LIVE NOW
Published : Feb 25, 2026, 06:52 AM ISTUpdated : Feb 25, 2026, 11:55 PM IST

India Latest News Live: Palestine - ಇಸ್ರೇಲ್ ಸಂಸತ್ತಿನಲ್ಲಿ ಮೋದಿ ಐತಿಹಾಸಿಕ ಭಾಷಣ; ಪ್ಯಾಲೆಸ್ತೀನ್‌ ಶಾಂತಿಗೆ ಭಾರತದ ಬೆಂಬಲ!

ಸಾರಾಂಶ

ಹೈದರಾಬಾದ್‌: ಇಲ್ಲಿನ ದ್ವಿಮುಖಿ ಆಂಜನೇಯ ದೇಗುಲದಲ್ಲಿನ ಆಂಜನೇಯ ಮೂರ್ತಿಯ ಹಣೆಯಲ್ಲಿದ್ದ ಸಿಂದೂರವನ್ನು ಅಳಿಸಿಹಾಕಿ ವಿರೂಪಗೊಳಿಸಿದ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.

ಅತ್ತ ಘಟನೆಯನ್ನು ಖಂಡಿಸಿರುವ ಬಿಜೆಪಿಯ ರಾಜ್ಯಾಧ್ಯಕ್ಷ ಎನ್‌. ರಾಮಚಂದ್ರರಾವ್‌, ‘ತೆಲಂಗಾಣದಲ್ಲಿ ಒಂದರಹಿಂದೊಂದರಂತೆ ನಡೆಯುತ್ತಿರುವ ಇಂತಹ ಘಟನೆಗಳು ಪ್ರತ್ಯೇಕ ಪ್ರಕರಣಗಳಲ್ಲ. ಬದಲಿಗೆ ಸನಾತನ ಧರ್ಮದ ವಿರುದ್ಧದ ಯೋಜಿತ ಸಂಚು. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಮಾರಕ’ ಎಂದಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜತೆಗೆ, ವೋಟ್‌ಬ್ಯಾಂಕ್‌ ರಾಜಕಾರಣದಲ್ಲಿ ತೊಡಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇಂತಹ ಸಮಾಜವಿರೋಧಿ ಕೃತ್ಯಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಕಿಡಿ ಕಾರಿದ್ದಾರೆ.

11:55 PM (IST) Feb 25

Palestine - ಇಸ್ರೇಲ್ ಸಂಸತ್ತಿನಲ್ಲಿ ಮೋದಿ ಐತಿಹಾಸಿಕ ಭಾಷಣ; ಪ್ಯಾಲೆಸ್ತೀನ್‌ ಶಾಂತಿಗೆ ಭಾರತದ ಬೆಂಬಲ!

ಇಸ್ರೇಲ್‌ನ ಸಂಸತ್ತು 'ನೆಸೆಟ್‌'ನಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ಪ್ರಧಾನಿ ಮೋದಿ, ಪ್ಯಾಲೆಸ್ತೀನ್‌ಗಾಗಿ 'ಗಾಝಾ ಶಾಂತಿ ಯೋಜನೆ'ಗೆ ಬೆಂಬಲ ಸೂಚಿಸಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು, ಮೋದಿಯವರನ್ನು 'ಸಹೋದರ' ಎಂದು ಬಣ್ಣಿಸಿದ್ದು, ಈ ಭೇಟಿ ಭಾರತ-ಇಸ್ರೇಲ್ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
Read Full Story

11:17 PM (IST) Feb 25

ನೆಗೆಟಿವ್ ಪಾಲಿಟಿಕ್ಸ್‌ನ ಪೋಸ್ಟರ್ ಬಾಯ್' ರಾಹುಲ್ ಗಾಂಧಿ, ವಿದೇಶಿ ಶಕ್ತಿಗಳ ಕೈಗೊಂಬೆ, ಪಿಯೂಷ್ ಗೋಯಲ್ ಗಂಭೀರ ಆರೋಪ!

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರನ್ನು 'ನೆಗೆಟಿವ್ ಪಾಲಿಟಿಕ್ಸ್‌ನ ಪೋಸ್ಟರ್ ಬಾಯ್, 'ವಿದೇಶಿ ಶಕ್ತಿಗಳ ಕೈಗೊಂಬೆ' ಎಂದು ಕರೆದಿದ್ದಾರೆ.  ಜಾರ್ಜ್ ಸೊರೊಸ್‌ನಂತಹ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Read Full Story

11:10 PM (IST) Feb 25

ಮಾತು ಬಾರದ, ಕಿವಿ ಕೇಳದ ಯುವಕನ ಹನಿಟ್ರ್ಯಾಪ್‌ಗೆ ಯತ್ನ, ಸುಂದರಿ Safna ಗ್ಯಾಂಗ್‌ ಬಂಧಿಸಿ ಜೈಲಿಗಟ್ಟಿದ ಪೊಲೀಸ್‌!

ಇನ್‌ಸ್ಟಾಗ್ರಾಮ್ ಮೂಲಕ ವಿಕಲಚೇತನ ಯುವಕನ ಸ್ನೇಹ ಬೆಳೆಸಿದ ಮಹಿಳೆಯೊಬ್ಬಳು, ಆತನನ್ನು ಹೋಟೆಲ್‌ಗೆ ಕರೆಸಿ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ್ದಾಳೆ. ಯುವಕನ ಮೇಲೆ ಹಲ್ಲೆ ನಡೆಸಿ, ಹಣ ಸುಲಿಗೆಗೆ ಯತ್ನಿಸಿದ ಮಹಿಳೆ ಸೇರಿದಂತೆ ನಾಲ್ವರನ್ನು ಕೊಚ್ಚಿಯ ಕಡವಂತ್ರ ಪೊಲೀಸರು ಬಂಧಿಸಿದ್ದಾರೆ.
Read Full Story

10:56 PM (IST) Feb 25

Telangana Crime - ಮಗು ಅಳ್ತಿದೆ ಅಂತಾ ಬಾಯಿಗೆ ಬಟ್ಟೆ ತುರುಕಿ, ಉರಿವ ಬೆಂಕಿಯಲ್ಲಿ ಜೀವಂತ ಸುಟ್ಟ ತಾಯಿ!

ತೆಲಂಗಾಣದ ಬೌರಂಪೇಟ್‌ನಲ್ಲಿ ಎರಡು ತಿಂಗಳ ಗಂಡು ಮಗುವನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಸಂಬಂಧ ಮಗುವಿನ ವಲಸೆ ಕಾರ್ಮಿಕರಾದ ಪೋಷಕರನ್ನು ಬಂಧಿಸಲಾಗಿದೆ. ಮಗುವಿನ ಬಾಯಿಗೆ ಬಟ್ಟೆ ತುರುಕಿ, ಕಾಲುಗಳನ್ನು ಕಟ್ಟಿ ಬೆಂಕಿಯ ಕುಂಡದಲ್ಲಿ ಶವವನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read Full Story

09:23 PM (IST) Feb 25

'ಹಿಂದೂ ಹುಡುಗಿ ಮುಸ್ಲಿಂ ಯುವಕನ ಮದುವೆ ಆದ್ರೆ ದೇಶದ ಏಕತೆ ಹಾಳಾಗುತ್ತಾ?' ಪ್ರಶ್ನೆ ಮಾಡಿದ ಸುಪ್ರೀಂ ಕೋರ್ಟ್‌!

SC Refuses to Ban 'Yadav Ji Ki Love Story': Key Remarks "ಯಾದವ್ ಜಿ ಕಿ ಲವ್ ಸ್ಟೋರಿ" ಚಿತ್ರಕ್ಕೆ ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಯಾದವ ಸಮುದಾಯದ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ಪ್ರೇಮಕಥೆಯು ರಾಷ್ಟ್ರದ ಏಕತೆಗೆ ಧಕ್ಕೆ ತರುತ್ತದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.

Read Full Story

09:20 PM (IST) Feb 25

ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್' ಸಿನಿಮಾದ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಕೇರಳವನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ವಿಚಾರಣೆ ಮುಗಿಯುವವರೆಗೆ ಚಿತ್ರವನ್ನು ಬಿಡುಗಡೆ ಮಾಡದಂತೆ ನಿರ್ಮಾಪಕರಿಗೆ ನಿರ್ದೇಶನ ನೀಡಿದೆ. 

Read Full Story

08:56 PM (IST) Feb 25

Dina Semte - ಇಸ್ರೇಲ್‌ನಲ್ಲಿ ಮೋದಿ ಸ್ವಾಗತಕ್ಕೆ ಹಾಡಿದ ಮಣಿಪುರದ ಅಂಧ ಗಾಯಕಿ! ಸ್ಪೂರ್ತಿದಾಯಕ ಕಥೆ ಇಲ್ಲಿದೆ

ಪ್ರಧಾನಿ ಮೋದಿಯವರ ಐತಿಹಾಸಿಕ ಇಸ್ರೇಲ್ ಪ್ರವಾಸ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಮಣಿಪುರ ಮೂಲದ ಅಂಧ ಗಾಯಕಿ ದಿನಾ ಸೆಮ್ಟೆ ಅವರ ಸಂಗೀತ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿತ್ತು. ಈ ಭೇಟಿಯು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
Read Full Story

08:52 PM (IST) Feb 25

ಬೇರೆಯವರ ಪತಿಯ ಮೇಲೆ ಬಿತ್ತು ಈ ಸ್ಟಾರ್​ ನಟಿಯರ ಕಣ್ಣು - ಟಾಪ್​ ಲಿಸ್ಟ್​ನಲ್ಲಿ ಯಾರಿದ್ದಾರೆ ನೋಡಿ!

ಸಿನಿಮಾ ರಂಗದಲ್ಲಿ ಸಂಬಂಧಗಳು ವಿಚಿತ್ರ ತಿರುವುಗಳನ್ನು ಪಡೆಯುತ್ತವೆ. ನಯನತಾರಾ, ಕಂಗನಾ, ಹನ್ಸಿಕಾ ಸೇರಿದಂತೆ ಹಾಲಿವುಡ್‌ನ ಏಂಜಲೀನಾ ಜೋಲೀ, ಬ್ರಿಟ್ನಿ ಸ್ಪಿಯರ್ಸ್‌ರಂತಹ ಖ್ಯಾತ ನಟಿಯರು ಬೇರೊಬ್ಬರ ಪತಿಯೊಂದಿಗೆ ಸಂಬಂಧ ಹೊಂದುವ ಮೂಲಕ ವಿವಾದಕ್ಕೆ ಸಿಲುಕಿದ ಘಟನೆಗಳನ್ನು ಈ ಲೇಖನ ವಿವರಿಸುತ್ತದೆ.
Read Full Story

08:27 PM (IST) Feb 25

ಇಬ್ಬರು ನಟಿಯರ ಜಗಳದಲ್ಲಿ ಕಾಜೋಲ್ ಪಾಲಾದ ಅಜಯ್​ ದೇವಗನ್​! Anniversy ದಿನ ರೋಚಕ ಸ್ಟೋರಿ ರಿವೀಲ್​

ಕಾಜೋಲ್ ಮತ್ತು ಅಜಯ್ ದೇವಗನ್ ಅವರ 27ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅಜಯ್‌ಗಾಗಿ ಇಬ್ಬರು ಪ್ರಮುಖ ನಟಿಯರಾದ ರವೀನಾ ಟಂಡನ್ ಮತ್ತು ಕರಿಷ್ಮಾ ಕಪೂರ್ ನಡುವೆ ನಡೆದಿದ್ದ ಜಗಳದ ಹಳೆಯ ಕಥೆಯೊಂದು ಮುನ್ನೆಲೆಗೆ ಬಂದಿದೆ.  

Read Full Story

08:06 PM (IST) Feb 25

ಒಂದು ಸರ್ಕಾರಿ ಭೇಟಿಗೆ ಒಳಉಡುಪು ಸೇರಿ ನೂರೆಂಟು ಬೇಡಿಕೆ ಇಟ್ಟ BSNL ಅಧಿಕಾರಿ - ತನಿಖೆಗೆ ಆದೇಶಿಸಿದ ಸಚಿವರು

ಬಿಎಸ್‌ಎನ್‌ಎಲ್‌ನ ಹಿರಿಯ ನಿರ್ದೇಶಕ ವಿವೇಕ್ ಬಂಝಲ್ ಅವರು ತಮ್ಮ ಪ್ರಯಾಗ್‌ರಾಜ್ ಭೇಟಿಗಾಗಿ ಶಿಷ್ಟಾಚಾರದ ಹೆಸರಿನಲ್ಲಿ ವೈಯಕ್ತಿಕ ಬೇಡಿಕೆಗಳ ದೊಡ್ಡ ಪಟ್ಟಿ ನೀಡಿದ್ದು. ಈ ಆದೇಶ ವೈರಲ್ ಆಗಿ ತೀವ್ರ ವಿವಾದಕ್ಕೀಡಾಗಿದೆ ಕೇಂದ್ರ ಸಚಿವರು ತನಿಖೆಗೆ ಆದೇಶಿಸಿದ್ದಾರೆ, ಜೊತೆಗೆ ಅವರ ಪ್ರವಾಸವೂ ರದ್ದಾಗಿದೆ.

Read Full Story

07:46 PM (IST) Feb 25

ಪ್ರೇಮವೈಫಲ್ಯಕ್ಕೆ ನೊಂದು 21ನೇ ವಯಸ್ಸಿಗೆ ಜೀವನ ಮುಗಿಸಿದ ಪ್ರಖ್ಯಾತ ಯೂಟ್ಯೂಬರ್‌!

ತೆಲುಗಿನ ಜನಪ್ರಿಯ ಯೂಟ್ಯೂಬರ್ ಕೋಮಲಿ (21) ಪ್ರೇಮ ವೈಫಲ್ಯದಿಂದಾಗಿ ಹೈದರಾಬಾದ್‌ನಲ್ಲಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಮಾಜಿ ಪ್ರಿಯತಮ ನಿಖಿಲ್ ರೆಡ್ಡಿ ಜೊತೆಗಿನ ಮನಸ್ತಾಪದಿಂದ ಖಿನ್ನತೆಗೆ ಒಳಗಾಗಿದ್ದ ಅವರು, ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. 

Read Full Story

06:56 PM (IST) Feb 25

ವಿಜಯ್​ಗೆ 2018ರಲ್ಲಿ ಮೊದಲ ಬಾರಿ ಕಿಸ್​ - ಆ ಶಾಕಿಂಗ್ ಅನುಭವ ನೆನಪಿಸಿಕೊಂಡ Rashmika Mandanna

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿಯ ನಡುವೆಯೇ, ವಿಜಯ್ ಜೊತೆಗಿನ ತಮ್ಮ ಮೊದಲ   ಕಿಸ್ಸಿಂಗ್ ಅನುಭವವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ನೂರಾರು ಜನರ ಮುಂದೆ ಕಿಸ್ ಮಾಡಲು ಆರಂಭದಲ್ಲಿ ಮುಜುಗರವಾದರೂ, ವಿಜಯ್ ಅವರ ಸಹಕಾರದಿಂದ ಆ ದೃಶ್ಯವನ್ನು ಸುಲಭವಾಗಿ ಮಾಡಿದೆ ಎಂದಿದ್ದಾರೆ.

Read Full Story

06:54 PM (IST) Feb 25

ಆರ್‌ಸಿಬಿ ಖರೀದಿಗೆ ಮುಗಿಬಿದ್ದ ಕುಬೇರರು - ಮಾರ್ಚ್ ಅಂತ್ಯಕ್ಕೆ ಹೊಸ ಮಾಲೀಕರ ತೆಕ್ಕೆಗೆ ಬೆಂಗಳೂರು ಟೀಮ್‌?

RCB Team Sale: Diageo Sets March Deadline for RCB ಡಿಯಾಜಿಯೊ ಒಡೆತನದ ಯುನೈಟೆಡ್ ಸ್ಪಿರಿಟ್ಸ್, ತನ್ನ ಅಂಗಸಂಸ್ಥೆಯಾದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RCSPL) ಅನ್ನು ಮಾರಾಟ ಮಾಡುತ್ತಿದೆ. ಮಾರ್ಚ್ ಅಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Read Full Story

06:12 PM (IST) Feb 25

ಲವ್​ ಜಿಹಾದ್​ಗೆ ಸಿಲುಕಿ ಕ್ರಿಕೆಟಿಗನ ಮದುವೆಯಾದ ಬಾಲಿವುಡ್​ ಬ್ಯೂಟಿ ರೀನಾ? ದುರಂತದ ಕಥೆ ರಿವೀಲ್​!

70-80ರ ದಶಕದ ನಟಿ ರೀನಾ ರಾಯ್, ಶತ್ರುಘ್ನ ಸಿನ್ಹಾ ಜೊತೆಗಿನ ಪ್ರೀತಿ ಮುರಿದುಬಿದ್ದ ನಂತರ ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ ಅವರನ್ನು ವಿವಾಹವಾದರು. ಆದರೆ, ಸಾಂಸಾರಿಕ ಭಿನ್ನಾಭಿಪ್ರಾಯದಿಂದ ಈ ಮದುವೆ ಮುರಿದುಬಿದ್ದು, ಮಗಳ ಪಾಲನೆಗಾಗಿ ಅವರು ಹೋರಾಡಬೇಕಾಯಿತು.
Read Full Story

05:56 PM (IST) Feb 25

ರೈಲಿನಲ್ಲಿ ಚೆಲ್ಲಿದ್ದ ಚಿಪ್ಸ್‌ನ್ನು ಪುಟ್ಟ ಮಗನ ಕೈಯಲ್ಲೇ ಹೆಕ್ಕಿಸಿ ಆತನಿಗೆ ಮೂಲಭೂತ ಕರ್ತವ್ಯದ ಪಾಠ ಮಾಡಿದ ಅಪ್ಪ

ಟ್ರಾವೆಲ್ ವ್ಲಾಗರ್ ದೀಪಕ್ ಸಮಲ್ ಅವರು ತಮ್ಮ ಮಗ ರೈಲಿನಲ್ಲಿ ಚಿಪ್ಸ್ ಚೆಲ್ಲಿದಾಗ, ಅದನ್ನು ಮಗುವಿನ ಕೈಯಲ್ಲೇ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಮೂಲಭೂತ ಕರ್ತವ್ಯದ ಬಗ್ಗೆ ಪಾಠ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ.

Read Full Story

05:28 PM (IST) Feb 25

PM Modi Israel visit - ಭಾರತ-ಇಸ್ರೇಲ್‌ನ ಈ ಒಪ್ಪಂದ ಪಾಕಿಸ್ತಾನದ ನಿದ್ದೆಗೆಡಿಸಿದೆ, ಮುಸ್ಲಿಂ ರಾಷ್ಟ್ರಗಳ ವಿರುದ್ಧದ ಪಿತೂರಿ ಎಂದ ಪಾಕ್!

Modi Netanyahu Summit ಪ್ರಧಾನಿ ನರೇಂದ್ರ ಮೋದಿಯವರ ಐತಿಹಾಸಿಕ ಇಸ್ರೇಲ್ ಭೇಟಿಯು ಪಾಕಿಸ್ತಾನದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಭಾರತ-ಇಸ್ರೇಲ್ ನಡುವಿನ ಸಂಭಾವ್ಯ ರಕ್ಷಣಾ ಒಪ್ಪಂದಗಳು ಮತ್ತು 'ಷಟ್ಕೋನ' ಮೈತ್ರಿಯ ಪ್ರಸ್ತಾಪವನ್ನು ವಿರೋಧಿಸಿ ಪಾಕಿಸ್ತಾನದ ಸೆನೆಟ್ ನಿರ್ಣಯ ಅಂಗೀಕರಿಸಿದೆ.

Read Full Story

05:11 PM (IST) Feb 25

ನಕಲಿ ಕಾನೂನು ಪದವಿಯೊಂದಿಗೆ ಹೈಕೋರ್ಟ್‌ನಲ್ಲಿ 5 ವರ್ಷಗಳ ಕಾಲ ಜಡ್ಜ್‌ ಆಗಿ ಸೇವೆ ಸಲ್ಲಿಸಿದ ವ್ಯಕ್ತಿ

ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ವ್ಯಕ್ತಿಯೊಬ್ಬರು ನಕಲಿ ಕಾನೂನು ಪದವಿ ಪ್ರಮಾಣಪತ್ರ ಬಳಸಿ ಐದು ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಶೈಕ್ಷಣಿಕ ದಾಖಲೆಗಳು ನಕಲಿ ಎಂದು ಸಾಬೀತಾದ ನಂತರ, ಹೈಕೋರ್ಟ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
Read Full Story

04:56 PM (IST) Feb 25

Shirtless Protest - ಶರ್ಟ್ ಬಿಚ್ಚಿ ಪ್ರತಿಭಟನೆ - ಇದೊಂದು ನಾಚಿಕೆಗೇಡು, ಕಾಂಗ್ರೆಸ್ ವಿರುದ್ಧ ನಿರ್ಮಲಾ ಗರಂ

AI ಶೃಂಗಸಭೆಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 'ತುರ್ತು ಪರಿಸ್ಥಿತಿ'ಗೆ ಹೋಲಿಸಿ ತೀವ್ರವಾಗಿ ಟೀಕಿಸಿದ್ದಾರೆ. ಪೊಲೀಸರು 8 ಜನರನ್ನು ಬಂಧಿಸಿದ್ದರೆ, ರಾಹುಲ್ ಗಾಂಧಿ ಪ್ರತಿಭಟನಾಕಾರರನ್ನು 'ಬಬ್ಬರ್ ಶೇರ್ ಎಂದು ಹೊಗಳಿದ್ದಾರೆ.

Read Full Story

04:50 PM (IST) Feb 25

IDFC ಬ್ಯಾಂಕ್‌ ಹಗರಣ - ಹೆಂಡ್ತಿ ಮಾಯಾಜಾಲಕ್ಕೆ ಸಿಲುಕಿದ ಮ್ಯಾನೇಜರ್‌, 300 ಕೋಟಿ ಹಣವನ್ನ ಭಾವನ ಕಂಪನಿಗೆ ಹಾಕಿದ!

ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಚಂಡೀಗಢ ಶಾಖೆಯಲ್ಲಿ ನಡೆದ ₹590 ಕೋಟಿ ವಂಚನೆ ಪ್ರಕರಣದಲ್ಲಿ, ಮಾಜಿ ಮ್ಯಾನೇಜರ್ ರಿಭವ್ ರಿಷಿ ತನ್ನ ಪತ್ನಿಯ ಕಂಪನಿಗೆ ಹಣ ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ. ಹರಿಯಾಣ ಭ್ರಷ್ಟಾಚಾರ ವಿರೋಧಿ ದಳವು ರಿಷಿ, ಆತನ ಪತ್ನಿ ಸೇರಿದಂತೆ ನಾಲ್ವರನ್ನು ಬಂಧಿಸಿದೆ,

Read Full Story

04:30 PM (IST) Feb 25

ನಿರ್ಭಯಾ ಕೇಸ್​ನಿಂದ ಶಿವಮೊಗ್ಗದ ಸಂಕೇತ್​ ಕೊ*ಲೆಯವರೆಗೆ ಅದೇ ಅಪ್ರಾಪ್ತರು! ಸತ್ಯ ಮಾತ್ರ ಘನಘೋರ

ಶಿವಮೊಗ್ಗದಲ್ಲಿ ಸ್ನೇಹಿತನನ್ನು ರಕ್ಷಿಸಲು ಹೋಗಿ ಅಪ್ರಾಪ್ತರಿಂದ ಹ*ತ್ಯೆಯಾದ ಸಂಕೇತ್ ಘಟನೆಯು, ಅಪ್ರಾಪ್ತ ಅಪರಾಧಿಗಳಿಗೆ ನಮ್ಮ ಕಾನೂನಿನಲ್ಲಿ ಸಿಗುವ ರಕ್ಷಣೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.  ಗಂಭೀರ ಅಪರಾಧ ಎಸಗಿದರೂ ಅಪ್ರಾಪ್ತರಿಗೆ ಸಿಗುವ ಕಾನೂನು ವಿನಾಯಿತಿ ಮತ್ತು ಅದರ ದುರ್ಬಳಕೆಯ ಕರಾಳ ಸತ್ಯ ಇಲ್ಲಿದೆ

Read Full Story

04:22 PM (IST) Feb 25

Keralam Rename - ಕೇರಳಕ್ಕೆ 'ಕೇರಳಂ' ಅಂತ ಗ್ರೀನ್ ಸಿಗ್ನಲ್, ಆದ್ರೆ ಬಂಗಾಳದ 'ಬಾಂಗ್ಲಾ' ಪ್ರಸ್ತಾಪಕ್ಕೆ ಯಾಕೆ ಬ್ರೇಕ್?

Keralam Rename ಕೇರಳ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಮಲಯಾಳಂ ಭಾಷೆಯ ಮೂಲ ಹೆಸರಿಗೆ ಮನ್ನಣೆ ನೀಡುವ ಈ ಪ್ರಸ್ತಾಪಕ್ಕೆ ಸಂಸತ್ತಿನ ಅನುಮೋದನೆ ಇನ್ನೂ ಬಾಕಿ ಇದೆ. ಈ ಮೂಲಕ ರಾಜ್ಯದ ಭಾಷಾ ಪರಂಪರೆಗೆ ಗೌರವ ಸಲ್ಲಿಸಲಾಗಿದೆ.

Read Full Story

04:04 PM (IST) Feb 25

ಹೋಮ್‌ಸ್ಟೇಯಲ್ಲಿ ಹೆಣವಾಗಿ ಪತ್ತೆಯಾದ ಮಾಜಿ ಸಿಎಂ ಮೊಮ್ಮಗ!

Former Jharkhand CM Champai Soren’s Grandson Found Dead in Manali ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರ 19 ವರ್ಷದ ಮೊಮ್ಮಗ ವೀರ್ ಸೊರೇನ್, ಸ್ನೇಹಿತರೊಂದಿಗೆ ಮನಾಲಿಗೆ ಪ್ರವಾಸಕ್ಕೆ ತೆರಳಿದ್ದಾಗ ಹೋಂಸ್ಟೇಯೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 

Read Full Story

02:56 PM (IST) Feb 25

ಮದುವೆ ಮಂಟಪದಲ್ಲೇ ಕ್ಯಾಮರಾ ಮುಂದೆಯೇ ವಧುವಿಗೆ ಗುಂಡೇಟು - ಮದ್ವೆ ವೀಡಿಯೋದಲ್ಲಿ ದೃಶ್ಯ ಸೆರೆ

ಬಿಹಾರದ ಬಕ್ಸರ್‌ನಲ್ಲಿ ಮದುವೆ ಮಂಟಪದಲ್ಲೇ ವಧುವಿಗೆ ನೆರೆಮನೆಯ ಯುವಕನೋರ್ವ ಗುಂಡಿಕ್ಕಿದ್ದಾನೆ. ಪ್ರೇಮ ಪ್ರಕರಣದ ಶಂಕೆಯಿದ್ದು, ಗಂಭೀರವಾಗಿ ಗಾಯಗೊಂಡ ವಧುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

01:47 PM (IST) Feb 25

ಹೆಣ್ಣು ಮಕ್ಕಳು ಗಂಡು ಮಕ್ಕಳೆಂದು ತಾರತಮ್ಯ ಮಾಡುತ್ತಿದ್ದ ತಂದೆಯನ್ನು ಕತ್ತು ಸೀಳಿ ಕೊಂದ ಸೋದರಿಯರು

ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ, ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ನಿರಂತರ ತಾರತಮ್ಯ ಮಾಡುತ್ತಿದ್ದ ತಂದೆಯ ವರ್ತನೆಯಿಂದ ಬೇಸತ್ತ ಇಬ್ಬರು ಸೋದರಿಯರು ಆತನನ್ನು ಕೊಲೆ ಮಾಡಿದ್ದಾರೆ. ಕುಟುಂಬದ ಇತರ ಸದಸ್ಯರಿಗೆ ನಿದ್ರೆ ಮಾತ್ರೆ ನೀಡಿ, ತಂದೆ ಮಲಗಿದ್ದಾಗ ಚಾಕುವಿನಿಂದ ಕತ್ತು ಸೀಳಿ ಹತ್ಯೆಗೈದಿದ್ದಾರೆ.
Read Full Story

01:32 PM (IST) Feb 25

ದೇಶದ ಗಮನ ಸೆಳೆದ ಬೆಂಗಳೂರು ವಿಮಾನ ನಿಲ್ದಾಣದ ಇಡ್ಲಿ! ಜಾಲತಾಣದಲ್ಲಿ ಇದರದ್ದೇ ಹವಾ- ಅಂಥದ್ದೇನಿದೆ ನೋಡಿ!

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ತುಪ್ಪದ ಇಡ್ಲಿಗೆ ₹315  ವಿಧಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದುಬಾರಿ ಬೆಲೆಯ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಇದನ್ನು ಅನಿವಾರ್ಯ ಎಂದರೆ, ಕೆಲವರು ಇದು ಮೋಸ ಎಂದು ವಾದಿಸುತ್ತಿದ್ದಾರೆ

Read Full Story

12:06 PM (IST) Feb 25

ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಮ್ಯಾಚ್ ನಡಿಯೋದೇ ಡೌಟ್! ಪಾಕ್ ಸೋಲಿನಿಂದ ತಲೆಕೆಳಗಾದ ಲೆಕ್ಕಾಚಾರ

ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿಸಲಾಗುತ್ತಿದ್ದ ಭಾರತ-ಪಾಕಿಸ್ತಾನ ಸೆಮಿಫೈನಲ್ ಪಂದ್ಯವು ನಡೆಯುವುದಿಲ್ಲ. ಸೂಪರ್ 8 ಹಂತದ ಸದ್ಯದ ಸ್ಥಿತಿಗತಿ ಮತ್ತು ಐಸಿಸಿ ನಿಯಮಗಳ ಪ್ರಕಾರ, ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ಗಣಿತದ ಸಾಧ್ಯತೆಗಳು ಮುಗಿದುಹೋಗಿವೆ.  

Read Full Story

11:34 AM (IST) Feb 25

ಗಣಿ ಅಧಿಕಾರಿ ಮೊಹಂತಿ ಮನೆಯಲ್ಲಿ ನೋಟುಗಳ ರಾಶಿ, 4 ಕೋಟಿ ಪತ್ತೆ; ಮುಂದುವರಿದ ಎಣಿಕೆ

ಕಲ್ಲಿದ್ದಲು ಉದ್ಯಮಿಯಿಂದ 30 ಸಾವಿರ ರೂ. ಲಂಚ ಪಡೆದ ಆರೋಪದ ಮೇಲೆ ಗಣಿ ಉಪ ನಿರ್ದೇಶಕ ಮೊಹಂತಿ ಅವರನ್ನು ಬಂಧಿಸಲಾಗಿದೆ. ಬಂಧನದ ನಂತರ, ವಿಜಿಲೆನ್ಸ್ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಅವರ ಮನೆಯಲ್ಲಿ ಸುಮಾರು 4 ಕೋಟಿ ರೂ. ನಗದು, 130 ಗ್ರಾಂ ಚಿನ್ನ ಮತ್ತು ಎರಡು ಐಷಾರಾಮಿ ಮನೆಗಳು ಪತ್ತೆಯಾಗಿವೆ. 

Read Full Story

11:27 AM (IST) Feb 25

ಅಷ್ಟಕ್ಕೂ ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ತಂದೆಗೆ ಏನಾಗಿದೆ? ರಿಂಕು ದಿಢೀರ್ ತಂಡ ತೊರೆದಿದ್ದೇಕೆ?

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಭಾಗವಾಗಿರುವ ರಿಂಕು ಸಿಂಗ್, ಇದೀಗ ದಿಢೀರ್ ಎನ್ನುವಂತೆ ಭಾರತ ತಂಡ ತೊರೆದು ಮನೆಗೆ ವಾಪಾಸ್ಸಾಗಿದ್ದಾರೆ. ಅವರ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

 

Read Full Story

10:54 AM (IST) Feb 25

ತಾಂತ್ರಿಕ ದೋಷದಿಂದಾಗಿ ಅಂಡಮಾನ್ ಸಮುದ್ರದಲ್ಲಿ ಪತನಗೊಂಡ ಏಳು ಜನರಿದ್ದ ಹೆಲಿಕಾಪ್ಟರ್ ಪತನ

ಅಂಡಮಾನ್‌ನಲ್ಲಿ ಪವನ್ ಹ್ಯಾನ್ಸ್‌ಗೆ ಸೇರಿದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ಸಮುದ್ರದಲ್ಲಿ ಪತನಗೊಂಡಿದೆ. ಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ಹೆಲಿಕಾಪ್ಟರ್ ಅನ್ನು ಸುರಕ್ಷಿತವಾಗಿ ಸಮುದ್ರದಲ್ಲಿ ಇಳಿಸಲಾಗಿದ್ದು, ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಪ್ರಯಾಣಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.
Read Full Story

10:02 AM (IST) Feb 25

ಸದ್ಯಕ್ಕೆ ಸಂಜು ಸ್ಯಾಮ್ಸನ್ ಬೇಡ; ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಇರ್ಫಾನ್ ಪಠಾಣ್ ಆರಿಸಿದ ಭಾರತದ ಪ್ಲೇಯಿಂಗ್ XI ಹೀಗಿದೆ

ಟಿ20 ವಿಶ್ವಕಪ್ ಸೂಪರ್ 8 ಹಂತದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಸೆಣಸಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ ಖಚಿತ. ತಿಲಕ್ ಮತ್ತು ಅಭಿಷೇಕ್ ಫಾರ್ಮ್‌ನಲ್ಲಿ ಇಲ್ಲ. ಯಾರನ್ನು ಕೈಬಿಡುತ್ತಾರೆ ಎನ್ನುವ ಕುತೂಹಲವಿದೆ.  ಈ ನಡುವೆ ಇರ್ಫಾನ್ ಪಠಾಣ್ ತಮ್ಮ ಆಯ್ಕೆಯ ಪ್ಲೇಯಿಂಗ್ XI ಪ್ರಕಟಿಸಿದ್ದಾರೆ.

Read Full Story

09:30 AM (IST) Feb 25

ಜಿಂಬಾಬ್ವೆ ಎದುರಿನ ಮಹತ್ವದ ಪಂದ್ಯಕ್ಕೂ ಮುನ್ನ ಮನೆಯತ್ತ ಓಡಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ! ಅಷ್ಟಕ್ಕೂ ಆಗಿದ್ದೇನು?

ಟಿ20 ವಿಶ್ವಕಪ್‌ನ ಸೂಪರ್-8 ಹಂತದ ನಿರ್ಣಾಯಕ ಪಂದ್ಯಕ್ಕೂ ಮುನ್ನ, ಸ್ಟಾರ್ ಫಿನಿಶರ್ ರಿಂಕು ಸಿಂಗ್ ಕುಟುಂಬದ ತುರ್ತು ಪರಿಸ್ಥಿತಿಯಿಂದಾಗಿ ತವರಿಗೆ ಮರಳಿದ್ದಾರೆ. ಜಿಂಬಾಬ್ವೆ ವಿರುದ್ಧದ 'ಮಾಡು ಇಲ್ಲವೇ ಮಡಿ' ಪಂದ್ಯದಲ್ಲಿ ಅವರ ಅನುಪಸ್ಥಿತಿಯು ತಂಡಕ್ಕೆ ಹಿನ್ನಡೆಯಾಗಿದೆ.

Read Full Story

08:58 AM (IST) Feb 25

ಟಿ20ಯಲ್ಲಿ ಟೆಸ್ಟ್ ಆಟ; ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಪಾಕ್ ಕ್ರಿಕೆಟಿಗ ಬಾಬರ್ ಅಜಂ!

ಟಿ20 ವಿಶ್ವಕಪ್ ಇತಿಹಾಸದಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ, ಪಾಕಿಸ್ತಾನದ ಬಾಬರ್ ಅಜಂ ಅತಿ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ ಆಟಗಾರ ಎಂಬ ಕೆಟ್ಟ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳಲ್ಲಿ 25 ರನ್ ಗಳಿಸಿದ ಅವರ ನಿಧಾನಗತಿಯ ಆಟವು ಈ ದಾಖಲೆಗೆ ಕಾರಣವಾಯಿತು.

Read Full Story

07:50 AM (IST) Feb 25

ದೇಶದಲ್ಲೇ ಮೊದಲು, ಕೇರಳ ನಾಗರಿಕರಿಗೆ ನೇಟಿವಿಟಿ ಕಾರ್ಡ್! ವಿವಿಧ ಸೌಲಭ್ಯ ಪಡೆಯಲು ಚಾನ್ಸ್‌

ಕೇರಳ ವಿಧಾನಸಭೆಯು ರಾಜ್ಯದ ಮೂಲ ನಿವಾಸಿಗಳಿಗಾಗಿ 'ನೇಟಿವಿಟಿ ಕಾರ್ಡ್' ಮಸೂದೆಗೆ ಅನುಮೋದನೆ ನೀಡಿದ್ದು, ಇದು ದೇಶದಲ್ಲೇ ಮೊದಲ ಇಂತಹ ವ್ಯವಸ್ಥೆಯಾಗಿದೆ. ಈ ಅಧಿಕೃತ ಗುರುತಿನ ಚೀಟಿಯು ಕೇರಳಿಗರಿಗೆ ಸರ್ಕಾರದ ವಿವಿಧ ಸೇವೆಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ.

Read Full Story

More Trending News