MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಟೆಸ್ಟ್‌ನಂತೆ ಐಪಿಎಲ್‌ಗೂ ಗುಡ್‌ ಬೈ ಹೇಳ್ತಾರಾ ವಿರಾಟ್ ಕೊಹ್ಲಿ? ಏನಿದು ಹೊಸ ಬೆಳವಣಿಗೆ?

ಟೆಸ್ಟ್‌ನಂತೆ ಐಪಿಎಲ್‌ಗೂ ಗುಡ್‌ ಬೈ ಹೇಳ್ತಾರಾ ವಿರಾಟ್ ಕೊಹ್ಲಿ? ಏನಿದು ಹೊಸ ಬೆಳವಣಿಗೆ?

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಐಪಿಎಲ್‌ಗೂ ಗುಡ್ ಬೈ ಹೇಳ್ತಾರಾ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಕುರಿತಾದ ಸತ್ಯಾಸತ್ಯತೆ ಏನು ನೋಡೋಣ ಬನ್ನಿ. 

1 Min read
Author : Naveen Kodase
Published : Oct 13 2025, 02:55 PM IST
Share this Photo Gallery
  • FB
  • TW
  • Linkdin
  • Whatsapp
18
ಹಾಲಿ ಚಾಂಪಿಯನ್ ಆರ್‌ಸಿಬಿ
Image Credit : instagram

ಹಾಲಿ ಚಾಂಪಿಯನ್ ಆರ್‌ಸಿಬಿ

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

28
ಆರ್‌ಸಿಬಿ ತಂಡದಲ್ಲಿ ಮಹತ್ವದ ಬೆಳವಣಿಗೆ
Image Credit : X Handle

ಆರ್‌ಸಿಬಿ ತಂಡದಲ್ಲಿ ಮಹತ್ವದ ಬೆಳವಣಿಗೆ

ಇದಾದ ಬಳಿಕ ಹಲವು ಮಹತ್ವದ ಬೆಳವಣಿಗೆಗಳು ನಡೆದವು. ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ, ಆರ್‌ಸಿಬಿ ತಂಡವೇ ಮಾರಾಟವಾಗಲಿದೆ ಎನ್ನುವಂತಹ ಸುದ್ದಿಗಳು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಸಿವೆ.

Related Articles

Related image1
ಕೊಹ್ಲಿ- ರೋಹಿತ್ 2027ರ ವಿಶ್ವಕಪ್ ಆಡ್ತಾರಾ? ಖಡಕ್ ಉತ್ತರ ಕೊಟ್ಟ ಶುಭ್‌ಮನ್ ಗಿಲ್
Related image2
ಆರ್‌ಸಿಬಿ ಖರೀದಿ ಗಾಸಿಪ್ ಬೆನ್ನಲ್ಲೇ ಮಹತ್ವದ ಸುಳಿವು ಕೊಟ್ಟ ಸಿಇಒ ಆದಾರ್ ಪೂನಾವಾಲ
38
ಐಪಿಎಲ್‌ಗೆ ದಿಢೀರ್ ಗುಡ್ ಬೈ ಹೇಳ್ತಾರಾ ಕೊಹ್ಲಿ?
Image Credit : ANI

ಐಪಿಎಲ್‌ಗೆ ದಿಢೀರ್ ಗುಡ್ ಬೈ ಹೇಳ್ತಾರಾ ಕೊಹ್ಲಿ?

ಇನ್ನು ಇದೆಲ್ಲದರ ನಡುವೆ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದಂತೆ ವಿರಾಟ್ ಕೊಹ್ಲಿ, ಐಪಿಎಲ್‌ಗೂ ವಿದಾಯ ಹೇಳುತ್ತಾರಾ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಇದಕ್ಕೆ ಕಾರಣವಾಗಿದ್ದು, ಓರ್ವ ರಾಷ್ಟ್ರೀಯ ಕ್ರೀಡಾಪತ್ರಕರ್ತರ ಮಾತು.

48
ಸಂಚಲನ ಮೂಡಿಸಿದ ಆರ್‌ಸಿಬಿ ಪತ್ರಕರ್ತನ ಹೇಳಿಕೆ
Image Credit : ANI

ಸಂಚಲನ ಮೂಡಿಸಿದ ಆರ್‌ಸಿಬಿ ಪತ್ರಕರ್ತನ ಹೇಳಿಕೆ

ರೇವ್ ಸ್ಪೋರ್ಟ್ಸ್‌ ಕ್ರೀಡಾ ಪತ್ರಕರ್ತ ರೋಹಿತ್ ಜುಗಲನ್, ವಿರಾಟ್ ಕೊಹ್ಲಿ, '2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿಯ ಪ್ರಮುಖ ಬ್ರ್ಯಾಂಡ್‌ ಜತೆಗಿನ ಕಾಂಟ್ರ್ಯಾಕ್ಟ್ ರಿನ್ಯೂ ಮಾಡಿಲ್ಲ' ಎಂದಿರುವುದು ಸಂಚಲನ ಮೂಡಿಸಿದೆ.

58
ಕೊಹ್ಲಿ ಐಪಿಎಲ್‌ಗೆ ಗುಡ್‌ ಬೈ ಹೇಳುವುದು ಗಾಳಿಸುದ್ದಿಯಷ್ಟೇ
Image Credit : our own

ಕೊಹ್ಲಿ ಐಪಿಎಲ್‌ಗೆ ಗುಡ್‌ ಬೈ ಹೇಳುವುದು ಗಾಳಿಸುದ್ದಿಯಷ್ಟೇ

ಹೀಗಂದ ಮಾತ್ರಕ್ಕೆ ವಿರಾಟ್ ಕೊಹ್ಲಿ ಐಪಿಎಲ್‌ಗೆ ವಿದಾಯ ಹೇಳುತ್ತಾರೆ ಎಂದರ್ಥವಲ್ಲ. ಆರ್‌ಸಿಬಿ ಜತೆಗಿನ ಬ್ರ್ಯಾಂಡ್‌ ಜತೆಗಿನ ಒಪ್ಪಂದವನ್ನು ಮಾತ್ರ ನವೀಕರಿಸಿಲ್ಲ. ಆರ್‌ಸಿಬಿಯಾಗಲಿ ಅಥವಾ ವಿರಾಟ್ ಕೊಹ್ಲಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

68
18ನೇ ಆವೃತ್ತಿಯಲ್ಲಿ ಆರ್‌ಸಿಬಿ ಬ್ಯಾಟಿಂಗ್ ಬೆನ್ನೆಲುಬು ಕೊಹ್ಲಿ
Image Credit : Twitter

18ನೇ ಆವೃತ್ತಿಯಲ್ಲಿ ಆರ್‌ಸಿಬಿ ಬ್ಯಾಟಿಂಗ್ ಬೆನ್ನೆಲುಬು ಕೊಹ್ಲಿ

18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಚೊಚ್ಚಲ ಟ್ರೋಫಿ ಜಯಿಸುವಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರವಹಿಸಿದ್ದರು. ಆರ್‌ಸಿಬಿ ಪರ ಕೊಹ್ಲಿ 15 ಪಂದ್ಯಗಳನ್ನಾಡಿ 54.75ರ ಬ್ಯಾಟಿಂಗ್ ಸರಾಸರಿಯಲ್ಲಿ 8 ಅರ್ಧಶತಕ ಸಹಿತ 657 ರನ್ ಸಿಡಿಸಿದ್ದರು.

78
ಐಪಿಎಲ್ ಸಾರ್ವಕಾಲಿಕ ಗರಿಷ್ಠ ರನ್ ಸರದಾರ
Image Credit : our own

ಐಪಿಎಲ್ ಸಾರ್ವಕಾಲಿಕ ಗರಿಷ್ಠ ರನ್ ಸರದಾರ

ಇನ್ನು ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ ಆರ್‌ಸಿಬಿ ಪರ 267 ಪಂದ್ಯಗಳನ್ನಾಡಿ 39.54ರ ಬ್ಯಾಟಿಂಗ್ ಸರಾಸರಿಯಲ್ಲಿ 8 ಶತಕ ಹಾಗೂ 63 ಅರ್ಧಶತಕ ಸಹಿತ 8,661 ರನ್ ಬಾರಿಸಿದ್ದಾರೆ.

88
18 ಸೀಸನ್ ಒಂದೇ ಫ್ರಾಂಚೈಸಿ ಪ್ರತಿನಿಧಿಸಿರುವ ಕೊಹ್ಲಿ
Image Credit : Virat Kohli Instagram

18 ಸೀಸನ್ ಒಂದೇ ಫ್ರಾಂಚೈಸಿ ಪ್ರತಿನಿಧಿಸಿರುವ ಕೊಹ್ಲಿ

ಸತತ 18 ಸೀಸನ್ ಒಂದೇ ಐಪಿಎಲ್ ತಂಡವನ್ನು ಪ್ರತಿನಿಧಿಸಿದ ಏಕೈಕ ಬ್ಯಾಟರ್ ಎನ್ನುವ ಅಪರೂಪದ ಹೆಗ್ಗಳಿಕೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಆರ್‌ಸಿಬಿ
ವಿರಾಟ್ ಕೊಹ್ಲಿ

Latest Videos
Recommended Stories
Recommended image1
ಬಹುಕಾಲದ ಗೆಳತಿ ಸೋಫಿ ಜೊತೆ ಶಿಖರ್ ಧವನ್ ಅದ್ಧೂರಿ ಮದುವೆ, ಹಲವರು ಕ್ರಿಕೆಟಿಗರು ಭಾಗಿ
Recommended image2
ಅಭಿಷೇಕ್ ಶರ್ಮಾ ಬದಲು ಟೀಂ ಇಂಡಿಯಾ ಸೇರಿಕೊಳ್ತಾರಾ ಸಂಜು ಸ್ಯಾಮ್ಸನ್? ಕ್ಯಾಪ್ಟನ್ ಉತ್ತರ
Recommended image3
ಟೀಂ ಇಂಡಿಯಾಗೆ ಎಂಟ್ರಿ ಕೊಡೋಕೆ ಭರ್ಜರಿ ತಯಾರಿ; ಚಿಕನ್, ಮಟನ್ ಬಿಟ್ಟ ವೈಭವ್ ಸೂರ್ಯವಂಶಿ!
Related Stories
Recommended image1
ಕೊಹ್ಲಿ- ರೋಹಿತ್ 2027ರ ವಿಶ್ವಕಪ್ ಆಡ್ತಾರಾ? ಖಡಕ್ ಉತ್ತರ ಕೊಟ್ಟ ಶುಭ್‌ಮನ್ ಗಿಲ್
Recommended image2
ಆರ್‌ಸಿಬಿ ಖರೀದಿ ಗಾಸಿಪ್ ಬೆನ್ನಲ್ಲೇ ಮಹತ್ವದ ಸುಳಿವು ಕೊಟ್ಟ ಸಿಇಒ ಆದಾರ್ ಪೂನಾವಾಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved