ಪತ್ತನಂತಿಟ್ಟ: ‘ಶಬರಿಮಲೆಯ ಪವಿತ್ರ ಪಂಪಾ ನದಿಯಲ್ಲಿ ಬಟ್ಟೆ ಹಾಗೂ ಚಪ್ಪಲಿಗಳನ್ನು ಎಸೆಯಬೇಡಿ. ಸ್ವಚ್ಛತೆ ಕಾಪಾಡಿ’ ಎಂದು ಕೇರಳ ಗೃಹ ಸಚಿವ ರಮೇಶ್ ಚೆನ್ನಿತಾಲ ಮನವಿ ಮಾಡಿದ್ದಾರೆ. ಶಬರಿಮಲೆಯಲ್ಲಿ ನ.17ರಂದು ನಡೆಯಲಿರುವ ಮಂಡಲಕಲಾ-ಮಕರವಿಳಕ್ಕು ಪೂರ್ವಭಾವಿಯಾಗಿ ನಡೆದ ಸಭೆ ಬಳಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ನದಿಯಲ್ಲಿ ಬಟ್ಟೆ ಮತ್ತು ಚಪ್ಪಲಿಗಳನ್ನು ಎಸೆಯುವ ಯಾವುದೇ ಧಾರ್ಮಿಕ ಅಥವಾ ಸಾಂಪ್ರದಾಯಿಕ ಪದ್ಧತಿ ಇಲ್ಲ. ಪಂಪಾ ನದಿಗೆ ಬಟ್ಟೆ ಮತ್ತು ಚಪ್ಪಲಿಗಳನ್ನು ಎಸೆಯಬೇಡಿ. ಹಲ್ಲುಜ್ಜಿದ ನಂತರ ಉಗುಳಬೇಡಿ. ದಯವಿಟ್ಟು ಸ್ವಚ್ಛತೆ ಕಾಪಾಡಿ’ ಎಂದಿದ್ದಾರೆ.
