಗೆ ಮುತ್ತಿಟ್ಟ ಕತ್ರಿನಾ - ಅಪರೂಪದ ಫೋಟೋಸ್ ನೋಡಿ ಅಭಿಮಾನಿಗಳು ಫಿದಾ

ನಟಿ ಕತ್ರಿನಾ ಕೈಫ್ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಪತಿ ವಿಕ್ಕಿ ಕೌಶಲ್ ಮತ್ತು ಮಗ ವಿಹಾನ್ ಜೊತೆಗಿನ ಅಪರೂಪದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

Read Full Story

05:51 PM (IST) Jul 19

ಸಮುದ್ರದಲ್ಲಿ ತೇಲಿ ಬಂದ 150 ಚೀಲಗಳಿಗಾಗಿ ಹೈಡ್ರಾಮಾ; ಮೀನುಗಾರರಿಂದ ಪ್ರತಿಭಟನೆ, ಆಕ್ರೋಶ

ವಿಝಿಂಜಂನಲ್ಲಿ ಸಮುದ್ರದಿಂದ ತಂದ 150 ಚೀಲಗಳಿಗಾಗಿ ಹೈಡ್ರಾಮಾ! ನಷ್ಟಪರಿಹಾರಕ್ಕಾಗಿ ಮೀನುಗಾರರು ಪಟ್ಟು ಹಿಡಿದಿದ್ದು, ಕಂಪನಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಹಿಂದಿನ ಕಾರಣವೇನು?

Read Full Story

05:32 PM (IST) Jul 19

ಯಶ್‌ಗೆ ಚಪ್ಪಾಳೆ, ಕಿಯಾರಾಗೆ ಮಾತ್ರ ಟ್ರೋಲ್ - ತಾಯಿಯಾದ ಮೇಲೆ ಇದೆಲ್ಲಾ ಬೇಕಾ ಅಂತಿದ್ದಾರೆ ನೆಟ್ಟಿಗರು!

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ 'ತಬಾಹಿ' ಹಾಡಿನಲ್ಲಿ ಕಿಯಾರಾ ಅಡ್ವಾಣಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ಈಗ ಪರ-ವಿರೋಧ ಚರ್ಚೆಗಳು ಜೋರಾಗಿವೆ.

Read Full Story

05:29 PM (IST) Jul 19

'ಮಾವುಗಳ ರಾಜ' ಖಾನ್​ ಸಾಹೇಬ್ರು - ನರೇಂದ್ರ ಮೋದಿ, ಐಶ್ವರ್ಯ ರೈ, ತೆಂಡೂಲ್ಕರ್​ ಸೇರಿ ಒಂದೇ ಮರದಲ್ಲಿ 135 ತಳಿಗಳ ಅಚ್ಚರಿ

84 ವರ್ಷದ ಪದ್ಮಶ್ರೀ ಪುರಸ್ಕೃತ ಕಲೀಮುಲ್ಲಾ ಖಾನ್, 'ಭಾರತದ ಮಾವಿನ ಮನುಷ್ಯ' ಎಂದೇ ಖ್ಯಾತರು. ತಮ್ಮ 125 ವರ್ಷ ಹಳೆಯ ಮರದಲ್ಲಿ ಕಸಿ ತಂತ್ರದ ಮೂಲಕ 350ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣುಗಳನ್ನು ಬೆಳೆದು, ವಿಜ್ಞಾನ ಲೋಕವನ್ನೇ ಬೆರಗುಗೊಳಿಸಿದ್ದಾರೆ. ಅವರ ಈ ಸಾಧನೆಯು ಪರಿಶ್ರಮ ಮತ್ತು ಪ್ರಕೃತಿಯೊಂದಿಗಿನ ಅವರ ಆಳವಾದ ಸಂಬಂಧಕ್ಕೆ ಸಾಕ್ಷಿಯಾಗಿದೆ.
Read Full Story

05:19 PM (IST) Jul 19

Mouni Roy - ಮತ್ತೊಂದು ಲವ್ ಸ್ಟೋರಿಯಲ್ಲಿ ಸಿಕ್ಕಬಿದ್ದ ಮೌನಿ ರಾಯ್; ಮತ್ತೆ ಬಂದ 15 ವರ್ಷದ ಹಿಂದಿನ ಗೆಳೆಯ?

ನಟಿ ಮೌನಿ ರಾಯ್ ಮತ್ತೊಮ್ಮೆ ಡೇಟಿಂಗ್ ವದಂತಿಗಳಿಂದ ಸುದ್ದಿಯಲ್ಲಿದ್ದಾರೆ. ಪತಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ಘೋಷಣೆ ಬೆನ್ನಲ್ಲೇ, ಇದೀಗ ಅವರ ಹೆಸರು 15 ವರ್ಷಗಳ ಹಳೆಯ ಸ್ನೇಹಿತ, ನಟ ಅರ್ಜುನ್ ಬಿಜ್ಲಾನಿ ಜೊತೆ ಕೇಳಿಬರುತ್ತಿದೆ.

Read Full Story

04:13 PM (IST) Jul 19

ಬಾಟಲಿ ಓಪನ್ ಮಾಡಿದ್ಮೇಲೆ ಎಷ್ಟು ದಿನ ಬಳಸಬೇಕು? ಎಕ್ಸ್‌ಪೈರಿ ಡೇಟ್ ಇನ್ನೂ ಇದೆ ಎಂದು ಬಳಸಿದ್ರೆ ಅಷ್ಟೇ ಕತೆ

ಮನೆಯಲ್ಲಿರುವ ಹಳೆಯ ಔಷಧಿಗಳನ್ನು ಬಳಸುವ ಮುನ್ನ ಎಚ್ಚರ. ಔಷಧಿಯ ಬಾಟಲಿ ಒಮ್ಮೆ ತೆರೆದ ನಂತರ ಅದರ ಎಕ್ಸ್‌ಪೈರಿ ಡೇಟ್ ಬದಲಾಗುತ್ತದೆ, ಇದು ಗಾಳಿ ಮತ್ತು ಬ್ಯಾಕ್ಟೀರಿಯಾಗಳಿಗೆ ತೆರೆದುಕೊಳ್ಳುವುದರಿಂದ ಅದರ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಅದರಲ್ಲೂ ಅಂಟಿಬಯೋಟಿಕ್ ಸಿರಪ್ ಮತ್ತು ಐ ಡ್ರಾಪ್ಸ್ ಗಳಂತಹ ಔಷಧಿಗಳನ್ನು ನಿಗದಿತ ಅವಧಿಯ ನಂತರ ಬಳಸುವುದು ಆರೋಗ್ಯಕ್ಕೆ ಹಾನಿಕಾರಕ.
Read Full Story

04:06 PM (IST) Jul 19

ಬಟ್ಟೆ ಬಿಚ್ಚಿ, ಇಲ್ಲಾಂದ್ರೆ 500 ರೂ. ಕೊಡಿ - ಶಿಕ್ಷಕಿಯ ನೀಚತನಕ್ಕೆ ವಿದ್ಯಾರ್ಥಿನಿಯರ ಕಣ್ಣೀರು

ಸರ್ಕಾರಿ ಶಾಲೆಯೊಂದರಲ್ಲಿ, ಶಿಕ್ಷಕಿಯೊಬ್ಬರು ತಮ್ಮ 500 ರೂಪಾಯಿ ಕಳೆದುಕೊಂಡಿದ್ದಕ್ಕೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದ್ದು, ಘಟನೆಯ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

Read Full Story

02:11 PM (IST) Jul 19

ಮಹಿಳೆಯಿಂದ ಇನ್ನೊಂದು ಕೊಲೆ - ಹಾಸಿಗೆಯಲ್ಲಿ ಹಾವು ಬಿಟ್ಟು ಪತಿಯನ್ನೇ ಮುಗಿಸಿದಳು! ಅಕ್ರಮ ಸಂಬಂಧಕ್ಕೆ ಗಂಡ ಬಲಿ

ಮೀರತ್‌ನಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದಾಳೆ. ಸಾವನ್ನು ಆಕಸ್ಮಿಕವೆಂದು ಬಿಂಬಿಸಲು ಹಾಸಿಗೆಯ ಮೇಲೆ ವಿಷಕಾರಿ ಹಾವನ್ನು ಬಿಟ್ಟಿದ್ದು, 20 ಲಕ್ಷ ವಿಮೆ ಹಣ ಹಾಗೂ ಅಕ್ರಮ ಸಂಬಂಧ ಮುಂದುವರೆಸುವುದೇ ಈ ಕೃತ್ಯದ ಹಿಂದಿನ ಉದ್ದೇಶವಾಗಿತ್ತು.
Read Full Story

02:03 PM (IST) Jul 19

Yash- Ramayana - ರಾಮಾಯಣ ಈವೆಂಟ್‌ನಲ್ಲಿ 'ಸೀತೆ' ಸಾಯಿ ಪಲ್ಲವಿ ಬಗ್ಗೆ 'ರಾವಣ' ಯಶ್ ಹೇಳಿದ್ದೇನು?

ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ನಮಿತ್ ಮಲ್ಹೋತ್ರಾ ಅವರ ಕನಸಿನ ಕೂಸು 'ರಾಮಾಯಣ', ಭಾರತದ ಸಂಸ್ಕೃತಿಯನ್ನು ವಿಶ್ವದ ಪ್ರತಿ ಮೂಲೆಯಲ್ಲೂ ಬೆಳಗಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಈ ಜಾಗತಿಕ ಪಯಣಕ್ಕೆ ಈಗಲೇ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Read Full Story

01:28 PM (IST) Jul 19

Yash-Ramayana - ರಾಮಾಯಣ ಸಿನಿಮಾದಿಂದ ನನಗೆ ಹಿಂದಿ ಕಲಿಯುವ ಅದ್ಭುತ ಅವಕಾಶ ಸಿಕ್ಕಿತು - ರಾಕಿಂಗ್ ಸ್ಟಾರ್ ಯಶ್

ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಂಡಿರುವ ಯಶ್, ವೇದಿಕೆಯ ಮೇಲೆ ನಿಂತು ಅಚ್ಚುಕಟ್ಟಾದ ಹಿಂದಿಯಲ್ಲಿ ಮಾತನಾಡಿದ ಅವರು, "ನಮಸ್ಕಾರ, ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಹಾಗಾಗಿ ನಾನೂ ಕೂಡ ಪ್ರಯತ್ನ ಪಡುತ್ತೇನೆ" ಎಂದರು.

Read Full Story

12:41 PM (IST) Jul 19

ಹಾಕಿದ ಬಂಡವಾಳ ಒಂದೇ ತಿಂಗಳಲ್ಲಿ ವಾವಸ್​ - ಕೆಲ್ಸ ಬಿಟ್ಟು ಟೀ ಅಂಗಡಿ ಇಟ್ಟ ಯುವಕನ ಇನ್​ಸ್ಪೈರಿಂಗ್​ ಸ್ಟೋರಿ

₹38,000 ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿ, ಸ್ವಂತ ಚಹಾ ಅಂಗಡಿ ಆರಂಭಿಸಿದ ಯುವಕನೊಬ್ಬನ ಸ್ಪೂರ್ತಿದಾಯಕ ಕಥೆಯಿದು. ಕೇವಲ ₹2 ಲಕ್ಷ ಹೂಡಿಕೆಯಿಂದ ತಿಂಗಳಿಗೆ ₹1 ಲಕ್ಷ ನಿವ್ವಳ ಲಾಭ ಗಳಿಸಿ, ಇದೀಗ ತನ್ನ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.

Read Full Story

12:32 PM (IST) Jul 19

ಟ್ಯಾಟೂ ಪಾರ್ಲರ್‌ನ ಸಣ್ಣ ನಿರ್ಲಕ್ಷ್ಯಕ್ಕೆ ಯುವತಿಯ ಬದುಕು ಕತ್ತಲು; ಹಚ್ಚೆ ಹಾಕಿಸಿಕೊಂಡ ಬೆನ್ನಲ್ಲೇ HIV ಪಾಸಿಟಿವ್!

ದೆಹಲಿಯ ಟ್ಯಾಟೂ ಪಾರ್ಲರ್‌ನಲ್ಲಿ ಹಚ್ಚೆ ಹಾಕಿಸಿಕೊಂಡ ಕಾನ್ಪುರದ ಮಹಿಳೆಯೊಬ್ಬರಿಗೆ ಎಚ್‌ಐವಿ ಸೋಂಕು ತಗುಲಿದೆ. ಸೋಂಕಿತ ಸೂಜಿಯ ಬಳಕೆಯೇ ಇದಕ್ಕೆ ಕಾರಣವೆಂದು ವೈದ್ಯರು ಶಂಕಿಸಿದ್ದು, ಮಹಿಳೆಗೆ ಎಆರ್‌ಟಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story

12:11 PM (IST) Jul 19

Ramayana-Pratham Sankalp - ಯಶ್ & ಟೀಂ ಬಿಗ್ ಪ್ಲಾನ್.. 'ರಾಮಾಯಣ' ಸಿನಿಮಾದ 'ಪ್ರಥಮ ಸಂಕಲ್ಪ' ಎಂದರೇನು?

ನಮಿತ್ ಮಲ್ಹೋತ್ರಾರ  ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿ-ನೆಗ್ (DNEG) ಮತ್ತು ನಟ ಯಶ್‌ ಒಡೆತನದ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ‘ರಾಮಾಯಣ’ ಸಿನಿಮಾ ರೂಪುಗೊಳ್ಳುತ್ತಿದ್ದು, ಇದು ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ. ನಿತೇಶ್ ತಿವಾರಿ ನಿರ್ದೇಶಕರು..

Read Full Story

12:05 PM (IST) Jul 19

EPFO Alert - ಪಿಎಫ್ ಖಾತೆಯಲ್ಲಿ ತಕ್ಷಣವೇ ಪ್ರೊಫೈಲ್ ಫೋಟೋ ಅಪ್‌ಡೇಟ್ ಮಾಡಿ; ಇಲ್ಲದಿದ್ದರೆ ಕ್ಲೇಮ್ ಕಷ್ಟವಾಗಬಹುದು

ಇಪಿಎಫ್‌ಒ ಸದಸ್ಯರು ತಮ್ಮ ಪಿಎಫ್ ಖಾತೆಯ ಪ್ರೊಫೈಲ್ ಫೋಟೋವನ್ನು ಅಪ್‌ಡೇಟ್‌ ಮಾಡುವುದು ಅತ್ಯಗತ್ಯ. ಇ-ನಾಮಿನೇಷನ್, ಪಿಎಫ್ ಕ್ಲೇಮ್‌ನಂತಹ ಆನ್‌ಲೈನ್ ಸೇವೆಗಳ ಪರಿಶೀಲನೆಗೆ ಇದು ಸಹಕಾರಿಯಾಗಿದೆ. ಮನೆಯಲ್ಲೇ ಕುಳಿತು ಯುನಿಫೈಡ್ ಮೆಂಬರ್ ಪೋರ್ಟಲ್ ಮೂಲಕ ಫೋಟೋವನ್ನು ಸುಲಭವಾಗಿ ಬದಲಾಯಿಸಬಹುದು.

Read Full Story

11:41 AM (IST) Jul 19

ಗೋಲುಗಳ ಸುರಿಮಳೆ! ಫ್ರಾನ್ಸ್ ಮಣಿಸಿದ ಇಂಗ್ಲೆಂಡ್‌ಗೆ ಫಿಫಾ ವಿಶ್ವಕಪ್‌ನಲ್ಲಿ 3ನೇ ಸ್ಥಾನ!

ಫಿಫಾ ವಿಶ್ವಕಪ್ 2026ರ ಮೂರನೇ ಸ್ಥಾನಕ್ಕಾಗಿ ನಡೆದ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್, ಫ್ರಾನ್ಸ್ ತಂಡವನ್ನು 6-4 ಗೋಲುಗಳಿಂದ ಸೋಲಿಸಿತು. ಇಂಗ್ಲೆಂಡ್ ಪರ ಬುಕಾಯೊ ಸಾಕಾ ಹ್ಯಾಟ್ರಿಕ್ ಸಾಧಿಸಿದರೆ, ಫ್ರಾನ್ಸ್‌ನ ಕಿಲಿಯನ್ ಎಂಬಾಪೆ ಎರಡು ಗೋಲು ಗಳಿಸಿ ವಿಶ್ವಕಪ್ ಇತಿಹಾಸದಲ್ಲಿ ಸಾರ್ವಕಾಲಿಕ ಟಾಪ್ ಸ್ಕೋರರ್ ಆದರು.
Read Full Story

11:24 AM (IST) Jul 19

ಪತಂಜಲಿ ಸಾಮ್ರಾಜ್ಯದ ಮೇಲೆ ಕುಮಾರ್ ವಿಶ್ವಾಸ್ ಕಣ್ಣು; ಉತ್ತರಾಧಿಕಾರಿ ಪಟ್ಟಕ್ಕೆ ಬಾಬಾ ರಾಮದೇವ್ ಇಟ್ಟ ಷರತ್ತೇನು?

'ರಾಮಾಯಣಂ' ಚಿತ್ರದ ಕಾರ್ಯಕ್ರಮದಲ್ಲಿ ಯೋಗ ಗುರು ಬಾಬಾ ರಾಮದೇವ್ ಮತ್ತು ಕವಿ ಕುಮಾರ್ ವಿಶ್ವಾಸ್ ನಡುವೆ ಸ್ವಾರಸ್ಯಕರ ಮಾತುಕತೆ ನಡೆದಿದೆ. ಪತಂಜಲಿ ಸಂಸ್ಥೆಯ ಉತ್ತರಾಧಿಕಾರಿಯಾಗಲು ಕುಮಾರ್ ವಿಶ್ವಾಸ್ ಬಯಸಿದ್ದಾರೆ ಎಂದು ರಾಮದೇವ್ ತಮಾಷೆ ಮಾಡಿದ್ದಾರೆ.

Read Full Story

11:00 AM (IST) Jul 19

ಒಂದೂವರೆ ವರ್ಷದ ಪ್ರಶಸ್ತಿ ಬರ ನೀಗಿಸಿಕೊಂಡ ಪಿವಿ ಸಿಂಧು - ಜಪಾನ್ ಓಪನ್ ಮುಡಿಗೇರಿಸಿಕೊಂಡ ಭಾರತದ ಮೊದಲ ಷಟ್ಲರ್‌!

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಜಪಾನ್ ಓಪನ್ 2026 ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, ಫೈನಲ್‌ನಲ್ಲಿ ಅಕಾನೆ ಯಮಗುಚಿ ಅವರನ್ನು ಸೋಲಿಸಿ 19 ತಿಂಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡರು.
Read Full Story

09:45 AM (IST) Jul 19

ಗೌತಮ್‌ ಗಂಭೀರ್‌ರನ್ನು ಕೋಚ್ ಆಗಿ ಟೀಂ ಇಂಡಿಯಾಗೆ ಕರೆತಂದಿದ್ದೇ ರೋಹಿತ್ ಶರ್ಮಾ! ಆಗೊಂದು ಡಿಮ್ಯಾಂಡ್ ಇಟ್ಟಿದ್ದ ಗೌತಿ

ಟೀಂ ಇಂಡಿಯಾ ಕೋಚ್ ಆಗುವಂತೆ ಗೌತಮ್ ಗಂಭೀರ್ ಅವರನ್ನು ರೋಹಿತ್ ಶರ್ಮಾ ಆಹ್ವಾನಿಸಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ ಇಬ್ಬರ ನಡುವಿನ ಸಂಬಂಧ ಹಳಸಿದ್ದು, ಪರಸ್ಪರ ನಂಬಿಕೆ ಮುರಿದುಬಿದ್ದಿದೆ ಎಂದು ವರದಿಗಳು ಹೇಳುತ್ತಿವೆ. ರೋಹಿತ್ ಅವರ ನಿವೃತ್ತಿ ಚಿಂತನೆ ಮತ್ತು ಹೇಳಿಕೆಗಳು ಈ ಬಿರುಕಿಗೆ ಕಾರಣವಾಗಿವೆ.
Read Full Story

08:54 AM (IST) Jul 19

ನೇಪಾಳ ಎಮ್ಮೆಗಳಿಗೆ ಭಾರತದ ಕೋಣಗಳ ವೀರ್ಯದಾನ!

ಭಾರತವು ನೇಪಾಳಕ್ಕೆ 50,000 ಡೋಸ್ ಮುರ್ರಾ ಕೋಣಗಳ ವೀರ್ಯವನ್ನು ದಾನವಾಗಿ ನೀಡಿದೆ. ಈ ಯೋಜನೆಯು ನೇಪಾಳದಲ್ಲಿ ಉನ್ನತ ತಳಿಯ ಎಮ್ಮೆಗಳನ್ನು ಉತ್ಪಾದಿಸಿ, ಹಾಲಿನ ಇಳುವರಿಯನ್ನು ಹೆಚ್ಚಿಸುವ ಮೂಲಕ ರೈತರ ಆರ್ಥಿಕ ಪ್ರಗತಿಗೆ ನೆರವಾಗುವ ಗುರಿ ಹೊಂದಿದೆ.
Read Full Story

08:52 AM (IST) Jul 19

'ವೈಶು ಕಥೆ ಮುಗಿಯಿತು' - ಮಾಜಿ ಪ್ರೇಯಸಿಯ ಚುಚ್ಚಿಚುಚ್ಚಿ ಕೊಂದ! ಲೈವ್‌ನಲ್ಲೇ ಚೀರಾಟ ಕೇಳಿಸಿಕೊಂಡ ಭಾವಿ ಪತಿ

ಮಹಾರಾಷ್ಟ್ರದ ನಾಸಿಕ್‌ನಲ್ಲಿ, ತನ್ನ ಮಾಜಿ ಪ್ರೇಯಸಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯವಾದ ಕಾರಣಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ, ಯುವಕನೊಬ್ಬ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಕೊಲೆಯಾಗುವ ಮುನ್ನ ಯುವತಿ ತನ್ನ ಭಾವಿ ಪತಿಗೆ ಫೋನ್ ಮಾಡಿದ್ದು, ಆತ ಇಡೀ ವಾಗ್ವಾದವನ್ನು ಫೋನ್‌ನಲ್ಲಿ ಕೇಳಿಸಿಕೊಂಡಿದ್ದಾನೆ.

Read Full Story

08:21 AM (IST) Jul 19

ಅರ್ಜೆಂಟೀನಾ ಅಬ್ಬರ Vs ಸ್ಪೇನ್ ಗೋಡೆ; FIFA ವಿಶ್ವಕಪ್ ಫೈನಲ್‌ನಲ್ಲಿ ಗೆಲ್ಲೋರು ಯಾರು?

23ನೇ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಮತ್ತು ಸ್ಪೇನ್ ಮುಖಾಮುಖಿಯಾಗಲಿವೆ. ಲಿಯೋನಲ್ ಮೆಸ್ಸಿ ನೇತೃತ್ವದ ಅನುಭವಿ ಅರ್ಜೆಂಟೀನಾ ತಂಡದ ಅಬ್ಬರದ ಆಟಕ್ಕೆ, ಲ್ಯಾಮಿನೆ ಯಮಲ್ ಎಂಬ ಯುವ ಪ್ರತಿಭೆಯುಳ್ಳ ಸ್ಪೇನ್‌ನ ಬಲಿಷ್ಠ ಡಿಫೆನ್ಸ್ ಸವಾಲೊಡ್ಡಲಿದೆ.
Read Full Story

07:53 AM (IST) Jul 19

₹100 ಕೋಟಿ ಮೌಲ್ಯದ ಆಸ್ತಿ 2 ಕೋಟಿಗೆ ಸೇಲ್‌, ಪಳನಿ ದೇಗುಲದಲ್ಲೂ ಅಕ್ರಮದ ಆರೋಪ

ತಮಿಳುನಾಡಿನ ಪಳನಿ ಶ್ರೀ ದಂಡಾಯುಧ ಪಾಣಿ ಸ್ವಾಮಿ ದೇಗುಲಕ್ಕೆ ಸೇರಿದ ₹100 ಕೋಟಿ ಮೌಲ್ಯದ ಜಮೀನನ್ನು ಕೇವಲ ₹2 ಕೋಟಿಗೆ ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬೃಹತ್ ಹಗರಣದ ಸಂಬಂಧ ಸಬ್‌ ರಿಜಿಸ್ಟ್ರಾರ್‌ ಸೇರಿದಂತೆ ಹಲವರ ಮೇಲೆ ಸಿಬಿ-ಸಿಐಡಿ ದಾಳಿ ನಡೆಸಿದೆ.

Read Full Story

More Trending News