ಅಪ್ರಾಪ್ತರ ಆಸ್ತಿಯನ್ನು ಪಾಲಕರು ಮಾರಾಟ ಮಾಡಿದರೆ, ಆ ಮಕ್ಕಳು 18 ವರ್ಷ ತುಂಬಿದ ನಂತರ ಮೊಕದ್ದಮೆ ಹೂಡದೆಯೇ ಆ ವ್ಯವಹಾರವನ್ನು ತಿರಸ್ಕರಿಸಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರ ಫುಲ್ ಡಿಟೇಲ್ಸ್ ಇಲ್ಲಿದೆ..
ಅಪ್ರಾಪ್ತರ ಆಸ್ತಿ ವಹಿವಾಟಿನ ಕುರಿತಾಗಿ ಸುಪ್ರೀಂಕೋಟ್ ಮಹತ್ವದ ತೀರ್ಪನ್ನು ನೀಡಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆಸ್ತಿಯನ್ನು ಅವರ ಪಾಲಕರು ವರ್ಗಾವಣೆ ಮಾಡಿದರೆ ಅಥವಾ ಮಾರಾಟ ಮಾಡಿದರೆ, ಅಂಥ ಮಕ್ಕಳು ಪ್ರಾಪ್ತ ವಯಸ್ಕರಾದ ಬಳಿಕ ಮೊಕದ್ದಮೆ ಹೂಡದೆಯೇ ಅದನ್ನು ತಿರಸ್ಕರಿಸಬಹುದು ಎಂದು ಕೋರ್ಟ್ ಹೇಳಿದೆ. ಇದರ ಅರ್ಥ, ಅಪ್ರಾಪ್ತರ ಆಸ್ತಿಯನ್ನು ಅವರ ಪಾಲಕರು ಕೂಡ ವರ್ಗಾವಣೆ ಮಾಡುವಂತಿಲ್ಲ. ಅದು ತಪ್ಪು. ಒಂದು ವೇಳೆ ಹಾಗೇನಾದರೂ ಆಗಿದ್ದರೆ, ಆ ಮಕ್ಕಳು 18 ವರ್ಷ ಪೂರೈಸಿದ ಬಳಿಕ, ತಮ್ಮ ಅಪ್ಪ-ಅಮ್ಮ ಮಾಡಿರುವ ಈ ವರ್ಗಾವಣೆಯನ್ನು ತಿರಸ್ಕರಿಸಬಹುದು. ಅಂಥ ಸಂದರ್ಭದಲ್ಲಿ ಅವರು ಮೊಕದ್ದಮೆಯನ್ನು ಹೂಡಬೇಕು ಎನ್ನುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಕೋರ್ಟ್ ಮುಂದಿದ್ದ ಪ್ರಶ್ನೆ
ದಾವಣಗೆರೆಯ ಪ್ರಕರಣದಲ್ಲಿ ಕೋರ್ಟ್ ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ. 'ಕೆ.ಎಸ್. ಶಿವಪ್ಪ ವರ್ಸಸ್ ಶ್ರೀಮತಿ ಕೆ. ನೀಲಮ್ಮ' ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠವು ಈ ನಿರ್ಧಾರವನ್ನು ನೀಡಿದೆ. ಅಪ್ರಾಪ್ತ ವಯಸ್ಕರು ತಮ್ಮ ಪೋಷಕರು ಮಾಡಿರುವ ಈ ಮಾರಾಟ ಪತ್ರವನ್ನು ರದ್ದುಗೊಳಿಸಲು, ಪ್ರಾಪ್ತ ವಯಸ್ಕರಾದ ನಂತರ ನಿಗದಿತ ಸಮಯದೊಳಗೆ ಮೊಕದ್ದಮೆ ಹೂಡಬೇಕೇ ಎನ್ನುವ ಪ್ರಶ್ನೆ ಕೋರ್ಟ್ ಮುಂದಿತ್ತು. ಮಕ್ಕಳು ಪ್ರಾಪ್ತ ವಯಸ್ಕರಾದ ಮೂರು ವರ್ಷಗಳ ಒಳಗೆ ಮೊಕದ್ದಮೆಯ ಮೂಲಕ ಅದನ್ನು ಬಗೆಹರಿಸಿಕೊಳ್ಳುವ ಅಗತ್ಯವಿದೆಯೇ ಎನ್ನುವ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು.
ಕೋರ್ಟ್ ಹೇಳಿದ್ದೇನು?
ಈ ಬಗ್ಗೆ ಸ್ಪಷ್ಟ ಉತ್ತರ ನೀಡಿರುವ ನ್ಯಾಯಮೂರ್ತಿಗಳು, ಅಪ್ರಾಪ್ತ ವಯಸ್ಕರ ಆಸ್ತಿಯನ್ನು ಕೋರ್ಟ್ ಅನುಮತಿ ಇಲ್ಲದೆಯೇ ಅಡಮಾನ ಇಡಲು, ಮಾರಾಟ ಮಾಡಲು, ಉಡುಗೊರೆ ನೀಡಲು ಅಥವಾ ಬೇರೆ ರೀತಿಯಲ್ಲಿ ವರ್ಗಾಯಿಸಲು, ಗುತ್ತಿಗೆ ನೀಡಲು ಕಾನೂನುಬದ್ಧ ಹಕ್ಕು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 1956 ರ ಹಿಂದೂ ಅಲ್ಪಸಂಖ್ಯಾತರ ರಕ್ಷಕತ್ವ ಕಾಯ್ದೆಯ ಸೆಕ್ಷನ್ 7 ಮತ್ತು 8 ಅನ್ನು ನ್ಯಾಯಮೂರ್ತಿಗಳು ಉಲ್ಲೇಖಿಸುವ ಮೂಲಕ ಹೀಗೆ ಮಾಡಿದರೆ ಅದು ಪಾಲಕರ ತಪ್ಪಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಏನಿದು ಕೇಸ್?
ದಾವಣಗೆರೆಯ ಶಾಮನೂರು ಗ್ರಾಮದಲ್ಲಿ 56 ಮತ್ತು 57 ಸಂಖ್ಯೆಯ ಎರಡು ಪಕ್ಕದ ನಿವೇಶನಗಳ ವಿವಾದವಿತ್ತು. ಮೂಲತಃ ರುದ್ರಪ್ಪ ಎಂಬ ವ್ಯಕ್ತಿ 1971 ರಲ್ಲಿ ತನ್ನ ಮೂವರು ಅಪ್ರಾಪ್ತ ಮಕ್ಕಳಾದ ಮಹಾರುದ್ರಪ್ಪ, ಬಸವರಾಜ ಮತ್ತು ಮುಂಗೇಶಪ್ಪ ಅವರ ಹೆಸರಿನಲ್ಲಿ ಈ ನಿವೇಶನಗಳನ್ನು ಖರೀದಿಸಿದ್ದರು. ಜಿಲ್ಲಾ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯದೇ ರುದ್ರಪ್ಪನವರು ಈ ನಿವೇಶನಗಳನ್ನು ಬೇರೆಯವರಿಗೆ ಮಾರಾಟ ಮಾಡಿದರು. 56 ನೇ ನಿವೇಶನವನ್ನು ಎಸ್.ಐ. ಬಿದರಿ ಅವರಿಗೆ ಮಾರಾಟ ಮಾಡಲಾಯಿತು ಮತ್ತು ನಂತರ 1983 ರಲ್ಲಿ ಬಿ.ಟಿ. ಜಯದೇವಮ್ಮ ಅವರು ಖರೀದಿಸಿದರು. ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ಅದೇ ನಿವೇಶನವನ್ನು 1989 ರಲ್ಲಿ ಕೆ.ಎಸ್. ಶಿವಪ್ಪ ಎನ್ನುವವರಿಗೆ ಮಾರಾಟ ಮಾಡಿದರು.
ಆದರೆ ಈ ಜಮೀನಿಗೆ ಇದಾಗಲೇ ಜಯದೇವಮ್ಮ ಮಾಲೀಕರಾಗಿದ್ದರು. ಆದ್ದರಿಂದ ಅವರು ಮಾಲೀಕತ್ವವನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತು. ಉಳಿದ ಜಮೀನುಗಳ ಸ್ಥಿತಿ ಕೂಡ ಇದೇ ರೀತಿ ಆಯಿತು. ಇದನ್ನು ಈಗ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
