LIVE NOW
Published : Dec 12, 2025, 07:44 AM ISTUpdated : Dec 12, 2025, 04:47 PM IST

India Latest News Live: T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?

ಸಾರಾಂಶ

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಮುಂದುವರಿದಿದ್ದು, ಗುರುವಾರ 38 ಪೈಸೆ ಕುಸಿತವಾಗಿ 90.32 ರು.ಗೆ ತಲುಪಿದೆ. ಇದು ರುಪಾಯಿ ಮೌಲ್ಯದ ಸಾರ್ವಕಾಲಿಕ ಕನಿಷ್ಠ ಮೊತ್ತವಾಗಿದೆ. ಬುಧವಾರ, ರುಪಾಯಿ ಮೌಲ್ಯವು 7 ಪೈಸೆ ಕುಸಿತ ಕಂಡು 89.94ಕ್ಕೆ ತಲುಪಿತ್ತು.

Hardik Pandya

04:47 PM (IST) Dec 12

T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?

ಮುಲ್ಲನ್‌ಪುರ: ದಕ್ಷಿಣ ಆಫ್ರಿಕಾ ಎದುರಿನ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 100 ಸಿಕ್ಸರ್ ಸಿಡಿಸಿದ ಎಲೈಟ್ ಬ್ಯಾಟರ್‌ಗಳ ಕ್ಲಬ್ ಸೇರಿದ್ದಾರೆ. ಬನ್ನಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಭಾರತೀಯ ಬ್ಯಾಟರ್ ಯಾರು ನೋಡೋಣ.

 

Read Full Story

04:37 PM (IST) Dec 12

ಜನ್ಮ ದಿನದಲ್ಲಿ ಒಮ್ಮೆಯಾದ್ರೂ ಸಂಖ್ಯೆ 1 ಇದ್ಯಾ? ಹಾಗಿದ್ದರೆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ- ಎಷ್ಟು ಬಾರಿ ಇದ್ದರೆ ಏನು ಫಲ?

ಸಂಖ್ಯಾಶಾಸ್ತ್ರದ ಪ್ರಕಾರ, ಜನ್ಮ ದಿನಾಂಕದಲ್ಲಿ ಸಂಖ್ಯೆ 1ರ ಪುನರಾವರ್ತನೆಯು ವ್ಯಕ್ತಿಯ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಈ ಲೇಖನವು ನಿಮ್ಮ ಜನ್ಮ ದಿನಾಂಕದಲ್ಲಿ ಒಂದು, ಎರಡು, ಅಥವಾ ಮೂರು ಬಾರಿ ಸಂಖ್ಯೆ 1 ಬಂದರೆ ಅದರ ಅರ್ಥ, ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳನ್ನು ವಿವರಿಸುತ್ತದೆ.

Read Full Story

04:33 PM (IST) Dec 12

ಅತಿಹೆಚ್ಚು ಮದ್ಯಪಾನ ಮಾಡುವ ಜಗತ್ತಿನ ಸೈನ್ಯ ಯಾವುದು? ಭಾರತದ ಸೇನೆಗೆ ಎಷ್ಟನೇ ಸ್ಥಾನ?

Heavy Alcohol Drinker Army: ಜಗತ್ತಿನ ಅನೇಕ ಸೈನ್ಯಗಳಲ್ಲಿ ಮದ್ಯಪಾನಕ್ಕೆ ಅನುಮತಿ ಇದೆ. ಕೆಲಸದ ನಂತರ, ವಿಶೇಷವಾಗಿ ರಾತ್ರಿಯಲ್ಲಿ, ವಾರದ ಕೊನೆಯಲ್ಲಿ, ಸಮಾರಂಭದಲ್ಲಿ, ಮದ್ಯವನ್ನು ಸೇವಿಸುತ್ತಾರೆ. ಜಗತ್ತಿನಲ್ಲಿಯೇ ಅತಿಹೆಚ್ಚು ಮದ್ಯಪಾನ ಮಾಡುವ ಸೇನೆ ಯಾವುದು ಅನ್ನೋದರ ವಿವರ ಇಲ್ಲಿದೆ.

 

Read Full Story

04:23 PM (IST) Dec 12

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್ , ಡಿಸೆಂಬರ್ 12ರಂದು ಬೆಳ್ಳಿ ಬೆಲೆ ಐತಿಹಾಸಿಕ ಗಡಿ ದಾಟಿದೆ. ಇಂದು ಬೆಳ್ಳಿ ಬೆಲೆ ಎಷ್ಟಾಗಿದೆ. ದುಬಾರಿ ಬೆಲೆಯಿಂದ ಹೂಡಿಕೆಯಲ್ಲಿ ಇದೆಯಾ ಆತಂಕ?

Read Full Story

04:06 PM (IST) Dec 12

ಧುರಂಧರ್ ಸಿನಿಮಾ ನೋಡಿ ಪಾಕಿಸ್ತಾನಕ್ಕೆ ಸಾಲ ನಿರಾಕರಿಸಿತ್ತಾ ವಿಶ್ವಬ್ಯಾಂಕ್ - ಏನಿದು ಅಸಲಿ ಕತೆ?

ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್' ಸಿನಿಮಾ ತಂಡದ ವಿರುದ್ಧ ಪಾಕಿಸ್ತಾನ ಮಾನನಷ್ಟ ಮೊಕದ್ದಮೆ ಹೂಡಿದೆ. ಚಿತ್ರದಲ್ಲಿ ಪಾಕಿಸ್ತಾನವನ್ನು ಶ್ರೀಮಂತ ದೇಶವೆಂದು ಬಿಂಬಿಸಿದ್ದರಿಂದ ವಿಶ್ವಬ್ಯಾಂಕ್ ಸಾಲ ನಿರಾಕರಿಸಿದೆ ಎಂಬ ಸುದ್ದಿಯೊಂದು ವೈರಲ್ ಆಗ್ತಿದ್ದು, ಈ ಸುದ್ದಿಯ ಅಸಲಿಯತ್ತು ಇಲ್ಲಿದೆ.

Read Full Story

03:15 PM (IST) Dec 12

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

ಮುಲ್ಲಾನ್‌ಪುರ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 51 ರನ್ ಅಂತರದ ಭರ್ಜರಿ ಜಯ ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಇದರ ನಡುವೆ ಪಾಂಡ್ಯ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

Read Full Story

02:35 PM (IST) Dec 12

ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ - ವೀಡಿಯೋ

ಆಸ್ಟ್ರೇಲಿಯಾದಲ್ಲಿ ಸ್ಕೈಡೈವಿಂಗ್ ಮಾಡುವಾಗ, ಓರ್ವ ಸ್ಕೈಡೈವರ್‌ನ ಪ್ಯಾರಾಚೂಟ್ ವಿಮಾನದ ಬಾಲಕ್ಕೆ ಸಿಲುಕಿಕೊಂಡು ಆತ ಆಗಸದಲ್ಲಿ ನೇತಾಡಿದ್ದು, ಆತ ಕೊನೆಗೂ ಪವಾಡದಂತೆ ಪಾರಾಗಿದ್ದು, ಆ ಘಟನೆಯ ರೋಚಕ ವೀಡಿಯೋ ಇಲ್ಲಿದೆ.

Read Full Story

02:27 PM (IST) Dec 12

U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!

ಅಂಡರ್-19 ಏಷ್ಯಾಕಪ್‌ನಲ್ಲಿ, ವೈಭವ್ ಸೂರ್ಯವಂಶಿಯವರ ಸ್ಪೋಟಕ 171 ರನ್‌ಗಳ ನೆರವಿನಿಂದ ಭಾರತ ತಂಡವು ಯುಎಇ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ. ಆರೋನ್ ಜಾರ್ಜ್ ಮತ್ತು ವಿಹಾನ್ ಮಲ್hಹೋತ್ರಾ ಕೂಡಾ ಅರ್ಧಶತಕ ಬಾರಿಸಿ ತಂಡದ ಮೊತ್ತ 433ಕ್ಕೆ ತಲುಪಲು ನೆರವಾದರು.
Read Full Story

02:06 PM (IST) Dec 12

ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ

ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ ಶುರುವಾಗಿದೆ. ಕಾಂಗ್ರೆಸ್ ನಾಯಕ ಸೋನಿಯಾ ಗಾಂಧಿಗ ಪತ್ರ ಬರೆದು ಗಾಂಧಿ ಕುಟುಂಬವೇ ಕಾಂಗ್ರೆಸ್ ಮುನ್ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Read Full Story

01:31 PM (IST) Dec 12

ಅನಾರೋಗ್ಯ ಏನಿದ್ದರೂ ವೀಕ್ ಆಫ್‌ನಲ್ಲೇ ಬರಬೇಕು ಸಿಕ್ ಲೀವ್ ಇಲ್ಲ, ನೋವು ತೋಡಿಕೊಂಡ ಉದ್ಯೋಗಿ

ಅನಾರೋಗ್ಯ ಏನಿದ್ದರೂ ವೀಕ್ ಆಫ್‌ನಲ್ಲೇ ಬರಬೇಕು ಸಿಕ್ ಲೀವ್ ಇಲ್ಲ, ನೋವು ತೋಡಿಕೊಂಡ ಉದ್ಯೋಗಿ, ಇಬ್ಬರಿಗೆ ಒಟ್ಟಿಗೆ ರಜೆ ಇಲ್ಲ, ಅದು ಸಿಕ್, ಎಮರ್ಜೆನ್ಸಿ ಏನಾದರೂ ಸರಿ ಎಂದು ಬಾಸ್ ಹೇಳಿದ್ದಾರೆ. ಇದರ ಜೊತೆಗೆ ಕೆಲ ಕಂಡೀಷನ್. ಈ ಬಾಸ್ ವಿರುದ್ಧ ಉದ್ಯೋಗಿ ನೋವು ತೋಡಿಕೊಂಡಿದ್ದಾರೆ.

Read Full Story

12:50 PM (IST) Dec 12

ಇಂಡಿಗೋ ಅವಾಂತರದ ಬಳಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಫೋಟೋ ಭಾರಿ ವೈರಲ್

ಇಂಡಿಗೋ ವಿಮಾನಗಳ ನಿರಂತರ ವಿಳಂಬ ಮತ್ತು ರದ್ದತಿಯಿಂದಾಗಿ, ಪ್ರಯಾಣಿಕರು ಈಗ ಎಲ್ಲಾ ಪರಿಸ್ಥಿತಿಗಳಿಗೆ ಸಿದ್ಧರಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾರೆ. ಹೇಗೆ ಅಂತ ಈ ಸ್ಟೋರಿ ನೋಡಿ…

Read Full Story

12:48 PM (IST) Dec 12

ಬಾಲಕಿಯ ಮುಗ್ದ ನಗುವಿಗೆ ಫಿದಾ, ಸರ್ಕಾರಿ ಶಾಲಾ ಟೀಚರ್ ಹಂಚಿಕೊಂಡ ವಿಡಿಯೋ ವೈರಲ್

ಬಾಲಕಿಯ ಮುಗ್ದ ನಗುವಿಗೆ ಫಿದಾ, ಸರ್ಕಾರಿ ಶಾಲಾ ಟೀಚರ್ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ. ಟೀಚರ್‌ಗೆ ಸ್ವೀಟ್ ನೀಡುವ ಮೂಲಕ ಬಾಲಕಿ ಸರ್ಪ್ರೈಸ್ ನೀಡಿದ್ದಾಳೆ. ಇಷ್ಟೇ ಅಲ್ಲ ಅದೇ ಮುಗ್ದತೆಯಿಂದ ಸ್ವೀಟ್ ಹಂಚಿದ್ದು ಯಾಕೆ ಅನ್ನೋದು ಹೇಳಿದ್ದಾಳೆ.

 

Read Full Story

11:52 AM (IST) Dec 12

ಇಂಡಿಗೋ ಅವಾಂತರ - ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ

ದೇಶಿಯ ವಿಮಾನ ಸಾರಿಗೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಹಲವು ಪ್ರಯಾಣಿಕರ ಕನಸು ಕಸಿದ ಇಂಡಿಗೋ ವಿಮಾನಗಳ ನಿರಂತರ ರದ್ದು ಪ್ರಕರಣದ ತನಿಖೆ ನಡೆಸುತ್ತಿರುವ ಸಮಿತಿಯೂ ಈಗ ನಾಲ್ವರು ವಿಮಾನ ಕಾರ್ಯಾಚರಣೆ ಇನ್ಸ್‌ಪೆಕ್ಟರ್‌ಗಳನ್ನು ಸೇವೆಯಿಂದ ವಜಾ ಮಾಡಿದೆ.

Read Full Story

11:49 AM (IST) Dec 12

ಜಾನ್ ಸಿನಾ ಕೊನೆಯ ಮ್ಯಾಚ್ ಯಾವಾಗ? ಎದುರಾಳಿ ಯಾರು? ಲೈವ್ ಸ್ಟ್ರೀಮಿಂಗ್ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

20 ವರ್ಷಗಳ WWE ವೃತ್ತಿಬದುಕಿಗೆ ಜಾನ್ ಸಿನಾ ವಿದಾಯ ಹೇಳುತ್ತಿದ್ದಾರೆ. ಡಿಸೆಂಬರ್ 13, 2025 ರಂದು ನಡೆಯಲಿರುವ ತಮ್ಮ ಕೊನೆಯ ಪಂದ್ಯದಲ್ಲಿ ಅವರು ಪ್ರಬಲ ಎದುರಾಳಿ ಗುಂಟರ್ ವಿರುದ್ಧ ಸೆಣಸಾಡಲಿದ್ದು, ಈ ಪಂದ್ಯವು ಅವರ ವೃತ್ತಿಜೀವನದ ಅಂತ್ಯವನ್ನು ಸೂಚಿಸುತ್ತದೆ.
Read Full Story

10:57 AM (IST) Dec 12

BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ - ನೆಟ್ಟಿಗರಿಂದ ತೀವ್ರ ಆಕ್ರೋಶ

Pani puri for girls only: ರಸ್ತೆಬದಿಯ ಪಾನಿಪುರಿ ಮಾರಾಟಗಾರನೊಬ್ಬ ತನ್ನ ಅಂಗಡಿಗೆ 'ಹುಡುಗರಿಗೆ ಪ್ರವೇಶವಿಲ್ಲ' ಎಂಬ ಬೋರ್ಡ್ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕ್ರಮಕ್ಕೆ ಮಹಿಳೆಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದರೆ, ಪುರುಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

10:28 AM (IST) Dec 12

ವಿಜಯ್‌ ಹಜಾರೆ ಟ್ರೋಫಿ - ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌

ನವದೆಹಲಿ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಮುಂಬರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಡೆಲ್ಲಿ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇದು ಕೊಹ್ಲಿ ಫ್ಯಾನ್ಸ್‌ಗೆ ಸಿಹಿಸುದ್ದಿಯಾಗಿದೆ. ಈ ಕುರಿತಾದ ಅಪ್ಡೇಟ್ಸ್‌ ಇಲ್ಲಿದೆ ನೋಡಿ.

 

Read Full Story

08:29 AM (IST) Dec 12

ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ

ಕೇಂದ್ರ ಮಾಜಿ ಗೃಹ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಅವರು ತಮ್ಮ 91ನೇ ವಯಸ್ಸಿನಲ್ಲಿ ಲಾತೂರ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ, ಅವರು ಲೋಕಸಭೆ ಸ್ಪೀಕರ್ ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.
Read Full Story

More Trending News