ತುರ್ತು ಲ್ಯಾಂಡಿಂಗ್ ವೇಳೆ ಮೆಸಾಚುಸೆಟ್ಸ್ I-195 ವಿಮಾನ ಪತನ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ, ಇಬ್ಬರು ಮೃತಪಟ್ಟಿದ್ದರೆ, ಮತ್ತೊಬ್ಬ ಗಾಯಾಳು ರಕ್ಷಿಸಿ ಆಸ್ಪತ್ರೆ ದಾಖಲಿಸಲಾಗಿದೆ. ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರೂ ಅನ್ನೋ ಸ್ಪಷ್ಟ ಮಾಹಿತಿ ಲಭ್ಯವಿದೆ.

ಮೆಸಾಚುಸೆಟ್ಸ್ (ಅ.13) ಏರ್ ಇಂಡಿಯಾ ವಿಮಾನ ದುರಂತದ ಬಳಿಕ ವಿಮಾನದಲ್ಲಿನ ತಾಂತ್ರಿಕ ದೋಷ, ತುರ್ತು ಲ್ಯಾಂಡಿಂಗ್ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಇದರ ನಡುವೆ ಅಮೆರಿಕದ ಮೆಸಾಚುಸೆಟ್ಸ್ ವಿಮಾನ ತುರ್ತು ಲ್ಯಾಂಡಿಂಗ್ ವೇಳೆ ಪತನಗೊಂಡಿರುವುದಾಗಿ ವರದಿಯಾಗಿದೆ. ಲ್ಯಾಂಡಿಂಗ್ ವೇಳೆ ವಿಮಾನ ಪತನಗೊಳ್ಳುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ವಿಮಾನ ಹೊತ್ತಿ ಉರಿದಿದೆ. ಇತ್ತ ವಿಮಾನದಲ್ಲಿದ್ದ ಇಬ್ಬರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇತ್ತ ಓರ್ವ ಗಾಯಗೊಂಡಿದ್ದಾನೆ.

ಹೆದ್ದಾರಿಯಲ್ಲೇ ತುರ್ತು ಲ್ಯಾಂಡಿಂಗ್

ಇಂಟರ್‌ಸ್ಟೇಟ್ 195 ಸಣ್ಣ ವಿಮಾನ ಹಾರಾಟದ ನಡುವೆ ಸಮಸ್ಯೆ ಕಾಣಿಸಿಕೊಂಡಿದೆ. ಇದು ತಾಂತ್ರಿಕ ಸಮಸ್ಯೆಯೇ ಅಥವಾ ಬೇರೆ ಸಮಸ್ಯೆಯೇ ಅನ್ನೋದು ಸ್ಪಷ್ಟವಾಗಿಲ್ಲ. ರೋಡ್ ಐಸ್‌ಲೆಂಡ್ ಪ್ರಾಂತ್ಯದಲ್ಲಿ ಹಾರಾಟದ ವೇಳೆ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಸಮೀಪದ ಬೆಡ್‌ಫೋರ್ಡ್ ರೀಜನಲ್ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಲ್ಯಾಂಡಿಂಗ್ ಮಾಡುವ ಪ್ರಯತ್ನ ಮಾಡಲಾಗಿದೆ. ಇದಕ್ಕಾಗಿ ಕಂಟ್ರೋಲ್ ರೂಂಗೆ ಸಿಗ್ನಲ್ ನೀಡಲಾಗಿದೆ. ತುರ್ತು ವಿಮಾನ ಲ್ಯಾಂಡಿಂಗ್ ಕಾರಣ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸಮಸ್ಯೆ ಕಾರಣದಿಂದ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅಂತಿಮ ಕ್ಷಣದಲ್ಲಿ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಲು ಪ್ರಯತ್ನಿಸಲಾಗಿದೆ. ಆದರೆ ಲ್ಯಾಂಡಿಂಗ್ ವೇಳೆ ವಿಮಾನ ಪತನಗೊಂಡಿದೆ.

ಭಾರಿ ಮಳೆ ಹಾಗೂ ಗಾಳಿ ನಡುವೆ ರಕ್ಷಣ ಕಾರ್ಯಾಚರಣೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲಾಗಿದೆ. ಗಾಯಾಳು ಹಾಗೂ ಮೃತಪಟ್ಟವರ ಮಾಹಿತಿ ಬಹಿರಂಗವವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಅಂತ್ಯಗೊಂಡಿದೆ. ಹೆದ್ದಾರಿಯಲ್ಲಿ ವಿಮಾನ ಪತನಗೊಂಡಿರುವ ಕಾರು ಹೆದ್ದಾರಿ ಬಂದ್ ಮಾಡಲಾಗಿದೆ. ವಿಮಾನ ಪತನಗೊಂಡ ಎರಡೂ ಬದಿಯಲ್ಲಿ ಹೆದ್ದಾರಿ ಬಂದ್ ಮಾಡಲಾಗಿದೆ. ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.

Scroll to load tweet…

ಸ್ಥಳಕ್ಕೆ ಧಾವಿಸಿದ ತನಿಖಾ ತಂಡ

ವಿಮಾನ ಪತನದ ಬೆನ್ನಲ್ಲೇ ಪೊಲೀಸರು, ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ತುರ್ತು ರಕ್ಷಣಾ ಕಾರ್ಯಾಚರಣೆ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದರ ಬೆನ್ನಲ್ಲೇ ತನಿಖಾ ತಂಡಗಳು ಸ್ಥಳಕ್ಕೆ ಧಾವಿಸಿದೆ. ವಿಮಾನ ಪತಕ್ಕೆಕಾರಣವೇನು ಅನ್ನೋ ಕುರಿತು ತನಿಖೆ ಆರಂಭಿಸಿದೆ. ವಿಮಾನದ ಅವಶೇಷಗಳನ್ನು ಕಲೆ ಹಾಕಿದೆ.