ನವದೆಹಲಿ: ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರ ಜತೆ ಸೋಮವಾರ ಫೋನ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಜತೆಗೆ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪನೆಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ‘ಜೆಲೆನ್ಸ್ಕಿ ಜತೆ ಫಲಪ್ರದ ದೂರವಾಣಿ ಸಂಭಾಷಣೆ ನಡೆಸಲು ಸಂತೋಷವಾಯಿತು. ಸಂಘರ್ಷ, ಅದರ ಮಾನವೀಯ ಅಂಶಗಳು ಮತ್ತು ಶಾಂತಿ ಪುನಃಸ್ಥಾಪಿಸಲು ವಿವಿಧ ಪ್ರಯತ್ನಗಳ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಕ್ಕಾಗಿ ಜೆಲೆನ್ಸ್ಕಿ ಅವರಿಗೆ ನಾನು ಧನ್ಯವಾದ ಅರ್ಪಿಸಿದೆ. ಶಾಂತಿಯುತ ಪರಿಹಾರಕ್ಕಾಗಿ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಕೊಡುಗೆ ನೀಡುವ ಭಾರತದ ದೃಢ ಬದ್ಧತೆಯನ್ನು ಪುನರುಚ್ಚರಿಸಿದೆ’ ಎಂದಿದ್ದಾರೆ.
ಅ ಲ್ಲದೆ ‘ಭಾರತ-ಉಕ್ರೇನ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಒಪ್ಪಿಕೊಂಡಿದ್ದೇವೆ’ ಎಂದೂ ಹೇಳಿದ್ದಾರೆ.
07:39 AM (IST) Nov 10