260 ಜನರ ಬಲಿಪಡೆದ ಜೂ.12ರ ಅಹಮದಾಬಾದ್ ಏರಿಂಡಿಯಾ ವಿಮಾನ ಅಪಘಾತದ ಕುರಿತ ಪ್ರಾಥಮಿಕ ತನಿಖಾ ವರದಿ ಶುಕ್ರವಾರ ತಡರಾತ್ರಿ ಬಹಿರಂಗವಾಗಿದೆ. ಅಪಘಾತಕ್ಕೆ ತುತ್ತಾಗುವ ಕೆಲವೇ ಸೆಕೆಂಡ್‌ಗಳ ಮುನ್ನ ವಿಮಾನದ ಎರಡೂ ಎಂಜಿನ್ನಿಗೆ ಇಂಧನ ಪೂರೈಕೆ ಮಾಡುವ ಸ್ವಿಚ್‌ಗಳನ್ನು ಆಫ್ ಮಾಡಲಾಗಿತ್ತು ಎಂದು ಘಟನೆ ಕುರಿತು ತನಿಖೆ ನಡೆಸಿದ್ದ ವಾಯು ಅಪಘಾತ ತನಿಖಾ ಬ್ಯೂರೋ (ಎಎಐಬಿ) ತನ್ನ ವರದಿಯಲ್ಲಿ ಹೇಳಿದೆ. ಈ ಮೂಲಕ ಪೈಲಟ್‌ಗಳು ಎಸಗಿದ ತಪ್ಪೇ ದುರಂತಕ್ಕೆ ಕಾರಣ ಎಂಬ ಕಡೆಗೆ ವರದಿ ಬೊಟ್ಟು ಮಾಡಿದೆ. ವಿಮಾನದ ಸ್ವಿಚ್ ಸ್ವಯಂ ಆನ್, ಆಫ್ ಆಗದು. ಆನ್, ಆಫ್‌ಗೆ ಸಾಕಷ್ಟು ಪ್ರಯತ್ನ ಬೇಕು. ಈ ದೃಷ್ಟಿಯಲ್ಲಿ ನೋಡಿದರೆ ಪೈಲಟ್‌ಗಳೇ ಎಂಜಿನ್‌ಗೆ ಇಂಧನ ಪೂರೈಸುವ ಸ್ವಿಚ್ ಆಫ್ ಮಾಡಿರುವ ಸಾಧ್ಯತೆ ದಟ್ಟವಾಗಿದೆ. ಇದು ಆಕಸ್ಮಿಕ ಅಥವಾ ಉದ್ದೇಶಪೂರ್ವಕ ಆಗಿರಬಹುದು ಎಂಬುದು ಹಲವು ದೇಶೀಯ ಮತ್ತು ವಿದೇಶಿ ವಿಮಾನಯಾನ ತಜ್ಞರ ಅಭಿಪ್ರಾಯ.

11:00 PM (IST) Jul 13
10:45 PM (IST) Jul 13
ಕಳೆದ ಒಂದು ವಾರದಿಂದ ನಾಪತ್ತೆಯಾಗಿರುವ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸ್ನೇಹಾ ದೇಬನಾಥ್ ಕೊಠಡಿಯಲ್ಲಿ ನೋಟ್ ಪತ್ತೆಯಾಗಿದೆ. ಮಿಸ್ಸಿಂಗ್ ಪ್ರಕರಣಕ್ಕೆ ತಿರುವು ನೀಡಿದೆ.
10:32 PM (IST) Jul 13
ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗಿಗೆ ಹೋದರೆ ಪಂದಿಕರಿ, ಕಡುಂಬಟ್ಟು, ನೂಪ್ಪುಟ್ಟು ಇಂತಹ ಆಹಾರಗಳ ರುಚಿಯನ್ನು ನೋಡದೆ ಯಾರು ಬರ್ತೀರಾ ಅಲ್ವಾ.
10:17 PM (IST) Jul 13
ಯಜುವೇಂದ್ರ ಚಹಾಲ್ ಮತ್ತು ಆರ್‌ಜೆ ಮೆಹ್ವಾಶ್ ಲಂಡನ್‌ನಲ್ಲಿ ಒಂದೇ ಸ್ಥಳದಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಳಿಸುದ್ದಿಗಳು ಹಬ್ಬಿವೆ.
10:06 PM (IST) Jul 13
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 193 ರನ್ ಸುಲಭ ಟಾರ್ಗೆಟ್ ಪಡೆದಿದೆ. ಆದರೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿದೆ.
09:43 PM (IST) Jul 13
ಲಾರ್ಡ್ಸ್ ಟೆಸ್ಟ್ 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 192 ರನ್‌ಗೆ ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಹೀಗಾಗಿ ಭಾರತಕ್ಕೆ 193 ರನ್ ಟಾರ್ಗೆಟ್ ಸಿಕ್ಕಿದ್ದು, ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.
09:42 PM (IST) Jul 13
09:24 PM (IST) Jul 13
ಸಿಗಂದೂರು ಸೇತುವೆ ಲೋಕಾರ್ಪಣೆ ಸೋಮವಾರ (ಜು.14) ನಡೆಯಲಿದ್ದು, ಸಿಗಂದೂರು ಸೇತುವೆ ಉದ್ಘಾಟನೆಗೆ ಬರಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.
09:08 PM (IST) Jul 13
ಖ್ಯಾತ ಬಿಗ್ ಬಾಸ್ ಸ್ಪರ್ಧಿ ರಿಯಾಲಿಟಿ ಶೋ ಹಾಗೂ ತಮ್ಮ ನಟೆಯಿಂದಲೂ ಭಾರಿ ಗಮನಸೆಳೆದಿದ್ದಾರೆ. ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರುವ ಮೂಲಕ ಸುದ್ದಿಯಾಗಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನ ವಿರುದ್ದವೇ ದೂರು ದಾಖಲಿಸಿದ್ದಾರೆ.
09:02 PM (IST) Jul 13
ಪವನ್ ಕಲ್ಯಾಣ್ ನಟಿಸಿರುವ 'ಹರಿಹರ ವೀರಮಲ್ಲು' ಸಿನಿಮಾ ಕೊನೆಗೂ ಬಿಡುಗಡೆಯಾಗಲಿದೆ. ಆದರೆ ಈ ಚಿತ್ರಕ್ಕೆ ಪೈಪೋಟಿಯಾಗಿ ಒಂದು ಡಬ್ಬಿಂಗ್ ಸಿನಿಮಾವನ್ನು ತರುತ್ತಿದ್ದಾರೆ ಅಲ್ಲು ಅರವಿಂದ್.
08:49 PM (IST) Jul 13
08:36 PM (IST) Jul 13
ವಂದೇ ಭಾರತ ಸ್ಲೀಪರ್ ರೈಲು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.
08:33 PM (IST) Jul 13
ಬೆಂಗಳೂರಿನ ಸ್ಟಾರ್ಟ್‌ಅಪ್ ಸ್ಮಾಲೆಸ್ಟ್ AI, ಯಾವುದೇ ಡಿಗ್ರಿ ಅಥವಾ ರೆಸ್ಯೂಮೆ ಇಲ್ಲದೆ ₹1 ಕೋಟಿ ವಾರ್ಷಿಕ ಸಂಬಳದ ಫುಲ್-ಸ್ಟಾಕ್ ಎಂಜಿನಿಯರಿಂಗ್ ಲೀಡ್ ಹುದ್ದೆಗೆ ನೇಮಕಾತಿ ನಡೆಸುತ್ತಿದೆ. ಅನುಭವಿ ಡೆವಲಪರ್‌ಗಳಿಗೆ ಇದು ಉತ್ತಮ ಅವಕಾಶ. ಅಭ್ಯರ್ಥಿಗಳು info@smallest.ai ಗೆ ಮಾಹಿತಿ ಕಳುಹಿಸಬೇಕು.
08:16 PM (IST) Jul 13
ಯುವ ಕಾಂಗ್ರೆಸ್ ಭರವಸೆಯ ಬೆಳಕಾಗಿದೆ. ಇಂದಿನ ಯುವಕರೇ ಮುಂದಿನ ಭವಿಷ್ಯದ ನಾಯಕರು ಎಂದು ಗ್ರಾಮೀಣಾಭಿವೃದ್ಧಿ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
08:01 PM (IST) Jul 13
ತಮಿಳು ನಟ ಆರ್ಯ ಅಭಿನಯದ ವೆಟ್ಟುವಂ ಚಿತ್ರದ ಚಿತ್ರೀಕರಣದ ವೇಳೆ ಸ್ಟಂಟ್‌ಮ್ಯಾನ್ ರಾಜು ಅವರು ಕಾರು ಪಲ್ಟಿ ಸಾಹಸದ ಸಮಯದಲ್ಲಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ನಟ ವಿಶಾಲ್ ದೃಢಪಡಿಸಿದ್ದು, ಚಿತ್ರರಂಗದಲ್ಲಿ ಶೋಕ ಮಡುಗಟ್ಟಿದೆ.
07:55 PM (IST) Jul 13
ಬೆಂಗಳೂರಿಗೆ ಮುಂದಿನ ಮೂರು ಗಂಟೆ ಆರೇಂಜ್ ಅಲರ್ಟ್ ನೀಡಲಾಗಿದೆ. ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮರ, ರೆಂಬೆ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಇದೆ. ಅತೀವ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
07:36 PM (IST) Jul 13
ಕೈಗಾರಿಕೆ ಉತ್ಪಾದನಾ ಕ್ಷೇತ್ರದಲ್ಲಿ ಸ್ಕಿಲ್, ಸ್ಕೇಲ್ ಮತ್ತು ಸ್ಪೀಡ್ ಇಂದಿನ ತುರ್ತು ಅಗತ್ಯವಾಗಿದ್ದು, ಅದನ್ನು ಮೈಗೂಡಿಸಿಕೊಂಡಲ್ಲಿ ಭಾರತ ಸಮಗ್ರ ಅಭಿವೃದ್ಧಿಯ ಜತೆಗೆ ಮತ್ತಷ್ಟು ಆರ್ಥಿಕ ಬಲಿಷ್ಠ ರಾಷ್ಟ್ರವಾಗಲಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
07:33 PM (IST) Jul 13
ಲೈವ್‌ಸ್ಟ್ರೀಮ್, ಹೆಚ್ಚು ವೀಕ್ಷಣೆ, ಲೈಕ್ಸ್ ಈ ಮೂಲಕ ಆದಾಯ ಬಯಸಿದ್ದ ತಾಯಿಯ ಹುಚ್ಚುತನಕ್ಕೆ ಇದೀಗ ಇಬ್ಬರು ಮಕ್ಕಳು ಅನಾಥವಾಗಿದ್ದು ಮಾತ್ರವಲ್ಲ, ಭವಿಷ್ಯವೇ ಅತಂತ್ರವಾಗಿದೆ.
07:16 PM (IST) Jul 13
ನಿಮ್ಮ ಆಧಾರ್ ಕಾರ್ಡ್ ರದ್ದುಗೊಂಡಿದೆಯೇ? ಸರ್ಕಾರದ ಯೋಜನೆಗೆ ಆಧಾರ್ ಕಾರ್ಡ್ ಕೊಟ್ಟರೂ ಅದನ್ನು ಸ್ವೀಕಾರ ಮಾಡುತ್ತಿಲ್ಲ ಎಂದಾದಲ್ಲಿ ಕೂಡಲೇ ನೀವು ಈ ಸರಳ ವಿಧಾನ ಅನುಸರಿಸಿ ಪುನಃ ಸಕ್ರಿಯಗೊಳಿಸಿಕೊಳ್ಳಬಹುದು. ಮೂವತ್ತು ದಿನಗಳಲ್ಲಿ ಆಧಾರ್ ರಿ-ಆಕ್ಟಿವೇಟ್ ಆಗುತ್ತದೆ.
06:57 PM (IST) Jul 13
ಬ್ಯಾಂಕ್ ಸೇರಿದಂತೆ ಕೆಲವು ಕಡೆಗಳಲ್ಲಿ ಕನ್ನಡ ಮಾತನಾಡದೇ ಉಲ್ಟಾ ಮಾತನಾಡುವ ಸಿಬ್ಬಂದಿಯ ಬಗೆಗಿನ ವಿಷಯ ಹೈಲೈಟ್ ಆಗುತ್ತಿದ್ದಂತೆಯೇ, ಲಕ್ಷ್ಮೀ ನಿವಾಸ ಸೀರಿಯಲ್ ಭಾವನಾ ಉರ್ಫ್ ದಿಶಾ ಮದನ್ ಹೇಳಿದ್ದೇನು ನೋಡಿ!
06:45 PM (IST) Jul 13
ನಂಜೇಗೌಡ ಜನತಾದಳದಿಂದ ಬೆಳೆದವರು, ಈಗ ಜನತಾದಳ ಎಲ್ಲಿದೆ ಎಂದು ಕೇಳುತ್ತಾರೆ, 2028ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಜನತೆ ತಕ್ಕ ಪಾಠ ಕಲಿಸಿ ಮನೆಗೆ ಕಳುಹಿಸಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಶಪಥ ಮಾಡಿದರು.
06:32 PM (IST) Jul 13
ಐದು ಹುಲಿಗಳ ಅಸಹಜ ಸಾವಿನ ಪ್ರಕರಣವನ್ನು ತನಿಖೆ ಮಾಡುತ್ತಿರುವ ಉನ್ನತ ಮಟ್ಟದ ಸಮಿತಿಗೆ, ಹುಲಿಗಳನ್ನು ಕೊಲ್ಲಲು ಅತ್ಯಂತ ವಿಷಕಾರಿ ಕೀಟನಾಶಕ ಕಾರ್ಬೋಫುರಾನ್ ಬಳಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
06:30 PM (IST) Jul 13
ವಯಸ್ಸು 60 ಆದರೂ ಮಗಳ ವಯಸ್ಸಿನವಳ ಜೊತೆ ರೊಮಾನ್ಸ್ ಮಾಡುತ್ತಲೇ ಬಾಲಿವುಡ್ನ ಬಾದ್ಶಾ ಎಂದು ಬಿರುದು ಪಡೆದಿರುವ ನಟ ಶಾರುಖ್ ಖಾನ್, ಪ್ರೀತಿ ಜಿಂಟಾರನ್ನು ಒಮ್ಮೆ ಗರ್ಭಿಣಿ ಮಾಡುವೆ ಎಂದು ಓಪನ್ ಆಗಿಯೇ ಹೇಳಿದ್ದರು. ಅದರ ವಿಡಿಯೋ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
06:24 PM (IST) Jul 13
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹೃದಯಾಘಾತ ಸಮಸ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲೇ ಹೃದಯಾಘಾತ, ಕಿಡ್ನಿ, ಸ್ಟ್ರೋಕ್ ಸೇರಿದಂತೆ ಮಾರಾಣಾಂತಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದೀಗ ICMR ನಡೆಸಿದ ಅಧ್ಯಯನ ವರದಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದೆ.
06:24 PM (IST) Jul 13
ಸಿಎಂ ಸ್ಥಾನ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟಿದ್ದು, ಇದರ ಬಗ್ಗೆ ವಿಪಕ್ಷಗಳು ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಕಿಡಿಕಾರಿದರು.
06:02 PM (IST) Jul 13
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹಸಿವಿನಿಂದ ಮೂರು ಹುಲಿ ಮರಿಗಳು ಸಾವನ್ನಪ್ಪಿವೆ. ತಾಯಿ ಹುಲಿ ಮರಿಗಳಿಗೆ ಹಾಲುಣಿಸದೇ ಇರುವುದು ಮತ್ತು ಮೃಗಾಲಯದ ಸಿಬ್ಬಂದಿ ನಿರ್ಲಕ್ಷ್ಯ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಈ ಘಟನೆ ಮೃಗಾಲಯ ಪ್ರಾಣಿಗಳ ಆರೈಕೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
05:42 PM (IST) Jul 13
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟಿಸುತ್ತಿರುವ 'ಪೆದ್ದಿ' ಸಿನಿಮಾದ ಅಪ್ಡೇಟ್ ಇಲ್ಲಿದೆ. ಉಪ್ಪೆನ ಖ್ಯಾತಿಯ ಬುಚ್ಚಿಬಾಬು ಸನಾ ಚಿತ್ರ ನಿರ್ದೇಶಿಸುತ್ತಿದ್ದು, ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ.
05:32 PM (IST) Jul 13
ನ್ಯಾಷನಲ್ ಕ್ರಷ್ ಎಂದೇ ಬಿಂಬಿತ ಆಗಿರೋ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಭವಿಷ್ಯವನ್ನು ಅಂದೇ ನುಡಿದಿದ್ದರು ನಟ ಪುನೀತ್ ರಾಜ್. ಆ ವಿಡಿಯೋ ಮತ್ತೆ ವೈರಲ್ ಆಗಿದೆ. ಅವರು ಹೇಳಿದ್ದೇನು?
05:31 PM (IST) Jul 13
ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಗೊತ್ತಾ? ಒಂದು ಸೆಕೆಂಡಿಗೆ ₹10 ಲಕ್ಷ ಪಡೆಯುವ ಸ್ಟಾರ್ ನಟಿ ಬಗ್ಗೆ ತಿಳಿಯೋಣ.
05:21 PM (IST) Jul 13
ಪತ್ನಿಗೆ ಒಬ್ಬ ಲವರ್. ಆತನ ಜೊತೆ ಓಡಿ ಹೋದರೂ ಪತಿ ಮಾತ್ರ ಕುಟುಂಬದ ಸಂತೋಷ ಹಾಳುಗುತ್ತೆ ಅನ್ನೋ ಕಾರಣಕ್ಕೆ ಮೌನವಾಗಿದ್ದ. ಕೊನೆಗೆ ಪತ್ನಿಯ ಟಾರ್ಚರ್ ತಡಿಯಲು ಆಗದೆ ಡಿವೋರ್ಸ್‌ಗೆ ಅರ್ಜಿ ಹಾಕಿದ್ದ. ಇದೀಗ ಡಿವೋರ್ಸ್ ಸಿಗುತ್ತಿದ್ದಂತೆ ಗಂಡ ಖುಷಿಯಲ್ಲಿ ಕ್ಷೀರಾಭೀಷಕ ಮಾಡಿದ್ದಾನೆ.
05:10 PM (IST) Jul 13
05:01 PM (IST) Jul 13
ಜೆಲ್ಲಿ ಫಿಶ್ ಪೇರೆಂಟಿಂಗ್ ಎಂದರೇನು, ಅದರ ಅನುಕೂಲಗಳು ಅಥವಾ ಅನಾನುಕೂಲಗಳು ಯಾವುವು ಮತ್ತು ಈ ಪಾಲನೆಯ ಶೈಲಿಯು ಮಕ್ಕಳಿಗೆ ಹೇಗೆ ಉಪಯುಕ್ತವಾಗಿದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.
03:59 PM (IST) Jul 13
03:29 PM (IST) Jul 13
ಬಾಲಿವುಡ್ ಸಿನಿಮಾಗಳು ಕಳೆಗುಂದಿದೆ. ಮತ್ತೆ ವೀಕ್ಷಕರ ಸೆಳೆಯಲು ಏನು ಮಾಡಬೇಕು? ಉದ್ಯಮಿ ನಿಖಿಲ್ ಕಾಮತ್ ಬಿರಿಯಾನಿ ಮೂಲಕ ಬಾಲಿವುಡ್ ಮಂದಿಗೆ ಮಹತ್ವದ ಸಲಹೆ ನೀಡಿದ್ದಾರೆ. ಇದೇ ವೇಳೆ ಕನ್ನಡ ಹಾಗೂ ಮಲೆಳೆಯಾಳಂ ಸಿನಿಮಾ ಇಂಡಸ್ಟ್ರೀಯನ್ನು ನಿಖಿಲ್ ಹೊಗಳಿದ್ದಾರೆ.
03:16 PM (IST) Jul 13
02:48 PM (IST) Jul 13
02:17 PM (IST) Jul 13
ಹೆಂಡತಿಯನ್ನು ಹುಡುಕಿಕೊಂಡು ಗಂಡನೋರ್ವ ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆ ಕಾರನ್ನು ಓಡಿಸಿದ ಘಟನೆ ಗ್ವಾಲಿಯರ್‌ನಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ ಆತನನ್ನು ಪೊಲೀಸರು ಬಂಧಿಸಿದ್ದಾರೆ.
01:59 PM (IST) Jul 13
01:37 PM (IST) Jul 13
ಇದೇ 18ರಂದು ತೆರೆ ಕಾಣಲಿರುವ 'ವೈರಲ್ ವೈಯ್ಯಾರಿ' ಟ್ರೆಂಡಿಂಗ್ ಸಾಂಗ್ಗೆ ನಮ್ರತಾ ಗೌಡ ಮತ್ತು ಕಿಶನ್ ಬಿಳಗಲಿ ಸ್ಟೆಪ್ ಹಾಕಿದ್ರೆ ಹೇಗಿರತ್ತೆ? ಚಿಂದಿ ಉಡಾಯಿಸಿದೆ ಈ ಜೋಡಿ. ನೋಡಿ ವೈರಲ್ ವಿಡಿಯೋ...
01:24 PM (IST) Jul 13