Father Arrested for Repeatedly Raping 14-Year-Old Daughter After Wife Leaves Over Alcoholism ಎರಡು ತಿಂಗಳಿನಿಂದ ತನ್ನ 14 ವರ್ಷದ ಮಗಳ ಮೇಲೆ ಪದೇ ಪದೇ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ 42 ವರ್ಷದ ವ್ಯಕ್ತಿಯನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಗುರುಗಾಂವ್ (ಅ.25): ಫರಿದಾಬಾದ್ ಪೊಲೀಸರು ತನ್ನ 14 ವರ್ಷದ ಮಗಳ ಮೇಲೆ ಹಲವು ದಿನಗಳಿಂದ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ 42 ವರ್ಷದ ಆಟೋರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. 7 ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆಯ ತಾಯಿ ಇತ್ತೀಚೆಗೆ ಕುಟುಂಬವನ್ನು ತೊರೆದಿದ್ದರು. ಗಂಡನ ಅತಿಯಾದ ಆಲ್ಕೋಹಾಲ್ ಚಟದಿಂದ ಬೇಸತ್ತಿದ್ದ ಹೆಂಡತಿ, ಗಂಡ-ಮಕ್ಕಳನ್ನು ಬಿಟ್ಟು ಬೇರೆಡೆಗೆ ಹೋಗಿದ್ದರು. ಪ್ರತಿ ರಾತ್ರಿ ಕುಡಿದು ಮನೆಗೆ ಹಿಂದಿರುಗಿದ ನಂತರ ಆರೋಪಿ ತನ್ನ ಹಿರಿಯ ಮಗಳನ್ನು ಗುರಿಯಾಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನಗೆ ಆಗುತ್ತಿದ್ದ ನೋವು ಹಾಗೂ ಸಂಕಟವನ್ನು ಆಕೆ ನೆರೆಹೊರೆಯ ವೃದ್ಧನಗೆ ತಿಳಿಸಿದ್ದಳು. ನಂತರ ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದರು. ವೈದ್ಯರು ಆಕೆಯ ವೈದ್ಯಕೀಯ ಸ್ಥಿತಿ ಮತ್ತು ಆಕೆ ಅನುಭವಿಸಿದ ಅಪರಾಧವನ್ನು ವೃದ್ಧ ವ್ಯಕ್ತಿಗೆ ತಿಳಿಸಿದರು. ಈ ವೇಳೆ ನೆರೆಹೊರೆಯ ವ್ಯಕ್ತಿ ಏನಾಯಿತು ಎಂದು ಸಂತ್ರಸ್ಥ ಬಾಲಕಿಗೆ ಕೇಳಿದಾಗ ಆಕೆ ತನ್ನ ಕಷ್ಟವನ್ನು ಬಹಿರಂಗಪಡಿಸಿದ್ದಾಳೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಪೋಕ್ಸೋ ಕೇಸ್ ದಾಖಲು
ಭೂಪಾನಿ ಪೊಲೀಸ್ ಠಾಣೆಯಲ್ಲಿ ತೀವ್ರತರವಾದ ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳಕ್ಕಾಗಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
