LIVE NOW
Published : Jul 11, 2026, 06:31 AM ISTUpdated : Jul 11, 2026, 10:07 PM IST

India Latest News Live: S Janaki - ಗಂಡಿನ ಧ್ವನಿಯಲ್ಲಿ ಹಾಡಿ ದೇಶವನ್ನೇ ಬೆರಗುಗೊಳಿಸಿದ್ದ ಎಸ್. ಜಾನಕಿ - ಯಾವುದು ಆ ಹಾಡು!

ಸಾರಾಂಶ

ಚೆನ್ನೈ: ತಮಿಳುನಾಡಿನಲ್ಲಿ ವಿಜಯ್‌ ನೇತೃತ್ವದ ಟಿವಿಕೆ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ತಮಿಳುನಾಡಿನ ಶಾಲೆಗಳಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿದೆ. ಅಲ್ಲದೇ ಶಾಲೆಗಳಲ್ಲಿ ರಾಜಕಾರಣಿಗಳ ಜನ್ಮದಿನಾಚರಣೆಗೂ ಬ್ರೇಕ್‌ ಹಾಕಿದೆ.

ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಕಾರ್ಯಗಳನ್ನು ನಡೆಯಬಾರದು ಎಂಬ ಸಿಎಂ ವಿಜಯ್ ಸೂಚನೆ ಆಧರಿಸಿ ಶಿಕ್ಷಣ ಸಚಿವ ರಾಜ್‌ ಮೋಹನ್ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

‘ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಶಾಲೆಗಳು ಮತ್ತು ತರಗತಿ ಕೊಠಡಿಗಳನ್ನು ಪ್ರವೇಶಿಸಲು ಅವಕಾಶವಿದೆ. ತರಗತಿ ಕೋಣೆಗಳು ಶಿಕ್ಷಣಕ್ಕಾಗಿ ಇರಬೇಕು ಹೊರತು ರಾಜಕೀಯ ಚಟುವಟಿಕೆಗಳಿಗೆ, ಇನ್ಯಾರನ್ನೋ ಹೊಗಳುವುದಕ್ಕೆ ಅಲ್ಲ. ತರಗತಿ ಕೋಣೆ, ಶಾಲಾ ಆವರಣಗಳಲ್ಲಿ ರಾಜಕೀಯ ನಾಯಕರ ಜನ್ಮದಿನಚಾರಣೆ ಮಾಡುವಂತಿಲ್ಲ’ ಎಂದಿದ್ದಾರೆ.

10:07 PM (IST) Jul 11

S Janaki - ಗಂಡಿನ ಧ್ವನಿಯಲ್ಲಿ ಹಾಡಿ ದೇಶವನ್ನೇ ಬೆರಗುಗೊಳಿಸಿದ್ದ ಎಸ್. ಜಾನಕಿ - ಯಾವುದು ಆ ಹಾಡು!

ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಗಂಡಸರ ಧ್ವನಿಯನ್ನೂ ಅನುಕರಿಸಿ ಹಾಡಬಲ್ಲ ಅದ್ಭುತ ಪ್ರತಿಭೆ ಅವರದಾಗಿತ್ತು. ಎಸ್. ಜಾನಕಿಯಮ್ಮ ತಮ್ಮ ವೃತ್ತಿಜೀವನದಲ್ಲಿ ಮಾಡಿದ ವಿಶಿಷ್ಟ ಪ್ರಯೋಗವೆಂದರೆ 'ಗಂಡು ಧ್ವನಿ'ಯಲ್ಲಿ ಹಾಡಿದ್ದು.

Read Full Story

09:21 PM (IST) Jul 11

Ramayana - ಕಾಮಿಕ್ ಕಾನ್‌ನಲ್ಲಿ 'ರಾಮಾಯಣ'.. ಭಾರತ್ ಮಂಟಪದಲ್ಲಿ ಯಶ್-ರಣಬೀರ್ ಒಟ್ಟಿಗೇ ಸಿಗ್ತಾರೆ!

ಹಾಲಿವುಡ್ ಸಿನಿಮಾಗಳೇ ಹೆಚ್ಚಾಗಿ ರಾರಾಜಿಸುವ ಕಾಮಿಕ್ ಕಾನ್ (Comic Con) ವೇದಿಕೆಗೆ ಈ ಹಿಂದೆ ಪ್ರಭಾಸ್ ನಟನೆಯ' ಕಲ್ಕಿ 2898 ಎಡಿ' ಸಿನಿಮಾ ಎಂಟ್ರಿ ಕೊಟ್ಟಿತ್ತು. ಈಗ ರಾಮಾಯಣ ಸಿನಿಮಾ ಪ್ರವೇಶಿಸಿದೆ. ಸುಮಾರು 4,800 ಜನರು ಕುಳಿತುಕೊಳ್ಳಬಹುದಾದ ಬೃಹತ್ ಸಭಾಂಗಣದಲ್ಲಿ ಈ ಚಿತ್ರದ ಝಲಕ್ ಅನಾವರಣಗೊಳ್ಳಲಿದೆ.

Read Full Story

08:39 PM (IST) Jul 11

ಮಗನ ಅಗಲಿಕೆಯ ದುಃಖದಲ್ಲೇ ಕಣ್ಣು ಮುಚ್ಚಿದ ಗಾನಕೋಗಿಲೆ!; 88ರ ಇಳಿವಯಸ್ಸಲ್ಲಿ ಜಾನಕಿ ಅವರನ್ನು ಕುಗ್ಗಿಸಿತ್ತು ಏಕೈಕ ಪುತ್ರನ ಸಾವು!

ಗಾನಕೋಗಿಲೆ ಎಸ್. ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದಕ್ಕೂ ಕೆಲವೇ ತಿಂಗಳುಗಳ ಹಿಂದೆ ತಮ್ಮ ಏಕೈಕ ಪುತ್ರ ಮುರಳಿ ಕೃಷ್ಣ ಅವರನ್ನು ಕಳೆದುಕೊಂಡಿದ್ದ ಅವರು, ಮಗನ ಸಾವಿನ ದುಃಖದಲ್ಲೇ ಕೊನೆಯುಸಿರೆಳೆದರು.

Read Full Story

08:32 PM (IST) Jul 11

S Janaki - ಭಾರತದ ಗಾನ ಕೋಗಿಲೆ ಎಸ್ ಜಾನಕಿ ವಿಧಿವಶ; ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಕನ್ನಡದ ನಂಟು ಮರೆಯಾಯ್ತು!

ದಿವಂಗತ ಮೇರುಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಯೋಜಕ ಇಳಯರಾಜ ಅವರೊಂದಿಗೆ ಎಸ್ ಜಾನಕಿ ಅವರಿಗೆ ಆತ್ಮೀಯ ಒಡನಾಟವತ್ತು. ಜೊತೆಗೆ ಉಳಿದ ಹಿರಿಯ ಹಾಗೂ ಕಿರಿಯ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು, ನಟನಟಿಯರು ಕಲಾವಿದರು ಸೇರಿದಂತೆ ಚಿತ್ರರಂಗದ ಬಹಳಷ್ಟು ಜನರ ಜೊತೆ ಎಸ್ ಜಾನಕಿಯವರ ಸಂಬಂಧ ಆಪ್ತವಾಗಿತ್ತು.

Read Full Story

07:19 PM (IST) Jul 11

ಪತ್ನಿಗೆ ಬಿಕಿನಿ ಧರಿಸೋ ಆಸೆ ಆಯ್ತೆಂದು 500 ಕೋಟಿಗೆ ಪೂರ್ತಿ ದ್ವೀಪವನ್ನೇ ಖರೀದಿಸಿದ ಉದ್ಯಮಿ

ದುಬೈನ ಶ್ರೀಮಂತ ಶೇಖ್ ಒಬ್ಬರು, ತಮ್ಮ ಪತ್ನಿ ಬಿಕಿನಿ ಧರಿಸುವ ಸರಳ ಆಸೆಯನ್ನು ಪೂರೈಸಲು ಸುಮಾರು 7 ಬಿಲಿಯನ್ ರೂಪಾಯಿ ಖರ್ಚು ಮಾಡಿ ಇಡೀ ಖಾಸಗಿ ದ್ವೀಪವನ್ನೇ ಖರೀದಿಸಿದ್ದಾರೆ. ಈ ದ್ವೀಪದಲ್ಲಿ ಎಲ್ಲಾ ಐಷಾರಾಮಿ ಸೌಲಭ್ಯಗಳನ್ನು ನಿರ್ಮಿಸಿ, ಅದನ್ನು ತಮ್ಮ ವೈಯಕ್ತಿಕ ಸಾಮ್ರಾಜ್ಯವನ್ನಾಗಿ ಮಾಡಿಕೊಂಡಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
Read Full Story

07:06 PM (IST) Jul 11

Karuru Stampede Victims - ಕರೂರು ಕಾಲ್ತುಳಿದ ರಹಸ್ಯ ಬಿಚ್ಚಿಟ್ಟ ವಿಜಯ್; 'ಕೊಲೆಗಾರರಿಗೆ ಕ್ಷಮೆಯಿಲ್ಲ' ಎಂದು ಗುಡುಗಿದ ದಳಪತಿ!

ವಿರೋಧಿಗಳು ಯಾವ ಮಣ್ಣಿನಲ್ಲಿ ದಳಪತಿ ಕಥೆ ಮುಗಿಯಿತು ಅಂದುಕೊಂಡಿದ್ದರೋ, ಅದೇ ಮಣ್ಣಿನಿಂದ ವಿಜಯ್ ತಮ್ಮ ರಾಜಕೀಯ ಸಾಮ್ರಾಜ್ಯದ ನೈಜ ವಿಸ್ತರಣೆಯನ್ನು ಆರಂಭಿಸಿದ್ದಾರೆ. ಇದು ಕೇವಲ ನೌಕರಿ ಕೊಡುವ ಕಾರ್ಯಕ್ರಮವಲ್ಲ, ಮುಂಬರುವ ತಮಿಳುನಾಡು ರಾಜಕೀಯ ಸಮರಕ್ಕೆ ದಳಪತಿ ವಿಜಯ್ ಇಟ್ಟಿರುವ ಅತ್ಯಂತ ಚಾಣಾಕ್ಷ ನಡೆ ಅಂತಿದ್ದಾರೆ ರಾಜಕೀಯ ಪಂಡಿತರು..!

Read Full Story

06:48 PM (IST) Jul 11

ಬೆಂಗಳೂರಾದ ಸೌಥಾಂಪ್ಟನ್, ಅಂತಿಮ ಟಿ20 ಪಂದ್ಯಕ್ಕೆ ಮೈದಾನಕ್ಕೆ ಬರದ ಟೀಂ ಇಂಡಿಯಾದಿಂದ ಟಾಸ್ ವಿಳಂಬ

ಸೌತ್ ಆಫ್ರಿಕಾದ ಸೌಥಾಂಪ್ಟನ್ ಬೆಂಗಳೂರಾಗಿದೆ. ವೈಟ್ ವಾಶ್ ಭೀತಿಯಲ್ಲಿರುವ ಟೀಂ ಇಂಡಿಯಾ ಟಾಸ್ ಸಮಯವಾದರೂ ಮೈದಾನಕ್ಕೆ ಬಂದಿಲ್ಲ. ಪರಿಣಾಮ ಟಾಸ್ ವಿಳಂಬವಾಗಿದೆ. ಅಷ್ಟಕ್ಕೂ ಇತಿಹಾಸದಲ್ಲೇ ಮೊದಲ ಬಾರಿಗೆ ನಾಯಕ ಬರದೆ ಟಾಸ್ ವಿಳಂಬವಾಗಿದ್ದು ಯಾಕೆ?

Read Full Story

06:42 PM (IST) Jul 11

ತಿರುಪತಿಯಲ್ಲಿ ಈ ಬಾರಿ ‘ಅವಳಿ ಬ್ರಹ್ಮೋತ್ಸವ’ ವೈಭವ; ಭಕ್ತರಿಗಾಗಿ ಅತ್ಯಂತ ಮಹತ್ವದ ನಿರ್ಧಾರ ಮಾಡಿದ ಟಿಟಿಡಿ

ಈ ವರ್ಷ ಅಧಿಕ ಮಾಸದ ಕಾರಣ ತಿರುಮಲದಲ್ಲಿ 2 ಬ್ರಹ್ಮೋತ್ಸವ ನಡೆಯಲಿವೆ. ಈ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಲಕ್ಷಾಂತರ ಭಕ್ತರ ದಟ್ಟಣೆ ನಿರ್ವಹಿಸಲು ಬೃಹತ್ ಯೋಜನೆಯನ್ನು ರೂಪಿಸಿದ್ದು, ಸಾಮಾನ್ಯ ಭಕ್ತರಿಗೆ ಅನುಕೂಲವಾಗುವಂತೆ ಬಹುತೇಕ ಎಲ್ಲಾ ವಿಶೇಷ ದರ್ಶನಗಳನ್ನು ರದ್ದುಗೊಳಿಸಿದೆ.

Read Full Story

06:34 PM (IST) Jul 11

ಟೀಂ ಇಂಡಿಯಾದಲ್ಲಿ ಬಿಗಡಾಯಿಸಿದ ಸಮಸ್ಯೆ, ಗಂಭೀರ್ ಬಳಗದ ಸಹಾಯಕ ಕೋಚ್ ಶೀಘ್ರದಲ್ಲೇ ರಾಜೀನಾಮೆ

ಸತತ ಸರಣಿ ಸೋಲಿನಿಂದ ಟೀಂ ಇಂಡಿಯಾದಲ್ಲಿ ಸಮಸ್ಯೆ ತೀವ್ರಗೊಂಡಿದೆ. ಗೌತಮ್ ಗಂಭೀರ್ ಪಾಳಯದ ಕೆಲ ಸಹಾಯಕ ಕೋಚ್‌ಗಳು ರಾಜೀನಾಮೆಗೆ ಸಜ್ಜಾಗಿದ್ದಾರೆ. ಇತ್ತ ಐಪಿಎಲ್ ತಂಡದ ಜೊತೆಗೆ ಮಾತುಕತೆಯೂ ನಡೆಸಿದ್ದಾರೆ.

Read Full Story

06:21 PM (IST) Jul 11

ಬೆಚ್ಚಿಬೀಳಿಸಿತು 6 ಕೊಲೆ - ಕೋರ್ಟ್​ ಜಾಮೀನು ಕೊಟ್ಟ ಖುಷಿಯಲ್ಲಿ ಸಂತ್ರಸ್ತೆಯ ಕುಟುಂಬ ನಾಶ ಮಾಡಿದ ಪಾಪಿ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ, ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಯು ಸೇಡು ತೀರಿಸಿಕೊಳ್ಳಲು ತನ್ನ ಕುಟುಂಬದ ಮೂವರು ಮತ್ತು ಸಂತ್ರಸ್ತ ಬಾಲಕಿಯ ಕುಟುಂಬದ ಮೂವರು ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆಯು ಕಾನೂನು ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

05:28 PM (IST) Jul 11

ಭಾರತಕ್ಕೆ ಬಂದ ಅನ್ಯಗ್ರಹ ಜೀವಿ? ಚಂದ್ರಲೋಕದಿಂದ ಬಂದವನಂತೆ ಈತ! 3 ವರ್ಷ ಭೂಮಿ ಮೇಲೆ ಇದ್ದವ ಏನಂದ

ಉತ್ತರ ಪ್ರದೇಶದ ವೃಂದಾವನದಲ್ಲಿ ವ್ಯಕ್ತಿಯೊಬ್ಬ ತಾನು ಚಂದ್ರನಿಂದ ಬಂದವನು ಎಂದು ಹೇಳಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಕಳೆದ ಮೂರು ವರ್ಷಗಳಿಂದ ಭೂಮಿಯ ಮೇಲೆ ವಾಸಿಸುತ್ತಿದ್ದು, ಜನರ ಮನಸ್ಸನ್ನು ಓದುವ ಶಕ್ತಿ ತನಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಭೂಮಿಯ ಮೇಲೆ ಯಾವುದೂ ಸರಿಯಿಲ್ಲ ಎಂದು ಹೇಳಿ, ತಾನು ಚಂದ್ರಲೋಕಕ್ಕೆ ವಾಪಸ್ ಹೋಗುವುದಾಗಿ ತಿಳಿಸಿದ್ದಾನೆ.
Read Full Story

05:13 PM (IST) Jul 11

ಮತ್ತೆ ಮತ್ತೆ ಅದೇ ತಪ್ಪು ಮಾಡ್ತಿದ್ದಾರೆ ವೈಭವ್ ಸೂರ್ಯವಂಶಿ! ಈ 3 ತಪ್ಪು ತಿದ್ದಿಕೊಳ್ಳದಿದ್ರೆ, ಟೀಂ ಇಂಡಿಯಾದಿಂದ ಗೇಟ್‌ಪಾಸ್ ಗ್ಯಾರಂಟಿ!

ಬೆಂಗಳೂರು: 15 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವ ಬಿಹಾರ ಮೂಲದ ವೈಭವ್ ಸೂರ್ಯವಂಶಿ, ಮೊದಲ ಮೂರು ಟಿ20 ಪಂದ್ಯಗಳಲ್ಲಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.

 

Read Full Story

05:07 PM (IST) Jul 11

ಹೊಸ ಹೆಂಡ್ತಿ ಜೊತೆ ಹಳೆ ಹೆಂಡ್ತಿನೂ ಕರ್ಕೊಂಡು 100 ಕೋಟಿ ಬಂಗ್ಲೆಗೆ 'ಬೆಂಗಳೂರು ಅಳಿಯ' ಆಮೀರ್​ ಶಿಫ್ಟ್​

ನಟ ಆಮೀರ್ ಖಾನ್ ಬೆಂಗಳೂರಿನ ಗೌರಿ ಸ್ಪ್ರಾಟ್ ಅವರನ್ನು ಮೂರನೇ ಮದುವೆಯಾಗುವ ಮೂಲಕ ಬೆಂಗಳೂರು ಅಳಿಯಾಗಿದ್ದಾರೆ. ಈ ದಂಪತಿ ಮುಂಬೈನಲ್ಲಿ 100 ಕೋಟಿ ಮೌಲ್ಯದ ಹೊಸ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಳ್ಳಲು ಸಿದ್ಧರಾಗಿದ್ದು, ಕುತೂಹಲ ಎಂದರೆ ಮಾಜಿ ಪತ್ನಿ ಕಿರಣ್ ರಾವ್ ಕೂಡ ಅದೇ ಕಟ್ಟಡದಲ್ಲಿ ವಾಸಿಸಲಿದ್ದಾರೆ.

Read Full Story

04:35 PM (IST) Jul 11

ವಿಯೆಟ್ನಾಂನಲ್ಲಿ ಭಾರತೀಯ ಪ್ರವಾಸಿಗರಿದ್ದ ಬೋಟ್ ಮಗುಚಿ ದುರಂತ, 36 ಮಂದಿ ಪೈಕಿ 15 ಸಾವು

ವಿಯೆಟ್ನಾಂನಲ್ಲಿ ಬೋಟ್ ದುರಂತ ಸಂಭವಿಸಿದೆ. ಐಸ್‌ಲ್ಯಾಂಡ್‌ನಲ್ಲಿ ಸಂಭವಿಸಿದ ಬೋಟ್ ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ವಿಯೆಟ್ನಾಂ ಭಾರತೀಯ ರಾಯಭಾರ ಕಚೇರಿ ಕಂಟ್ರೋಲ್ ರೂಂ ತೆರೆದಿದೆ.

Read Full Story

04:25 PM (IST) Jul 11

16ನೇ ವಯಸ್ಸಿಗೆ ಎಲ್ಲರ ಮನವೊಲಿಸಿ ಶಾಲೆ ಬಿಟ್ಟ ಬಾಲಕಿ, ಇಂದು 7 ಸಾವಿರ ರೂ.ಕೋಟಿ ಒಡತಿ

15ನೇ ವಯಸ್ಸಿಗೆ ಶಾಲೆ ಬಿಟ್ಟ ಉತ್ತರ ಪ್ರದೇಶದ ಹರ್ಷಿತಾ ಅರೋರಾ, ಕೋಡಿಂಗ್ ಮೇಲಿನ ಆಸಕ್ತಿಯಿಂದ ಕ್ರಿಪ್ಟೋ ಆ್ಯಪ್ ರಚಿಸಿದರು. ನಂತರ 'AtoB' ಎಂಬ ಸ್ಟಾರ್ಟ್ಅಪ್ ಸ್ಥಾಪಿಸಿ, ಅಮೆರಿಕದ ಟ್ರಕ್ಕಿಂಗ್ ಉದ್ಯಮಕ್ಕೆ ಸೇವೆ ನೀಡುವ ಮೂಲಕ ತಮ್ಮ ಕಂಪನಿಯನ್ನು 7,600 ಕೋಟಿ ರೂ. ಮೌಲ್ಯಕ್ಕೆ ಬೆಳೆಸಿದ್ದಾರೆ.
Read Full Story

03:53 PM (IST) Jul 11

ಅನ್ಯಗ್ರಹ ಜೀವಿಗಳ UFO ಚಲನೆ ರಹಸ್ಯ ವಿಡಿಯೋ, ದಾಖಲೆ ಬಿಡುಗಡೆ ಮಾಡಿದ ಅಮೆರಿಕ ರಕ್ಷಣಾ ಇಲಾಖೆ

ಅನ್ಯಗ್ರಹ ಜೀವಿಗಳ ಕುರಿತು ಕುತೂಹಲಕ್ಕೆ ಇದೀಗ ಡಬಲ್ ಆಗಿದೆ. ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ಕಚೇರಿ ಮಹತ್ವದ ರಹಸ್ಯ ಫೈಲ್ಸ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಯುಎಫ್ಒ ವೇಗವಾಗಿ ಚಲಿಸುತ್ತಿರುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.

Read Full Story

03:50 PM (IST) Jul 11

ನಿಮ್ಮ ಫೋನ್ ಕಳೆದು ಹೋಗಿದೆಯಾ? ಚಿಂತೆ ಬೇಡ Google Mapsನ ಈ ಸಿಂಪಲ್ ಟ್ರಿಕ್ಸ್ ನಿಮಗೆ ಗೊತ್ತಿದ್ರೆ ಸುಲಭವಾಗಿ ಪತ್ತೆ ಹಚ್ಚಬಹುದು

ಈಗಿನ ಕಾಲದಲ್ಲಿ ಮೊಬೈಲ್ ಫೋನ್ ನಮ್ಮ ದೇಹದ ಒಂದು ಭಾಗವೇ ಆಗಿಬಿಟ್ಟಿದೆ. ಅಂತಹ ಫೋನ್ ಕಳೆದುಹೋದರೆ ಸಿಕ್ಕಾಪಟ್ಟೆ ತೊಂದರೆಯಾಗುತ್ತದೆ, ಕೆಲವರಿಗಂತೂ ವಿಪರೀತ ಆತಂಕ ಶುರುವಾಗುತ್ತೆ. ಹಾಗಾದ್ರೆ, ಕಳೆದುಹೋದ ಫೋನನ್ನು ಗೂಗಲ್ ಮ್ಯಾಪ್ ಬಳಸಿ ಹೇಗೆ ಪತ್ತೆ ಮಾಡೋದು ಅಂತಾ ಇಲ್ಲಿ ನೋಡೋಣ.

 

Read Full Story

03:25 PM (IST) Jul 11

ಈ ಚಿತ್ರದಲ್ಲಿರುವ ಒಂದು ತಪ್ಪನ್ನ ಪತ್ತೆ ಹಚ್ಚಿ.. ಶೇಕಡಾ 99 ಜನ ಫೇಲ್..!

ವೈರಲ್ ಆಗಿರುವ ಈ ಚಿತ್ರದಲ್ಲಿನ ತಪ್ಪನ್ನು ಹುಡುಕಲು ನೆಟ್ಟಿಗರು ಪರದಾಡುತ್ತಿದ್ದಾರೆ. 1 ರಿಂದ 10 ರವರೆಗಿನ ಅಂಕಿಗಳತ್ತ ಎಲ್ಲರ ಗಮನ ಹರಿಯುತ್ತದೆ, ಆದರೆ ನಿಜವಾದ ತಪ್ಪು ಬೇರೆಲ್ಲೋ ಅಡಗಿದೆ. ಈ ಪಜಲ್ ನಿಮ್ಮ ಮೆದುಳು ಮತ್ತು ಕಣ್ಣಿನ ಶಕ್ತಿಯನ್ನು ಪರೀಕ್ಷಿಸುತ್ತದೆ.
Read Full Story

03:07 PM (IST) Jul 11

Dhanush Politics - 'ರಾಜಕೀಯಕ್ಕೆ ಧನುಷ್ ಎಂಟ್ರಿ' ಸುದ್ದಿ ಬೆನ್ನಲ್ಲೇ ನಟನ ಭಾರೀ ಆಸ್ತಿ, ಅರಮನೆಯಂತಹ ಮನೆಯ ಸುದ್ದಿ ವೈರಲ್!

ಧನುಷ್ ಅವರು ಕಟ್ಟಿರುವ ಈ ಬೃಹತ್ ಸಾಮ್ರಾಜ್ಯದ ಹಿಂದೆ ಅವರ ಕಠಿಣ ಪರಿಶ್ರಮವಿದೆ. ಪ್ರತಿ ಸಿನಿಮಾಗೆ ಅವರು 20 ರಿಂದ 35 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲದೆ, ತಿಂಗಳಿಗೆ ಸುಮಾರು 3 ಕೋಟಿ ರೂಪಾಯಿಗಳಿಗೂ ಅಧಿಕವಾದ ಇತರ ಮೂಲಗಳ ಆದಾಯ ಇವರಿಗಿದೆ.

Read Full Story

02:08 PM (IST) Jul 11

ಮುದ್ದಾದ ಕಂದಮ್ಮನ ಬಲಿ ಪಡೆದ ಅನಸ್ತೇಶಿಯಾ; ವೈದ್ಯರ ಯಡವಟ್ಟಿಗೆ ಭುಗಿಲೆದ್ದ ಆಕ್ರೋಶ

ವೈದ್ಯರ ಯಡವಟ್ಟಿಗೆ ಮುದ್ದಾದ ಕಂದಮ್ಮನ ಬಲಿಯಾಗಿದೆ. ಆಸ್ಪತ್ರೆ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದ್ದು, ಭಾರೀ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ. 

Read Full Story

01:50 PM (IST) Jul 11

Toilet Paper - ಅಮೆರಿಕ, ಯುರೋಪ್ ಜನರು ಟಾಯ್ಲೆಟ್‌ನಲ್ಲಿ ನೀರಿನ ಬದಲು ಟಿಶ್ಯೂ ಬಳಸುವುದೇಕೆ? ಇಲ್ಲಿದೆ ನಿಜವಾದ ಕಾರಣ

ಭಾರತದಲ್ಲಿ ನಾವು ಟಾಯ್ಲೆಟ್‌ನಲ್ಲಿ ನೀರು ಬಳಸುತ್ತೇವೆ. ಆದರೆ ಅಮೆರಿಕ, ಯುರೋಪ್‌ನಂತಹ ದೇಶಗಳಲ್ಲಿ ಟಿಶ್ಯೂ ಪೇಪರ್ ಬಳಸುತ್ತಾರೆ. ನೀರಿನ ಕೊರತೆ ಇಲ್ಲದಿದ್ದರೂ ಅವರು ಯಾಕೆ ಹೀಗೆ ಮಾಡುತ್ತಾರೆ? ಇದರ ಹಿಂದಿನ ಕಾರಣಗಳೇನು ಎಂದು ತಿಳಿಯೋಣ ಬನ್ನಿ.

 

Read Full Story

01:11 PM (IST) Jul 11

ಸಂಜು ಸ್ಯಾಮ್ಸನ್ ಇನ್, ತಿಲಕ್ ವರ್ಮಾ ಔಟ್! ಇಂಗ್ಲೆಂಡ್ ಎದುರಿನ ಕೊನೆಯ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ, ಗಂಭೀರ್ ಮೇಲೆ ಎಲ್ಲರ ಕಣ್ಣು

ಸೌಥಾಂಪ್ಟನ್‌: ಭಾರತ ತಂಡವು ಕಳೆದ ಆರು ಪಂದ್ಯಗಳಿಂದ ಮೊದಲ ಗೆಲುವಿಗಾಗಿ ಹಪಹಪಿಸುತ್ತಿದೆ. ಇದೀಗ ಇಂಗ್ಲೆಂಡ್ ಎದುರು ಐದನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೆ ಇಂದು ಸಜ್ಜಾಗಿದ್ದು, ಭಾರತ ಕೆಲವ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

 

Read Full Story

12:54 PM (IST) Jul 11

Suriya Son Dev - ಅಪ್ಪನ ಸ್ಟಾರ್‌ ಗಿರಿ ಬಿಟ್ಟು, ವಿಜ್ಞಾನ ಲೋಕಕ್ಕೆ ಧುಮುಕಿದ ಮಗ ದೇವ್;‌ ಭಾಷಣಕ್ಕೆ ಎಲ್ರೂ ಬೆರಗು

Actor Suriya son name: ತಮಿಳು ನಟ ಸೂರ್ಯ, ಜ್ಯೋತಿಕಾ ಅವರ ಪುತ್ರ ದೇವ್ ಸೂರ್ಯ, ಇದೀಗ ವಿಜ್ಞಾನ ಮತ್ತು ಸಂಶೋಧನಾ ವೇದಿಕೆಯೊಂದರಲ್ಲಿ Young Innovator ಆಗಿದ್ದಾರೆ. ದೇವ್‌ ಮಾತನಾಡಿರುವ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 

Read Full Story

12:44 PM (IST) Jul 11

ಎಲ್ಲರಿಂದಲೂ ತಿನ್ನೋಕೆ ಆಗಲ್ಲ, ಈ ಮೊಟ್ಟೆ ತಿಂದ್ರೆ 7 ವರ್ಷ ಆಯಸ್ಸು ಹೆಚ್ಚಾಗುತ್ತೆ!

ಸಲ್ಫರ್ ಹಬೆಯಲ್ಲಿ ಬೇಯಿಸಿದ ಕಪ್ಪು ಮೊಟ್ಟೆಗಳು ಪ್ರಸಿದ್ಧವಾಗಿವೆ. ಈ ಮೊಟ್ಟೆಗಳನ್ನು ತಿಂದರೆ ಏಳು ವರ್ಷ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದ್ದು, ಈ ಹೇಳಿಕೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.

Read Full Story

12:42 PM (IST) Jul 11

ಕಾರ್ಪೋರೇಟ್​ ಕೆಲಸ ಬಿಟ್ಟರೂ ಐಷಾರಾಮಿ ಜೀವನ - ಅನುಭವ ತಿಳಿಸಿದ ಯುವತಿಯ ವಿಡಿಯೋಗೆ ಲಕ್ಷಗಟ್ಟಲೆ ಪ್ರತಿಕ್ರಿಯೆ

ಸ್ಥಿರವಾದ ಕಾರ್ಪೊರೇಟ್ ಉದ್ಯೋಗವನ್ನು ತೊರೆದ ಭಾರತೀಯ ಕಂಟೆಂಟ್ ಕ್ರಿಯೇಟರ್ ಸ್ನೇಹಾ ಗೌರ್, ಬಹು ಆದಾಯದ ಮೂಲಗಳನ್ನು ಸೃಷ್ಟಿಸಿಕೊಂಡು ವಿಶ್ವದ ದುಬಾರಿ ದೇಶ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಆರು ತಿಂಗಳು ಹೇಗೆ ಕಳೆದರು ಎಂಬುದನ್ನು ವಿವರಿಸಿದ್ದಾರೆ. ಸ್ಪ್ಯಾನಿಷ್ ಭಾಷಾ ಕೌಶಲವು ತಮ್ಮ ಜೀವನದಲ್ಲಿ ಹೇಗೆ ಹೊಸ ಅವಕಾಶಗಳನ್ನು ತೆರೆಯಿತು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ನೀಡಿತು ಎಂದು ಅವರು ಹಂಚಿಕೊಂಡಿದ್ದಾರೆ.
Read Full Story

12:35 PM (IST) Jul 11

ಮಾಂಸಕ್ಕಿಂತಲೂ ತುಟ್ಟಿ ಈ ತರಕಾರಿ! ಕೆಜಿಗೆ 1200 ರೂಪಾಯಿ ಆದ್ರೂ ಖರೀದಿಸಲು ಮುಗಿಬಿದ್ದ ಜನ..!

ಇಲ್ಲೊಂದು ವಿಶೇಷ ತರಕಾರಿ ಇದೆ. ಅದಕ್ಕೆ ಚಿನ್ನದಂಥ ರೇಟು. ಕೆಜಿಗೆ 1200 ರೂಪಾಯಿ ಇದ್ದರೂ, ಜನ ಖರೀದಿಸಲು ಮುಗಿಬಿದ್ದಿದ್ದಾರೆ. ಅಷ್ಟಕ್ಕೂ ಅದ್ರಲ್ಲಿ ಅಂಥದ್ದೇನಿದೆ? ಯಾಕೆ ಅಷ್ಟೊಂದು ರೇಟ್ ಅನ್ನೋ ವಿವರ ಈ ಸ್ಟೋರಿಯಲ್ಲಿದೆ..

Read Full Story

12:02 PM (IST) Jul 11

ಮಳೆ ನೀರು ಕುಡಿದ್ರೆ ಏನಾಗುತ್ತೆ..? ಆಸ್ಪತ್ರೆ ಸೇರುತ್ತೀರಿ ಎಚ್ಚರ!

ಮಳೆ ನೀರು ಶುದ್ಧವೆಂಬುದು ತಪ್ಪು ಕಲ್ಪನೆಯಾಗಿದ್ದು, ವಾತಾವರಣದ ಮಾಲಿನ್ಯದಿಂದ ಅದು ಕಲುಷಿತಗೊಂಡಿರುತ್ತದೆ. ತಜ್ಞರ ಪ್ರಕಾರ, ಈ ನೀರನ್ನು ಫಿಲ್ಟರ್ ಮಾಡದೆ ಅಥವಾ ಕುದಿಸದೆ ಕುಡಿಯುವುದರಿಂದ ಹೊಟ್ಟೆಯ ಸೋಂಕು, ಟೈಫಾಯಿಡ್, ಮತ್ತು ಕಾಲರಾದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
Read Full Story

11:46 AM (IST) Jul 11

Ramayana - 'ನಮ್ಮ ಇತಿಹಾಸ, ನಮ್ಮ ಸತ್ಯ'.. ಶಾಲಾಮಕ್ಕಳ ಬಳಿಗೇ ಪ್ರಚಾರಕ್ಕೆ ತೆರಳಿದ 'ರಾಮಾಯಣ' ಚಿತ್ರತಂಡ!

ಸಿನಿಮೀಯ ಮೆರುಗು ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂಗಮವಾಗಿರುವ ಈ 'ರಾಮಾಯಣ' ಚಿತ್ರವು, ಪ್ರಚಾರದ ವಿಷಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದೆ. ಸ್ಕೂಲ್ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಎದುರು ನೋಡುತ್ತಿರುವ ಈ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸವನ್ನು ಬದಲಿಸುವುದರಲ್ಲಿ ಸಂಶಯವಿಲ್ಲ!

Read Full Story

11:41 AM (IST) Jul 11

ಇಂದು ಅಬ್ಬರಿಸಲು ರೆಡಿಯಾದ ವೈಭವ್ ಸೂರ್ಯವಂಶಿ; ಇವತ್ತಿನ ಮ್ಯಾಚ್ ರಾತ್ರಿ 10 ಗಂಟೆಗಲ್ಲ, ಈ ಸಮಯಕ್ಕೆ ಪಂದ್ಯ ಆರಂಭವಾಗುತ್ತೆ!

ಸೌಥಾಂಪ್ಟನ್‌: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಹಾಗೂ ಕೊನೆಯ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕಳೆದ ಪಂದ್ಯದಂತೆ ಈ ಪಂದ್ಯವು ರಾತ್ರಿ 10 ಗಂಟೆಗೆ ಆರಂಭವಾಗುವುದಿಲ್ಲ. ಅಷ್ಟಕ್ಕೂ ಈ ಮ್ಯಾಚ್ ಎಷ್ಟು ಗಂಟೆಗೆ ಆರಂಭವಾಗುತ್ತೆ? ವೈಭವ್ ಸೂರ್ಯವಂಶಿ ಆಡ್ತಾರಾ ನೋಡೋಣ ಬನ್ನಿ.

 

Read Full Story

09:54 AM (IST) Jul 11

FIFA World Cup 2026 - ಮೊರಾಕ್ಕೊ ಕಿಕೌಟ್, ಎಂಟನೇ ಸಲ ಸೆಮಿಫೈನಲ್‌ಗೆ ಫ್ರಾನ್ಸ್ ಲಗ್ಗೆ

ಫಿಫಾ ವಿಶ್ವಕಪ್ ಕ್ವಾರ್ಟರ್‌ ಫೈನಲ್‌ನಲ್ಲಿ ಫ್ರಾನ್ಸ್‌ ತಂಡ ಮೊರಾಕ್ಕೊ ವಿರುದ್ಧ 2-0 ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಕೀಲಿಯನ್‌ ಎಂಬಾಪೆ ಮತ್ತು ಒಸ್ಮಾನ್ ಡೆಂಬೆಲೆ ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಈ ಗೆಲುವಿನೊಂದಿಗೆ ಫ್ರಾನ್ಸ್‌ 8ನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದರೆ, ಎಂಬಾಪೆ ಗೋಲ್ಡನ್‌ ಬೂಟ್‌ ರೇಸ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
Read Full Story

09:31 AM (IST) Jul 11

ಮತ್ತೆ ಸಿನ್ನರ್‌ಗೆ ಶರಣಾದ ನೋವಾಕ್ ಜೋಕೋವಿಚ್! 8ನೇ ವಿಂಬಲ್ಡನ್ ಕನಸು ನುಚ್ಚುನೂರು

ವಿಂಬಲ್ಡನ್ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜೋಕೋವಿಚ್ ಅವರು ಯಾನ್ನಿಕ್ ಸಿನ್ನರ್ ವಿರುದ್ಧ ಸೋತು 25ನೇ ಗ್ರ್ಯಾನ್‌ಸ್ಲಾಂ ಕನಸಿನಿಂದ ಹೊರಬಿದ್ದಿದ್ದಾರೆ. ಮತ್ತೊಂದೆಡೆ, ಅಲೆಕ್ಸಾಂಡರ್‌ ಜ್ವೆರೆವ್‌ ಫೈನಲ್‌ ಪ್ರವೇಶಿಸಿದ್ದು, ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಮುಕೋವಾ ಮತ್ತು ನೊಸ್ಕೊವಾ ಚೊಚ್ಚಲ ಟ್ರೋಫಿಗಾಗಿ ಸೆಣಸಲಿದ್ದಾರೆ.
Read Full Story

09:15 AM (IST) Jul 11

ಟೀಂ ಇಂಡಿಯಾದಿಂದ ಆ ಮೂವರು ಆಟಗಾರರಿಗೆ ಗೇಟ್‌ಪಾಸ್? ಇಂದಿನ ಸಮಯದಲ್ಲೂ ಮಹತ್ವದ ಬದಲಾವಣೆ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಸೋತಿರುವ ಟೀಂ ಇಂಡಿಯಾ, ಅಂತಿಮ ಪಂದ್ಯಕ್ಕೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಕಳಪೆ ಪ್ರದರ್ಶನ ನೀಡಿದ ಮೂವರು ಆಟಗಾರರನ್ನು ಅವರನ್ನು ತಂಡದಿಂದ ಕೈಬಿಡಬಹುದು ಎಂದು ವರದಿಯಾಗಿದೆ.

Read Full Story

07:45 AM (IST) Jul 11

ತೀವ್ರ ಬಿಸಿಲ ಅಪಾಯದಲ್ಲಿರೋ ವಿಶ್ವದ ಟಾಪ್ 50 ನಗರಗಳಲ್ಲಿ ಬೆಂಗಳೂರು; ಭಾರತದ 14 ನಗರಗಳು

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ತೀವ್ರ ಬಿಸಿಲಿನ ಅಪಾಯದಲ್ಲಿರುವ ವಿಶ್ವದ ಅಗ್ರ 50 ನಗರಗಳ ಪಟ್ಟಿಯಲ್ಲಿ ಭಾರತದ 14 ನಗರಗಳಿವೆ. ಈ ಅಪಾಯಕಾರಿ ಪಟ್ಟಿಯಲ್ಲಿ ಕರ್ನಾಟಕದ ಬೆಂಗಳೂರು ಕೂಡಾ ಸ್ಥಾನ ಪಡೆದಿದ್ದು, ಇದು ಹವಾಮಾನ ಬದಲಾವಣೆಯ ಗಂಭೀರ ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ.
Read Full Story

07:35 AM (IST) Jul 11

ಇ20 ಪೆಟ್ರೋಲಿಂದ ಮೈಲೇಜ್‌ ಕುಸಿತ ನಿಜ, ಆದ್ರೆ ಎಥನಾಲ್‌ ರಹಿತ ಪೆಟ್ರೋಲ್‌ ಕೊಡಲ್ಲ - ಕೇಂದ್ರ

ಶೇ.20 ಎಥನಾಲ್ ಮಿಶ್ರಿತ ಇ20 ಪೆಟ್ರೋಲ್ ಬಳಕೆಯಿಂದ ಮೈಲೇಜ್ ಕುಸಿಯುತ್ತಿದೆ ಎಂಬ ದೂರಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಮೈಲೇಜ್ ಶೇ.5ರಷ್ಟು ಕಡಿಮೆಯಾಗುವುದನ್ನು ಒಪ್ಪಿಕೊಂಡಿರುವ ಸಚಿವಾಲಯ, ಎಂಜಿನ್‌ಗೆ ಯಾವುದೇ ಹಾನಿಯಾಗುವುದಿಲ್ಲ, ಎಥನಾಲ್ ರಹಿತ ಪೆಟ್ರೋಲ್ ಪೂರೈಕೆ ಸಾಧ್ಯವಿಲ್ಲ ಎಂದು ತಿಳಿಸಿದೆ.

Read Full Story

More Trending News