Published : Oct 25, 2025, 06:44 AM ISTUpdated : Oct 25, 2025, 11:27 PM IST

India Latest News Live: ಎಂಟೇ ನಿಮಿಷದಲ್ಲಿ ಲೌವ್ರೆ ಮ್ಯೂಸಿಯಂನಿಂದ 896 ಕೋಟಿ ಮೌಲ್ಯದ ಆಭರಣ ದರೋಡೆ, ಉಳಿದವು ಬ್ಯಾಂಕ್‌ಗೆ ಶಿಫ್ಟ್‌!

ಸಾರಾಂಶ

ನವದೆಹಲಿ: ಒಂದು ಕಡೆ ಸ್ನೇಹಹಸ್ತ ಚಾಚುತ್ತಿರುವ ಚೀನಾ, ಇನ್ನೊಂದು ಕಡೆ ಸದ್ದಿಲ್ಲದೆ ಭಾರತದ ಗಡಿ ಸಮೀಪ ಹೊಸ ವಾಯು ರಕ್ಷಣಾ ವ್ಯವಸ್ಥೆ ನಿರ್ಮಾಣ ಮಾಡುತ್ತಿದೆ. 2020ರಲ್ಲಿ ಭಾರತ- ಚೀನಾ ಯೋಧರ ನಡುವೆ ಆಗಿದ್ದ ಗಲ್ವಾನ್ ಸಂಘರ್ಷ ಸ್ಥಳದಿಂದ 110 ಕಿ. ಮೀ. ದೂರದಲ್ಲೇ ಈ ರಹಸ್ಯ ವಾಯು ರಕ್ಷಣಾ ವ್ಯವಸ್ಥೆ ನಿರ್ಮಾಣ ಆಗುತ್ತಿದೆ. ಟಿಬೆಟ್‌ನ ಭಾಗವಾಗಿರುವ ಪನ್ ಗಾಂಗ್ ಕೆರೆ ತೀರದಲ್ಲಿ ನಿರ್ಮಾಣ ಕಾರ್ಯ ತೀವ್ರ ಗತಿಯಲ್ಲಿ ನಡೆಯುತ್ತಿದೆ. ವಾಯುರಕ್ಷಣಾ ವ್ಯವಸ್ಥೆ, ಕಮಾಂಡ್ ಕಟ್ಟಡ, ವಾಹನ ರಕ್ಷಣಾ ವ್ಯವಸ್ಥೆ, ರೇಡಾರ್ ಸ್ಥಾಪನೆ ಆಗುವುದನ್ನು ಉಪಗ್ರಹ ಚಿತ್ರ ಖಚಿತಪಡಿಸಿವೆ.

Louvre Museum

11:27 PM (IST) Oct 25

ಎಂಟೇ ನಿಮಿಷದಲ್ಲಿ ಲೌವ್ರೆ ಮ್ಯೂಸಿಯಂನಿಂದ 896 ಕೋಟಿ ಮೌಲ್ಯದ ಆಭರಣ ದರೋಡೆ, ಉಳಿದವು ಬ್ಯಾಂಕ್‌ಗೆ ಶಿಫ್ಟ್‌!

Louvre Heist 8 French Crown Jewels Stolen in 8 Minutes ಫ್ರಾನ್ಸ್‌ನ ಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ ಕಟ್ಟಡ ಕಾರ್ಮಿಕರ ವೇಷದಲ್ಲಿ ಬಂದ ದರೋಡೆಕೋರರು ಕೇವಲ 8 ನಿಮಿಷಗಳಲ್ಲಿ ಭಾರೀ ದರೋಡೆ ನಡೆಸಿದ್ದಾರೆ. ಅಪೊಲೋ ಗ್ಯಾಲರಿಯಲ್ಲಿದ್ದ ಸುಮಾರು 896 ಕೋಟಿ ರೂಪಾಯಿ ಮೌಲ್ಯದ ಆಭರಣ ಕದ್ದಿದ್ದಾರೆ.

 

Read Full Story

10:47 PM (IST) Oct 25

'ಭಾರತದ ಮಾನ ಹರಾಜು ಮಾಡಿದ್ದಾರೆ..' ರಾಜಕೀಯ ವಿವಾದಕ್ಕೆ ನಾಂದಿ ಹಾಡಿದ ಆಸೀಸ್‌ ಆಟಗಾರ್ತಿಯರಿಗೆ ಕಿರುಕುಳ ಕೇಸ್‌!

Australian Cricketers Harassment Case Becomes Political Firestorm ಈ ಘಟನೆಯು ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಪ್ರತಿಪಕ್ಷಗಳು ಟಾರ್ಗೆಟ್‌ ಮಾಡಿದೆ. 

 

Read Full Story

09:56 PM (IST) Oct 25

ಪ್ರಯಾಣದ ನಡುವೆ ಗಂಡ-ಹೆಂಡ್ತಿ ಗಲಾಟೆ, ಅವಳಿ ಮಕ್ಕಳನ್ನು ಕಾಡಿಗೆ ಕರೆದುಕೊಂಡು ಹೋಗಿ ಕತ್ತುಸೀಳಿ ಕೊಂದ ಗಂಡ!

Maharashtra Man Murders Twin Daughters in Forest After Wife Leaves Him ಪೊಲೀಸರ ಪ್ರಕಾರ, ಆರೋಪಿಯನ್ನು ವಾಶಿಮ್ ಜಿಲ್ಲೆಯ ನಿವಾಸಿ ರಾಹುಲ್ ಚವಾಣ್ ಎಂದು ಗುರುತಿಸಲಾಗಿದೆ.

 

Read Full Story

07:58 PM (IST) Oct 25

ಗಂಡನ ಆಲ್ಕೋಹಾಲ್‌ ಚಟಕ್ಕೆ ಬಿಟ್ಟುಹೋದ ಹೆಂಡತಿ, 14 ವರ್ಷದ ಮಗಳ ಮೇಲೆ ಹಲವು ದಿನ ರೇ*ಪ್‌ ಮಾಡಿದ ಗಂಡ!

Father Arrested for Repeatedly Raping 14-Year-Old Daughter After Wife Leaves Over Alcoholism ಎರಡು ತಿಂಗಳಿನಿಂದ ತನ್ನ 14 ವರ್ಷದ ಮಗಳ ಮೇಲೆ ಪದೇ ಪದೇ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ 42 ವರ್ಷದ ವ್ಯಕ್ತಿಯನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ.

 

Read Full Story

07:31 PM (IST) Oct 25

ಬ್ಯಾಂಕ್​ ಲಾಕರ್​, ಠೇವಣಿಗೆ ನಾಮಿನಿ ಮಾಡಿರುವಿರಾ? ನ.1ರಿಂದ ಈ ಹೊಸ ರೂಲ್ಸ್​ - ಕೂಡಲೇ ತಿಳಿಯಿರಿ

ನವೆಂಬರ್ 1 ರಿಂದ ಜಾರಿಗೆ ಬರುವ ಹೊಸ ಬ್ಯಾಂಕಿಂಗ್ ನಿಯಮದ ಪ್ರಕಾರ, ಖಾತೆದಾರರು ತಮ್ಮ ಬ್ಯಾಂಕ್ ಖಾತೆ ಮತ್ತು ಲಾಕರ್‌ಗಳಿಗೆ ಒಬ್ಬರ ಬದಲು ನಾಲ್ಕು ಜನರನ್ನು ನಾಮಿನಿಗಳಾಗಿ ನೇಮಿಸಬಹುದು. ಈ ಬದಲಾವಣೆಯು ನಾಮಿನಿಗಳಿಗೆ ಷೇರುಗಳನ್ನು ನಿಗದಿಪಡಿಸಲು ಸಹ ಅವಕಾಶ ನೀಡುತ್ತದೆ. ಇಲ್ಲಿದೆ ಡಿಟೇಲ್ಸ್​

Read Full Story

06:51 PM (IST) Oct 25

ಐಸಿಸಿ ಮಹಿಳಾ ವಿಶ್ವಕಪ್‌ಗೆ ಬಂದಿದ್ದ ಆಸೀಸ್‌ನ ಇಬ್ಬರು ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ!

2 Australian Women Cricketers Sexually Harassed in Indoreಇಂದೋರ್‌ನಲ್ಲಿ ಇಬ್ಬರು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗರಿಗೆ ಬೈಕ್ ಸವಾರನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಕೆಫೆಗೆ ಹೋಗುತ್ತಿದ್ದಾಗ ಆಟಗಾರ್ತಿಯರನ್ನು ಹಿಂಬಾಲಿಸಿ, ಅನುಚಿತವಾಗಿ ಸ್ಪರ್ಶಿಸಿ ಪರಾರಿಯಾಗಿದ್ದ.

Read Full Story

05:56 PM (IST) Oct 25

ಕನ್ನಡದ ಏಕೈಕ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್‌ನ ಪ್ರಖ್ಯಾತ ನಟ ಸತೀಶ್‌ ಶಾ ನಿಧನ

Veteran Bollywood Actor Satish Shah Passes Away at 74 ಹಿರಿಯ ಬಾಲಿವುಡ್ ನಟ ಸತೀಶ್ ಶಾ (74) ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, 'ಸಾರಾಭಾಯ್ ವರ್ಸಸ್ ಸಾರಾಭಾಯ್' ನಂತಹ ಶೋಗಳು ಮತ್ತು ಹಲವು ಚಿತ್ರಗಳ ಮೂಲಕ ಖ್ಯಾತರಾಗಿದ್ದರು. 

Read Full Story

05:25 PM (IST) Oct 25

ಅದಾನಿ ಗ್ರೂಪ್‌ನಲ್ಲಿ 33 ಸಾವಿರ ಕೋಟಿ ಹೂಡಿಕೆ ಮಾಡಿದ ಎಲ್‌ಐಸಿ, ಅಮೆರಿಕ ಪತ್ರಿಕೆ ವರದಿ!

LIC Invested ₹33000 Crore in Adani Group ಅದಾನಿ ಗ್ರೂಪ್‌ನಲ್ಲಿ ಭಾರತೀಯ ಜೀವ ವಿಮಾ ನಿಗಮ ₹33,000 ಕೋಟಿ ಹೂಡಿಕೆ ಮಾಡಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ತನಿಖೆಗೆ ಒತ್ತಾಯಿಸುತ್ತಿದ್ದರೆ, ಎಲ್‌ಐಸಿ ಈ ವರದಿಗಳನ್ನು ಸುಳ್ಳು ಎಂದು ನಿರಾಕರಿಸಿದೆ. 

Read Full Story

05:09 PM (IST) Oct 25

ಸಂಗಕ್ಕಾರ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ಕೊಹ್ಲಿ! ಒನ್‌ಡೇ ಕ್ರಿಕೆಟ್‌ನಲ್ಲಿ ವಿರಾಟ್ ಎರಡನೇ ಗರಿಷ್ಠ ರನ್ ಸರದಾರ

ಸಿಡ್ನಿ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕಿ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾದರು.  ಇದಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೊಹ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

Read Full Story

04:50 PM (IST) Oct 25

ಶೈನ್‌ ಕಳೆದುಕೊಂಡ ಸಿಲ್ವರ್‌, 10 ದಿನದಲ್ಲಿ 34 ಸಾವಿರ ಕುಸಿದ ಬೆಳ್ಳಿ ಬೆಲೆ!

Silver Price Drops by ₹34,000 in 10 Days After Dhanteras Peak ಟಾಟಾ ಮ್ಯೂಚುಯಲ್ ಫಂಡ್ ತನ್ನ ಸಿಲ್ವರ್ ಇಟಿಎಫ್ ಫಂಡ್-ಆಫ್-ಫಂಡ್ ಯೋಜನೆಯಲ್ಲಿ ಹೊಸ ಹೂಡಿಕೆಗಳನ್ನು ಪುನರಾರಂಭಿಸಿದೆ.

 

Read Full Story

04:21 PM (IST) Oct 25

ಸಿಡ್ನಿಯಲ್ಲಿ ಶತಕ ಸಿಡಿಸಿ ಹಲವು ಅಪರೂಪದ ದಾಖಲೆ ಬರೆದ ರೋಹಿತ್ ಶರ್ಮಾ!

ಸಿಡ್ನಿ: ಆಸ್ಟ್ರೇಲಿಯಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಜೇಯ ಶತಕ ಸಿಡಿಸುವ ಮೂಲಕ ಹಲವು ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 

Read Full Story

04:09 PM (IST) Oct 25

ಅಪ್ರಾಪ್ತರ ಆಸ್ತಿ ವರ್ಗಾವಣೆ ಕುರಿತು 'ಸುಪ್ರೀಂ' ಮಹತ್ವದ ತೀರ್ಪು - ಲಕ್ಷಾಂತರ ಮಂದಿಯ ಪ್ರಶ್ನೆಗಳಿಗೆ ಉತ್ತರ

ಅಪ್ರಾಪ್ತರ ಆಸ್ತಿಯನ್ನು ಪಾಲಕರು ಮಾರಾಟ ಮಾಡಿದರೆ, ಆ ಮಕ್ಕಳು 18 ವರ್ಷ ತುಂಬಿದ ನಂತರ ಮೊಕದ್ದಮೆ ಹೂಡದೆಯೇ ಆ ವ್ಯವಹಾರವನ್ನು ತಿರಸ್ಕರಿಸಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರ ಫುಲ್​ ಡಿಟೇಲ್ಸ್​ ಇಲ್ಲಿದೆ..

Read Full Story

04:00 PM (IST) Oct 25

2026ರ ಏಪ್ರಿಲ್‌ನಿಂದ ಬೆಳ್ಳಿಯ ಮೇಲೂ ಸಿಗಲಿದೆ ಬ್ಯಾಂಕ್‌ ಸಾಲ!

RBI Approves Silver Loans from April 2026 ಬ್ಯಾಂಕ್‌ಗಳಲ್ಲಿ ಚಿನ್ನದ ರೀತಿಯಲ್ಲೇ ಬೆಳ್ಳಿಯನ್ನು ಕೂಡ ಆಧಾರವಾಗಿ ಸ್ವೀಕರಿಸಲಾಗುತ್ತದೆ. ಬೆಳ್ಳಿ/ಚಿನ್ನದ ಮೇಲಿನ ಸಾಲಗಳ ವಿರುದ್ಧ ಸಾಲ ನೀಡಲು RBI ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ, ಇದನ್ನು ಏಪ್ರಿಲ್ 01, 2026 ರೊಳಗೆ ಅನುಸರಿಸಬೇಕು.

 

Read Full Story

03:56 PM (IST) Oct 25

ಆಸೀಸ್ ಸದ್ದಡಗಿಸಿದ ರೋಹಿತ್-ಕೊಹ್ಲಿ - ಕಾಂಗರೂ ಪಡೆ ಚೆಲ್ಲಾಪಿಲ್ಲಿ!

ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಅವರ ಅಜೇಯ ಶತಕ ಮತ್ತು ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ, ಟೀಂ ಇಂಡಿಯಾ 237 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.
Read Full Story

03:28 PM (IST) Oct 25

19 ಪ್ರಯಾಣಿಕರ ಸಜೀವ ದಹನಕ್ಕೆ ಕಾರಣವಾದ ಬಸ್‌ನಲ್ಲಿತ್ತು 46 ಲಕ್ಷ ಮೌಲ್ಯದ 234 ಹೊಸ ಸ್ಮಾರ್ಟ್‌ ಫೋನ್

Kurnool bus fire case:19 ಜನರ ಸಜೀವ ದಹನಕ್ಕೆ ಕಾರಣವಾದ ಬೆಂಕಿಗಾಹುತಿಯಾದ ಬಸ್‌ನಲ್ಲಿ 234  ಸ್ಮಾರ್ಟ್‌ಫೋನ್‌ಗಳಿದ್ದವು, ಇವುಗಳ ಸ್ಫೋಟ ಅನಾಹುತದ ತೀವ್ರತೆಯನ್ನು ಹೆಚ್ಚಿಸಿತ್ತು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಹೇಳಿದ್ದಾರೆ.

Read Full Story

03:04 PM (IST) Oct 25

IPL 2026 ಮಿನಿ ಹರಾಜಿಗೂ ಮುನ್ನ ಈ ನಾಲ್ವರಿಗೆ ಮುಂಬೈ ಇಂಡಿಯನ್ಸ್ ಗೇಟ್‌ಪಾಸ್!

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಈಗಿನಿಂದಲೇ ಸಿದ್ದತೆಗಳು ಶುರುವಾಗಿವೆ. ಇದೀಗ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್, ಮಿನಿ ಹರಾಜಿಗೂ ಮುನ್ನ ಈ ನಾಲ್ಕು ಆಟಗಾರರನ್ನು ತಂಡದಿಂದ ಕೈಬಿಡಲು ತೀರ್ಮಾನಿಸಿದೆ. ಯಾರವರು?

 

Read Full Story

02:39 PM (IST) Oct 25

ಗಡಿ ಬಂದ್ ಮಾಡಿದ ಅಫ್ಘಾನ್ - ಪಾಕ್‌ನಲ್ಲಿ ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ, ಟೊಮೆಟೋಗೆ ಕೇಜಿಗೆ 600

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷದಿಂದಾಗಿ ಗಡಿಗಳನ್ನು ಮುಚ್ಚಲಾಗಿದ್ದು, ಎರಡೂ ದೇಶಗಳ ವ್ಯಾಪಾರ ಸ್ಥಗಿತಗೊಂಡಿದೆ. ಈ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಕೆಜಿಗೆ 600 ರೂಪಾಯಿ ತಲುಪಿದ್ದು, ಸಾವಿರಾರು ಕಂಟೇನರ್‌ಗಳು ಗಡಿಯಲ್ಲಿ ಸಿಲುಕಿಕೊಂಡಿವೆ.

Read Full Story

02:05 PM (IST) Oct 25

ಉರಿಯುವ ಬೆಂಕಿಗೆ ತುಪ್ಪ ಸುರಿದ ನಖ್ವಿ! ಏಷ್ಯಾಕಪ್ ಟ್ರೋಫಿ ಅಜ್ಞಾತ ಸ್ಥಳಕ್ಕೆ ಶಿಫ್ಟ್!

ದುಬೈ: ಏಷ್ಯಾಕಪ್ ಟ್ರೋಫಿ ಹಸ್ತಾಂತರ ವಿವಾದ ಇದೀಗ ಮತ್ತೊಂದು ಹಂತ ತಲುಪಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಇದೀಗ ಏಷ್ಯಾಕಪ್ ಟ್ರೋಫಿಯನ್ನು ಅಜ್ಞಾತ ಸ್ಥಳದಲ್ಲಿಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

 

Read Full Story

01:35 PM (IST) Oct 25

ಮರ ಬೀಳಿಸಿ ರೋಡ್‌ ಬ್ಲಾಕ್ ಮಾಡಿದ ಕಬಾಲಿ - ಕಾಡಾನೆ ದರ್ಬಾರ್‌ಗೆ 18 ಗಂಟೆ ಕೇರಳ ಹೆದ್ದಾರಿ ಬಂದ್

ಕೇರಳದ ಪ್ರಸಿದ್ಧ ಒಂಟಿ ಸಲಗ ಕಬಾಲಿ ರಸ್ತೆಗೆ ಮರ ಬೀಳಿಸಿ ರೋಡ್‌ ಬ್ಲಾಕ್ ಮಾಡಿದ್ದರಿಂದ ಸುಮಾರು 18 ಗಂಟೆಗ ಕಾಲ ಕೇರಳದ ಹೆದ್ದಾರಿಯೊಂದು ಬಂದ್ ಆಗಿ ರಸ್ತೆಯುದ್ಧಕ್ಕೂ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆದಂತಹ ಘಟನೆ ನಡೆದಿದೆ.

Read Full Story

12:44 PM (IST) Oct 25

ಆಸ್ಟ್ರೇಲಿಯಾ ಬ್ಯಾಟಿಂಗ್ ಬೆನ್ನೆಲುಬು ಮುರಿದ ಹರ್ಷಿತ್ ರಾಣಾ! ಭಾರತಕ್ಕೆ ಗೆಲ್ಲಲು ಸಾಧಾರಣ ಗುರಿ

ಮೂರನೇ ಏಕದಿನ ಪಂದ್ಯದಲ್ಲಿ ಹರ್ಷಿತ್ ರಾಣಾ ಅವರ ಮಾರಕ ಬೌಲಿಂಗ್ ದಾಳಿಗೆ (4 ವಿಕೆಟ್) ಆಸ್ಟ್ರೇಲಿಯಾ ತಂಡವು 236 ರನ್‌ಗಳಿಗೆ ಸರ್ವಪತನ ಕಂಡಿದೆ. ಮ್ಯಾಟ್ ರೆನ್‌ಶೋ ಅವರ ಅರ್ಧಶತಕದ ಹೊರತಾಗಿಯೂ ಆಸೀಸ್ ಕುಸಿತ ಕಂಡಿದ್ದು, ಭಾರತಕ್ಕೆ ಗೆಲ್ಲಲು ಸಾಧಾರಣ ಗುರಿ ನೀಡಿದೆ.
Read Full Story

11:31 AM (IST) Oct 25

ಪಾಕಿಸ್ತಾನಕ್ಕೆ ಇದೆಂತಾ ಅವಮಾನ, ಒಂದೂ ಗೆಲುವಿಲ್ಲದೆ ವಿಶ್ವಕಪ್‌ನಿಂದ ಔಟ್!

ಪಾಕಿಸ್ತಾನಕ್ಕೆ ಘೋರ ಅವಮಾನವಾಗಿದೆ. ಐಸಿಸಿ ಮಹಿಳಾ ವಿಶ್ವಕಪ್ 2025ರಲ್ಲಿ ಪಾಕಿಸ್ತಾನ ತಂಡ ಒಂದೇ ಒಂದು ಪಂದ್ಯವನ್ನೂ ಗೆಲ್ಲದೆ 3 ಅಂಕಗಳೊಂದಿಗೆ ತನ್ನ ಅಭಿಯಾನ ಮುಗಿಸಿದೆ. ಆ ಅಂಕಗಳು ಕೂಡ ಪಂದ್ಯಗಳು ರದ್ದಾಗಿದ್ದರಿಂದ ಬಂದಿವೆ. 

Read Full Story

10:52 AM (IST) Oct 25

ಐಪಿಎಲ್ 2026 ಮಿನಿ ಹರಾಜಿಗೂ ಮುನ್ನ ಹೊಸ ರಣತಂತ್ರ ಹೆಣೆದ ಸನ್‌ರೈಸರ್ಸ್‌ ಹೈದರಾಬಾದ್!

IPL 2026: ಐಪಿಎಲ್ 2026ರ ಮಿನಿ ಹರಾಜಿಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್ ಅವರಂತಹ ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆ ವಿವರಗಳು ಏನು ಅಂತ ಈಗ ನೋಡೋಣ ಬನ್ನಿ.

Read Full Story

10:24 AM (IST) Oct 25

ವಿರಾಟ್ ಕೊಹ್ಲಿ ಒಂದು ಇನ್‌ಸ್ಟಾ ಪೋಸ್ಟ್‌ಗೆ ಎಷ್ಟು ಕೋಟಿ ತಗೋತಾರೆ ಗೊತ್ತಾ?

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇತ್ತೀಚೆಗೆ ಸರಿಯಾದ ಆಟ ಪ್ರದರ್ಶಿಸುತ್ತಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಆದರೆ ಆಟ ಹೇಗೇ ಇರಲಿ, ಸಂಪಾದನೆ ವಿಚಾರದಲ್ಲಿ ಕೊಹ್ಲಿ ಮುಂದಿದ್ದಾರೆ.

 

Read Full Story

10:17 AM (IST) Oct 25

ಮದರಸಾ ಶಾಲೆಗೆ ಪ್ರವೇಶ ನೀಡಲು 13 ವರ್ಷದ ಬಾಲಕಿಗೆ ಕನ್ಯತ್ವ ಪರೀಕ್ಷೆ ವರದಿ ನೀಡುವಂತೆ ಕೇಳಿದ ಶಾಲೆ

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ, 13 ವರ್ಷದ ಬಾಲಕಿಗೆ ಮರುಪ್ರವೇಶ ನೀಡಲು ಮದ್ರಾಸಾವೊಂದು ಕನ್ಯತ್ವ ಪರೀಕ್ಷಾ ವರದಿಯನ್ನು ಕೇಳಿದೆ. ಈ ಅವಮಾನಕಾರಿ ಬೇಡಿಕೆಯ ವಿರುದ್ಧ ಬಾಲಕಿಯ ತಂದೆ ದೂರು ನೀಡಿದ್ದು, ಪೊಲೀಸರು ಮದ್ರಾಸಾ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವಿರುದ್ಧ ಕೇಸ್‌ ದಾಖಲಿಸಿದ್ದಾರೆ.

Read Full Story

09:44 AM (IST) Oct 25

5 ವರ್ಷಗಳ ಬಳಿಕ ರಣಜಿ ಪಂದ್ಯಕ್ಕೆ ಶಿವಮೊಗ್ಗ ಆತಿಥ್ಯ! ರಾಜ್ಯ ತಂಡಕ್ಕಿಂದು ಗೋವಾ ಚಾಲೆಂಜ್

ಐದು ವರ್ಷಗಳ ಬಳಿಕ ಶಿವಮೊಗ್ಗದ ನವುಲೆ ಕೆಎಸ್‌ಸಿಎ ಮೈದಾನವು ಕರ್ನಾಟಕ ಮತ್ತು ಗೋವಾ ನಡುವಿನ ರಣಜಿ ಪಂದ್ಯಕ್ಕೆ ಆತಿಥ್ಯ ವಹಿಸಿದೆ. ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಕರ್ನಾಟಕ ತಂಡಕ್ಕೆ, ಹಿಂದಿನ ಪಂದ್ಯ ಗೆದ್ದ ಹುಮ್ಮಸ್ಸಿನಲ್ಲಿರುವ ಗೋವಾ ತಂಡವು ಪ್ರಬಲ ಪೈಪೋಟಿ ನೀಡಲಿದೆ.  

Read Full Story

08:43 AM (IST) Oct 25

ಭಾರತಕ್ಕೆ ವೈಟ್‌ವಾಷ್‌ ಭೀತಿ - ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ ಆಯ್ಕೆ, ಭಾರತ ತಂಡದಲ್ಲಿ 2 ಬದಲಾವಣೆ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಸರಣಿ ಸೋತಿರುವ ಭಾರತ ವೈಟ್‌ವಾಷ್‌ ಭೀತಿಯಲ್ಲಿದ್ದು, ಎರಡೂ ತಂಡಗಳು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿದಿವೆ.
Read Full Story

08:24 AM (IST) Oct 25

ವೈಟ್‌ವಾಶ್ ತಪ್ಪಿಸಿಕೊಳ್ಳುತ್ತಾ ಟೀಂ ಇಂಡಿಯಾ? ಇಂದು ಭಾರತ-ಆಸೀಸ್ 3ನೇ ಪಂದ್ಯ

ಈಗಾಗಲೇ ಸರಣಿ ಸೋತಿರುವ ಭಾರತ ತಂಡ, ವೈಟ್‌ವಾಶ್ ಮುಖಭಂಗ ತಪ್ಪಿಸಿಕೊಳ್ಳಲು ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯವಾಡಲಿದೆ. ಇದು ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಆಸ್ಟ್ರೇಲಿಯಾ ನೆಲದಲ್ಲಿ ಕೊನೆಯ ಪಂದ್ಯವಾಗುವ ಸಾಧ್ಯತೆಯಿದೆ.

Read Full Story

More Trending News