ನವದೆಹಲಿ: ಒಂದು ದಿನದ ರಜೆಗಾಗಿ ವಾರದ ಹಿಂದೆಯೇ ಅರ್ಜಿ ಹಾಕುವ ಉದ್ಯೋಗಿಗಳಿಗೆ ಕೊಂಚ ಅಸೂಯೆ ಹುಟ್ಟಿಸುವಂತಹ ಸುದ್ದಿಯೊಂದು ರಾಷ್ಟ್ರ ರಾಜಧಾನಿ ದೆಹಲಿಯಿಂದ ಬಂದಿದೆ. ಇಲ್ಲಿನ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ '9 ದಿನ ದೀಪಾವಳಿ ರಜೆ' ನೀಡಿದೆ. ಈ ಅವಧಿಯಲ್ಲಿ ಮಧ್ಯಾಹ್ನದವರೆಗೆ ಮಲಗಿದ್ದು, ಮನೆಯ ಸ್ವಚ್ಛತಾ ಕಾರ್ಯದಲ್ಲಿ ಸಹಕರಿಸಿ, ತಿನ್ನಬೇಕೆನಿಸಿದ್ದನ್ನೆಲ್ಲಾ ಆನ್ ಲೈನ್‌ನಲ್ಲಿ ತರಿಸಿಕೊಂಡು, ಹೊಟ್ಟೆ ಬಿರಿಯುವಷ್ಟು ಸಿಹಿ ತಿಂದು, ಮನೆಯವರೊಂದಿಗೆ ಕೂತು ಟೀ.ವಿ. ನೋಡಿ. 10ನೇ ದಿನ 2 ಕೆ.ಜಿ. ತೂಕ, 10 ಪಟ್ಟು ಖುಷಿ ಹೆಚ್ಚಿಸಿಕೊಂಡು ಬನ್ನಿ ಎಂದು ಕಂಪನಿ ಇ-ಮೇಲ್ ಮಾಡಿದೆ.

11:06 PM (IST) Oct 13
ತುರ್ತು ಲ್ಯಾಂಡಿಂಗ್ ವೇಳೆ ಮೆಸಾಚುಸೆಟ್ಸ್ I-195 ವಿಮಾನ ಪತನ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ, ಇಬ್ಬರು ಮೃತಪಟ್ಟಿದ್ದರೆ, ಮತ್ತೊಬ್ಬ ಗಾಯಾಳು ರಕ್ಷಿಸಿ ಆಸ್ಪತ್ರೆ ದಾಖಲಿಸಲಾಗಿದೆ. ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರೂ ಅನ್ನೋ ಸ್ಪಷ್ಟ ಮಾಹಿತಿ ಲಭ್ಯವಿದೆ.
11:03 PM (IST) Oct 13
NHAI 'ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್' ಆರಂಭಿಸಿದೆ. ಈ ಅಭಿಯಾನದಡಿ, ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿರುವ ಕೊಳಕು ಶೌಚಾಲಯಗಳ ಜಿಯೋ-ಟ್ಯಾಗ್ ಮಾಡಿದ ಫೋಟೋಗಳನ್ನು ಕಳಿಸಿದರೆ ದೂರುದಾರರ FASTag ಖಾತೆಗೆ ₹1,000 ಬಹುಮಾನ ಜಮಾ ಮಾಡಲಾಗುತ್ತದೆ.
10:44 PM (IST) Oct 13
Full PF Withdrawal Now Possible Without Documents ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹಣ ಹಿಂಪಡೆಯುವಿಕೆ ನಿಯಮಗಳನ್ನು ಸರಳಗೊಳಿಸಿದ್ದು, ಇನ್ನು ಮುಂದೆ ಯಾವುದೇ ದಾಖಲೆಗಳಿಲ್ಲದೆ ಸಂಪೂರ್ಣ ಮೊತ್ತವನ್ನು ಹಿಂಪಡೆಯಲು ಅವಕಾಶ ನೀಡಿದೆ.
10:24 PM (IST) Oct 13
Afghanistan Rejects Pakistan Ceasefire Cuts Visas for Pak Defence Minister ISI Chief ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಘರ್ಷಣೆ ತೀವ್ರಗೊಂಡಿದ್ದು, ಎರಡೂ ಕಡೆ ಭಾರಿ ಸಾವುನೋವು ಸಂಭವಿಸಿದೆ. ಈ ನಡುವೆ, ಪಾಕ್ ಸಚಿವರ ವೀಸಾ ತಿರಸ್ಕೃತಗೊಂಡಿದೆ.
09:01 PM (IST) Oct 13
ಆರ್‌ಸಿಬಿ ಒಪ್ಪಂದ ನವೀಕರಿಸಲು ಕೊಹ್ಲಿ ನಕಾರ, IPLನಿಂದ ವಿದಾಯ ಹೇಳ್ತಾರ ಲೆಜೆಂಡ್? ಇದೀಗ ಈ ಚರ್ಚೆ ಜೋರಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಾಂಟ್ರಾಕ್ಟ್ ನವೀಕರಣದಲ್ಲಿ ಆಗಿರುವ ಮಾತುಕತೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಒಪ್ಪಂದ ನಿರಾಕರಿಸಿದ್ದೇಕೆ?
08:08 PM (IST) Oct 13
Gold Ownership Limit in India ಭಾರತದಲ್ಲಿ ಚಿನ್ನದ ಮಾಲೀಕತ್ವಕ್ಕೆ ಯಾವುದೇ ಅಧಿಕೃತ ಮಿತಿಯಿಲ್ಲ. ಆದಾಗ್ಯೂ, ಆದಾಯ ತೆರಿಗೆ ದಾಳಿಯ ಸಮಯದಲ್ಲಿ, ವಿವಾಹಿತ ಮಹಿಳೆಗೆ 500 ಗ್ರಾಂ, ಅವಿವಾಹಿತ ಮಹಿಳೆಗೆ 250 ಗ್ರಾಂ ಮತ್ತು ಪುರುಷರಿಗೆ 100 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗುವುದಿಲ್ಲ.
06:56 PM (IST) Oct 13
ದೀಪಾವಳಿ ಆಫರ್, ಟಾಟಾದ ಎಲ್ಲಾ ಕಾರುಗಳ ಮೇಲೆ ಗರಿಷ್ಠ 1.90 ಲಕ್ಷ ರೂ ಡಿಸ್ಕೌಂಟ್ ನೀಡಲಾಗಿದೆ. ಜಿಎಸ್‌ಟಿ ಕಡಿತದ ಬಳಿಕ ಇದೀಗ ದೀಪಾವಳಿ ಆಫರ್ ಕೂಡ ನೀಡಲಾಗಿದ್ದು, ಗ್ರಾಹಕರು ಕಾರು ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಯಾವ ಯಾರಿಗೆ ಎಷ್ಟು ಡಿಸ್ಕೌಂಟ್?
06:43 PM (IST) Oct 13
ರಸ್ತೆಬದಿಯ ಹಸುವಿಗೆ ಮುಸ್ಲಿಂ ಯುವತಿಯೊಬ್ಬಳು ಇಂಜೆಕ್ಷನ್ ನೀಡುತ್ತಿದ್ದಾಗ ಸಿಕ್ಕಿಬಿದ್ದ ವೀಡಿಯೋ ವೈರಲ್ ಆಗಿದೆ. ಇದು ಗೋವು ಕಳ್ಳಸಾಗಣೆ ಜಾಲದ ಭಾಗವಾಗಿರಬಹುದು, ಹಸುಗಳಿಗೆ ನಿದ್ರೆ ಇಂಜೆಕ್ಷನ್ ನೀಡಿ ರಾತ್ರಿಯಲ್ಲಿ ಕಸಾಯಿಖಾನೆಗೆ ಸಾಗಿಸಲಾಗುತ್ತದೆ ಎಂದು ಶಂಕಿಸಲಾಗಿದೆ.
06:14 PM (IST) Oct 13
ಕೆಲಸದ ನಡುವೆ ಹೃದಯಾಘಾತ, ಕಾರ್ಮಿಕನ ಪ್ರಾಣ ಹೋಗ್ತಿದ್ರೂ ಫೋನ್ ನೋಡುತ್ತಾ ಕುಳಿತ ಮಾಲೀಕ, ವಿಡಿಯೋ ಬಹಿರಂಗವಾಗುತ್ತಿದ್ದಂತೆ ಮಾಲೀಕನ ವಿರದ್ದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕನಿಷ್ಠ ನೆರವಿಗೂ ಬಾರದ ಮಾಲಿಕನ ವಿರುದ್ದ ಹಲವರು ಸಿಡಿಮಿಡಿಗೊಂಡಿದ್ದಾರೆ.
06:06 PM (IST) Oct 13
Annu Kapoor Slammed for Obscene Remarks on Tamannaah Bhatia ಸಂದರ್ಶನವೊಂದರಲ್ಲಿ ಹಿರಿಯ ನಟ ಅನ್ನು ಕಪೂರ್, ನಟಿ ತಮನ್ನಾ ಭಾಟಿಯಾ ಅವರ ದೇಹದ ಬಗ್ಗೆ ಆಡಿದ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. 'ಹಾಲಿನಂತ ದೇಹ' ಎಂಬ ಅವರ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
05:41 PM (IST) Oct 13
ಐಪಿಎಲ್ 2026ರ ಹರಾಜಿಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಹಲವು ಆಟಗಾರರನ್ನು ಕೈಬಿಡಲಿದೆ. ಈ ಲಿಸ್ಟ್‌ನಲ್ಲಿ ಕ್ಯಾಪ್ಟನ್ ಜೊತೆಗೆ ಹಲವು ಸ್ಟಾರ್ ಆಟಗಾರರೂ ಇದ್ದಾರೆ. ಆ ಆಟಗಾರರ ವಿವರಗಳನ್ನು ಈಗ ತಿಳಿಯೋಣ.
05:01 PM (IST) Oct 13
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಆಟಗಾರರ ರೀಟೈನ್‌ಗೆ ಬಿಸಿಸಿಐ ಡೆಡ್‌ಲೈನ್ ಕೂಡಾ ನಿಗದಿಪಡಿಸಿದೆ. ಹೀಗಿರುವಾಗಲೇ ಆರ್‌ಸಿಬಿ ಯಾರನ್ನೆಲ್ಲಾ ರಿಲೀಸ್ ಮಾಡಲಿದೆ, ಯಾರನ್ನು ಉಳಿಸಿಕೊಳ್ಳಲಿದೆ ಎನ್ನುವ ಚರ್ಚೆ ಜೋರಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
04:31 PM (IST) Oct 13
LG Electronics IPO: ₹30 Cr Firm Bids for ₹748 Cr Shares Gets Allotment ಕೇವಲ ₹30.16 ಕೋಟಿ ಮಾರುಕಟ್ಟೆ ಮೌಲ್ಯದ ವಿನ್ರೋ ಕಮರ್ಷಿಯಲ್ ಇಂಡಿಯಾ ಲಿಮಿಟೆಡ್, ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಐಪಿಒದಲ್ಲಿ ₹748.5 ಕೋಟಿಯ ಬೃಹತ್ ಬಿಡ್ ಮಾಡಿತ್ತು.
04:29 PM (IST) Oct 13
ಬಿಯರ್ ಪ್ರೀಯರು ಹೆಚ್ಚಾದರೂ ಭಾರತದಲ್ಲಿ 1300 ಕೋಟಿ ರೂ ನಷ್ಟ, ಸಂಕಷ್ಟದಲ್ಲಿ ಉದ್ಯಮ, ಹಲವರ ಆತಂಕಕ್ಕೆ ಕಾರಣವಾಗಿದೆ. ಪ್ರತಿ ದಿನ ಬಿಯರ್ ಕುಡಿಯುವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಬಿಯರ್ ಉದ್ಯಮ ಮಾತ್ರ ನಷ್ಟಕ್ಕೆ ಜಾರಿದ್ದು ಹೇಗೆ?
03:47 PM (IST) Oct 13
02:55 PM (IST) Oct 13
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಐಪಿಎಲ್‌ಗೂ ಗುಡ್ ಬೈ ಹೇಳ್ತಾರಾ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಕುರಿತಾದ ಸತ್ಯಾಸತ್ಯತೆ ಏನು ನೋಡೋಣ ಬನ್ನಿ.
02:47 PM (IST) Oct 13
Black Child Denied Hug: ಇಲ್ಲೊಂದು ಕಡೆ ಡಿಸ್ನಿಲ್ಯಾಂಡ್‌ನಲ್ಲಿ ತಬ್ಬಿಕೊಳ್ಳಲು ಬಂದ ಮಗುವನ್ನು ನಿರ್ಲಕ್ಷ್ಯಿಸಲಾಗಿದೆ. ಕಾರ್ಟೂನ್ ವೇಷಧಾರಿ ಇಲ್ಲಿ ವರ್ಣತಾರತಮ್ಯ ಮಾಡಿದ್ದು, ಕೆಲವು ಮಕ್ಕಳನ್ನು ಮಾತ್ರ ತಬ್ಬಿಕೊಂಡು ಕಪ್ಪುವರ್ಣದ ಪೋಷಕರ ಮಗುವೊಂದನ್ನು ತಬ್ಬಿಕೊಳ್ಳದೇ ನಿರ್ಲಕ್ಷಿಸಿದೆ.
02:22 PM (IST) Oct 13
Diamond price: ಜಾಗತಿಕ ಸಂಘರ್ಷಗಳಿಂದಾಗಿ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದರೆ, ಅಮೆರಿಕದ ಸುಂಕ ನೀತಿಗಳಂತಹ ಕಾರಣಗಳಿಂದ ವಜ್ರದ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಈ ಅನಿರೀಕ್ಷಿತ ಬದಲಾವಣೆಯು ಆಭರಣ ಮಾರುಕಟ್ಟೆಯಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
01:14 PM (IST) Oct 13
ಪಾಟ್ನಾ: ಐಪಿಎಲ್‌ನಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದ 14 ವರ್ಷದ ವೈಭವ್ ಸೂರ್ಯವಂಶಿ ಇದೀಗ ರಣಜಿ ಟ್ರೋಫಿ ಟೂರ್ನಿಯಲ್ಲಿ ಬಿಹಾರ ತಂಡದ ಉಪನಾಯಕರಾಗಿ ನೇಮಕವಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
12:09 PM (IST) Oct 13
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟರ್ ಬಾಬರ್ ಅಜಂ ಕೇವಲ 23 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಈ ವೇಳೆ ಬಾಬರ್ ಡಿಆರ್‌ಎಸ್ ತೆಗೆದುಕೊಂಡಾಗ, ವೀಕ್ಷಕ ವಿವರಣೆಗಾರ ರಮೀಜ್ ರಾಜಾ 'ಇದು ಔಟ್, ನಾಟಕ ಆಡುತ್ತಿದ್ದಾನೆ' ಎಂದು ಹೇಳಿದ್ದು ವೈರಲ್ ಆಗಿದೆ.
11:31 AM (IST) Oct 13
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಸ್ಟ್ರೇಲಿಯಾ ಎದುರು ಭರ್ಜರಿ ಅರ್ಧಶತಕ ಸಿಡಿಸಿದ ಸ್ಮೃತಿ ಮಂಧನಾ, ಒಂದೇ ಪಂದ್ಯದಲ್ಲಿ ಐದು ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
10:37 AM (IST) Oct 13
Most Expensive Feather: ನ್ಯೂಜಿಲ್ಯಾಂಡ್‌ನಲ್ಲಿ, ಅಳಿದುಹೋದ ಹುಯಿಯಾ ಹಕ್ಕಿಯೊಂದರ ಗರಿಯು ಹರಾಜಿನಲ್ಲಿ ಸುಮಾರು 23 ಲಕ್ಷ ರೂಪಾಯಿಗೆ ಮಾರಾಟವಾಗಿ ವಿಶ್ವದಾಖಲೆ ನಿರ್ಮಿಸಿದೆ. ಈ ಹಕ್ಕಿಯ ಗರಿಗೆ ಇಷ್ಟೊಂದು ಬೆಲೆ ಏಕೆ ಏನಿದರ ವಿಶೇಷತೆ ಇಲ್ಲಿದೆ ಡಿಟೇಲ್ ಸ್ಟೋರಿ…
09:39 AM (IST) Oct 13
ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಶತಕದ ಆಟವನ್ನು ಕೊಂಡಾಡಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಜೈಸ್ವಾಲ್‌ರನ್ನು ಭೇಟಿಯಾದ ಲಾರಾ, 'ನಮ್ಮ ಬೌಲರ್‌ಗಳನ್ನು ಅಷ್ಟೊಂದು ದಂಡಿಸಬೇಡಿ' ಎಂದು ತಮಾಷೆಯಾಗಿ ಮನವಿ ಮಾಡಿದ್ದಾರೆ.
09:14 AM (IST) Oct 13
ಆಲ್ರೌಂಡರ್ ಅಲಿರೇಜಾ ಮಿರ್ಜಾಯಿನ್ ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ 43-32 ಅಂಕಗಳಿಂದ ಗೆಲುವು ಸಾಧಿಸಿತು. ಈ ಮೂಲಕ ಹ್ಯಾಟ್ರಿಕ್ ಜಯ ದಾಖಲಿಸಿದ ಬುಲ್ಸ್, ಅಂಕಪಟ್ಟಿಯಲ್ಲಿ ಅಗ್ರ 5ರಲ್ಲಿ ಉಳಿದುಕೊಂಡಿದೆ.
08:49 AM (IST) Oct 13
ಭಾರತ ನೀಡಿದ 331 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್ ಮಾಡಿ 3 ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿತು. ಅಲೀಸಾ ಹೀಲಿ ಅವರ ಸ್ಫೋಟಕ ಶತಕ (142) ಆಸೀಸ್ ಗೆಲುವಿಗೆ ಕಾರಣವಾಯಿತು.