ಕೋಲ್ಕತಾ: ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯೀಗ ಚುನಾವಣಾ ಕಾಳಗದ ಶಸ್ತ್ರವಾಗಿ ಬಳಕೆಯಾಗಲು ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೀದಿ ಬದಿಯ ಅಂಗಡಿಯೊಂದರಿಂದ ಝಾಲ್ಮುರಿ (ಚುರುಮುರಿ) ಖರೀದಿಸಿ ತಿಂದ ಬೆನ್ನಲ್ಲೇ, ‘ಬೇಕಿದ್ದರೆ ನಾನು ಮೀನಿನ ಅಡುಗೆ ಮಾಡಿ ಬಡಿಸುವೆ’ ಎಂದು ಸಿಎಂ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.
‘ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮಾಂಸಾಹಾರವನ್ನು ನಿಷೇಧಿಸುತ್ತಿದೆ’ ಎಂದು ಟಿಎಂಸಿ ಪ್ರಚಾರ ಮಾಡುತ್ತಿದ್ದು, ಅದಕ್ಕೆ ಪ್ರತಿಯಾಗಿ ತಾವು ಮಾಂಸದ ವಿರೋಧಿಗಳಲ್ಲ ಎಂದು ಬಿಂಬಿಸಿಕೊಳ್ಳಲು ಬಿಜೆಪಿಗರು ಮೀನು ಹಿಡಿದು ಪ್ರಚಾರ ಮಾಡಿದ್ದರು. ಇದಕ್ಕೆ ಸಡ್ಡು ಹೊಡೆದಿರುವ ಮಮತಾ, ‘ಮೋದಿಯವರಿಗೆ ಮೀನು ತಿನ್ನಬೇಕು ಅನ್ನಿಸಿದರೆ ನಾನೇ ಕೈಯ್ಯಾರೆ ಅಡುಗೆ ಮಾಡುವೆ’ ಎಂದು ಹೇಳಿದ್ದಾರೆ. ಈ ಮೊದಲು ಪ್ರಧಾನಿ ಝಾಲ್ಮುರಿ ತಿಂದದ್ದನ್ನು ಮಮತಾ ನಾಟಕ ಎಂದಿದ್ದರು.
09:45 PM (IST) Apr 23
ನಿರ್ದೇಶಕ ರಾಘವೇಂದ್ರ ರಾವ್ ತಮ್ಮ ಸಿನಿಮಾದಲ್ಲಿ ನಾಯಕಿಯೊಬ್ಬರಿಗೆ ಮೊದಲ ಚಿತ್ರದಲ್ಲೇ ಸ್ವಿಮ್‌ಸೂಟ್ ಹಾಕಿಸಿದ್ದರು. ಚೊಚ್ಚಲ ಸಿನಿಮಾದಲ್ಲೇ ಹೀಗೆ ತೋರಿಸಬೇಕಾದ ಅನಿವಾರ್ಯತೆ ಏನಿತ್ತು ಎಂಬುದನ್ನು ಅವರೇ ವಿವರಿಸಿದ್ದಾರೆ.
09:20 PM (IST) Apr 23
ಪವನ್ ಕಲ್ಯಾಣ್ ಅವರ ಉತ್ತರಾಧಿಕಾರಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಅಕೀರಾ ನಂದನ್ ಹೀರೋ ಆಗಿ ಎಂಟ್ರಿ ಕೊಡುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇಂತಹ ಸಮಯದಲ್ಲಿ ರೇಣು, ಪವನ್ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ.
09:09 PM (IST) Apr 23
ಬಂಗಾಳದಲ್ಲಿ ಶೇ.92% ಮತದಾನ ಸ್ವತಂತ್ರ ಭಾರತದಲ್ಲೇ ಮೊದಲು, ಮೋದಿ ಎಚ್ಚರಿಕೆಗೆ ದೀದಿ ತಿರುಗೇಟು, ಇದು ಟಿಎಂಸಿ ಎಕ್ಸ್‌ಪೈರ್ ಡೇಟ್ ಸೂಚನೆ ಎಂದು ಮೋದಿ ಹೇಳಿದ್ದರೆ, ಬಿಜೆಪಿ ಅಂತ್ಯ ಇಲ್ಲಿಂದಲೆ ಎಂದು ದೀದಿ ಹೇಳಿದ್ದಾರೆ.
08:37 PM (IST) Apr 23
ಕಿರುತೆರೆಯಲ್ಲಿ ನಿರೂಪಕಿಯಾಗಿ ವೃತ್ತಿ ಆರಂಭಿಸಿದ ಮಹೇಶ್ವರಿ, ತಮಗಾಗಿಯೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು. ಆರಂಭದಲ್ಲಿ ಸನ್ ಟಿವಿಯಲ್ಲಿ, ನಂತರ ಜೀ ತಮಿಳು ವಾಹಿನಿಯಲ್ಲಿ ಹಲವು ಶೋಗಳನ್ನು ನಿರೂಪಣೆ ಮಾಡಿದರು.
08:37 PM (IST) Apr 23
37ರ ವಿಚ್ಚೇದಿತನಿಗೆ ಬೇಕಿದೆ 30ರ ಹರೆಯದ ಬ್ರಾಹ್ಮಣ ವರ್ಜಿನ್ ಕನ್ಯೆ, ಕಿಚ್ಚು ಹಚ್ಚಿದ ವರನ ಬೇಡಿಕೆ, ಮ್ಯಾಟ್ರಿಮೋನಿ ಸೈಟ್‌ನಲ್ಲಿನ ವರನ ಬೇಡಿಕೆಗೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ವಿವಾದ ಆಗಿದ್ದೇಕೆ?
07:59 PM (IST) Apr 23
ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇದೀಗ ಬಂದಿರುವ ಹೊಸ ವರದಿಗಳ ಪ್ರಕಾರ, ಈ ಚಿತ್ರ ವಿದೇಶಿ ಮಾರುಕಟ್ಟೆಯಲ್ಲಿ, ಅದರಲ್ಲೂ ಯುಕೆನಲ್ಲಿ ಮೂವರು ಖಾನ್‌ಗಳ ದಾಖಲೆ ಮುರಿದು ಹೊಸ ಇತಿಹಾಸ ಬರೆದಿದೆ.
07:34 PM (IST) Apr 23
ಗ್ಯಾಸ್ ಸಿಲಿಂಡರ್ ಬದಲಾಯಿಸುವುದು ಈಗ ತುಂಬಾ ಸುಲಭ! ರೆಗ್ಯುಲೇಟರ್ ಸರಿಯಾಗಿ ಕೂರದಿದ್ದರೂ ಅಥವಾ ಗ್ಯಾಸ್ ಲೀಕ್ ಆಗುವ ಭಯವಿದ್ದರೂ ಚಿಂತೆ ಬೇಡ. ತೆಂಗಿನೆಣ್ಣೆಯ ಈ ಸಣ್ಣ ಟ್ರಿಕ್ ಬಳಸಿ, ಸರಿಯಾದ ಕ್ರಮದಲ್ಲಿ ಅದನ್ನು ಹೇಗೆ ಫಿಕ್ಸ್ ಮಾಡುವುದು ಎಂದು ತಿಳಿಯೋಣ.
07:13 PM (IST) Apr 23
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವೋಟ್ ಹಾಕಲು ಬಂದಿದ್ದ ನಟ ಕಮಲ್ ಹಾಸನ್ ಮತ್ತು ಅವರ ಮಗಳು ಶ್ರುತಿ ಹಾಸನ್, ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಬೂತ್‌ಗೆ ಹೋದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
07:10 PM (IST) Apr 23
'ಜೀರೋ' ಸಿನಿಮಾ ಫ್ಲಾಪ್ ಆದ ನಂತರ ಶಾರುಖ್ ಖಾನ್ ತುಂಬಾ ಯೋಚಿಸಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಅವರು ತಮ್ಮ 'ಕಿಂಗ್' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ..
06:54 PM (IST) Apr 23
18 ವರ್ಷಗಳ ನಂತರ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಒಟ್ಟಿಗೆ ನಟಿಸುತ್ತಿರುವ 'ಪೇಟ್ರಿಯಾಟ್' ಚಿತ್ರಕ್ಕೆ ಮೋಹನ್‌ಲಾಲ್ ಆಯ್ಕೆಯಾಗಿದ್ದು ಹೇಗೆ ಎಂಬ ಸೀಕ್ರೆಟ್ ಅನ್ನು ಮಮ್ಮುಟ್ಟಿ ಅವರೇ ರಿವೀಲ್ ಮಾಡಿದ್ದಾರೆ.
06:41 PM (IST) Apr 23
ಕಳೆದು ಹೋದ ತಾಳಿಗೆ ದೇವರಲ್ಲಿ ಪ್ರಾರ್ಥನೆ, ಮರು ದಿನವೇ ಚಪ್ಪಲಿಯಲ್ಲಿ ಪ್ರತ್ಯಕ್ಷವಾಯ್ತು ಚಿನ್ನ, ಹುಡುಕಾಟಿ ಸುಸ್ತಾಗಿದ್ದ ಕುಟುಂಬ ಕೊನೆಗೆ ನೋವಿನಲ್ಲಿ ದೇವರಲ್ಲಿ ಬೇಡಿಕೊಂಡಿತ್ತು. ಮರು ದಿನವೇ ಚಿನ್ನ ಪ್ರತ್ಯಕ್ಷವಾದ ಘಟನೆ ನಡೆದಿದೆ.
05:55 PM (IST) Apr 23
ಉತ್ತರ ಪ್ರದೇಶದ ಬರೇಲಿಯಲ್ಲಿ, ತೀವ್ರ ಸಾಲಬಾಧೆಯಿಂದ ಬಳಲುತ್ತಿದ್ದ 33 ವರ್ಷದ ಪ್ರಾಪರ್ಟಿ ಡೀಲರ್, ತನ್ನ ಮುದ್ದಿನ ಲ್ಯಾಬ್ರಡಾರ್ ನಾಯಿಗೆ ವಿಷವಿಕ್ಕಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿನ ನಂತರ ನಾಯಿಯನ್ನು ಯಾರು ನೋಡಿಕೊಳ್ಳುತ್ತಾರೆಂಬ ಚಿಂತೆಯಿಂದ ಈ ಕೃತ್ಯ ಎಸಗಿದ್ದಾರೆ
05:28 PM (IST) Apr 23
Baba Vanga Gold Price Prediction: ಇವತ್ತು ಗುರುವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಇದೇ ಖುಷಿಯಲ್ಲಿ ನೀವಿದ್ರೆ, ಸ್ವಲ್ಪ ತಾಳಿ. ಈ ಖುಷಿ ಹೆಚ್ಚು ದಿನ ಇರಲ್ಲ ಅನ್ನೋದು ಬಲ್ಗೇರಿಯಾದ ಖ್ಯಾತ ಭವಿಷ್ಯಗಾರ್ತಿ ಬಾಬಾ ವಂಗಾ ಅವರ ಭವಿಷ್ಯವಾಣಿಯ ಎಚ್ಚರಿಕೆ. ಏನಿದು ವಾರ್ನಿಂಗ್? ಓದಿ.
05:10 PM (IST) Apr 23
ಬೆಂಗಳೂರು: ಇತ್ತೀಚೆಗೆ ಎಲ್ಲರೂ ತಮ್ಮ ಮನೆ-ಗಾರ್ಡನ್‌ಗಳನ್ನು ಸ್ಟೈಲಿಶ್ ಆಗಿ ಇಡಲು ಬಯಸುತ್ತಾರೆ. ನೀವೂ ಕೂಡ ಸುಂದರವಾದ ಸಿಮೆಂಟ್ ಕುಂಡಗಳನ್ನು (ಕಾಂಕ್ರೀಟ್ ಪ್ಲಾಂಟರ್ಸ್) ನೋಡಿರುತ್ತೀರಿ. ಕೇವಲ ₹5000 ದಲ್ಲಿ ನಿಮ್ಮ ಮನೆಯ ಟೆರೇಸ್ ಅಥವಾ ಬಾಲ್ಕನಿಯಿಂದಲೇ ಈ ಬ್ಯುಸಿನೆಸ್ ಆರಂಭಿಸಬಹುದು.
05:01 PM (IST) Apr 23
ನಟ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾ ರಿಲೀಸ್‌ಗೂ ಮುನ್ನವೇ ಲೀಕ್ ಆಗಿದ್ದರ ಬಗ್ಗೆ ನಟಿ ಮಮಿತಾ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಅದೆಷ್ಟೋ ಜನರ ಕನಸನ್ನು ಮುರಿದಿದೆ ಎಂದು ಅವರು ಹೇಳಿದ್ದಾರೆ.
04:58 PM (IST) Apr 23
ತಮಗೆ ಮದುವೆಯಾಗಿ ವಿಚ್ಛೇದನವಾಗಿದ್ದರೂ ಕೆಲವು ಪುರುಷರರಿಗೆ ಮರುಮದುವೆಗೆ ಇನ್ನೂ ಮದುವೆಯಾಗದ ಕನ್ಯೆಯಾಗಿರುವ ಹುಡುಗಿಯೇ ಬೇಕಂತೆ. ಇದನ್ನು ನಾನು ಹೇಳಿರೋದಲ್ಲ, ಒಂದು ಆನ್‌ಲೈನ್ ವಿವಾಹ ವೇದಿಕೆಯ ಸಿಇಒ ಒಬ್ಬರು ಈ ವಿಚಾರವನ್ನು ಆನ್‌ಲೈನ್‌ನಲ್ಲಿ ಹೇಳಿಕೊಂಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
04:50 PM (IST) Apr 23
ಪರೀಕ್ಷೆಗ ಓದುತ್ತಿದ್ದ ಐಆರ್‌ಎಸ್ ಅಧಿಕಾರಿ ಪುತ್ರಿ ಮೇಲೆ ಅತ್ಯಾ**ರ, ಕೊಲೆ, ಬೆಚ್ಚಿಬಿದ್ದ ದೆಹಲಿ, 19 ವರ್ಷದ ಆರೋಪಿ ಇದೇ ಅದಿಕಾರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಪ್ಲಾನ್ ಮಾಡಿ ಕೊಲೆ, ಅತ್ಯಾ**ರ ಹಾಗೂ ಕಳ್ಳತನ ನಡೆಸಿದ್ದಾನೆ.
04:47 PM (IST) Apr 23
ತಮಿಳುನಾಡಿನಲ್ಲಿ ಇಂದು ಮತದಾನದ ದಿನ. ತನ್ನ ನೆಚ್ಚಿನ ನಟ ವಿಜಯ್‌ಗೆ ವೋಟ್ ಹಾಕೋಕೆ ಆಗಲಿಲ್ಲ ಎಂದು ಯುವತಿಯೊಬ್ಬಳು ಕಣ್ಣೀರು ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
03:24 PM (IST) Apr 23
ಮುಂಬೈ: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ತಲಾ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಇಲ್ಲಿನ ವಾಂಖೆಡೆ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಮ್ಯಾಚ್‌ಗೂ ಮುನ್ನ ಸಿಎಸ್‌ಕೆಗೆ ಬಿಗ್ ಶಾಕ್ ಎದುರಾಗಿದೆ. ಏನದು ನೋಡೋಣ ಬನ್ನಿ
01:52 PM (IST) Apr 23
01:51 PM (IST) Apr 23
01:31 PM (IST) Apr 23
01:31 PM (IST) Apr 23
ಕೋಯಿಕ್ಕೋಡ್: ಒಂದು ಕಡೆ ಮದುವೆ ಸಮಾರಂಭ. ಇನ್ನೊಂದು ಕಡೆ ಇರಾನ್-ಇಸ್ರೇಲ್ ಯುದ್ದದ ಕಾವು. ಇದೆಲ್ಲದರ ನಡುವೆ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಹೀಗಿರುವಾಗಲೇ ನಕಲಿ ಚಿನ್ನ ಅಡವಿಡಲು ಬಂದ ಆಸಾಮಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.
01:25 PM (IST) Apr 23
01:25 PM (IST) Apr 23
ಮಾತನಾಡಲು ನಿಮಗೆ ಯಾರ ಅನುಮತಿಯೂ ಬೇಕಿಲ್ಲ. ನೀವು ತಯಾರಿ ನಡೆಸಿದ್ದರೆ, ಇಡೀ ಜಗತ್ತೇ ನಿಮ್ಮ ಮಾತು ಕೇಳಲು ಸಜ್ಜಾಗಿರುತ್ತದೆ. ನಂಬಿಕೆಯಿಲ್ಲದ ಮಾತುಗಳು ಅರ್ಥಹೀನ. ನಿಮ್ಮ ಮಾತುಗಳು ಮೊದಲು ನಿಮ್ಮನ್ನೇ ಒಪ್ಪಿಸುವಂತಿರಲಿ, ಆಗ ಅದು ಇಡೀ ಜಗತ್ತನ್ನೇ ಗೆಲ್ಲುತ್ತದೆ!
12:45 PM (IST) Apr 23
12:45 PM (IST) Apr 23
ಬಾಲಿವುಡ್ ಅಂದಮೇಲೆ ಅಲ್ಲಿ ನೂರಾರು ಪ್ರೇಮಕಥೆಗಳು ಹುಟ್ಟುತ್ತವೆ, ಕೆಲವು ಅಳಿಯುತ್ತವೆ. ಆದರೆ, ಕಳೆದ ಎರಡು ದಶಕಗಳಿಂದ ಇಡೀ ಚಿತ್ರರಂಗವೇ ಹೆಮ್ಮೆಯಿಂದ ನೋಡುವ ಜೋಡಿ ಎಂದರೆ ಅದು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ. ಇತ್ತೀಚೆಗೆ ತಮ್ಮ ವೈವಾಹಿಕ ಜೀವನದ 'ಸೀಕ್ರೆಟ್ಸ್' ಬಿಚ್ಚಿಟ್ಟಿದ್ದಾರೆ.
12:30 PM (IST) Apr 23
11:57 AM (IST) Apr 23
11:27 AM (IST) Apr 23
ನಿನ್ನೆ ಅಗ್ನೇಯ ದೆಹಲಿಯ ಅಮರ್ ಕಾಲೋನಿಯಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮನೆಯ ಮಾಜಿ ಕೆಲಸಗಾರ 19 ವರ್ಷದ ರಾಹುಲ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಮತ್ತಷ್ಟು ಪಾತಕ ಕೃತ್ಯಗಳನ್ನು ಎಸಗಿರುವುದು ಬೆಳಕಿಗೆ ಬಂದಿದೆ.
11:25 AM (IST) Apr 23
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ, ರಾಶ್‌ಬೆಹರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ವಪನ್ ದಾಸ್‌ಗುಪ್ತ, ಟಿಎಂಸಿ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಆರೋಪಿಸಿದ್ದಾರೆ. ಇತ್ತ, ಟಿಎಂಸಿ ಅಭ್ಯರ್ಥಿ ಪ್ರದೀಪ್ ಸರ್ಕಾರ್, ತಮ್ಮ ಬಿಜೆಪಿ ಪ್ರತಿಸ್ಪರ್ಧಿ ಮೇಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
11:02 AM (IST) Apr 23
10:59 AM (IST) Apr 23
ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಗುರುವಾರ ಬೆಳಗ್ಗೆ 9 ಗಂಟೆಯ ಹೊತ್ತಿಗೆ ಪಶ್ಚಿಮ ಬಂಗಾಳದಲ್ಲಿ ಶೇ. 18.76 ಮತ್ತು ತಮಿಳುನಾಡಿನಲ್ಲಿ ಶೇ. 17.69 ರಷ್ಟು ಮತದಾನ. ಎಂ.ಕೆ. ಸ್ಟಾಲಿನ್, ರಜನಿಕಾಂತ್ ಸೇರಿದಂತೆ ಹಲವು ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
10:30 AM (IST) Apr 23
Divyanka Sirohi Death: ಕೇವಲ 29 ವರ್ಷದ ನಟಿ ದಿವ್ಯಾಂಕಾ ಸಿರೋಹಿ ಅವರ ಹಠಾತ್ ನಿಧನ ಮನರಂಜನಾ ಕ್ಷೇತ್ರಕ್ಕೆ ದೊಡ್ಡ ಆಘಾತ ನೀಡಿದೆ. ಅವರ ಸಾವಿಗೆ ನಿಜವಾದ ಕಾರಣವೇನು? ಆ ರಾತ್ರಿ ಏನಾಗಿತ್ತು ಮತ್ತು ಕುಟುಂಬಸ್ಥರು ಏನು ಹೇಳಿದ್ದಾರೆ? ಇಲ್ಲಿದೆ ಪೂರ್ತಿ ವಿವರ...
10:21 AM (IST) Apr 23
ಕಾಸರಗೋಡು: ಈಗ ಕಾಲ ಯಾವಪರಿ ಕೆಟ್ಟೋಗಿದೆ ಎಂದರೆ ಅಪ್ರಾಪ್ತ ಯುವಕನೊಬ್ಬ ಅಪ್ರಾಪ್ತ ಯುವತಿಯ ಮೇಲೆ ದೌರ್ಜನ್ಯ ಎಸಗಿದ್ದ. ಇದರ ವಿಚಾರಣೆ ವೇಳೆ ಆತನೇ 36ರ ಮಹಿಳೆಯಿಂದ ಲೈಂ*ಗಿಕ ಶೋಷಣೆಗೆ ಒಳಗಾಗಿದ್ದ ಎನ್ನುವ ವಿಚಾರ ಬಯಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
10:18 AM (IST) Apr 23
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ದುರಂತದಲ್ಲಿ 11 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಟ್ರಕ್ ಟ್ರೈಲರ್‌ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ನಂತರ ಬೊಲೆರೋ ವಾಹನ ಬೆಂಕಿಗಾಹುತಿಯಾಗಿದ್ದು, ಮೃತರಲ್ಲಿ 9 ಜನ ಸಜೀವ ದಹನಗೊಂಡಿದ್ದಾರೆ.
09:58 AM (IST) Apr 23
ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಮುಖ್ಯಸ್ಥ, ನಟ ವಿಜಯ್ ತಮ್ಮ ಮತ ಚಲಾಯಿಸಿದ್ದಾರೆ. ಪೆರಂಬೂರ್ ಮತ್ತು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಅವರು, ಡಿಎಂಕೆ ಪಕ್ಷದ ಪ್ರಬಲ ಅಭ್ಯರ್ಥಿಗಳಿಗೆ ಸವಾಲೊಡ್ಡಿದ್ದಾರೆ.
09:39 AM (IST) Apr 23
ಲಂಡನ್‌ನಲ್ಲಿರುವ ಭಾರತೀಯ ಯುವತಿಯೊಬ್ಬರು 100 ರೂಪಾಯಿ ಬಜೆಟ್‌ನಲ್ಲಿ ದಿನಸಿ ಅಂಗಡಿಯಲ್ಲಿ ಶಾಪಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಸ್ಯಾಂಡ್‌ವಿಚ್, ನೀರಿನ ಬಾಟಲಿಯಂತಹ ಹೆಚ್ಚಿನ ವಸ್ತುಗಳು ದುಬಾರಿಯಾಗಿದ್ದರಿಂದ, ಕೊನೆಗೆ ಅವರು ಸುಮಾರು 75 ರೂಪಾಯಿಗೆ ವಸ್ತುವೊಂದನ್ನು ಖರೀದಿಸಿದ್ದಾರೆ.
09:07 AM (IST) Apr 23
ಅಮೆರಿಕದ ಸುಪ್ರೀಂ ಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ಆಮದು ಸುಂಕವನ್ನು ಅಕ್ರಮವೆಂದು ಘೋಷಿಸಿದೆ. ಈ ತೀರ್ಪಿನಿಂದಾಗಿ, ಅಮೆರಿಕವು ಸಂಗ್ರಹಿಸಿದ್ದ 15.55 ಲಕ್ಷ ಕೋಟಿ ರು. ತೆರಿಗೆಯನ್ನು ಮರುಪಾವತಿಸಬೇಕಾಗಿದ್ದು, ಇದರಲ್ಲಿ ಭಾರತದಿಂದ ಆಮದಾದ ವಸ್ತುಗಳ ಮೇಲಿನ 1.12 ಲಕ್ಷ ಕೋಟಿ ರು. ಸೇರಿದೆ.
08:47 AM (IST) Apr 23
ಲಖನೌ: 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಐಪಿಎಲ್ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ನೆಟ್ಟಿದ್ದಾರೆ. ಇದರ ಜತೆಗೆ ಆಸೀಸ್ ಮೂಲದ ದಿಗ್ಗಜ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರಿನಲ್ಲಿದ್ದ ದಾಖಲೆ ನುಚ್ಚುನೂರು ಮಾಡಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.