Published : Nov 26, 2025, 07:23 AM ISTUpdated : Nov 26, 2025, 11:04 PM IST

India Latest News Live: ನಿಕ್ಕಿ ಭಾಟಿ ಕೇಸ್‌, 500 ಪುಟದ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ ನೋಯ್ಡಾ ಪೊಲೀಸ್‌

ಸಾರಾಂಶ

ನವದೆಹಲಿ: ದೂರದ ಇಥಿಯೋಪಿಯಾದಲ್ಲಿ 120000 ವರ್ಷಗಳ ಬಳಿಕ ಸ್ಫೋಟಿಸಿದ ಹೈಲಿ ಗುಬ್ಬಿ ಜ್ವಾಲಾಮುಖಿ ಸೃಷ್ಟಿಸಿದ ದಟ್ಟ ಹೊಗೆಯಿಂದಾಗಿ ದೆಹಲಿ ಏರ್ಪೋರ್ಟ್‌ನಿಂದ ವಿದೇಶಕ್ಕೆ ತೆರಳಬೇಕಿದ್ದ ಹಲವು ವಿಮಾನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಏಳು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ರದ್ದಾಗಿದ್ದು, 10 ವಿದೇಶಿ ವಿಮಾನಗಳ ಸಂಚಾರ ವಿಳಂಬಗೊಂಡಿದೆ. 

ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟಿಸಿ ಕಾಣಿಸಿಕೊಂಡ ಭಾರೀ ಹೊಗೆಯ ಮೋಡ ಇದೀಗ ಭಾರತದ ಪಶ್ಚಿಮ ಕರಾವಳಿಯಲ್ಲೂ ಕಾಣಿಸಿಕೊಂಡಿದ್ದು, ವಿಮಾನ ಸಂಚಾರಕ್ಕೆ ಸಮಸ್ಯೆ ಸೃಷ್ಟಿಸಿದೆ. ಈಗಾಗಲೇ ಭಾರತದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಜ್ವಾಲಾಮುಖಿಯ ಬೂದಿ ಸಾಗುವ ಮಾರ್ಗದಲ್ಲಿ ಸಾಗದಂತೆ ಎಚ್ಚರಿಕೆ ನೀಡಿದ್ದು, ಹೀಗಾಗಿ ಭಾರತದಲ್ಲಿ ಹಲವು ವಿಮಾನಗಳ ಸಂಚಾರ ವ್ಯತ್ಯಯವಾಗಿದೆ. ಸೋಮವಾರದಿಂದ ಏರ್‌ಇಂಡಿಯಾವು 13 ವಿಮಾನಗಳ ಸಂಚಾರ ಸ್ಥಗಿತಗೊಳಿಸಿದೆ.

11:04 PM (IST) Nov 26

ನಿಕ್ಕಿ ಭಾಟಿ ಕೇಸ್‌, 500 ಪುಟದ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ ನೋಯ್ಡಾ ಪೊಲೀಸ್‌

Nikki Bhatti Murder Noida Police Files 500-Page Chargesheet Reveals Conspiracy ಪೊಲೀಸ್ ತನಿಖೆಯಲ್ಲಿ ಪತಿ ವಿಪಿನ್‌ಗೆ ನಿಕ್ಕಿ ಬೊಟಿಕ್ ನಡೆಸುವುದರ ಬಗ್ಗೆ ಮತ್ತು ಕಾಂಚನ್ ಮನೆಯಲ್ಲಿ ಬ್ಯೂಟಿ ಪಾರ್ಲರ್ ನಡೆಸುವುದರ ಬಗ್ಗೆ ಅತೃಪ್ತರಾಗಿದ್ದರು ಎಂದು ತಿಳಿದುಬಂದಿದೆ.

 

Read Full Story

10:36 PM (IST) Nov 26

'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್

OPPO ಕಂಪನಿಯ ಅಧಿಕಾರಿಗಳ ಪ್ರಕಾರ, ಕೃತಕ ಬುದ್ಧಿಮತ್ತೆ (AI) ಮಾನವ ಉದ್ಯೋಗಗಳಿಗೆ ಪರ್ಯಾಯವಲ್ಲ, ಬದಲಿಗೆ ಕೆಲಸವನ್ನು ಸುಲಭಗೊಳಿಸುವ ಒಂದು ಶಕ್ತಿಶಾಲಿ ಸಹಾಯಕ. AI ತಂತ್ರಜ್ಞಾನ ವೇಗವಾಗಿ ಕಲಿಯುವವರು ಮಾತ್ರ ಯಶಸ್ವಿಯಾಗುತ್ತಾರೆ. AI ಮನುಷ್ಯರನ್ನು ಬದಲಿಸದೆ, ಅವರೊಂದಿಗೆ ಸಹಾಯಕನಾಗಿ ಕೆಲಸ ಮಾಡುತ್ತದೆ.

Read Full Story

10:34 PM (IST) Nov 26

Viral Video - ಬಾಸ್ಕೆಟ್‌ಬಾಲ್‌ ಪೋಲ್‌ ಬಿದ್ದು ರಾಷ್ಟ್ರಮಟ್ಟದ ಪ್ಲೇಯರ್‌ ಸಾವು, ಜಿಲ್ಲಾ ಕ್ರೀಡಾಧಿಕಾರಿ ಸಸ್ಪೆಂಡ್‌

ಹರಿಯಾಣದ ರೋಹ್ಟಕ್‌ನಲ್ಲಿ, ಬ್ಯಾಸ್ಕೆಟ್‌ಬಾಲ್ ಅಭ್ಯಾಸದ ವೇಳೆ ತುಕ್ಕು ಹಿಡಿದ ಪೋಲ್ ಕುಸಿದು 16 ವರ್ಷದ ರಾಷ್ಟ್ರೀಯ ಆಟಗಾರ ಹಾರ್ದಿಕ್ ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆಯಿಂದಾಗಿ ಜಿಲ್ಲಾ ಕ್ರೀಡಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

Read Full Story

10:30 PM (IST) Nov 26

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್ - ಈ ನಂಬರ್‌ಗಾಗಿ ಅರ್ಜಿ ಸಲ್ಲಿಸಿದವರೆಷ್ಟು? ಸೇಲ್ ಆಗಿದ್ದು ಎಷ್ಟು ಕೋಟಿಗೆ

fancy number plate: ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯುವುದಕ್ಕೆ ಬಹುತೇಕ ವಾಹನಗಳ ಮಾಲೀಕರು ಬಯಸುತ್ತಾರೆ. ಅನೇಕ ಸೆಲೆಬ್ರಿಟಿಗಳು ತಮ್ಮಿಷ್ಟದ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯುವುದಕ್ಕೆ ಇನ್ನಿಲ್ಲದ ಸಾಹಸ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ನಂಬರ್ ಪ್ಲೇಟ್ ದುಬಾರಿ ಮೊತ್ತಕ್ಕೆ ಸೇಲ್ ಆಗಿದೆ.

Read Full Story

09:53 PM (IST) Nov 26

ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಇತಿಹಾಸ ಸೃಷ್ಟಿ - 11 ವರ್ಷದ ಮಗುವಿಗೆ ಮೊದಲ ಯಶಸ್ವಿ ಮೂತ್ರಪಿಂಡ ಕಸಿ!

ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯು ದೇಶದ ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲೇ ಮೊದಲ ಬಾರಿಗೆ ಮಕ್ಕಳ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 11 ವರ್ಷದ ಬಾಲಕನಿಗೆ, ಅವನ ತಾಯಿಯೇ ದಾನ ಮಾಡಿದ ಮೂತ್ರಪಿಂಡ ಉಚಿತವಾಗಿ ಕಸಿ ಮಾಡಿ ಹೊಸ ಜೀವನ ನೀಡಲಾಗಿದೆ.

Read Full Story

09:34 PM (IST) Nov 26

9 ಗಗನಚುಂಬಿ ವಸತಿ ಸಂಕೀರ್ಣದಲ್ಲಿ ಒಮ್ಮಿಂದೊಮ್ಮೆಲೆ ಬೆಂಕಿ - 13 ಜನ ಸಜೀವ ದಹನ

Hong Kong skyscraper fire: ಒಂದಲ್ಲ ಎರಡಲ್ಲ ಬರೋಬ್ಬರಿ 9 ಗಗನಚುಂಬಿ ಬಹುಮಹಡಿ ಕಟ್ಟಡಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 13 ಜನರು ಸಾವನ್ನಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಚೀನಾದ ಹಾಂಗ್‌ಕಾಂಗ್‌ನಲ್ಲಿ ಘಟನೆ ನಡೆದಿದೆ.

Read Full Story

09:34 PM (IST) Nov 26

'ಬೆತ್ತಲೆ ಫೋಟೋ ಹಿಡಿದು ಬ್ಲ್ಯಾಕ್‌ಮೇಲ್ ಮಾಡ್ತಿದ್ದ, ಪರ ಪುರುಷನ ಜೊತೆ ಮಲಗುವಂತೆ ಹೇಳ್ತಿದ್ದ..' ಗಂಡನ ವಿರುದ್ಧ ಬಾಲಿವುಡ್‌ ನಟಿ ಭಾರೀ ಆರೋಪ

Celina Jaitly Alleges Blackmail Forced Sex Abuse Against Husband Peter Haag ಬಾಲಿವುಡ್‌ ನಟಿ ಸೆಲಿನಾ ಜೇಟ್ಲಿ ತನ್ನ ಪತಿ ಹಾಗೂ ಉದ್ಯಮಿ ಪೀಟರ್ ಹಾಕ್‌ ವಿರುದ್ಧ ಶಾಕಿಂಗ್‌ ಆರೋಪ ಮಾಡಿದ್ದಾರೆ. ಈ ಕುರಿತು ಅವರು ತಮ್ಮ ದೂರಿನಲ್ಲಿಯೂ ವಿವರಿಸಿದ್ದಾರೆ.

 

Read Full Story

08:41 PM (IST) Nov 26

ದುಬೈ ಏರ್‌ಶೋನಲ್ಲಿ ತೇಜಸ್‌ ಯುದ್ಧವಿಮಾನ ಪತನ, ಖರೀದಿ ಒಪ್ಪಂದ ಮಾತುಕತೆ ತಾತ್ಕಾಲಿಕ ಸ್ಥಗಿತ ಮಾಡಿದ ಅರ್ಮೇನಿಯಾ?

ದುಬೈ ಏರ್ ಶೋನಲ್ಲಿ ತೇಜಸ್ ಫೈಟರ್ ಜೆಟ್ ಅಪಘಾತಕ್ಕೀಡಾದ ನಂತರ, ಭಾರತದಿಂದ ಜೆಟ್‌ಗಳನ್ನು ಖರೀದಿಸುವ ಮಾತುಕತೆಯನ್ನು ಅರ್ಮೇನಿಯಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಈ ₹10,000 ಕೋಟಿ ಒಪ್ಪಂದವು ತೇಜಸ್‌ನ ಮೊದಲ ವಿದೇಶಿ ರಫ್ತಾಗುವ ನಿರೀಕ್ಷೆಯಿತ್ತು. 

Read Full Story

08:33 PM (IST) Nov 26

ಮಾಜಿ ಗೆಳತಿಯಿಂದ ರೇ*ಪ್ ಕೇಸ್ - ವರ್ಷದ ನಂತರ ಚೇತೇಶ್ವರ್ ಪೂಜಾರ್ ಭಾಮೈದ ಸಾವಿಗೆ ಶರಣು

Jeet Pabari death : ಕ್ರಿಕೆಟಿಗ ಚೇತೇಶ್ವರ್ ಪೂಜಾರ್ ಅವರ ಭಾಮೈದ ಜೀತ್ ಪಬಾರಿ ಅವರು ರಾಜ್‌ಕೋಟ್‌ನಲ್ಲಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಒಂದು ವರ್ಷದ ಹಿಂದೆ ಅವರ ಮಾಜಿ ಗೆಳತಿ ಅತ್ಯಾ*ಚಾರ ದೂರು ದಾಖಲಿಸಿದ ದಿನವೇ ಈ ದುರಂತ ಸಂಭವಿಸಿದ್ದು, ಈ ಪ್ರಕರಣದಿಂದಾಗಿ ಅವರ ವಿವಾಹ ನಿಶ್ಚಿತಾರ್ಥ ರದ್ದಾಗಿತ್ತು.

Read Full Story

08:04 PM (IST) Nov 26

ಡಿ.6ಕ್ಕೆ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಬಾಬ್ರಿ ಮಸೀದಿಗೆ ನಿರ್ಮಾಣಕ್ಕೆ ಅಡಿಪಾಯ, ಟಿಎಂಸಿ ಶಾಸಕನ ಘೋಷಣೆ

ಟಿಎಂಸಿ ಶಾಸಕನ ಹೇಳಿಕೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರ ಪ್ರತಿಕ್ರಿಯೆ ನೀಡಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ್ಲಾ ಅವರು ಶಾಸಕರ ಘೋಷಣೆಯನ್ನು ರಾಜಕೀಯ ಪ್ರೇರಿತ ಎಂದು ಟೀಕಿಸಿದರು.

Read Full Story

07:21 PM (IST) Nov 26

'ಮುಸ್ಲಿಂ ಪರಂಪರೆಯನ್ನು ಅಳಿಸಿಹಾಕುವ ಪ್ರಯತ್ನ..' ಅಯೋಧ್ಯೆ ಧರ್ಮಧ್ವಜಕ್ಕೆ ಉರಿದುಕೊಂಡ ಪಾಕ್‌; 'ಪಾಠ ಮಾಡೋಕೆ ಬರ್ಬೇಡಿ' ಎಂದ ಭಾರತ!

ಅಯೋಧ್ಯೆ ರಾಮಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಧರ್ಮಧ್ವಜ ಏರಿಸಿದ ವಿಡಿಯೋ ನೋಡಿ ಪಾಕಿಸ್ತಾನ ಉರಿದುಕೊಂಡಿದೆ. ಇದು ಭಾರತದಲ್ಲಿ ಮುಸ್ಲಿಂ ಪರಂಪರೆಯನ್ನು ಅಳಿಸಿಹಾಕುವ ಪ್ರಯತ್ನ ಎಂದು ಹೇಳಿದೆ.

 

Read Full Story

06:57 PM (IST) Nov 26

ವೈಷ್ಣೋದೇವಿ ವೈದ್ಯಕೀಯ ಕಾಲೇಜಿಗೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರವೇಶ ಭಾರೀ ವಿವಾದ

ವೈಷ್ಣೋ ದೇವಿ ವೈದ್ಯಕೀಯ ಕಾಲೇಜಿಗೆ 42 ಮುಸ್ಲಿಂ ವಿದ್ಯಾರ್ಥಿಗಳ ಪ್ರವೇಶವು ತೀವ್ರ ವಿವಾದಕ್ಕೆ ಕಾರಣವಾಗಿದೆ. ದೇವಾಲಯದ ದೇಣಿಗೆಯಿಂದ ನಡೆಯುವ ಸಂಸ್ಥೆಯಲ್ಲಿ ಹಿಂದೂಗಳಿಗೆ ಆದ್ಯತೆ ನೀಡಬೇಕೆಂದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವಾದಿಸಿದೆ.

Read Full Story

06:34 PM (IST) Nov 26

ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ; ತವರಿನಲ್ಲಿ ವೈಟ್‌ವಾಷ್ ಅನುಭವಿಸಿದ್ರೂ ಗೌತಮ್ ಗಂಭೀರ್ ಹಿಂಗಾ ಹೇಳೋದು?

ಗುವಾಹಟಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್‌ನಲ್ಲೂ ಟೀಂ ಇಂಡಿಯಾ ಸೋಲು ಅನುಭವಿಸಿದೆ. ಈ ಮೂಲಕ ಎರಡನೇ ಬಾರಿಗೆ ಭಾರತ ತವರಿನಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿದೆ. ಈ ಸೋಲಿನ ಹೊರತಾಗಿಯೂ ಗೌತಮ್ ಗಂಭೀರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

 

Read Full Story

06:11 PM (IST) Nov 26

ಮದುವೆ ಸಂಭ್ರಮದಲ್ಲಿದ್ದವರಿಗೆ ಆಘಾತ - ಹೈಡ್ರೋಜನ್ ಬಲೂನ್ ಸ್ಫೋಟಿಸಿ ವಧು ವರನಿಗೆ ಗಾಯ

Hydrogen balloon explosion at wedding: ದೆಹಲಿಯಲ್ಲಿ ನಡೆದ ಅರಿಶಿನ ಶಾಸ್ತ್ರದ ವೇಳೆ, ವಧು-ವರರ ಗ್ರ್ಯಾಂಡ್ ಎಂಟ್ರಿಗಾಗಿ ಬಳಸಿದ ಹೈಡ್ರೋಜನ್ ಬಲೂನ್‌ಗಳು ಸ್ಫೋಟಗೊಂಡು ವಧು ವರರು ಗಾಯಗೊಂಡ ಘಟನೆ ನಡೆದಿದೆ.

Read Full Story

05:31 PM (IST) Nov 26

2025ರ ಜೂನ್‌ ಬಳಿಕ ಅತ್ಯುತ್ತಮ ದಿನ ಕಂಡ ಷೇರು ಮಾರುಕಟ್ಟೆ, ಸಾರ್ವಕಾಲಿಕ ದಾಖಲೆ ಸನಿಹ ನಿಫ್ಟಿ, ಸೆನ್ಸೆಕ್ಸ್‌!

ಭಾರತೀಯ ಷೇರು ಮಾರುಕಟ್ಟೆಯು ಬುಧವಾರ ಭರ್ಜರಿ ಏರಿಕೆ ಕಂಡಿದ್ದು, ಸೆನ್ಸೆಕ್ಸ್‌ ಮತ್ತು ನಿಫ್ಟಿ ಸಾರ್ವಕಾಲಿಕ ದಾಖಲೆಯ ಸನಿಹಕ್ಕೆ ತಲುಪಿವೆ. ನಿಫ್ಟಿ ಬ್ಯಾಂಕ್‌ ಹೊಸ ಗರಿಷ್ಠ ಮಟ್ಟವನ್ನು ದಾಖಲಿಸಿದ್ದು, ರಿಲಯನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್‌ನಂತಹ ಪ್ರಮುಖ ಷೇರುಗಳು ಈ ನಾಗಾಲೋಟಕ್ಕೆ ಕಾರಣವಾಗಿವೆ.
Read Full Story

05:25 PM (IST) Nov 26

ಬೈಕ್‌ಗೆ ಡಿಕ್ಕಿ - ಮಗು ರೂಫ್ ಮೇಲೆ ಬಿದ್ರೂ 10 ಕಿಮೀ ನಿಲ್ಲಿಸದೇ ಗಾಡಿ ಓಡಿಸಿದ ಸ್ಕಾರ್ಫಿಯೋ ಚಾಲಕ

hit and run case: ಅಪಘಾತದ ನಂತರ ಒಂದೂವರೆ ವರ್ಷದ ಮಗುವೊಂದು ವಾಹನದ ರೂಫ್ ಮೇಲೆ ಬಿದ್ದರೂ ಸ್ಕಾರ್ಫಿಯೋ ಚಾಲಕನೋರ್ವ ವಾಹನವನ್ನು ನಿಲ್ಲಿಸದೇ ಸುಮಾರು 10 ಕಿಲೋ ಮೀಟರ್ ದೂರದವರೆಗೆ ವೇಗವಾಗಿ ಚಲಾಯಿಸಿದಂತಹ ಅಮಾನವೀಯ ಘಟನೆ ನಡೆದಿದೆ. ನಂತರ ಏನಾಯ್ತು. ಇಲ್ಲಿದೆ ಡಿಟೇಲ್ ಸ್ಟೋರಿ..

Read Full Story

04:48 PM (IST) Nov 26

ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕಂಡೂ ಕೇಳರಿಯದ ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ! ಗೌತಿ ತಲೆದಂಡಕ್ಕೆ ಹೆಚ್ಚಿದ ಒತ್ತಡ

ಗುವಾಹಟಿ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 408 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಮೂಲಕ 2-0 ಅಂತರದಲ್ಲಿ ಸರಣಿ ವೈಟ್‌ವಾಷ್ ಮುಖಭಂಗ ಅನುಭವಿಸಿದ್ದು, ತರಬೇತುದಾರ ಗೌತಮ್ ಗಂಭೀರ್ ಅವರ ತಲೆದಂಡಕ್ಕೆ ತೀವ್ರ ಆಗ್ರಹ ವ್ಯಕ್ತವಾಗಿದೆ.
Read Full Story

04:37 PM (IST) Nov 26

ಲಿಪ್‌ಸ್ಟಿಕ್ ನೇಲ್ ಪಾಲಿಸ್ ಹೆಣ್ಣಿನಂತೆ ವಾಯ್ಸ್ - ಅಮ್ಮನ ಪಿಂಚಣಿ ಹಣ ಪಡೆಯಲು ಮಗ ಮಾಡಿದ್ದೇನು?

man hides mother's body: ವ್ಯಕ್ತಿಯೊಬ್ಬ ತನ್ನ ಸತ್ತ ತಾಯಿಯ ಪಿಂಚಣಿ ಹಣ ಪಡೆಯಲು ಆಕೆಯ ಶವವನ್ನು ಮನೆಯಲ್ಲಿ ಬಚ್ಚಿಟ್ಟಿದ್ದ. ಬರೀ ಇಷ್ಟೇ ಅಲ್ಲ ತಾಯಿಯ ಗುರುತಿನ ಚೀಟಿ ನವೀಕರಿಸಲು ಆಕೆಯಂತೆ ವೇಷ ಧರಿಸಿ ಕಚೇರಿಗೆ ಹೋಗಿದ್ದಾನೆ. ಈ ಘಟನೆಯ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..

Read Full Story

04:27 PM (IST) Nov 26

ಇವತ್ತು ನೀವು 5 ಲಕ್ಷ ರೂಪಾಯಿ ಚಿನ್ನದಲ್ಲಿ ಹೂಡಿಕೆ ಮಾಡಿದರೆ, 5 ವರ್ಷಗಳ ನಂತರ ಎಷ್ಟು ಲಾಭ ಸಿಗುತ್ತದೆ?

ಭಾರತದಲ್ಲಿ ಚಿನ್ನವು ಷೇರುಗಳನ್ನು ಮೀರಿ ಆದ್ಯತೆಯ ಹೂಡಿಕೆಯಾಗುತ್ತಿದೆ. ಮದುವೆ ಸೀಸನ್ ಮತ್ತು ಜಾಗತಿಕ ಅಸ್ಥಿರತೆಯಿಂದಾಗಿ ಬೆಲೆಗಳು ದಾಖಲೆಯ ಮಟ್ಟಕ್ಕೆ ಏರುತ್ತಿದ್ದು, ತಜ್ಞರ ಪ್ರಕಾರ 2030ರ ವೇಳೆಗೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹250,000 ತಲುಪುವ ಸಾಧ್ಯತೆಯಿದೆ.
Read Full Story

04:23 PM (IST) Nov 26

ಸಂವಿಧಾನ ದಿನದಂದು ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಪತ್ರ

ಸಂವಿಧಾನ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕರಿಗೆ ಪತ್ರ ಬರೆದು, ರಾಷ್ಟ್ರದ ಪ್ರಗತಿಗೆ ಸಂವಿಧಾನದ ಪಾತ್ರವನ್ನು ಒತ್ತಿಹೇಳಿದ್ದಾರೆ. ಅವರು ನಾಗರಿಕರ ಕರ್ತವ್ಯಗಳ ಮಹತ್ವವನ್ನು ಸಾರಿ, 2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಾಣಕ್ಕೆ ಕೈಜೋಡಿಸುವಂತೆ ಕರೆ ನೀಡಿದ್ದಾರೆ.
Read Full Story

03:37 PM (IST) Nov 26

16ರ ಹರೆಯದ ಯುವ ಆಟಗಾರನ ಬಲಿ ಪಡೆದ ಬಾಸ್ಕೆಟ್‌ಬಾಲ್ ಕಂಬ

basketball player death:ತುಕ್ಕು ಹಿಡಿದಿದ್ದ ಬಾಸ್ಕೆಟ್‌ಬಾಲ್ ಕಂಬ ಕುಸಿದು ಬಿದ್ದು, 16ರ ಹರೆಯದ ಯುವ ಆಟಗಾರನೋರ್ವ ಸಾವನ್ನಪಿದ ಆಘಾತಕಾರಿ ಘಟನೆ ಹರ್ಯಾಣದ ರೋಹ್ಟಕ್‌ನಲ್ಲಿ ನಡೆದಿದೆ.

Read Full Story

01:24 PM (IST) Nov 26

ಎರಡನೇ ಪಂದ್ಯದಲ್ಲೂ ಮುಗ್ಗರಿಸಿದ ಟೀಂ ಇಂಡಿಯಾ; 25 ವರ್ಷಗಳ ನಂತ್ರ ದಕ್ಷಿಣ ಆಫ್ರಿಕಾ ಸಾಧನೆ

India vs south africa 2nd test: ಅಂತಿಮ ದಿನದಾಟದ ಆರಂಭದಲ್ಲಿ ಭಾರತ 27-2 ಸ್ಕೋರ್ ಮಾಡಿತ್ತು. ಕೇವಲ 37 ರನ್ ನೀಡಿ ಆರು ವಿಕೆಟ್ ಪಡೆದ ಸೈಮನ್ ಹಾರ್ಮರ್ ಭಾರತ ತಂಡವನ್ನು ಕಟ್ಟಿಹಾಕಿದರು.

Read Full Story

11:36 AM (IST) Nov 26

ನಮಗೆ ಟಿ20 ವಿಶ್ವಕಪ್‌ನಲ್ಲಿ ಪಾಕ್ ಅಲ್ಲ ಈ ತಂಡ ಸಿಗಬೇಕು ಎಂದ ಸೂರ್ಯ! ಸೋತ ಜಾಗದಲ್ಲೇ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜು

ಮುಂದಿನ ವರ್ಷದ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಿ 2023ರ ಸೋಲಿಗೆ ಸೇಡು ತೀರಿಸಿಕೊಳ್ಳಲು ಬಯಸುವುದಾಗಿ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.  

Read Full Story

10:22 AM (IST) Nov 26

ಕಾಳಿ ಟೈಗರ್‌ ರಿಸರ್ವ್‌ ಪಕ್ಕದ ಪ್ರದೇಶದಲ್ಲಿ ಗೋವಾ ಹುಲಿ ಸಂರಕ್ಷಿತ ಪ್ರದೇಶ ಸ್ಥಾಪನೆ

ಪ್ರಸ್ತಾವಿತ ಗೋವಾ ಹುಲಿ ಪ್ರದೇಶವನ್ನು ಹಂತ ಹಂತವಾಗಿ ಜಾರಿಗೊಳಿಸಲು ಸುಪ್ರೀಂ ಕೋರ್ಟ್‌ನ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ. ಮೊದಲ ಹಂತದಲ್ಲಿ, ಕಡಿಮೆ ಜನವಸತಿಯಿರುವ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಅಭಯಾರಣ್ಯಗಳನ್ನು ಮಾತ್ರ ಸೇರಿಸಬೇಕು. 

Read Full Story

10:03 AM (IST) Nov 26

ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾಗೆ ಸರ್ಪ್ರೈಸ್ ಕೊಟ್ಟ ಐಸಿಸಿ!

ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾಗೆ ಐಸಿಸಿ ಸಪ್ರೈಸ್ ಗಿಫ್ಟ್ ನೀಡಿದೆ. ಏನದು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 

Read Full Story

07:53 AM (IST) Nov 26

ಅವನ್ನೊಬ್ಬ ಆಲ್ರೌಂಡರ್ರಾ? ಅವನ್ಯಾಕೆ ಆಯ್ಕೆ ಮಾಡಿದ್ರಿ? - ಹೆಡ್‌ಕೋಚ್ ಗಂಭೀರ್ ಮೇಲೆ ತಿರುಗಿಬಿದ್ದ ವಿಶ್ವಕಪ್ ಹೀರೋ!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸೋಲಿನ ಹಿನ್ನೆಲೆಯಲ್ಲಿ, ಕೋಚ್ ಗೌತಮ್ ಗಂಭೀರ್ ಅವರ ತಂಡದ ಆಯ್ಕೆ ನಿರ್ಧಾರಗಳ ವಿರುದ್ಧ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪದೇ ಪದೇ ತಂಡದಲ್ಲಿ ಬದಲಾವಣೆ ಮಾಡುವುದನ್ನು ಶ್ರೀಕಾಂತ್ ಕಟುವಾಗಿ ಟೀಕಿಸಿದ್ದಾರೆ.

Read Full Story

07:51 AM (IST) Nov 26

ಗಾಯಕ ಜುಬೀನ್‌ ಗರ್ಗ್‌ರದ್ದು ಆಕಸ್ಮಿಕ ಸಾವಲ್ಲ, ಹತ್ಯೆ, 7 ಜನರ ಬಂಧನ - ಅಸ್ಸಾಂ ಸಿಎಂ

ಗಾಯಕ ಜುಬೀನ್‌ ಗರ್ಗ್‌ ಅವರದ್ದು ಆಕಸ್ಮಿಕ ಸಾವಲ್ಲ, ಹತ್ಯೆ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ. ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ 'ಜಾಗತಿಕ ಶಾಂತಿ ಗೌರವ' ಪ್ರದಾನ ಮಾಡಲಾಗಿದೆ. ಕೆನಡಾದಲ್ಲಿ ಖಲಿಸ್ತಾನಿಗಳು ಭಾರತದ ಧ್ವಜವನ್ನು ವಿರೂಪಗೊಳಿಸಿ ಬೆದರಿಕೆ ಒಡ್ಡಿದ್ದಾರೆ.

Read Full Story

07:41 AM (IST) Nov 26

ತಂದೆ-ತಾಯಿ ಮರೆತ ಮಗನಿಗೆ ಕಾದಿತ್ತು ಘೋರ ಪರಿಣಾಮ! ನ್ಯಾಯಾಲಯದಿಂದ ಮಹತ್ವದ ತೀರ್ಪು

ವೃದ್ಧ ತಂದೆ-ತಾಯಿಯರನ್ನು ನೋಡಿಕೊಳ್ಳದ ಮಗನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪೋಷಕರಿಂದ ಆಸ್ತಿ ಪಡೆದು ಅವರನ್ನು ಮನೆಯಿಂದ ಹೊರಹಾಕಲು ಯತ್ನಿಸಿದ ಆರೋಪದ ಮೇಲೆ, ಹಿರಿಯ ನಾಗರಿಕರ ಕಾಯ್ದೆ-2007ರ ಅಡಿಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.

Read Full Story

More Trending News