ಕೆಲಸದ ನಡುವೆ ಹೃದಯಾಘಾತ, ಕಾರ್ಮಿಕನ ಪ್ರಾಣ ಹೋಗ್ತಿದ್ರೂ ಫೋನ್ ನೋಡುತ್ತಾ ಕುಳಿತ ಮಾಲೀಕ, ವಿಡಿಯೋ ಬಹಿರಂಗವಾಗುತ್ತಿದ್ದಂತೆ ಮಾಲೀಕನ ವಿರದ್ದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕನಿಷ್ಠ ನೆರವಿಗೂ ಬಾರದ ಮಾಲಿಕನ ವಿರುದ್ದ ಹಲವರು ಸಿಡಿಮಿಡಿಗೊಂಡಿದ್ದಾರೆ.
ಇಂದೋರ್ (ಅ.13) ಸ್ಟೋರ್ ಹೌಸ್‌ನಲ್ಲಿ ಸಾಮಾಗ್ರಿಗಳು, ವಸ್ತುಗಳನ್ನು ಸಾಗಿಸುವುದು, ಲೋಡ್ ಮಾಡುವುದು ಸೇರಿದಂತೆ ಶ್ರಮದ ಕೆಲಸದಲ್ಲಿ ಎಲ್ಲರೂ ತೊಡಗಿಸಿಕೊಂಡಿದ್ದರು. ಇತ್ತ ಮಾಲೀಕ ಕೂಡ ಎದುರಿನಲ್ಲೇ ಕುಳಿತು ಉದ್ಯಮದ ಲೆಕ್ಕ, ಲೋಡ್ ಸೇರಿದಂತೆ ಇತರ ಲೆಕ್ಕಾಚಾರ ಹಾಕುತ್ತಾ ಸಾಗುತ್ತಿದ್ದಂತೆ ಕಾರ್ಮಿಕನಿಗೆ ತೀವ್ರ ಹೃದಯಾಘಾತವಾಗಿದೆ. ಇತರ ಕಾರ್ಮಿಕರು ನೆರವಿಗೆ ಬಂದರೆ, ಮಾಲೀಕ ಎದುರಲ್ಲೇ ಕುಳಿತಿದ್ದರೂ ಕುರ್ಚಿಯಿಂದ ಮೇಲೆ ಎದ್ದಿಲ್ಲ, ಫೋನ್‌ನಲ್ಲಿ ಮಾತನಾಡುತ್ತಾ ಸಂಬಂಧವೇ ಇಲ್ಲ ಎಂದು ಕುಳಿತಿದ್ದಾನೆ. ಇತ್ತ ಇತರ ಕಾರ್ಮಿಕರ ನೆರವೂ ನೀಡಿದರೂ ಕಾರ್ಮಿಕ ಬದುಕಿ ಉಳಿಯಲಿಲ್ಲ. ಈ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾದಲ್ಲಿ ನಡೆದಿದೆ.
ಕೆಲಸದ ನಡುವೆ ಕುಸಿದ ಕಾರ್ಮಿಕ
ಶ್ರಮದ ಕೆಲಸದ ನಡುವೆ ಕಾರ್ಮಿಕ ತೀವ್ರ ಹೃದಯಾಘಾತದಿಂದ ಅಸ್ವಸ್ಥಗೊಂಡಿದ್ದಾನೆ. ಎದೆ ನೋವಿನಿಂದ ಬಳಲಿದ್ದಾರೆ. ಅಸ್ವಸ್ಥಗೊಳ್ಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತಿದ್ದಾನೆ. ಕಾರ್ಮಿಕನೊಬ್ಬ ಆಸ್ವಸ್ಥಗೊಳ್ಳುತ್ತಿದ್ದಂತೆ ಇತರ ಕಾರ್ಮಿಕರು ನೆರವಿಗೆ ಬಂದಿದ್ದಾರೆ. ಕೈ ಕಾಲು ಉಜ್ಜಿ ಬಿಸಿ ಮಾಡುವ ಪ್ರಯತ್ನ ಮಾಡಿದ್ದಾರೆ. ಇತ್ತ ಮತ್ತೊಬ್ಬ ಕಾರ್ಮಿಕ ನೀರು ತಂದಿದ್ದಾನೆ. ಆದರೆ ಅಸ್ವಸ್ಥಗೊಂಡ ಕಾರ್ಮಿಕ ಚೇತರಿಕೆ ಕಾಣಲಿಲ್ಲ. ಇತ್ತ ಕಾರ್ಮಿಕರ ಆತಂಕ ಹೆಚ್ಚಾಗಿದೆ. ತಮ್ಮ ಕೈಲಾದ ಪ್ರಯತ್ನ ಮಾಡಿದ್ದಾರೆ. ಆದರೆ ಕಾರ್ಮಿಕ ಮಾತ್ರ ಚೇತರಿಕೆ ಕಾಣಲಿಲ್ಲ.
ಮಾಲೀಕನ ಫೋನ್‌ನಲ್ಲೇ ಬ್ಯೂಸಿ
ಕಾರ್ಮಿಕನೊಬ್ಬ ಹೃದಯಾಘಾತದಿಂದ ಅಸ್ವಸ್ಥಗೊಂಡರೂ ಮಾಲೀಕ ಮಾತ್ರ ತನ್ನ ಫೋನ್‌ನಲ್ಲೇ ಬ್ಯೂಸಿಯಾಗಿದ್ದ. ಕಾರ್ಮಿಕನ ಕಡೆ ನೋಡಿ ನಿರ್ಲಕ್ಷ್ಯವಹಿಸಿದ್ದಾನೆ. ಫೋನ್‌ನಲ್ಲಿ ಮಾತನಾಡುತ್ತಾ ಕುಳಿತಲ್ಲಿಂದಲೇ ನೋಡಿ ಮತ್ತೆ ಫೋನ್‌ನಲ್ಲೇ ಬ್ಯೂಸಿಯಾಗಿದ್ದಾನೆ. ಕಾರ್ಮಿಕನಿಗೆ ನೆರವು ನೀಡುವ ಪ್ರಯತ್ನವನ್ನೂ ಮಾಡಲಿಲ್ಲ.
ಸ್ಥಳದಲ್ಲೇ ಸಾವು ಕಂಡ ಕಾರ್ಮಿಕ
ಕಾರ್ಮಿಕ ಹೃದಯಾಘಾತದಿಂದ ಅಸ್ವಸ್ಥಗೊಂಡು ಕುರ್ಚಿಯಲ್ಲಿ ಕುಳಿತೇ ಮೃತಪಟ್ಟಿದ್ದಾನೆ. ಕಾರ್ಮಿಕರ ನೆರವು ಪ್ರಯೋಜನವಾಗಲಿಲ್ಲ. ಮಾಲೀಕ ನೆರವು ನೀಡಲಿಲ್ಲ. ಆಸ್ಪತ್ರೆ ದಾಖಲಿಸುವ ಪ್ರಯತ್ನವನ್ನೂ ಮಾಡಲಿಲ್ಲ.
ಮಾಲೀಕನ ಧೋರಣೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕತ್ತೆ ರೀತಿ ದುಡಿಸಿಕೊಂಡು ಕೊನೆಗ ಕಾರ್ಮಿಕನ ಪ್ರಾಣ ಹೋಗುತ್ತಿದ್ದರೂ ನೆರವಿಗೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಮಾಲೀಕರ ಬಳಿ ಕೆಲಸ ಮಾಡಬೇಡಿ. ಇವರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹಲವರು ಸಲಹೆ ನೀಡಿದ್ದಾರೆ.
