ಯಜುವೇಂದ್ರ ಚಹಾಲ್ ಮತ್ತು ಆರ್‌ಜೆ ಮೆಹ್ವಾಶ್ ಲಂಡನ್‌ನಲ್ಲಿ ಒಂದೇ ಸ್ಥಳದಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಳಿಸುದ್ದಿಗಳು ಹಬ್ಬಿವೆ.
ಕ್ರಿಕೆಟರ್ ಯಜುವೇಂದ್ರ ಚಹಾಲ್ ಅವರ ವಿಚ್ಛೇದನದ ಸಮಯದಲ್ಲಿ ಆರ್ ಜೆ ಮೆಹ್ವಾಶ್ ಅವರ ಹೆಸರು ಚಹಾಲ್ ಜೊತೆ ಬಹಳ ಜೋರಾಗಿ ಕೇಳಿ ಬಂದಿತ್ತು. ಆದರೆ ಆರ್ ಮೆಹ್ವಾಶ್ ಹಾಗೂ ಯಜುವೇಂದ್ರ ಚಾಹಲ್ ಇಬ್ಬರೂ, ನಾವು ಸ್ನೇಹಿತರು ಮಾತ್ರ ಎಂದು ಹೇಳುವ ಮೂಲಕ ಈ ಗಾಸಿಪ್‌ಗಳಿಗೆ ತೆರೆ ಎಳೆದಿದ್ದರು. ಆದರೆ ಇವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬ ರೂಮರ್ಸ್ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಇದಕ್ಕೆ ಕಾರಣವಾಗಿರುವುದು ಇಬ್ಬರು ಒಂದೇ ಸ್ಥಳದಲ್ಲಿ ತೆಗದಿರುವ ಫೋಟೋಗಳು.
ಕ್ರಿಕೆಟರ್ ಯಜುವೇಂದ್ರ ಚಾಹಲ್ ಮತ್ತು ಆರ್ ಜೆ ಮೆಹ್ವಾಶ್ ಇಬ್ಬರು ಲಂಡನ್‌ನಲ್ಲಿ ಒಂದೇ ಸ್ಥಳದಲ್ಲಿ ತೆಗೆದ ಫೋಟೋಗಳನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಇವರು ಜೊತೆಯಾಗಿ ತಿರುಗಾಡುತ್ತಿದ್ದಾರೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಕ್ಕೆ ಪುಷ್ಟಿ ನೀಡುತ್ತಿದೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಬಂದ ನಂತರ ಯಜುವೇಂದ್ರ ಚಹಾಲ್ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಧನಶ್ರೀ ವರ್ಮಾ ಕಳೆದ ಮಾರ್ಚ್‌ನಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು.
ಯಜುವೇಂದ್ರ ಚಹಾಲ್ ಹಾಗೂ ಆರ್ ಜೆ ಮೆಹ್ವಾಶ್ ತಾವಿಬ್ಬರು ಸ್ನೇಹಿತರು ಮಾತ್ರ ಎಂದು ಹೇಳಿಕೊಂಡಿದ್ದರೂ ಅವರ ಫೋಟೋಗಳನ್ನು ನೋಡಿದ ಅಭಿಮಾನಿಗಳು ಇವರ ಮಧ್ಯೆ ಸ್ನೇಹ ಹೊರತಾಗಿ ಬೇರೆನೋ ಇದೆ ಎಂದು ಕಾಮೆಂಟ್ ಮಾಡ್ತಿದ್ದಾರೆ. ಆರ್ ಜೆ ಮೆಹ್ವಾಶ್ ಅವರು ಇತ್ತೀಚೆಗೆ ಲಂಡನ್‌ನ ಬೀದಿಯಲ್ಲಿ ಶಾರ್ಟ್ ಸ್ಕರ್ಟ್, ಟ್ರೆಂಡಿ ಟಾಪ್, ಬಿಳಿ ಬಣ್ಣದ ಟ್ರೇನರ್ ಧರಿಸಿ ತೆಗೆದ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಾಗಿ ಸ್ವಲ್ಪ ಸಮಯದ ನಂತರ ಯಜುವೇಂದ್ರ ಚಾಹಲ್ ಕೂಡ ಅದೇ ಸ್ಥಳದಿಂದ ಆಕಾಶನೀಲಿ ಬಣ್ಣದ ಶರ್ಟ್ ಹಾಗೂ ಬ್ಲೂ ಜೀನ್ಸ್ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಇಬ್ಬರೂ ಜೊತೆಗಿರುವ ಫೋಟೋಗಳನ್ನು ಈ ಜೋಡಿ ಎಲ್ಲೂ ಪೋಸ್ಟ್ ಮಾಡಿಲ್ಲ, ಆದರೂ ಇದು ಒಂದೇ ಸ್ಥಳ ಎಂಬುದನ್ನು ಗಮನಿಸಿರುವ ನೆಟ್ಟಿಗರು ಹಲವು ಕಾಮೆಂಟ್ ಮಾಡ್ತಿದ್ದಾರೆ.
ಕೆಲವರು ಚಹಾಲ್ ಅವರ ಫೋಟೋಗ್ರಾಫಿ ಬಗ್ಗೆ ಕಾಲೆಳೆಯುತ್ತಿದ್ದಾರೆ. ಆರ್ ಜೆ ಮೆಹ್ವಾಶ್, ಒಬ್ಬರು ಚಹಾಲ್ ಭಾಯಿ ಎದೆಬಡಿತವನ್ನು ಏಕೆ ಹೆಚ್ಚು ಮಾಡುತ್ತಿದ್ದೀರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಫೋಟೋವನ್ನು ಚಹಾಲ್ ಭಾಯಿ ತೆಗೆದಂತೆ ಕಾಣಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಫೋಟೋವನ್ನು ಯುಜಿ ಬಾಯ್ ತೆಗೆದಿದ್ದಾರೆ. ಅವರೇ ಮೊದಲು ಲೈಕ್ ಮಾಡಿದ್ದಾರೆ. ಯುಜಿ ಭಾಯ್ ಜೊತೆ ನೀವು ಹೋಗಿದ್ದೀರಿ ಅಲ್ವಾ? ಕ್ಯಾಮರಾ ಮ್ಯಾನ್ ಚಹಾಲ್ ಇರಬೇಕು, ಈಗಷ್ಟೇ ಇದೇ ಸ್ಥಳದಲ್ಲಿ ಯಜುವೇಂದ್ರ ಚಹಾಲ್ ಅವರು ಫೋಟೋ ತೆಗೆದಿರುವುದನ್ನು ನೋಡಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ಆರ್ ಜೆ ಮೆಹ್ವಾಶ್ ಫೋಟೋಗಳಿಗೆ ಕೆಲ ಅಭಿಮಾನಿಗಳು ಹಲವು ರೀತಿಯ ಕಾಮೆಂಟ್ ಮಾಡಿದ್ದು, ಅವರಿಬ್ಬರ ನಡುವಿನ ಸಂಬಂಧಕ್ಕೆ ರೆಕ್ಕೆ ಪುಕ್ಕ ಸೃಷ್ಟಿಸಿದ್ದಾರೆ.
ಹಾಗೆಯೇ ಚಹಾಲ್ ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಫೋಟೋಗಳಿಗೂ ಅಭಿಮಾನಿಗಳು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಆರ್ ಜೆ ಮೆಹ್ವಾಶ್ ಎಂದು ಕಾಮೆಂಟ್ ಮಾಡಿದ್ದರೆ, ಇದೇ ರೀತಿಯ ಫೋಟೋಗಳನ್ನು ಆರ್ ಜೆ ಮೆಹ್ವಾಶ್ ಖಾತೆಯಲ್ಲಿ ನೋಡಿದೆ ಇಬ್ಬರು ಜೊತೆಗಿರುವಂತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರಯಾಣ ಮಾಡಿದಷ್ಟು ನೀವು ನಿಮ್ಮನ್ನು ಭೇಟಿಯಾಗುತ್ತೀರಿ ಎಂದು ಬರೆದು ಚಹಾಲ್ ಫೋಟೋ ಪೋಸ್ಟ್ ಮಾಡಿದ್ದರೆ, ಇತ್ತ ಒಬ್ಬರು ಪ್ರಯಾಣ ಮಾಡಿದಷ್ಟು ನೀವು ಆರ್ ಜೆ ಮೆಹ್ವಾಶ್ ಅನ್ನು ಭೇಟಿ ಮಾಡುತ್ತೀರಿ ಎಂದು ಕಾಮೆಂಟ್ ಮಾಡಿದ್ದು, ಭಾರೀ ವೈರಲ್ ಆಗಿದೆ.
ಯಜುವೇಂದ್ರ ಚಹಾಲ್ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಧನಶ್ರೀ ವರ್ಮಾ ಅವರು 2020ರ ಡಿಸೆಂಬರ್‌ನಲ್ಲಿ ಗುರುಗ್ರಾಮ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ದಾಂಪತ್ಯದಲ್ಲಿ ವಿರಸ ಕಾಣಿಸಿಕೊಂಡ ಹಿನ್ನೆಲೆ ಇಬ್ಬರು 2022ರಿಂದ ದೂರವಾಗಿ ವಾಸ ಮಾಡುತ್ತಿದ್ದರು ಹಾಗೂ 2025ರ ಮಾರ್ಚ್ 20ರಂದು ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಿಂದ ವಿಚ್ಚೇದನ ಪಡೆದಿದ್ದರು.
