Black Child Denied Hug: ಇಲ್ಲೊಂದು ಕಡೆ ಡಿಸ್ನಿಲ್ಯಾಂಡ್‌ನಲ್ಲಿ ತಬ್ಬಿಕೊಳ್ಳಲು ಬಂದ ಮಗುವನ್ನು ನಿರ್ಲಕ್ಷ್ಯಿಸಲಾಗಿದೆ. ಕಾರ್ಟೂನ್ ವೇಷಧಾರಿ ಇಲ್ಲಿ ವರ್ಣತಾರತಮ್ಯ ಮಾಡಿದ್ದು, ಕೆಲವು ಮಕ್ಕಳನ್ನು ಮಾತ್ರ ತಬ್ಬಿಕೊಂಡು ಕಪ್ಪುವರ್ಣದ ಪೋಷಕರ ಮಗುವೊಂದನ್ನು ತಬ್ಬಿಕೊಳ್ಳದೇ ನಿರ್ಲಕ್ಷಿಸಿದೆ.

ಡಿಸ್ನಿಲ್ಯಾಂಡ್‌ನಲ್ಲೂ ವರ್ಣತಾರತಮ್ಯ 

ಕಾರ್ಟೂನ್ ಪಾತ್ರಗಳೆಂದರೆ ಮಕ್ಕಳಿಗೆ ಬಹಳ ಇಷ್ಟ ಮನೆಯಲ್ಲಿ ಸದಾ ಟಿವಿಯಲ್ಲಿ ಕಾರ್ಟೂನ್ ಪಾತ್ರಗಳನ್ನು ನೋಡುವ ಮಕ್ಕಳು ಅದನ್ನು ಬಹಳ ಇಷ್ಟಪಡುತ್ತಾರೆ. ಅದು ಮಕ್ಳಳ ಮೇಲೆ ಸಾಕಷ್ಟು ಪ್ರಭಾವ ಬೀರಿರುತ್ತದೆ. ಮಕ್ಕಳ ಈ ಮನಸ್ಥಿತಿಯನ್ನು ಅರಿತೇ ಮಕ್ಕಳಿಗೆ ಇಷ್ಟವಾಗುವಂತಹ ಅನೇಕ ಮನೋರಂಜನಾ ತಾಣಗಳನ್ನು ನಿರ್ಮಿಸಿ ಅದನ್ನೇ ದೊಡ್ಡ ಉದ್ಯಮವಾಗಿಸಲಾಗಿದೆ. ಹಲವು ದೇಶಗಳಲ್ಲಿ ಈ ಕಾರ್ಟೂನ್ ಆಧರಿತ ಡಿಸ್ನಿಲ್ಯಾಂಡ್ ನಿರ್ಮಿಸಲಾಗಿದ್ದು, ಇಲ್ಲಿ ಪೋಷಕರು ತಮ್ಮ ಪುಟ್ಟ ಮಕ್ಕಳನ್ನು ಕರೆದುಕೊಂಡು ಪ್ರವಾಸ ಹೋಗುತ್ತಾರೆ. 

ಬಿಳಿ ಬಣ್ಣದ ಮಗುವನ್ನು ಮಾತ್ರ ತಬ್ಬಿಕೊಂಡ ಕಾರ್ಟೂನ್ ಪಾತ್ರಧಾರಿ

ಹಲವು ದೇಶಗಳಲ್ಲಿ ಈ ಡಿಸ್ನಿಲ್ಯಾಂಡ್ ತಾಣಗಳಿವೆ. ಇಲ್ಲಿ ಮಕ್ಕಳನ್ನು ಆಕರ್ಷಿಸುವುದಕ್ಕೆ ಅನೇಕ ಆಕರ್ಷಣೆಗಳನ್ನು ಇರಿಸಲಾಗಿದೆ. ಅದರಲ್ಲಿ ಕಾರ್ಟೂನ್ ಪಾತ್ರಗಳ ವೇಷದಲ್ಲಿರುವವರು ಪ್ರಮುಖರು. ಇವರನ್ನು ಮಕ್ಕಳು ಬಹಳ ಇಷ್ಟಪಡುತ್ತಾರೆ ಅವರನ್ನು ತಬ್ಬಿಕೊಳ್ಳುವುದಕ್ಕೆ ಹೋಗುತ್ತಾರೆ. ಆದರೆ ಇಲ್ಲೊಂದು ಕಡೆ ಡಿಸ್ನಿಲ್ಯಾಂಡ್‌ನಲ್ಲಿ ಹೀಗೆ ತಬ್ಬಿಕೊಳ್ಳಲು ಬಂದ ಮಗುವನ್ನು ನಿರ್ಲಕ್ಷ್ಯಿಸಲಾಗಿದೆ. ಕಾರ್ಟೂನ್ ವೇಷಧಾರಿ ಇಲ್ಲಿ ವರ್ಣತಾರತಮ್ಯ ಮಾಡಿದ್ದು, ಕೆಲವು ಮಕ್ಕಳನ್ನು ಮಾತ್ರ ತಬ್ಬಿಕೊಂಡು ಕಪ್ಪುವರ್ಣದ ಪೋಷಕರ ಮಗುವೊಂದು ಈ ಕಾರ್ಟೂನ್ ಪಾತ್ರಧಾರಿಯನ್ನು ತಬ್ಬಿಕೊಳ್ಳುವುದಕ್ಕೆ ಹಲವು ಬಾರಿ ಬಂದರೂ ತಬ್ಬಿಕೊಳ್ಳದೇ ಆ ಕಾರ್ಟೂನ್ ಪಾತ್ರಧಾರಿ ಆ ಮಗುವನ್ನು ತಬ್ಬಿಕೊಳ್ಳದೇ ನಿರ್ಲಕ್ಷಿಸಿದೆ.

ಬೇಸರ ಹಂಚಿಕೊಂಡ ಬರ್ಸಿಲೋನಾ ನ್ಯಾಷನಲ್ ಟೀಮ್ ಆಟಗಾರ

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಆ ಕಾರ್ಟೂನ್ ಪಾತ್ರಧಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಪ್ಯಾರೀಸ್‌ನ ಡಿಸ್ನಿಲ್ಯಾಂಡ್‌ನಲ್ಲಿ. ಬರ್ಸಿಲೋನಾ ಹಾಗೂ ಬ್ರೆಜಿಲ್ ನ್ಯಾಷನಲ್ ಟೀಮ್ ಆಟಗಾರ ರಫಿನ್ಹಾ ಅವರ ಮಗುವಿಗೆ ಈ ರೀತಿಯ ಅನುಭವ ಆಗಿದೆ. ಡಿಸ್ನಿಲ್ಯಾಂಡ್‌ನಲ್ಲಿ ಮಕ್ಕಳಲ್ಲೂ ಜನಾಂಗೀಯ ತಾರತಮ್ಯ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಅವರ ಮಗು ಆತನ ಇಷ್ಟದ ಕಾರ್ಟೂನ್ ಪಾತ್ರಧಾರಿಯನ್ನು ತಬ್ಬಿಕೊಳ್ಳುವುದಕ್ಕೆ ತನ್ನ ಸಮಯಕ್ಕಾಗಿ ಕಾಯುತ್ತಿತ್ತು. ಆದರೆ ಆ ಕಾರ್ಟೂನ್ ಪಾತ್ರಧಾರಿ ಮಗು ಹಲವು ಬಾರಿ ಕಾರ್ಟೂನ್ ಪಾತ್ರಧಾರಿಯನ್ನು ತಬ್ಬಿಕೊಳ್ಳುವುದಕ್ಕೆ ಓಡಿ ಓಡಿ ಹೋದರೂ ಆ ಪಾತ್ರಧಾರಿ ಆ ಮಗುವನ್ನು ಹೊರತುಪಡಿಸಿ ಮತ್ತೆಲ್ಲಾ ಮಕ್ಕಳನ್ನು ತಬ್ಬಿಕೊಂಡಿದೆ. ಈ ವಿಚಾರವನ್ನು ಸ್ವತಃ ರಫೀನಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆ ಪುಟ್ಟ ಮಗು ಬಯಸಿದ್ದು, ಒಂದು ಹಗ್ ಒಂದು ಹಾಯ್

ನಿಮ್ಮ ಉದ್ಯೋಗಿಗಳು ಅವಮಾನಕಾರಿಯಾಗಿದ್ದಾರೆ, ನೀವು ಜನರನ್ನು, ವಿಶೇಷವಾಗಿ ಮಕ್ಕಳನ್ನು ಆ ರೀತಿ ನಡೆಸಿಕೊಳ್ಳಬಾರದು. ನೀವು ಮಕ್ಕಳನ್ನು ಸಂತೋಷಪಡಿಸಬೇಕು, ಅವರನ್ನು ಕಡೆಗಣಿಸಬಾರದು. ಅಲ್ಲಿ ಎಲ್ಲ ಬಿಳಿ ಬಣ್ಣದ ಮಕ್ಕಳನ್ನು ಆ ಕಾರ್ಟೂನ್ ಪಾತ್ರಧಾರಿ ತಬ್ಬಿಕೊಳ್ಳುತ್ತಿದ್ದ ಆದರೆ ನನ್ನ ಮಗನನ್ನು ಮಾತ್ರ ತಬ್ಬಿಕೊಳ್ಳಲಿಲ್ಲ. ನನ್ನ ಮಗ ಕೇವಲ ಒಂದು ಹಗ್ ಹಾಗೂ ಹಾಯ್ ಬಯಸಿದ್ದ. ಆದರೆ ನೀವು ಅದೃಷ್ಟವಂತರು ಏಕೆಂದರೆ ಆತನಿಗೆ ನೀವು ಮಾಡಿದ್ದೇನು ಎಂಬುದು ಅರ್ಥವಾಗಿಲ್ಲ. ನಾನು ನಿಮ್ಮನ್ನು ದ್ವೇಷಿಸುತ್ತೇಬೆ ಡಿಸ್ನಿಲ್ಯಾಂಡ್ ಪ್ಯಾರಿಸ್ ಎಂದು ಬರೆದಿದ್ದಾರೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿಸ್ನಿಲ್ಯಾಂಡ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನೇಕರು ಹೀಗೆ ಮಾಡಿದ ಕಾರ್ಟೂನ್ ಪಾತ್ರಧಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆತನನ್ನು ಕೆಲಸದಿಂದ ತೆಗೆದು ಹಾಕಬೇಕು ಎಂದು ಮನವಿ ಮಾಡಿದ್ದಾರೆ.

ಮಕ್ಕಳು ದೇವರ ಸಮಾನ ಎಂದು ಭಾವಿಸುತ್ತಾರೆ. ಆದರೆ ಇಲ್ಲಿ ಮಕ್ಕಳಲ್ಲೂ ತಾರತಮ್ಯ ತೋರಿ ಕಾರ್ಟೂನ್ ಪಾತ್ರಧಾರಿ ವರ್ತನೆ ಸರಿಯಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.

ಇದನ್ನೂ ಓದಿ: ಕೆಬಿಸಿ ಶೋದಲ್ಲಿ ಅಮಿತಾಬ್‌ಗೆ ಅವಮಾನಿಸಿದ ಬಾಲಕ 5ನೇ ರೌಂಡಲ್ಲೇ ಔಟ್: ಇದು ಪೋಷಕರಿಗೊಂದು ಪಾಠ ಎಂದ ನೆಟ್ಟಿಗರು
ಇದನ್ನೂ ಓದಿ: 65 ದಾಟಿದರೂ ಚಿರಯುವತಿ ಸಲ್ಮಾನ್ ಖಾನ್ ಮಾಜಿ ಗೆಳತಿ : ಸಂಗೀತಾ ಬಿಜಲಾನಿ ಮುದ್ದಾದ ಫೋಟೋಗಳು

View post on Instagram