ಪಾಕಿಸ್ತಾನಕ್ಕೆ ಇದೆಂತಾ ಅವಮಾನ, ಒಂದೂ ಗೆಲುವಿಲ್ಲದೆ ವಿಶ್ವಕಪ್‌ನಿಂದ ಔಟ್!
ಪಾಕಿಸ್ತಾನಕ್ಕೆ ಘೋರ ಅವಮಾನವಾಗಿದೆ. ಐಸಿಸಿ ಮಹಿಳಾ ವಿಶ್ವಕಪ್ 2025ರಲ್ಲಿ ಪಾಕಿಸ್ತಾನ ತಂಡ ಒಂದೇ ಒಂದು ಪಂದ್ಯವನ್ನೂ ಗೆಲ್ಲದೆ 3 ಅಂಕಗಳೊಂದಿಗೆ ತನ್ನ ಅಭಿಯಾನ ಮುಗಿಸಿದೆ. ಆ ಅಂಕಗಳು ಕೂಡ ಪಂದ್ಯಗಳು ರದ್ದಾಗಿದ್ದರಿಂದ ಬಂದಿವೆ.

ಒಂದೇ ಒಂದು ಪಂದ್ಯವನ್ನೂ ಗೆಲ್ಲಲಾಗದ ಪಾಕಿಸ್ತಾನ ತಂಡ
ಐಸಿಸಿ ಮಹಿಳಾ ವಿಶ್ವಕಪ್ 2025ರಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಪ್ರದರ್ಶನ ಸಂಪೂರ್ಣ ನಿರಾಸೆ ಮೂಡಿಸಿದೆ. ಫಾತಿಮಾ ಸನಾ ನಾಯಕತ್ವದ ಪಾಕ್ ತಂಡ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿತು.
7 ಪಂದ್ಯಗಳು, 3 ಅಂಕಗಳು. ಪಾಕಿಸ್ತಾನದ ಕಳಪೆ ದಾಖಲೆ!
ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಒಟ್ಟು 7 ಪಂದ್ಯಗಳನ್ನಾಡಿ ಒಂದೂ ಗೆಲ್ಲದ ತಂಡ ಎಂಬ ಕಳಪೆ ದಾಖಲೆ ಬರೆದಿದೆ. 4ರಲ್ಲಿ ಸೋತಿದ್ದು, 3 ಪಂದ್ಯಗಳು ಮಳೆಯಿಂದ ರದ್ದಾಗಿವೆ. ಈ ಬಾರಿಯ ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ಏಕೈಕ ತಂಡ ಎನ್ನುವ ಕುಖ್ಯಾತಿಗೆ ಪಾಕ್ ಪಾತ್ರವಾಗಿದೆ.
ಭಾರತಕ್ಕೆ ಬರಲು ನಿರಾಕರಿಸಿದ ಪಾಕ್ ತಂಡ!
ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಬರಲು ನಿರಾಕರಿಸಿತ್ತು. ಹೀಗಾಗಿ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದ ಕೊಲಂಬೊದಲ್ಲಿ ಆಡಿತು. ಭಾರತ ಕೂಡ ಪಾಕ್ ವಿರುದ್ಧ ಸುಲಭ ಜಯ ಸಾಧಿಸಿತ್ತು.
ಮಹಿಳಾ ವಿಶ್ವಕಪ್ 2025ರ ಸೆಮಿಫೈನಲ್ ತಂಡಗಳು ಇವು
ಮಹಿಳಾ ವಿಶ್ವಕಪ್ 2025ರ ಲೀಗ್ ಹಂತ ಮುಗಿದು 4 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಿವೆ. ಅವುಗಳೆಂದರೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಭಾರತ.
ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ನಡುವೆ ಮತ್ತೊಂದು ಥ್ರಿಲ್ಲರ್
ಸೆಮಿಫೈನಲಿಸ್ಟ್‌ಗಳು ಖಚಿತವಾಗಿದ್ದರೂ, ಅಗ್ರಸ್ಥಾನಕ್ಕಾಗಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಲೀಗ್ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ. ಈ ಪಂದ್ಯವು ರೋಚಕವಾಗಿ ಸಾಗುವ ನಿರೀಕ್ಷೆಯಿದೆ.