Published : Mar 13, 2026, 05:26 AM ISTUpdated : Mar 13, 2026, 11:32 PM IST

India Latest News Live: ಅಪ್ಪ ತೋರಿಸಿದ ಹುಡುಗನ ಮದ್ವೆಯಾಗ್ತೇನೆ ಅಂದಿದ್ದ ಮೊನಾಲಿಸಾಗೆ ಬ್ರೇನ್​ವಾಷ್​? ತಂದೆಯ ಕಣ್ಣೀರು- ಹೇಳಿದ್ದೇನು

ಸಾರಾಂಶ

ಮುಂಬೈ / ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿನ ಯುದ್ಧದ ನಡುವೆಯೂ ಭಾರತೀಯ ಕ್ಯಾಪ್ಟನ್ ಮುನ್ನಡೆಸುವ, ಲೈಬೀರಿಯನ್ ಧ್ವಜ ಹೊಂದಿರುವ ಕಚ್ಚಾ ತೈಲ ಹಡಗೊಂದು ಇರಾನ್‌ನಿಂದ ನಿರ್ಬಂಧಿತವಾಗಿರುವ ಹೋರ್ಮುಜ್ ಜಲ ಸಂಧಿಯನ್ನು ದಾಟಿ ಮುಂಬೈ ಬಂದರನ್ನು ತಲುಪಿದೆ. 1.35 ಲಕ್ಷಟನ್ (10 ಲಕ್ಷ ಬ್ಯಾರೆಲ್) ಕಚ್ಚಾ ತೈಲವನ್ನು ಇದು ಹೊತ್ತು ತಂದಿದ್ದು, ಸುರಕ್ಷಿತವಾಗಿ ತಲುಪಿದೆ.

Monalisa and Farman Khan

11:32 PM (IST) Mar 13

ಅಪ್ಪ ತೋರಿಸಿದ ಹುಡುಗನ ಮದ್ವೆಯಾಗ್ತೇನೆ ಅಂದಿದ್ದ ಮೊನಾಲಿಸಾಗೆ ಬ್ರೇನ್​ವಾಷ್​? ತಂದೆಯ ಕಣ್ಣೀರು- ಹೇಳಿದ್ದೇನು

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ, ತನ್ನ ಪೋಷಕರ ಇಚ್ಛೆಗೆ ವಿರುದ್ಧವಾಗಿ ಫರ್ಮಾನ್ ಖಾನ್ ಎಂಬ ಯುವಕನನ್ನು ವಿವಾಹವಾಗಿದ್ದಾಳೆ. ಇದು ಲವ್ ಜಿಹಾದ್ ಅಲ್ಲ ಎಂದು ಪತಿ ಹೇಳಿದರೆ, ತನ್ನ ಮಗಳಿಗೆ ಬ್ರೈನ್‌ವಾಶ್ ಮಾಡಲಾಗಿದೆ ಎಂದು ತಂದೆ ಆರೋಪಿಸುತ್ತಿದ್ದಾರೆ.
Read Full Story

10:15 PM (IST) Mar 13

ಏರ್‌ ಇಂಡಿಯಾ ಬಳಿಕ ವಿಮಾನ ಟಿಕೆಟ್‌ ದರ ಏರಿಸಿದ ಇಂಡಿಗೋ, ಮಧ್ಯರಾತ್ರಿಯಿಂದಲೇ ಜಾರಿ!

ಏರ್ ಇಂಡಿಯಾ ನಂತರ, ಇಂಡಿಗೋ ಏರ್‌ಲೈನ್ಸ್‌ ಕೂಡ ಇಂಧನ ಸರ್‌ಚಾರ್ಜ್ ವಿಧಿಸುವ ಮೂಲಕ ವಿಮಾನ ದರಗಳನ್ನು ಹೆಚ್ಚಿಸುತ್ತಿದೆ. ಅಂತಾರಾಷ್ಟ್ರೀಯ ಸಂಘರ್ಷಗಳಿಂದಾಗಿ ಜೆಟ್ ಇಂಧನ ಬೆಲೆಗಳು ಶೇ.85ರಷ್ಟು ಏರಿಕೆಯಾಗಿರುವುದೇ ಇದಕ್ಕೆ ಕಾರಣ. ಈ ಹೊಸ ದರಗಳು ಮಾರ್ಚ್ 14 ರಿಂದ ಜಾರಿಗೆ ಬರಲಿವೆ.
Read Full Story

09:50 PM (IST) Mar 13

ಮಕ್ಕಳ ಭವಿಷ್ಯ ಅಪಾಯದಲ್ಲಿದೆ, ಪೋರ್ನ್‌ ಸೈಟ್ಸ್‌ ಬ್ಯಾನ್ ಮಾಡಿ - ರಾಜ್ಯಸಭೆಯಲ್ಲಿ ಅಬ್ಬರಿಸಿದ ಹರ್ಭಜನ್‌ ಸಿಂಗ್‌

ಮಾಜಿ ಕ್ರಿಕೆಟಿಗ ಹಾಗೂ ಸಂಸದ ಹರ್ಭಜನ್ ಸಿಂಗ್ ಅವರು ಇಂಟರ್ನೆಟ್‌ನಲ್ಲಿನ ಅಶ್ಲೀಲ ವಿಷಯಗಳು ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಕಠಿಣ ಕಾನೂನು ರೂಪಿಸಲು ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದಾರೆ. 

Read Full Story

09:49 PM (IST) Mar 13

18 ವರ್ಷಗಳ ಸುಧೀರ್ಘ ಸಮಯದ ಬಳಿಕ ಅಡೋಬ್ ಸಿಇಒ ಹುದ್ದೆಯಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದ ಭಾರತದ ಶಾಂತನು ನಾರಾಯಣ್!

ಸುಮಾರು 18 ವರ್ಷಗಳ ಕಾಲ ಅಡೋಬ್ ಸಿಇಒ ಆಗಿ ಸೇವೆ ಸಲ್ಲಿಸಿದ ಭಾರತೀಯ ಮೂಲದ ಶಾಂತನು ನಾರಾಯಣ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಹೊಸ ಸಿಇಒ ನೇಮಕವಾಗುವವರೆಗೆ ಅವರು ಮುಂದುವರಿಯಲಿದ್ದು, ನಂತರ ಮಂಡಳಿಯ ಅಧ್ಯಕ್ಷರಾಗಲಿದ್ದಾರೆ. ಅವರ ನಾಯಕತ್ವದಲ್ಲಿ, ಅಡೋಬ್ ಕ್ಲೌಡ್ ಮಾದರಿಗೆ ಪರಿವರ್ತನೆಗೊಂಡು ಜಾಗತಿಕವಾಗಿ ಬೃಹತ್ ಯಶಸ್ಸು ಸಾಧಿಸಿದೆ.
Read Full Story

09:17 PM (IST) Mar 13

ಹೊಸ ಆದಾಯ ತೆರಿಗೆ ಕಾಯ್ದೆ ಏಪ್ರಿಲ್ 1ರಿಂದ ಜಾರಿ - ತೆರಿಗೆ ಸ್ಲ್ಯಾಬ್‌ಗಳ ಬಗ್ಗೆ ತಿಳಿದುಕೊಳ್ಳಲೇಬೇಕು

ಏ.1, 2025 ರಿಂದ ಜಾರಿಗೆ ಬರಲಿರುವ ಹೊಸ ಆದಾಯ ತೆರಿಗೆ ಕಾಯ್ದೆಯು, 1961ರ ಹಳೆಯ ಕಾಯ್ದೆಯನ್ನು ಬದಲಿಸಿ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಗುರಿ ಹೊಂದಿದೆ.  ತೆರಿಗೆ ದರಗಳಲ್ಲಿ ಯಾವುದೇ ತಕ್ಷಣದ ಬದಲಾವಣೆ ತರುವುದಿಲ್ಲ, ಬದಲಾಗಿ ಕಾನೂನನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ.  

Read Full Story

08:59 PM (IST) Mar 13

ಮಲ ಕೊಟ್ಟರೆ ಸಿಗುತ್ತೆ 1.5 ಕೋಟಿ ರೂಪಾಯಿ! ಖಂಡಿತ ಇದು ಸುಳ್ಳಲ್ಲ- ಏಕೆ ಇದಕ್ಕಿಷ್ಟು ಬೆಲೆ?

ಅಮೆರಿಕ ಮೂಲದ ಹ್ಯೂಮನ್ ಮೈಕ್ರೋಬ್ಸ್ ಸಂಸ್ಥೆಯು ಆರೋಗ್ಯವಂತರಿಂದ ಮಲವನ್ನು ದಾನವಾಗಿ ಪಡೆದು ವಾರ್ಷಿಕ 1.5 ಕೋಟಿ ರೂ. ನೀಡುತ್ತಿದೆ. ಈ ಮಲವನ್ನು ಗಂಭೀರ ಕರುಳಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮಲ ಮೈಕ್ರೋಬಯೋಟಾ ಕಸಿ (FMT) ಗಾಗಿ ಬಳಸಲಾಗುತ್ತದೆ.

Read Full Story

08:58 PM (IST) Mar 13

ಇರಾನ್‌ ಯುದ್ಧ ತೀವ್ರವಾಗುವ ಭೀತಿ, ಯೂರಿಯಾಗಾಗಿ ಚೀನಾದ ಸಹಾಯ ಕೇಳಿದ ಭಾರತ!

ಮಧ್ಯಪ್ರಾಚ್ಯದ ಯುದ್ಧದಿಂದ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿ, ಭಾರತದ ರಸಗೊಬ್ಬರ ಉತ್ಪಾದನೆಗೆ ಹೊಡೆತ ಬಿದ್ದಿದೆ. ಈ ತುರ್ತು ಪರಿಸ್ಥಿತಿ ನಿಭಾಯಿಸಲು, ಕೆಲವು ಯೂರಿಯಾ ಸರಕುಗಳ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಭಾರತವು ಚೀನಾಕ್ಕೆ ಮನವಿ ಮಾಡಿದೆ. 

Read Full Story

08:35 PM (IST) Mar 13

Vadivelu Speech - ಆಗ ಕ್ಯಾಪ್ಟನ್... ಈಗ ದಳಪತಿನಾ? ಡಿಎಂಕೆ ವೇದಿಕೆಯಲ್ಲಿ ವಿಜಯ್ ವಿರುದ್ಧ ವಡಿವೇಲು ವಾಗ್ದಾಳಿ!

ಹಾಸ್ಯ ನಟ ವಡಿವೇಲು ಅವರು ಡಿಎಂಕೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ, ನಟ ವಿಜಯ್ ಅವರನ್ನು ಗುರಿಯಾಗಿಸಿ ಮಾತನಾಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ.

Read Full Story

08:23 PM (IST) Mar 13

'ಭಾರತ ನಮ್ಮ ಆಪ್ತ ಗೆಳೆಯ' - ಇಂಧನ ಬಿಕ್ಕಟ್ಟಿನ ನಡುವೆ ಗುಡ್‌ ನ್ಯೂಸ್‌ ನೀಡಿದ ಇರಾನ್‌ ರಾಯಭಾರಿ ಮೊಹಮ್ಮದ್ ಫತಾಲಿ!

ಭಾರತದಲ್ಲಿ ತೈಲ ಮತ್ತು ಎಲ್‌ಪಿಜಿ ಬಿಕ್ಕಟ್ಟಿನ ಆತಂಕದ ನಡುವೆ, ಇರಾನ್ ತನ್ನ ಮಿತ್ರ ರಾಷ್ಟ್ರವಾದ ಭಾರತಕ್ಕೆ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಟ್ಯಾಂಕರ್‌ಗಳಿಗೆ ಸುರಕ್ಷಿತ ಮಾರ್ಗವನ್ನು ಒದಗಿಸಲು ಸಿದ್ಧವಿದೆ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಭರವಸೆ ನೀಡಿದ್ದಾರೆ. 

Read Full Story

08:21 PM (IST) Mar 13

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಈ ರಾಜಕಾರಣಿಯ ಕರ್ಮಕಾಂಡ ಬಯಲು - ಮೃತ್ಯುಗಿಂತಲೂ ಘೋರ ರಾಜಕೀಯ ಅಂತ್ಯ!

ಕಿರಣ್ ಕುಮಾರ್ ಗುರೂಜಿ ಅವರ ಪ್ರಕಾರ, ಇರಾನ್-ಇಸ್ರೇಲ್ ಯುದ್ಧವು 40-55 ದಿನಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಈ ಯುದ್ಧವು ರಷ್ಯಾದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಜಾಗತಿಕ ಮಟ್ಟದಲ್ಲಿ ಒಬ್ಬ ಪ್ರಮುಖ ನಾಯಕನ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

Read Full Story

08:08 PM (IST) Mar 13

ಪತ್ನಿ ಬಳಿಕ ದಳಪತಿ ವಿಜಯ್‌ಗೆ ಶಾಕ್‌ ನೀಡಿದ ಪುತ್ರ ಜೇಸನ್‌!

ನಟ ವಿಜಯ್ ಅವರ ಪತ್ನಿ ಸಂಗೀತಾ, ವಿಜಯ್‌ಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಪುತ್ರ ಜೇಸನ್ ಸಂಜಯ್, ತಮ್ಮ ಹೆಸರಿನಿಂದ ತಂದೆಯ ಇನೀಶಿಯಲ್ 'V' ಅನ್ನು ತೆಗೆದುಹಾಕಿ ತಾಯಿಯ ಇನೀಶಿಯಲ್ 'S' ಬಳಸಲು ನಿರ್ಧರಿಸಿದ್ದಾರೆ.
Read Full Story

07:43 PM (IST) Mar 13

Mahindra SUV - ನಟ ಅಜಿತ್‌ಗೆ ಸಿಕ್ತು 30 ಲಕ್ಷದ ಗಿಫ್ಟ್! ಏನಿದು ವಿಶ್ವದ ಮೊದಲ ಫಾರ್ಮುಲಾ E ಥೀಮ್‌ನ SUV?

ನಟ ಅಜಿತ್ ಕುಮಾರ್ ಕಾರ್ ರೇಸ್‌ನಲ್ಲಿ ಭಾಗವಹಿಸಲು ದುಬೈಗೆ ಹೋಗಿದ್ದರು. ದುಬೈನಿಂದ ವಾಪಸಾದ ಅಜಿತ್ ಕುಮಾರ್‌ಗೆ ಮಹೀಂದ್ರಾ ಕಂಪನಿಯು ತನ್ನ ಹೊಚ್ಚ ಹೊಸ ಫಾರ್ಮುಲಾ E ಥೀಮ್‌ನ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದೆ.

Read Full Story

07:10 PM (IST) Mar 13

ಗ್ಯಾಸ್ ಸಮಸ್ಯೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ವೈರಲ್, ಸಂಕಷ್ಟದ ನಡುವೆ ನಕ್ಕು ಸುಸ್ತಾದ ಜನ

LPG ಗ್ಯಾಸ್ ಸಮಸ್ಯೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ವೈರಲ್, ಸಂಕಷ್ಟದ ನಡುವೆ ನಕ್ಕು ಸುಸ್ತಾದ ಜನ, ದೇಶದಲ್ಲಿ ಎದುರಾಗರುವ ಗ್ಯಾಸ್ ಕೊರತೆ ಸಮಸ್ಯೆಯನ್ನು ಹಲವರು ತಮಾಷೆ ಮಾಡಿದ್ದಾರೆ. ಈ ಕುರಿತ ಮೀಮ್ಸ್ ಇಲ್ಲಿದೆ.

Read Full Story

06:50 PM (IST) Mar 13

Dhurandhar - ಪಾರ್ಟ್ 2 ಬರೋ ಮುನ್ನ ಪಾರ್ಟ್ 1 ಮತ್ತೆ ರಿಲೀಸ್ - ರಣವೀರ್ ಫ್ಯಾನ್ಸ್‌ಗೆ ಡಬಲ್ ಧಮಾಕಾ!

ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಮತ್ತೆ ಥಿಯೇಟರ್‌ಗೆ ಎಂಟ್ರಿ ಕೊಡುತ್ತಿದೆ. ಇದರ ಸೀಕ್ವೆಲ್ ಬರುವ ಮುನ್ನ, ಚಿತ್ರದ ಮೊದಲ ಭಾಗವನ್ನು ವಿಶ್ವಾದ್ಯಂತ ಮರು-ಬಿಡುಗಡೆ ಮಾಡಲಾಗುತ್ತಿದೆ.

Read Full Story

06:37 PM (IST) Mar 13

ಅಮೆರಿಕದಲ್ಲಿ ಭಾರತೀಯ ಸಹೋದರರ ಕರಾಳ ಮುಖ, ಸವಾನಿ ಬ್ರದರ್ಸ್‌ಗೆ 835 ವರ್ಷಗಳ ಜೈಲು ಶಿಕ್ಷೆ!

ಅಮೆರಿಕದಲ್ಲಿ ಭಾರತೀಯ ಮೂಲದ ಭಾಸ್ಕರ್ ಮತ್ತು ಅರುಣ್ ಸವಾನಿ ಸಹೋದರರು ಆರೋಗ್ಯ ರಕ್ಷಣೆ, ವೀಸಾ ವಂಚನೆ ಮತ್ತು ಹಣಕಾಸು ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ತಮ್ಮ 'ಸವಾನಿ ಗ್ರೂಪ್' ಮೂಲಕ ಮೆಡಿಕೈಡ್ ಯೋಜನೆಗೆ ವಂಚನೆ, H-1B ವೀಸಾ ದುರುಪಯೋಗ ಮತ್ತು ತೆರಿಗೆ ವಂಚನೆ ನಡೆಸಿದ ಇವರು ಒಟ್ಟು 835 ವರ್ಷಗಳ ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ.
Read Full Story

06:34 PM (IST) Mar 13

ಇರಾನ್ ಯುದ್ಧದ ಕೆನ್ನಾಲಿಗೆಗೆ ಬೆಂದು ಹೋದ ಗಲ್ಫ್‌ ರಾಷ್ಟ್ರಗಳು - ಯುದ್ಧ ಮಾಡದೇ ಇದ್ದರೂ ಸೌದಿ, ಯುಎಇಗೆ ಕೋಟ್ಯಂತರ ನಷ್ಟ!

ಇರಾನ್-ಇಸ್ರೇಲ್ ಯುದ್ಧದಿಂದಾಗಿ, ನೇರ ಸಂಬಂಧವಿಲ್ಲದಿದ್ದರೂ ಗಲ್ಫ್ ದೇಶಗಳು ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸೌದಿ ಅರೇಬಿಯಾ ಮತ್ತು ಯುಎಇ ತಲಾ ₹42,000 ಕೋಟಿಗೂ ಅಧಿಕ ನಷ್ಟ ಅನುಭವಿಸಿದ್ದು, ಇಂಧನ ಆದಾಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ತೀವ್ರವಾಗಿ ಹಾನಿಗೊಳಗಾಗಿವೆ.

Read Full Story

06:07 PM (IST) Mar 13

Allu Arjun - 'ಅಲ್ಲು ಸಿನಿಮಾಸ್ ವಾಲ್ ಆಫ್ ಫೇಮ್' ಗೋಡೆ ಮೇಲೆ ಕನ್ನಡದ ಇಬ್ಬರು ಡೈರೆಕ್ಟರ್! ಯಾರು ಗೊತ್ತಾ?

ಹೈದರಾಬಾದ್‌ನಲ್ಲಿ ನಟ ಅಲ್ಲು ಅರ್ಜುನ್ ಹೊಸ ಮಲ್ಟಿಪ್ಲೆಕ್ಸ್ 'ಅಲ್ಲು ಸಿನಿಮಾಸ್' ಶುರು ಮಾಡಿದ್ದಾರೆ. ಇಲ್ಲಿನ 'ವಾಲ್ ಆಫ್ ಫೇಮ್'ನಲ್ಲಿರೋ ನಿರ್ದೇಶಕರ ಲಿಸ್ಟ್ ಈಗ ಸಖತ್ ಚರ್ಚೆಯಲ್ಲಿದೆ.

Read Full Story

06:06 PM (IST) Mar 13

ಪೆಟ್ರೋಲ್‌, ಡೀಸೆಲ್‌ ಕೊರತೆಯಿಲ್ಲ, ಆದ್ರೆ ಎಲ್‌ಪಿಜಿಯದ್ದೇ ಸಮಸ್ಯೆ - ಕೇಂದ್ರ ಸರ್ಕಾರ

ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಮತ್ತು ಹಾರ್ಮುಜ್ ಜಲಸಂಧಿ ಮುಚ್ಚಿರುವ ಕಾರಣ, ಭಾರತದಲ್ಲಿ ಎಲ್‌ಪಿಜಿ ಪೂರೈಕೆಯ ಬಗ್ಗೆ ಕಳವಳ ಹೆಚ್ಚಾಗಿದೆ, ಇದು ಗ್ಯಾಸ್ ಬುಕಿಂಗ್‌ಗಳಲ್ಲಿ ಹಠಾತ್ ಏರಿಕೆಗೆ ಕಾರಣವಾಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿಲ್ಲ ಎಂದು ಕೇಂದ್ರ ಹೇಳಿದೆ.

Read Full Story

05:46 PM (IST) Mar 13

ಊಟ ಮಾಡಿ ಆಟ ಆಡಿ ಬೇರೆ ಮದುವೆಯಾದ ಪೊಲೀಸಪ್ಪ, ದುರಂತ ಅಂತ್ಯಕಂಡ ಮಹಿಳೆ ಕೊನೆ ವಿಡಿಯೋ

ಊಟ ಮಾಡಿ ಆಟ ಆಡಿ ಬೇರೆ ಮದುವೆಯಾದ ಪೊಲೀಸಪ್ಪ, ದುರಂತ ಅಂತ್ಯಕಂಡ ಮಹಿಳೆ ಕೊನೆ ವಿಡಿಯೋ, ಕಳೆದ ನಾಲ್ಕು ವರ್ಷದಿಂದ ಪತ್ನಿ ರೀತಿ ನನ್ನ ಇಟ್ಟುಕೊಂಡಿದ್ದ. ಆತ ಪೊಲೀಸ್ ಆಗಿದ್ದ ಕಾರಣ ನನಗೆ ಯಾರಿಂದಲೂ ನೆರವು ಸಿಗಲಿಲ್ಲ ಎಂದು ದುರಂತ ಅಂತ್ಯಕಂಡಿದ್ದಾಳೆ.

Read Full Story

05:21 PM (IST) Mar 13

Hansika Divorce - 'ಸಣ್ಣ ವಿಷಯಕ್ಕೂ ಜಗಳ ಆಗ್ತಿತ್ತು' - ಡಿವೋರ್ಸ್ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಹನ್ಸಿಕಾ

ಪತಿ ಸೊಹೇಲ್ ಖತೂರಿಯಾ ಜೊತೆಗಿನ ನಾಲ್ಕು ವರ್ಷಗಳ ದಾಂಪತ್ಯಕ್ಕೆ ನಟಿ ಹನ್ಸಿಕಾ ಮೋಟ್ವಾನಿ ಅಂತ್ಯ ಹಾಡಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳೇ ವಿಚ್ಛೇದನಕ್ಕೆ ಕಾರಣವಾಗಿದ್ದು, ಹನ್ಸಿಕಾ ಯಾವುದೇ ಜೀವನಾಂಶ ಪಡೆದಿಲ್ಲ ಎಂದು ವರದಿಯಾಗಿದೆ.

Read Full Story

04:46 PM (IST) Mar 13

ನಕ್ಷತ್ರಗಳಂತೆ ಹೊಳೆಯುವ ನಗರಗಳು - ಭಾರತದ ಮೇಲೆ ಹಾರುವಾಗ ISS‌ ಸೆರೆಹಿಡಿದ ಫೋಟೋ ವೈರಲ್!

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು (ISS) ಭಾರತದ ಅದ್ಭುತ ರಾತ್ರಿ ಸಮಯದ ಚಿತ್ರವನ್ನು ಹಂಚಿಕೊಂಡಿದೆ. ಅರಬ್ಬೀ ಸಮುದ್ರ ಮತ್ತು ಹಿಮಾಲಯದ ಮೇಲೆ ಹಾದುಹೋಗುವಾಗ ಸೆರೆಹಿಡಿದ ಈ ಚಿತ್ರದಲ್ಲಿ, ನಗರಗಳ ದೀಪಗಳು ಬಲೆಯಂತಹ ವಿನ್ಯಾಸವನ್ನು ರೂಪಿಸಿವೆ. 

Read Full Story

04:39 PM (IST) Mar 13

'ನನ್ನನ್ನು ಕಂಡರೆ ಈಗಲೂ ಮುಖ ತಿರುಗಿಸ್ತಾನೆ'; ಗೌತಮ್ ಗಂಭೀರ್ ದ್ವೇಷದ ಬಗ್ಗೆ ಮಾಜಿ ಸೆಲೆಕ್ಟರ್ ಅಚ್ಚರಿ ಹೇಳಿಕೆ!

ಟೀಂ ಇಂಡಿಯಾದಿಂದ ತನ್ನನ್ನು ಕೈಬಿಟ್ಟಿದ್ದಕ್ಕೆ ಗೌತಮ್ ಗಂಭೀರ್‌ಗೆ ಈಗಲೂ ತನ್ನ ಮೇಲೆ ಸಿಟ್ಟಿದೆ ಎಂದು ಮಾಜಿ ಚೀಫ್ ಸೆಲೆಕ್ಟರ್ ಸಂದೀಪ್ ಪಾಟೀಲ್ ಹೇಳಿದ್ದಾರೆ. ಆತ್ಮೀಯ ಸ್ನೇಹಿತರಾಗಿದ್ದ ಗಂಭೀರ್, ಆಯ್ಕೆ ಸಮಿತಿಯ ನಿರ್ಧಾರದ ನಂತರ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದಿದ್ದಾರೆ.

Read Full Story

04:21 PM (IST) Mar 13

ಪಾಕ್ ಆಟಗಾರನನ್ನು ಖರೀದಿಸಿದ ಸನ್‌ರೈಸರ್ಸ್ ಫ್ರಾಂಚೈಸಿ! ಜನರ ಆಕ್ರೋಶದ ಬೆನ್ನಲ್ಲೇ ಮೌನ ಮುರಿದ ಬಿಸಿಸಿಐ!

ಇಂಗ್ಲೆಂಡ್‌ನ 'ದಿ ಹಂಡ್ರೆಡ್' ಟೂರ್ನಿಗೆ ಸನ್‌ರೈಸರ್ಸ್ ಲೀಡ್ಸ್ ತಂಡ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್‌ನನ್ನು ಖರೀದಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ, ಇದು ವಿದೇಶಿ ಲೀಗ್ ಆಗಿರುವುದರಿಂದ ತಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದಿದೆ.

Read Full Story

04:15 PM (IST) Mar 13

LPG ಸಿಲಿಂಡರ್‌ಗಾಗಿ ಕ್ಯೂನಲ್ಲಿ ನಿಂತ ವ್ಯಕ್ತಿ ಹೃದಯಾಘಾತದಿಂದ ಸಾವು!

ಪಂಜಾಬ್‌ನ ಬರ್ನಾಲಾದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಇಂಧನ ಕೊರತೆಯ ವದಂತಿಯಿಂದ ಉಂಟಾದ 'ಪ್ಯಾನಿಕ್ ಬೈಯಿಂಗ್' ಈ ದುರಂತಕ್ಕೆ ಕಾರಣವಾಗಿದೆ.

Read Full Story

04:15 PM (IST) Mar 13

ಮತ್ತೊಂದು ಸ್ಲೀಪರ್ ಬಸ್ ದುರಂತ, ಚಲಿಸುತ್ತಿದ್ದ ಬಸ್ ಹೊತ್ತಿ ಉರಿದು ಪ್ರಯಾಣಿಕ ಸಾವು, 6 ಮಂದಿ ಗಂಭೀರ

ಮತ್ತೊಂದು ಸ್ಲೀಪರ್ ಬಸ್ ದುರಂತ, ಚಲಿಸುತ್ತಿದ್ದ ಬಸ್ ಹೊತ್ತಿ ಉರಿದು ಪ್ರಯಾಣಿಕ ಸಾವು, 6 ಮಂದಿ ಗಂಭೀರ, ಐಷಾರಾಮಿ ಸ್ಲೀಪರ್ ಬಸ್ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹಲವರು ಬಸ್ಸಿನ ಗಾಜು ಒಡೆದು ಹೊರಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.

 

Read Full Story

03:57 PM (IST) Mar 13

EPFO Interest - ಪಿಎಫ್‌ ಖಾತೆಗೆ ಬಡ್ಡಿ ಬರೋದು ಯಾವಾಗ? ಇಲ್ಲಿದ ಡೀಟೇಲ್ಸ್‌

EPFO Interest Rate: ಪಿಎಫ್ ಖಾತೆಗೆ ಶೇ. 8.25 ರಷ್ಟು ಬಡ್ಡಿ ಪಾವತಿಸುವುದಾಗಿ ಘೋಷಿಸಲಾಗಿದೆ. ಆದರೆ ಈ ಬಡ್ಡಿಯನ್ನು ಯಾವಾಗ ಜಮಾ ಮಾಡಲಾಗುತ್ತದೆ ಮತ್ತು ಠೇವಣಿ ಮಾಡಿದ ಮೊತ್ತಕ್ಕೆ ಎಷ್ಟು ಬಡ್ಡಿ ಜಮಾ ಮಾಡಲಾಗುತ್ತದೆ ಎಂಬ ಕುತೂಹಲ ನೌಕರರಲ್ಲಿ ಹೆಚ್ಚಾಗಿದೆ.

 

Read Full Story

03:52 PM (IST) Mar 13

ಕರ್ನಾಟಕದಲ್ಲಿ ಧುರಂಧರ್​​​-2 ಹಗಲು ದರೋಡೆ; ಯುಗಾದಿ ಗಿಫ್ಟ್​ ಜೇಬು ಕಾಲಿ ಮಾಡೋದು ಫಿಕ್ಸ್!

ಯುಗಾದಿ ಹಬ್ಬದಂದು ಬಿಡುಗಡೆಯಾಗುತ್ತಿರುವ ಹಿಂದಿಯ 'ದುರಂಧರ್-2' ಚಿತ್ರದ ಟಿಕೆಟ್ ದರ ಕರ್ನಾಟಕದಲ್ಲಿ ಗಗನಕ್ಕೇರಿದೆ. ಯಶ್ ಅವರ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮುಂದೂಡಿದ್ದರಿಂದ, ದುರಂಧರ್-2 ಚಿತ್ರತಂಡವು ಪ್ರೀಮಿಯರ್ ಶೋಗಳಿಗೆ ಸಾವಿರಾರು ರೂಪಾಯಿ ನಿಗದಿಪಡಿಸಲಾಗಿದೆ.

Read Full Story

03:36 PM (IST) Mar 13

ಕೋಮಾಗೆ ಜಾರಿದ ಮಜ್ತೊಬಾ ಖಮೇನಿ, ಶರಣಾಗತಿಯತ್ತ ಇರಾನ್; G7 ನಾಯಕರ ಸಭೆ ಬಳಿ ಟ್ರಂಪ್ ಘೋಷಣೆ

ಕೋಮಾಗೆ ಜಾರಿದ ಮಜ್ತೊಬಾ ಖಮೇನಿ, ಶರಣಾಗತಿಯತ್ತ ಇರಾನ್; G7 ನಾಯಕರ ಸಭೆ ಬಳಿ ಟ್ರಂಪ್ ಘೋಷಣೆ, ಮಾತುಕತೆ ನಡೆಸಲು ಇರಾನ್‌ನಲ್ಲಿ ನಾಯಕರಿಲ್ಲ ಎಂದಿರುವ ಟ್ರಂಪ್, ಜಿ7 ವರ್ಚುವಲ್ ಮೀಟಿಂಗ್ ಭಾರಿ ಮಹತ್ವ ಪಡೆದಿದೆ.

 

Read Full Story

03:17 PM (IST) Mar 13

ಬಸ್ ನಿಲ್ದಾಣದಲ್ಲಿ ಗಂಡನ ಪಕೋಡಾ ತರುವುದಕ್ಕೆ ಕಳುಹಿಸಿ ಮಹಿಳೆ ಎಸ್ಕೇಪ್

Moradabad newlywed elopes: ಉತ್ತರ ಪ್ರದೇಶದ ಮೊರದಾಬಾದ್ ಬಸ್ ನಿಲ್ದಾಣದಲ್ಲಿ, ಪಕೋಡಾ ತರಲು ಗಂಡನನ್ನು ಕಳುಹಿಸಿದ ನವ ವಿವಾಹಿತೆಯೊಬ್ಬಳು ಆತ ಹಿಂತಿರುಗುವಷ್ಟರಲ್ಲಿ ನಾಪತ್ತೆಯಾಗಿದ್ದಾಳೆ. ಮೂರು ತಿಂಗಳ ಹಿಂದಷ್ಟೇ ಇವರ ಮದುವೆಯಾಗಿತ್ತು.

Read Full Story

01:40 PM (IST) Mar 13

ಬೇಕಂತಲೇ ಸಂಜು ಸ್ಯಾಮ್ಸನ್ ಫೋಟೋ ಬಿಟ್ಟು ಫೋಸ್ಟ್ ಮಾಡಿದ್ರಾ ಶುಭ್‌ಮನ್ ಗಿಲ್? ಆಕ್ರೋಶ ಹೊರಹಾಕಿದ ಫ್ಯಾನ್ಸ್‌

ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಫೋಟೋವೊಂದನ್ನು ಶುಭಮನ್ ಗಿಲ್ ಹಂಚಿಕೊಂಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಈ ಫೋಟೋದಲ್ಲಿ 'ಸರಣಿ ಶ್ರೇಷ್ಠ' ಪ್ರಶಸ್ತಿ ವಿಜೇತ ಸಂಜು ಸ್ಯಾಮ್ಸನ್ ಸ್ಪಷ್ಟವಾಗಿ ಕಾಣಿಸದ ಕಾರಣ ಅಭಿಮಾನಿಗಳು ಗಿಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

Read Full Story

01:29 PM (IST) Mar 13

ಫುಲ್ ಟೈಮ್ ಕಂಟೆಂಟ್ ಕ್ರಿಯೇಟರ್ ಆಗಲು ಗೂಗಲ್‌ನ 2 ಕೋಟಿ ವೇತನದ ಕೆಲಸ ಬಿಟ್ಟ ಬೆಂಗಳೂರು ಟೆಕ್ಕಿ

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗುವುದಕ್ಕಾಗಿ 35 ವರ್ಷದ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಗೂಗಲ್‌ ಕಂಪನಿಯಲ್ಲಿದ್ದ 2 ಕೋಟಿ ವೇತನದ ಕೆಲಸವನ್ನೇ ತೊರೆದಿದ್ದಾಗಿ ಹೇಳಿಕೊಂಡಿದ್ದು, ಇದು ಅನೇಕರನ್ನು ಅಚ್ಚರಿಗೀಡು ಮಾಡಿದೆ.

Read Full Story

01:03 PM (IST) Mar 13

ಇದೇ ಟಿ20 ವಿಶ್ವಕಪ್‌ ಟೂರ್ನಿಯ ಅತ್ಯಂತ ಸ್ಟುಪಿಡ್ ತಂಡ! ಭಾರತ ವಿಶ್ವಕಪ್ ಗೆಲ್ಲಲು ಅದೇ ತಂಡ ಕಾರಣವೆಂದ ಮೈಕಲ್ ವಾನ್

ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ದಕ್ಷಿಣ ಆಫ್ರಿಕಾದ ತಂತ್ರಗಾರಿಕೆಯ ವೈಫಲ್ಯವೇ ಕಾರಣ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ. ಸೂಪರ್ 8 ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೋತಿದ್ದರೆ, ಭಾರತ ತಂಡ ಟೂರ್ನಿಯಿಂದ ಹೊರಬೀಳುತ್ತಿತ್ತು ಎಂದು ವಾನ್ ಹೇಳಿದ್ದಾರೆ

Read Full Story

12:59 PM (IST) Mar 13

ದಾಳಿಯಲ್ಲಿ ನೂತನ ನಾಯಕ ಮೊಜ್ತಬಾ ಖಮೇನಿ ಎರಡೂ ಕಾಲು ಕಟ್, ಜೀವ ಮಾತ್ರ ಇದೆ ಎಂದ ಅಮೆರಿಕ

ದಾಳಿಯಲ್ಲಿ ನೂತನ ನಾಯಕ ಮೊಜ್ತಬಾ ಖಮೇನಿ ಎರಡೂ ಕಾಲು ಕಟ್, ಜೀವ ಮಾತ್ರ ಇದೆ ಎಂದ ಅಮೆರಿಕ, ಹೊಟ್ಟೆ ಹಾಗೂ ಲಿವರ್ ಡ್ಯಾಮೇಜ್ ಆಗಿದೆ. ರಹಸ್ಯ ಸ್ಥಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

 

Read Full Story

12:56 PM (IST) Mar 13

Donald Trump - ತೈಲ ಟ್ಯಾಂಕರ್ ಸಿಬ್ಬಂದಿ ಸ್ವಲ್ಪ ಧೈರ್ಯ ತೋರಿಸಿ, ಇರಾನ್ ದಾಳಿಗೆ ಹೆದರಬೇಡಿ - ಟ್ರಂಪ್

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾವು ಹೆಚ್ಚುತ್ತಿರುವಾಗಲೇ, ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ತೈಲ ಟ್ಯಾಂಕರ್ ಸಿಬ್ಬಂದಿಗೆ 'ಸ್ವಲ್ಪ ಧೈರ್ಯ ತೋರಿಸಿ' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ದಾಳಿ ಹೆಚ್ಚಾದ ಕಾರಣ ಟ್ಯಾಂಕರ್‌ಗಳಿಗೆ ಭದ್ರತೆ ನೀಡಲು ಪೆಂಟಗನ್ ನಿರಾಕರಿಸಿದೆ.

Read Full Story

12:42 PM (IST) Mar 13

Menstrual Leave - ಮುಟ್ಟಿನ ರಜೆ ಕಡ್ಡಾಯ ಮಾಡಿದ್ರೆ ಮಹಿಳೆಯರಿಗೆ ಕೆಲಸವೇ ಸಿಗಲ್ಲ - ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ

ದೇಶದಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯ ಮಾಡಿದರೆ, ಅದು ಉದ್ಯೋಗ ಮಾರುಕಟ್ಟೆಯಲ್ಲಿ ಅವರಿಗೇ ದೊಡ್ಡ ಹೊಡೆತ ಕೊಡಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಕಾನೂನು ಬಂದರೆ, ಕಂಪನಿಗಳು ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತವೆ ಎಂದು ಕೋರ್ಟ್ ಎಚ್ಚರಿಸಿದೆ.

Read Full Story

12:28 PM (IST) Mar 13

ಮೊಹಮ್ಮದ್ ಪ್ರೀತಿಯಲ್ಲಿ ನರಕ ನೋಡಿದ ಹಿಂದೂ ಯುವತಿ, ಫ್ರಿಡ್ಜ್‌ ಕೇಸ್ ಆಗಬಾರದೆಂದು ದುರಂತ ಅಂತ್ಯ

ಮೊಹಮ್ಮದ್ ಪ್ರೀತಿಯಲ್ಲಿ ನರಕ ನೋಡಿದ ಹಿಂದೂ ಯುವತಿ, ಫ್ರಿಡ್ಜ್‌ ಕೇಸ್ ಆಗಬಾರದೆಂದು ದುರಂತ ಅಂತ್ಯ, 24 ವರ್ಷದ ದಂತ ಸರ್ಜರಿ ವಿದ್ಯಾರ್ಥಿನಿಗೆ ಡೇಟಿಂಗ್ ಆ್ಯಪ್ ಮೂಲಕ ಈ ಮೊಹಮ್ಮದ್ ಖಾನ್ ಪರಿಚಯವಾಗಿದ್ದ.

Read Full Story

11:50 AM (IST) Mar 13

ಝೋಮ್ಯಾಟೋದಲ್ಲಿ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ನಾಯಿ ಕಾಲು ಸಿಕ್ತು ಎಂದ ಗ್ರಾಹಕ - ವೀಡಿಯೋ ವೈರಲ್

ಝೋಮ್ಯಾಟೋ ಮೂಲಕ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ನಾಯಿಯ ಕಾಲನ್ನು ಹೋಲುವ ಮಾಂಸದ ತುಂಡು ಪತ್ತೆಯಾಗಿದೆ ಎಂದು ಗ್ರಾಹಕನೋರ್ವ ಆರೋಪಿಸಿದ್ದಾನೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನ್‌ಲೈನ್ ಆಹಾರ ಪ್ರಿಯರಲ್ಲಿ ಆತಂಕ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

11:41 AM (IST) Mar 13

ಸೌರ ಮಂಡಲದ ಮಹತ್ವದ ಘಟನೆ, ಸೂರ್ಯ, ನಕ್ಷತ್ರ ಸಮೂಹ ವಲಸೆ, ಇದೆಯಾ ಆಪತ್ತು?

ಸೌರ ಮಂಡಲದ ಮಹತ್ವದ ಘಟನೆ, ಸೂರ್ಯ, ನಕ್ಷತ್ರ ಸಮೂಹ ವಲಸೆ, ಇದೆಯಾ ಆಪತ್ತು?, ಗೈಯಾ ಸಂಶೋಧನೆ ಕೇಂದ್ರ ನಡೆಸಿದ ಅಧ್ಯಯನ ವರದಿ ಕೆಲ ಸ್ಫೋಟಕ ಮಾಹಿತಿ ನೀಡಿದೆ. ಕ್ಷೀರಪಥದಿಂದ ಸೂರ್ಯ ಹಾಗೂ ನಕ್ಷತ್ರ ಸಮೂಹಗಳು ವಲಸೆ, ಏನಿದು?

 

Read Full Story

11:30 AM (IST) Mar 13

ಮಗನ ಸಾವಿನಿಂದ ಕುಸಿದು ಬಿದ್ದ ತಾಯಿ; ಉಪಾಸನಾ ಬದುಕು ಬದಲಿಸಿದ ಆ ಒಂದು ಘಟನೆ!

ಮೆಗಾ ಕುಟುಂಬದ ಸೊಸೆ ಉಪಾಸನಾ ಈಗ ಅಪೋಲೋ ಆಸ್ಪತ್ರೆಯ ಮುಖ್ಯಸ್ಥೆ. ಆದರೆ, ಆರಂಭದಲ್ಲಿ ಅವರಿಗೆ ಈ ಕ್ಷೇತ್ರಕ್ಕೆ ಬರುವ ಆಸಕ್ತಿ ಇರಲಿಲ್ಲ. ಆಸ್ಪತ್ರೆಯಲ್ಲಿ ನಡೆದ ಒಂದು ಘಟನೆ, ಮಗನನ್ನು ಕಳೆದುಕೊಂಡ ತಾಯಿಯೊಬ್ಬಳ ನೋವು ಅವರ ಮನಸ್ಸನ್ನು ಬದಲಿಸಿತು.
Read Full Story

10:51 AM (IST) Mar 13

ಬೆಂಗಳೂರಲ್ಲಿ ಐಪಿಎಲ್ ಆಯೋಜನೆ ಆಗುತ್ತಾ? ಇಂದೇ ಅಂತಿಮ ನಿರ್ಧಾರ ಪ್ರಕಟ!

ಬೆಂಗಳೂರು: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಲಿದೆಯೇ ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ

 

Read Full Story

More Trending News