ದೀಪಾವಳಿ ಆಫರ್, ಟಾಟಾದ ಎಲ್ಲಾ ಕಾರುಗಳ ಮೇಲೆ ಗರಿಷ್ಠ 1.90 ಲಕ್ಷ ರೂ ಡಿಸ್ಕೌಂಟ್
ದೀಪಾವಳಿ ಆಫರ್, ಟಾಟಾದ ಎಲ್ಲಾ ಕಾರುಗಳ ಮೇಲೆ ಗರಿಷ್ಠ 1.90 ಲಕ್ಷ ರೂ ಡಿಸ್ಕೌಂಟ್ ನೀಡಲಾಗಿದೆ. ಜಿಎಸ್‌ಟಿ ಕಡಿತದ ಬಳಿಕ ಇದೀಗ ದೀಪಾವಳಿ ಆಫರ್ ಕೂಡ ನೀಡಲಾಗಿದ್ದು, ಗ್ರಾಹಕರು ಕಾರು ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಯಾವ ಯಾರಿಗೆ ಎಷ್ಟು ಡಿಸ್ಕೌಂಟ್?

ಟಾಟಾ ಕಾರುಗಳಿಗೆ ದೀಪಾವಳಿ ಆಫರ್
ಟಾಟಾ ಕಾರುಗಳಿಗೆ ದೀಪಾವಳಿ ಆಫರ್
ಟಾಟಾ ಮೋಟಾರ್ಸ್ ಇದೀಗ ದೀಪಾವಳಿ ಹಬ್ಬಕ್ಕೆ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈಗಾಗಲೇ ಜಿಎಸ್‌ಟಿ ಕಡಿತದಿಂದ ಕಾರುಗಳ ಬೆಲೆ ಇಳಿಕೆಯಾಗಿದೆ. ಇದರ ಜೊತೆಗೆ ಇದೀಗ ದೀಪಾವಳಿ ಡಿಸ್ಕೌಂಟ್ ಆಫರ್ ಸೇರಿಕೊಂಡಿರುವುದು ಗ್ರಾಹಕರ ಸಂಭ್ರಮ ಡಬಲ್ ಮಾಡಿದೆ. ಟಾಟಾದ ಬಹುತೇಕ ಎಲ್ಲಾ ಕಾರುಗಳ ಮೇಲೆ ಭಾರಿ ವಿನಾಯಿತಿ ನೀಡಲಾಗಿದೆ. ಗರಿಷ್ಠ 1.90 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.
ಅಕ್ಟೋಬರ್ 21ರ ವರೆಗೆ ಆಫರ್ ಲಭ್ಯ
ಅಕ್ಟೋಬರ್ 21ರ ವರೆಗೆ ಆಫರ್ ಲಭ್ಯ
ಟಾಟಾ ದೀಪಾವಳಿ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಸದ್ಯ ಆಫರ್ ಆರಂಭಗೊಂಡಿದೆ. ಅಕ್ಟೋಬರ್ 21ರ ವರೆಗೆ ಈ ಆಫರ್ ಇರಲಿದೆ. ಆಫರ್ ನಗದು ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ ಹಾಗೂ ಸ್ಕ್ರಾಪೇಜ್ ಬೆನಿಫಿಟ್ ಒಳಗೊಂಡಿರಲಿದೆ. ಇದರ ಡೊತೆಗೆ ಗ್ರೀನ್ ಇನಿಶೇಟೀವ್, MY2024ರ ಮಾಡೆಲ್ ಕಾರುಗಳಿಗೆ ಮತ್ತಷ್ಟು ಆಫರ್ ನೀಡಿದ್ದಾರೆ.
ಟಾಟಾ ಅಲ್ಟ್ರೋಜ್ ಕಾರಿನ ಮೇಲೆ 1 ಲಕ್ಷ ರೂ ಡಿಸ್ಕೌಂಟ್
ಟಾಟಾ ಅಲ್ಟ್ರೋಜ್ ಕಾರಿನ ಮೇಲೆ 1 ಲಕ್ಷ ರೂ ಡಿಸ್ಕೌಂಟ್
ಟಾಟಾ ಅಲ್ಟ್ರೋಜ್ ಕಾರಿನ ಮೇಲೆ ಗರಿಷ್ಠ 1 ಲಕ್ಷ ರೂ ಡಿಸ್ಕೌಂಟ್ ನೀಡಲಾಗಿದೆ. ಗ್ರಾಹಕರ ಬೆನಿಫಿಟ್ ಹಾಗೂ ಎಕ್ಸ್‌ಚೇಂಜ್ ಬೋನಸ್ ಸೇರಿ 1 ಲಕ್ಷ ರೂ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಅಲ್ಟ್ರೋಜರ್ ರೇಸರ್ ವೇರಿಯೆಂಟ್ MY2024 ಮಾಡೆಲ್ ಕಾರಿನ ಮೇಲೆ 1.35 ಲಕ್ಷ ರೂಪಾಯಿ ಒಟ್ಟು ಡಿಸ್ಕೌಂಟ್ ನೀಡಲಾಗಿದೆ.
ಟಾಟಾ ನೆಕ್ಸಾನ್ ಡಿಸ್ಕೌಂಟ್ ಆಫರ್
ಟಾಟಾ ನೆಕ್ಸಾನ್ ಡಿಸ್ಕೌಂಟ್ ಆಫರ್
ಟಾಟಾ ನೆಕ್ಸಾನ್ ಪೆಟ್ರೋಲ್, ಸಿಎನ್‌ಜಿ ಹಾಗೂ ಡೀಸೆಲ್ ಕಾರು 35,000 ರೂಪಾಯಿ ಕನ್ಸೂಮರ್ ಡಿಸ್ಕೌಂಟ್ ಹಾಗೂ 10,000 ಎಕ್ಸ್‌ಚೇಂಜ್ ಬೋನಸ್ ಸೇರಿ ಒಟ್ಟು 45,000 ರೂಪಾಯಿ ಆಫರ್ ನೀಡಲಾಗಿದೆ. ಟಾಟಾ ಪಂಚ್ ಸಿಎನ್‌ಜಿ ಹಾಗೂ ಪೆಟ್ರೋಲ್ ವೇರಿಯೆಂಟ್ ಕಾರಿನ ಮೇಲೆ 25,000 ಡಿಸ್ಕೌಂಟ್ ನೀಡಲಾಗಿದೆ.
ಟಾಟಾ ಹ್ಯಾರಿಯರ್, ಸಫಾರಿ ಆಫರ್
ಟಾಟಾ ಹ್ಯಾರಿಯರ್, ಸಫಾರಿ ಆಫರ್
ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಕಾರಿನ ಮೇಲೆ ಕನ್ಸೂಮರ್ ಆಫರ್ 50,000 ರೂಪಾಯಿ ಹಾಗೂ ಎಕ್ಸ್‌ಚೇಂಜ್ ಬೋನಸ್ 25,000 ರೂಪಾಯಿ ಸೇರಿ 75,000 ರೂಪಾಯಿ ಒಟ್ಟು ಆಫರ್ ನೀಡಲಾಗಿದೆ. ಕರ್ವ್ ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ ಮೇಲೆ 30,000 ರೂಪಾಯಿ ಆಫರ್ ನೀಡಲಾಗಿದೆ
ಎಲೆಕ್ಟ್ರಿಕ್ ವೇರಿಯೆಂಟ್ ಮೇಲೂ ಡಿಸ್ಕೌಂಟ್
ಎಲೆಕ್ಟ್ರಿಕ್ ವೇರಿಯೆಂಟ್ ಮೇಲೂ ಡಿಸ್ಕೌಂಟ್
ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರಿನ ಮೇಲೆ ಒಟ್ಟು 1.90 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. 70,000 ರೂಪಾಯಿ ಗ್ರೀನ್ ಬೋನಸ್, 30,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ. ಟಾಟಾ ಟಿಯಾಗೋ ಇವಿಗೆ ಒಟ್ಟು 1.23 ಲಕ್ಷ ರೂಪಾಯಿ ಆಫರ್, ಪಂಟ್ ಇವಿ ಮೇಲೆ 1.23 ಲಕ್ಷ ರೂಪಾಯಿ ಆಫರ್, ಹ್ಯಾರಿಯರ್ ಇವಿ ಮೇಲೆ 1 ಲಕ್ಷ ರೂಪಾಯಿ ಆಫರ್ ಹಾಗೂ ನೆಕ್ಸಾನ್ ಇವಿ ಮೇಲೆ 90,000 ರೂಪಾಯಿ ಆಫರ್ ನೀಡಲಾಗಿದೆ.
ಸೂಚನೆ: ಆಫರ್ ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ವ್ಯತ್ಯಾಸವಾಗಲಿದೆ. ಕಾರು ಖರೀದಿ ವೇಳೆ ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಖಚಿತಪಡಿಸಿಕೊಳ್ಳಿ