ರಸ್ತೆಬದಿಯ ಹಸುವಿಗೆ ಮುಸ್ಲಿಂ ಯುವತಿಯೊಬ್ಬಳು ಇಂಜೆಕ್ಷನ್ ನೀಡುತ್ತಿದ್ದಾಗ ಸಿಕ್ಕಿಬಿದ್ದ ವೀಡಿಯೋ ವೈರಲ್ ಆಗಿದೆ. ಇದು ಗೋವು ಕಳ್ಳಸಾಗಣೆ ಜಾಲದ ಭಾಗವಾಗಿರಬಹುದು, ಹಸುಗಳಿಗೆ ನಿದ್ರೆ ಇಂಜೆಕ್ಷನ್ ನೀಡಿ ರಾತ್ರಿಯಲ್ಲಿ ಕಸಾಯಿಖಾನೆಗೆ ಸಾಗಿಸಲಾಗುತ್ತದೆ ಎಂದು ಶಂಕಿಸಲಾಗಿದೆ.

ಹಲವು ರಾಜ್ಯಗಳಲ್ಲಿ ಗೋವುಗಳ ಮಾರಾಟ, ಸಾಗಾಟ ನಿಷೇಧವಿದ್ದರೂ ರಾತ್ರೋರಾತ್ರಿ ರಸ್ತೆ ಬದಿ ಇರುವ ಬೀಡಾಡಿ ಹಸುಗಳು ಕರುಗಳು ಹೋರಿಗಳು ಇದ್ದಕ್ಕಿದ್ದಂತೆ ಮಾಯವಾಗಿ ಬಿಡುತ್ತವೆ. ಅವು ಎಲ್ಲಿ ಹೋಗುತ್ತವೆ ಎಂಬ ಸುಳಿವು ಯಾರಿಗೂ ಸಿಗುವುವುದಿಲ್ಲ, ಮಾಲೀಕರು ಇಲ್ಲದ ಕಾರಣ ಈ ಹಸುಗಳು ಏನಾದವು ಎಂದು ಯಾರೂ ವಿಚಾರಿಸುವುದಕ್ಕೆ ಹೋಗುವುದಿಲ್ಲ, ಹೀಗಿರುವಾಗ ಹಸುಗಳು ಕಾಣೆಯಾದರೂ ಯಾರು ದೂರು ನೀಡದ ಕಾರಣ ಗೋವು ಕಳ್ಳಸಾಗಣೆ ಯಾವುದೇ ಚಿಂತೆ ಇಲ್ಲದೇ ಸುಲಭವಾಗಿ ರಸ್ತೆಬದಿ ಇರುವ ಹಸುಗಳನ್ನು ಕಸಾಯಿಖಾನೆಗಳಿಗೆ ಮಾರಿ ಜೇಬು ತುಂಬಿಸಿಕೊಳ್ಳುತ್ತಾರೆ. ಹೀಗಾಗಿಯೇ ಹಳ್ಳಿಗಳ ಕಡೆಯೂ ರಸ್ತೆಗಳ ಬದಿಗಳಲ್ಲಿ ಹಿಂದೆಲ್ಲಾ ರಾಶಿ ರಾಶಿ ಇರುತ್ತಿದ್ದ ಹಸುಗಳು ಈಗ ಒಂದೂ ಕಾಣುವುದಕ್ಕೆ ಸಿಗುವುದಿಲ್ಲ. ಹೀಗಿರುವಾಗ ಇಲ್ಲೊಂದು ಭಯಾನಕ ವೀಡಿಯೋ ವೈರಲ್ ಆಗಿದ್ದು, ಮೇಯಲು ಬಿಟ್ಟಿರುವ ಅಥವಾ ರಸ್ತೆ ಬದಿಯ ಬೀಡಾಡಿ ಹಸುಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿದೆ.

ಬೀದಿಯಲ್ಲಿದ್ದ ಹಸುವಿಗೆ ಇಂಜೆಕ್ಷನ್ ಚುಚ್ಚುವ ವೇಳೆ ಯುವಕರ ಕೈಗೆ ಸಿಕ್ಕಿಬಿದ್ದ ಮುಸ್ಲಿಂ ಯುವತಿ

ಮುಸ್ಲಿಂ ಯುವತಿಯೊಬ್ಬಳು ರಸ್ತೆಬದಿ ಸಾಗುತ್ತಿದ್ದ ಹಸುವಿಗೆ ಇಂಜೆಕ್ಷನ್ ಮಾಡುವ ವೇಳೆ ಅಲ್ಲಿದ್ದವರ ಕೈಗೆ ಸಿಕ್ಕಿಬಿದ್ದಿದ್ದಾಳೆ ಎನ್ನಲಾಗುತ್ತಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. BHAARAT INSIGHT ಎಂಬ ಇನ್ಸ್ಟಾಪೇಜ್‌ನಿಂದ ವೀಡಿಯೋ ವೈರಲ್ ಆಗಿದ್ದು, ಬುರ್ಕಾ ಧರಿಸಿರುವ ಯುವತಿಯೊಬ್ಬಳನ್ನು ಯುವಕರು ಹಿಡಿದುಕೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಹೀಗೆ ಹೇಳುವುದು ಕೇಳಬಹುದು. ನಾನು ಆಟೋದಲ್ಲಿ ಹೋಗುತ್ತಿದೆ. ಈ ವೇಳೆ ಈ ಹುಡುಗಿ ರಸ್ತೆ ಬದಿ ನಿಂತಿದ್ದ ಹಸುವಿಗೆ ಇಂಜೆಕ್ಷನ್ ನೀಡುತ್ತಿದ್ದಳು. ನಾವು ಹತ್ತಿರ ಹೋಗುತ್ತಿದ್ದಂತೆ ಆಕೆ ತಪ್ಪಿಸಿಕೊಳ್ಳಲು ನೋಡಿದಳು. ಅಲ್ಲದೇ ನಮಗೇ ಬೈಯುವುದಕ್ಕೆ ಶುರು ಮಾಡಿದಳು. ನಾವು ಈಗ ಪೊಲೀಸರಿಗೆ ಬರಲು ಹೇಳಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ.

ವೀಡಿಯೋ ವೈರಲ್ ಆಗ್ತಿದ್ದಂತೆ ಭಾರಿ ಆಕ್ರೋಶ:

ವೀಡಿಯೋದಲ್ಲಿ ತಪ್ಪಿಸಿಕೊಳ್ಳಲು ಮುಂದಾದ ಯುವತಿಯನ್ನು ಯುವಕನೋರ್ವ ಕೈಯಲ್ಲಿ ಹಿಡಿದುಕೊಂಡಿರುವುದನ್ನು ಕೇಳಬಹುದು. ಇತ್ತ ಯುವತಿ ಬೊಬ್ಬೆ ಹೊಡೆಯುತ್ತಾ ಅವರಿಂದ ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸುತ್ತಾ ಇವರು ನನ್ನ ಹಿಂದೆ ಬಿದ್ದಿದ್ದಾರೆ ಎಂದು ಬೊಬ್ಬೆ ಹೊಡೆಯುವುವು ವೀಡಿಯೋದಲ್ಲಿ ಸೆರೆಯಾಗಿದೆ. ಇವರು ಇಂಜೆಕ್ಷನ್ ಕೊಟ್ಟು ಹೋಗುತ್ತಾರೆ ಅವರು ರಾತ್ರಿ ಬಂದು ಈ ಹಸುಗಳನ್ನು ಎತ್ತಿಕೊಂಡು ಗಾಡಿಗೆ ಹಾಕಿ ತೆಗೆದುಕೊಂಡು ಹೋಗುತ್ತಾರೆ ಎಂದು ಅವರು ವೀಡಿಯೋದಲ್ಲಿ ಹೇಳುವುದನ್ನು ಕೇಳಬಹುದು.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅನೇಕರು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಆಕೆ ಚುಚ್ಚಿದಂತಹ ಇಂಜೆಕ್ಷನ್ ಯಾವುದು ಎಂದು ಪತ್ತೆ ಮಾಡಬೇಕಿತ್ತು ಎಂದು ಕೆಲವರು ಆಗ್ರಹಿಸಿದ್ದಾರೆ. ಇದೊಂದು ನಿದ್ರೆ ಬರುವ ಇಂಜೆಕ್ಷನ್ ಆಗಿರಬಹುದು. ರಾತ್ರಿಯ ಹೊತ್ತಿಗೆ, ಹಸುಗಳು ಗಾಢ ನಿದ್ರೆಯಲ್ಲಿರುತ್ತವೆ ಈ ವೇಳೆ ಯಾರೂ ನೋಡದಿರುವಾಗ ಅವುಗಳನ್ನು ಎತ್ತಿಕೊಂಡು ಹಣಕ್ಕಾಗಿ ಕಸಾಯಿಖಾನೆಗಳಿಗೆ ಮಾರಾಟ ಮಾಡಬಹುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಹಸುಗಳು ರೋಗಗಳಿಂದ ಸಾವಿಗೀಡಾಗುತ್ತಿವೆ. ಅದರ ಹಿಂದೆ ಇವರ ಕೃತ್ಯವಿರಬಹುದೇ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 15 ಕೋಟಿ ಮೌಲ್ಯದ ಬ್ಯಾಗ್ ಹಿಡ್ಕೊಂಡು ಓಡಾಡಿದ ನೀತಾ ಅಂಬಾನಿ: ಅಂಥಾ ವಿಶೇಷತೆ ಏನಿದೆ ಈ ಬ್ಯಾಗಲ್ಲಿ...
ಇದನ್ನೂ ಓದಿ: ಗಾಜಾದಲ್ಲಿ ಯುದ್ಧ ನಿಂತ ಮೇಲೆ ಪಾಕಿಸ್ತಾನದಲ್ಲಿ ಪ್ಯಾಲೇಸ್ತೀನ್‌ಗಾಗಿ ಪ್ರತಿಭಟನೆ: ಹಲವರು ಬಲಿ

View post on Instagram