Published : Dec 02, 2025, 06:55 AM ISTUpdated : Dec 02, 2025, 11:16 PM IST

India Latest News Live: ಡಿ.4ರಂದು ಅಪರೂಪದ 'ಶೀತಲ ಚಂದ್ರ'ನ ದರ್ಶನ - ಯಾವ ರಾಶಿಯ ಮೇಲೆ ಏನು ಪ್ರಭಾವ? ಇಲ್ಲಿದೆ ನೋಡಿ

ಸಾರಾಂಶ

ನವದೆಹಲಿ : ‘ವಿರೋಧ ಪಕ್ಷಗಳು ಸಂಸತ್ತನ್ನು ಸೋಲಿನ ಹತಾಶೆಯನ್ನು ಹೊರಹಾಕುವ ವೇದಿಕೆ ಮಾಡಿಕೊಂಡಿವೆ. ಅದರ ತಾಲೀಮನ್ನು ಅವು ಸದನದಲ್ಲಿ ಪ್ರದರ್ಶಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನವು ರಾಜಕೀಯ ನಾಟಕಗಳಿಗೆ ವೇದಿಕೆಯಾಗಬಾರದು, ಬದಲಾಗಿ ರಚನಾತ್ಮಕ ಮತ್ತು ಫಲಿತಾಂಶ ಆಧಾರಿತ ಚರ್ಚೆಗೆ ವೇದಿಕೆಯಾಗಬೇಕು. ಅವರು ಹತಾಶೆಯಿಂದ ಹೊರಬಂದು ತಮ್ಮ ತಂತ್ರವನ್ನು ಬದಲಾಯಿಸಬೇಕು. ನಾನು ಅವರಿಗೆ ಕೆಲವು ಸಲಹೆಗಳನ್ನು ನೀಡಲು ಸಿದ್ಧ’ ಎಂದರು.

ಬಿಹಾರ ಚುನಾವಣೆಯಲ್ಲಿ ವಿಪಕ್ಷಗಳ ಸೋಲನ್ನು ಉಲ್ಲೇಖಿಸಿದ ಅವರು, ‘ಚುನಾವಣಾ ಸೋಲಿನಿಂದ ವಿರೋಧ ಪಕ್ಷಗಳು ಕಂಗಾಲಾಗಿವೆ ಮತ್ತು ವೈಫಲ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಕುಟುಕಿದರು.

11:16 PM (IST) Dec 02

ಡಿ.4ರಂದು ಅಪರೂಪದ 'ಶೀತಲ ಚಂದ್ರ'ನ ದರ್ಶನ - ಯಾವ ರಾಶಿಯ ಮೇಲೆ ಏನು ಪ್ರಭಾವ? ಇಲ್ಲಿದೆ ನೋಡಿ

ಡಿಸೆಂಬರ್ 4 ರಂದು ವರ್ಷದ ಕೊನೆಯ ಹುಣ್ಣಿಮೆಯಾದ ಶೀತಲ ಚಂದ್ರನ ದರ್ಶನವಾಗಲಿದೆ. ಇದನ್ನು "ದೀರ್ಘ ರಾತ್ರಿ ಚಂದ್ರ" ಎಂದೂ ಕರೆಯುತ್ತಾರೆ, ಇದು ಚಳಿಗಾಲದ ಆರಂಭವನ್ನು ಸೂಚಿಸುತ್ತದೆ. ಈ ಅಪರೂಪದ ಹುಣ್ಣಿಮೆಯು ಮೇಷದಿಂದ ಮೀನದವರೆಗಿನ 12 ರಾಶಿಗಳ ಮೇಲೆ ಬೀರಲಿರುವ ಪರಿಣಾಮಗಳನ್ನು ಈ ಲೇಖನ ವಿವರಿಸುತ್ತದೆ.
Read Full Story

10:32 PM (IST) Dec 02

ಭಾರತಕ್ಕೆ ಬರುವ ಮುನ್ನ ತಮ್ಮ ಅಜೆಂಡಾ ತಿಳಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌!

ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿಗೂ ಮುನ್ನ ತಮ್ಮ ಕಾರ್ಯಸೂಚಿಯನ್ನು ಸ್ಪಷ್ಟಪಡಿಸಿದ್ದಾರೆ. ಆಮದು, ವ್ಯಾಪಾರ ಮತ್ತು ಆರ್ಥಿಕ ಸಹಕಾರದ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿವರವಾಗಿ ಚರ್ಚಿಸುವುದಾಗಿ ಅವರು ಹೇಳಿದ್ದಾರೆ. ಪಾಶ್ಚಿಮಾತ್ಯ ದೇಶಗಳ ವಿರುದ್ಧವೂ ಪುಟಿನ್ ಆರೋಪಗಳನ್ನು ಮಾಡಿದ್ದಾರೆ.

 

Read Full Story

09:50 PM (IST) Dec 02

ಕಾಂಗ್ರೆಸ್‌ಗೆ ಕೈತಪ್ಪುತ್ತಾ ಮತ್ತೊಂದು ರಾಜ್ಯ, ಎನ್‌ಡಿಎ ಜೊತೆ ಕೈಜೋಡಿಸಲು ಮುಂದಾದ ಜಾರ್ಖಂಡ್‌ ಸಿಎಂ?

Jharkhand CM Hemant Soren & JMM May Join NDA After High-Level Meetings with BJP ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಹಿರಿಯ ಬಿಜೆಪಿ ನಾಯಕರ ನಡುವಿನ ಹಿಮ್ಮುಖ ಸಭೆಗಳ ವರದಿಗಳು ಜಾರ್ಖಂಡ್‌ನಲ್ಲಿ ಪ್ರಮುಖ ಅಧಿಕಾರ ಬದಲಾವಣೆಯ ಊಹಾಪೋಹಗಳಿಗೆ ಕಾರಣವಾಗಿವೆ.

Read Full Story

08:59 PM (IST) Dec 02

ಸರಾಸರಿ ಮಾಸಿಕ ವೇತನ - ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ

ಫೋರ್ಬ್ಸ್ ಅಡ್ವೈಸರ್‌ ಇಂಡಿಯಾ ವರದಿಯ ಪ್ರಕಾರ, ಭಾರತದ ಸರಾಸರಿ ಮಾಸಿಕ ವೇತನ ₹28,000 ಆಗಿದೆ. ದೆಹಲಿ ₹35,000 ದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ₹33,000 ದೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಿಹಾರ, ಅರುಣಾಚಲ ಪ್ರದೇಶದಂತಹ ರಾಜ್ಯಗಳು ಅತಿ ಕಡಿಮೆ ವೇತನ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿವೆ.
Read Full Story

08:12 PM (IST) Dec 02

ಡಿ.07ಕ್ಕೆ ಸ್ಮೃತಿ ಮಂಧನಾ ಮದುವೆ ಪೋಸ್ಟ್‌ಗೆ ಸಹೋದರ ಸ್ಪಷ್ಟನೆ, ಏನಿದು ಹೊಸ ಬಾಂಬ್

ಡಿ.07ಕ್ಕೆ ಸ್ಮೃತಿ ಮಂಧನಾ ಮದುವೆ ಪೋಸ್ಟ್‌ಗೆ ಸಹೋದರ ಸ್ಪಷ್ಟನೆ, ಏನಿದು ಹೊಸ ಬಾಂಬ್, ಪಲಾಶ್ ಮುಚ್ಚಾಲ್ ಹಾಗೂ ಮಂಧನಾ ಮದುವೆ ಬಹುತೇಕ ರದ್ದಾಗಿದೆ ಎಂಬ ಮಾತುಗಳ ನಡುವೆ ಡಿಸೆಂಬರ್ 7ಕ್ಕೆ ಹೊಸ ದಿನಾಂಕ ಫಿಕ್ಸ್ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.

Read Full Story

08:02 PM (IST) Dec 02

ಸ್ನೇಹಿತರ ದೊಡ್ಡತನದಿಂದ ಮರೆಯಲಾರದ ಕ್ಷಣವಾಗಿ ಬದಲಾಯ್ತು ಬಡ ಯುವಕನ ಮದುವೆ

ಉತ್ತರಪ್ರದೇಶದಲ್ಲೊಂದು ವಿಶೇಷ ಮದುವೆ ನಡೆದಿದೆ. ಆರ್ಥಿಕ ಸಂಕಷ್ಟದಿಂದಾಗಿ ಕಂಗೆಟ್ಟಿದ್ದ ಯುವಕನೋರ್ವನ ಮದುವೆಯಲ್ಲಿ ಸ್ನೇಹಿತರು ದೊಡ್ಡತನ ಮೆರೆದಿದ್ದಾರೆ.

Read Full Story

07:32 PM (IST) Dec 02

ತನ್ನ ಜೀವಿತದ 3.4 ಕೋಟಿ ರೂಪಾಯಿ ಉಳಿತಾಯದ ಹಣ ಏಮ್ಸ್‌ಗೆ ದಾನ ಮಾಡಿದ 100 ವರ್ಷದ ವೈದ್ಯೆ!

100-Year-Old Doctor Donates ₹3.4 Crore Life Savings to AIIMS Bhubaneswarತಮ್ಮ 100ನೇ ಜನ್ಮದಿನದಂದು, ಒಡಿಶಾದ ಹಿರಿಯ ವೈದ್ಯೆ ಡಾ.ಕೆ.ಲಕ್ಷ್ಮೀಬಾಯಿ ಅವರು ತಮ್ಮ ಜೀವಮಾನದ ಉಳಿತಾಯವಾದ 3.4 ಕೋಟಿ ರೂಪಾಯಿಗಳನ್ನು ಭುವನೇಶ್ವರದ ಏಮ್ಸ್‌ ಆಸ್ಪತ್ರೆಗೆ ದಾನ ಮಾಡಿದ್ದಾರೆ. 

Read Full Story

07:15 PM (IST) Dec 02

ನುಸುಳುಕೋರ ರೋಹಿಂಗ್ಯ ಮುಸ್ಲಿಮರಿಗೆ ಭವ್ಯ ಸ್ವಾಗತ ಕೊಡಬೇಕೆ? ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಚಾಟಿ

ನುಸುಳುಕೋರ ರೋಹಿಂಗ್ಯ ಮುಸ್ಲಿಮರಿಗೆ ಭವ್ಯ ಸ್ವಾಗತ ಕೊಡಬೇಕೆ? ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಅಕ್ರಮವಾಗಿ ಭಾರತಕ್ಕೆ ಬರುತ್ತಾರೆ, ಅವರ ಮಕ್ಕಳಿಗೆ ಶಿಕ್ಷಣ, ಬೇಕು, ಆಹಾರ ಬೇಕು ಎಂದರೆ ಕೊಡಲು ಸಾಧ್ಯವೇ? ಎಂದು ಸುಪ್ರೀಂ ಗರಂ ಆಗಿದೆ.

 

Read Full Story

07:03 PM (IST) Dec 02

14ನೇ ವಯಸ್ಸಿಗೆ 3 ಶತಕ! ಹೊಸ ಇತಿಹಾಸ ಬರೆದ ವೈಭವ್ ಸೂರ್ಯವಂಶಿ!

14 ವರ್ಷದ ವೈಭವ್ ಸೂರ್ಯವಂಶಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (SMAT) ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾನೆ. ಬಿಹಾರ ಪರ 108 ರನ್ (ಔಟಾಗದೆ) ಗಳಿಸಿ ದಾಖಲೆ ಬರೆದಿದ್ದಾನೆ.

Read Full Story

06:26 PM (IST) Dec 02

ಬ್ಲಿಂಕಿಟ್‌ಗಿಂತ ಫಾಸ್ಟ್, ಮದುವೆಯಾಗಿ ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಡಿವೋರ್ಸ್ ಕೊಟ್ಟ ಪತ್ನಿ

ಬ್ಲಿಂಕಿಟ್‌ಗಿಂತ ಫಾಸ್ಟ್, ಮದುವೆಯಾಗಿ ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಡಿವೋರ್ಸ್ ಕೊಟ್ಟ ಪತ್ನಿ, ಹಲವು ತಿಂಗಳಿನಿಂದ ಮದುವೆ ತಯಾರಿ ನಡೆದಿದೆ. ಅದ್ಧೂರಿಯಾಗಿ ಮದವೆಯೂ ಮುಗಿದಿದೆ. ಮಂಟಪದಿಂದ ಮದುವೆ ಮನೆಗೆ ಬಂದ 20 ನಿಮಿಷದಲ್ಲಿ ಎಲ್ಲವೂ ಉಲ್ಟಾ ಆಗಿದೆ.

 

Read Full Story

06:14 PM (IST) Dec 02

ಒಂದ್ವೇಳೆ ಗೌತಮ್ ಗಂಭೀರ್ ಸ್ಥಾನದಲ್ಲಿ ನಾನಿದ್ದಿದ್ದರೇ..? ಅಚ್ಚರಿ ಹೇಳಿಕೆ ಕೊಟ್ಟ ಮಾಜಿ ಕೋಚ್ ರವಿಶಾಸ್ತ್ರಿ!

ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ತಂಡವು ಟೆಸ್ಟ್ ಸರಣಿಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ವೈಟ್‌ವಾಷ್ ಸೋಲಿನ ಬಳಿಕ, ಮಾಜಿ ಕೋಚ್ ರವಿಶಾಸ್ತ್ರಿ ಗಂಭೀರ್ ಹಾಗೂ ಆಟಗಾರರ ಮೇಲೆ ಕಿಡಿಕಾರಿದ್ದಾರೆ. 

Read Full Story

06:08 PM (IST) Dec 02

ಆ*ತ್ಮಹತ್ಯೆಗೆ ಶರಣಾದ ಐಎಎಸ್‌ ಅಧಿಕಾರಿಯ ಪುತ್ರಿ, ಗಂಡನ ಮೇಲೆ ಆರೋಪ ಮಾಡಿದ ಕುಟುಂಬ

ಹಿರಿಯ ಐಎಎಸ್‌ ಅಧಿಕಾರಿಯ ಪುತ್ರಿ ಮಾಧುರಿ ಸಾಹಿತಿಬಾಯಿ, ಪತಿಯಿಂದ ವರದಕ್ಷಿಣೆ ಕಿರುಕುಳ ತಾಳಲಾರದೆ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವಿವಾಹವಾದ ಕೆಲವೇ ತಿಂಗಳುಗಳಲ್ಲಿ ಪತಿ ರಾಜೇಶ್ ನಾಯ್ಡು ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ.

Read Full Story

06:08 PM (IST) Dec 02

2029ರೊಳಗೆ ಭಾರತದ ನೌಕಾಪಡೆ ಮಡಿಲು ಸೇರಲಿದೆ ರಾಫೆಲ್ ಎಂ ಫೈಟರ್ ಜೆಟ್

ಭಾರತೀಯ ನೌಕಾಪಡೆಗೆ 2029ರೊಳಗೆ 26 ರಫೇಲ್-ಎಂ ಫೈಟರ್ ಜೆಟ್‌ಗಳು  ಸೇರ್ಪಡೆಯಾಗಲಿವೆ. ಇವು ಐಎನ್ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್‌ನಿಂದ ಕಾರ್ಯನಿರ್ವಹಿಸಲಿವೆ. ಸ್ವದೇಶಿ TEDBF ಯುದ್ಧವಿಮಾನ ಸಿದ್ಧವಾಗುವವರೆಗೆ ಇದು ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

Read Full Story

05:49 PM (IST) Dec 02

ಮುನ್ನಾರ್ ಪಂಚಾಯತ್ ಚುನಾವಣೆಗೆ ಸೋನಿಯಾ ಗಾಂಧಿಗೆ ಟಿಕೆಟ್ ಕೊಟ್ಟ ಬಿಜೆಪಿ, ಸಂಕಷ್ಟದಲ್ಲಿ ಕಾಂಗ್ರೆಸ್

ಮುನ್ನಾರ್ ಪಂಚಾಯತ್ ಚುನಾವಣೆಗೆ ಸೋನಿಯಾ ಗಾಂಧಿಗೆ ಟಿಕೆಟ್ ಕೊಟ್ಟ ಬಿಜೆಪಿ, ಸಂಕಷ್ಟದಲ್ಲಿ ಕಾಂಗ್ರೆಸ್, ಇಷ್ಟೇ ಅಲ್ಲ ದೇಶಾದ್ಯಂತ ಇದು ಭಾರಿ ಸುದ್ದಿಯಾಗಿದೆ. ಸೋನಿಯಾ ಗಾಂಧಿಗೆ ಬಿಜೆಪಿ ಟಿಕೆಟ್ ಕೊಡಲು ಹೇಗೆ ಸಾಧ್ಯ? ಎಡವಟ್ಟೇ ಅಥವಾ ಹೈಡ್ರಾಮವೇ?

Read Full Story

05:20 PM (IST) Dec 02

ಲೈಸೆನ್ಸ್ ಎಕ್ಸ್‌ಫೈರಿ ಆಗಿದ್ರು 8 ಬಾರಿ ಹಾರಾಟ ನಡೆಸಿದ ಏರ್ ಇಂಡಿಯಾದ ವಿಮಾನ - ತನಿಖೆಗೆ ಡಿಜಿಸಿಎ ಆದೇಶ

ಲೈಸೆನ್ಸ್ ಅವಧಿ ಮೀರಿದ ನಂತರವೂ ಏರ್ ಇಂಡಿಯಾದ ಎ320 ವಿಮಾನವೊಂದು 8 ಬಾರಿ ಹಾರಾಟ ನಡೆಸಿ ಪ್ರಯಾಣಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿದ ಘಟನೆ ನಡೆದಿದೆ. ಈ ಗಂಭೀರ ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ.

Read Full Story

04:54 PM (IST) Dec 02

ಪ್ರಧಾನಮಂತ್ರಿ ಕಚೇರಿಗೆ ಇನ್ನು ಹೊಸ ವಿಳಾಸ, ಕಟ್ಟಡದ ಹೆಸರು ಸೇವಾ ತೀರ್ಥ!

Prime Minister Office New Building to be Named Sewa Teerth Under Central Vista Project ಸೇವಾ ಮನೋಭಾವವನ್ನು ಪ್ರತಿಬಿಂಬಿಸಲು ಮತ್ತು ರಾಷ್ಟ್ರೀಯ ಆದ್ಯತೆಗಳನ್ನು ರೂಪಿಸಲು ವಿನ್ಯಾಸಗೊಳಿಸಿದ ಕೆಲಸ ಸ್ಥಳ ಎನ್ನುವ ಅರ್ಥವನ್ನು ಸೇವಾ ತೀರ್ಥ ಎನ್ನುವ ಹೆಸರು ಹೊಂದಿದೆ.

Read Full Story

04:39 PM (IST) Dec 02

ಪ್ರಧಾನ ಮಂತ್ರಿ ಕಾರ್ಯಾಲಯ ಹೊಸ ಕಟ್ಟಡಕ್ಕೆ ಶಿಫ್ಟ್, ಸೇವಾ ತೀರ್ಥ್ ಆಫೀಸ್‌ನಿಂದ ಕೆಲಸ

ಪ್ರಧಾನ ಮಂತ್ರಿ ಕಾರ್ಯಾಲಯ ಹೊಸ ಕಟ್ಟಡಕ್ಕೆ ಶಿಫ್ಟ್, ಸೇವಾ ತೀರ್ಥ್ ಆಫೀಸ್‌ನಿಂದ ಕೆಲಸ, ಹೊಸ ಕಟ್ಟಡಕ್ಕೆ ಕಚೇರಿ ಸ್ಥಳಾಂತರ ಮಾತ್ರವಲ್ಲ ಪ್ರಧಾನಿ, ರಾಜ್ಯಪಾಲರು ಸೇರಿದಂತೆ ಹಲವು ಪ್ರಮುಖ ಕಚೇರಿಗಳ ಹೆಸರು ಮರುನಾಮಕರಣ ಮಾಡಲಾಗಿದೆ.

Read Full Story

04:11 PM (IST) Dec 02

ದುಬೈನಿಂದ ಬರ್ತಿದ್ದ ವಿಮಾನದಲ್ಲಿ ಗಗನಸಖಿಗೆ ಕಿರುಕುಳ - ಕೇರಳದ ಸಾಫ್ಟ್‌ವೇರ್ ಇಂಜಿನಿಯರ್ ಅರೆಸ್ಟ್

ದುಬೈನಿಂದ ಹೈದರಾಬಾದ್‌ಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಾಫ್ಟ್‌ವೇರ್ ಎಂಜಿನಿಯರ್‌ ಓರ್ವನನ್ನು ಬಂಧಿಸಲಾಗಿದೆ.

Read Full Story

03:59 PM (IST) Dec 02

ಐಪಿಎಲ್ ಮಿನಿ ಹರಾಜಿಗೂ ಮುನ್ನ ಶತಕ ಸಿಡಿಸಿ ಅಬ್ಬರಿಸಿದ ದೇವದತ್ ಪಡಿಕ್ಕಲ್‌; ಕರ್ನಾಟಕಕ್ಕೆ ಶರಣಾದ ತಮಿಳುನಾಡು

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ, ಕನ್ನಡಿಗ ದೇವದತ್ ಪಡಿಕ್ಕಲ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಅವರ ಅಜೇಯ 102 ರನ್‌ಗಳ ನೆರವಿನಿಂದ ಕರ್ನಾಟಕ ತಂಡವು ತಮಿಳುನಾಡು ವಿರುದ್ಧ 146 ರನ್‌ಗಳ ಭರ್ಜರಿ ಜಯ ಸಾಧಿಸಿತು.  

Read Full Story

03:09 PM (IST) Dec 02

15 ವರ್ಷದ ವಿದ್ಯಾರ್ಥಿ ಜೊತೆ ನಿರಂತರ ರಿಲೇಷನ್‌ಶಿಪ್ - ಮಹಿಳಾ ಶಿಕ್ಷಕಿ ಅರೆಸ್ಟ್

ಆಸ್ಟ್ರೇಲಿಯಾದಲ್ಲಿ 37 ವರ್ಷದ ಪ್ರೌಢಶಾಲಾ ಶಿಕ್ಷಕಿಯೊಬ್ಬರು, 15 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಡಿಟೇಲ್ ಸ್ಟೋರಿ ಇಲ್ಲಿದೆ.

Read Full Story

02:41 PM (IST) Dec 02

Actress Life - ಗರ್ಭಿಣಿಯಾಗಿದ್ದಾಗಲೇ ಎರಡನೇ ಮದುವೆಯಾದ ನಟಿ; ಕನ್ನಡ ಸಿನಿಮಾದಲ್ಲಿಯೂ ನಟನೆ

ದಕ್ಷಿಣ ಭಾರತದ ಖ್ಯಾತ ನಟಿ ವೈಯಕ್ತಿಕ ಬದುಕಿನ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ. ಅವರ ಎರಡನೇ ಮದುವೆ, ಗರ್ಭಿಣಿಯಾಗಿದ್ದಾಗಿನ ವದಂತಿಗಳು ಮತ್ತು ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ ಕುರಿತು ಇದರಲ್ಲಿ ವಿವರಿಸಲಾಗಿದೆ.

Read Full Story

02:10 PM (IST) Dec 02

ನಮ್ಮ ಪೋಷಕರು ಮದ್ವೆ ಮಾಡೋದಾಗಿ ನಂಬಿಸಿ ದ್ರೋಹ ಮಾಡಿದ್ರು - ಪ್ರಿಯಕರನ ಶವವನ್ನೇ ಮದ್ವೆಯಾದ ಯುವತಿಯ ಗೋಳು

ಮಹಾರಾಷ್ಟ್ರದಲ್ಲಿ, ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ತಂದೆ ಮತ್ತು ಸಹೋದರರು ಆತನನ್ನು ಕೊಲೆ ಮಾಡಿದ ಘಟನೆ ನಡೆದಿತ್ತು. ಆದರೆ ಕೊಲೆಗೂ ಕೆಲ ತಿಂಗಳು ಮುನ್ನ ಯುವತಿಯ ತಂದೆ ಯುವಕನೊಂದಿಗೆ ನೃತ್ಯ ಮಾಡಿದ್ದ ವೀಡಿಯೋವೊಂದು ವೈರಲ್ ಆಗಿದೆ.

Read Full Story

01:59 PM (IST) Dec 02

ತೊಡೆ ಮುಟ್ತಾರೆ, ತೋಳು ಹಿಡಿತಾರೆ, ಮಹಿಳಾ ಬಾಸ್ ನಡೆ ವಿರುದ್ದ ನೋವು ತೋಡಿಕೊಂಡ ಯುವ ಉದ್ಯೋಗಿ

ತೊಡೆ ಮುಟ್ತಾರೆ, ತೋಳು ಹಿಡಿತಾರೆ, ಮಹಿಳಾ ಬಾಸ್ ನಡೆ ವಿರುದ್ದ ನೋವು ತೋಡಿಕೊಂಡ ಯುವ ಉದ್ಯೋಗಿ , ಪದೇ ಪದೇ ಛೇಂಬರ್‌ಗೆ ಕರೆಯಿಸಿಕೊಂಡು ರಿವ್ಯೂವ್ ಮೀಟಿಂಗ್ ಮಾಡ್ತಾರೆ. ಬಾಸ್‌ಗೆ ಮದುವೆಯಾಗಿದೆ. ಆದರೆ..ಉದ್ಯೋಗಿ ಅಳಲೇನು?

 

Read Full Story

01:05 PM (IST) Dec 02

ಆಕೆಯ ಮನೆ ಮಾರಿ ಸ್ವಂತ ಮನೆ ಖರೀದಿಸಿದ - ಹಣ ಕೇಳಿದ್ದಕ್ಕೆ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ವಿವಾಹಿತ

35 ವರ್ಷದ ವಿವಾಹಿತ ವ್ಯಕ್ತಿಯೊಬ್ಬ ತನ್ನ 44 ವರ್ಷದ ಲಿವ್-ಇನ್ ಸಂಗಾತಿಯನ್ನು ಹಣಕಾಸಿನ ವಿಚಾರವಾಗಿ ಕೊಲೆ ಮಾಡಿದ್ದಾನೆ. ಕೊಲೆಯ ನಂತರ, ತನ್ನ ಪತ್ನಿ ಮತ್ತು ಬಾಮೈದನ ಸಹಾಯದಿಂದ ಶವವನ್ನು ವಿಲೇವಾರಿ ಮಾಡಲು ಮುಂದಾಗಿ ಸಿಕ್ಕಿಬಿದ್ದಿದ್ದಾನೆ. ಡಿಟೇಲ್ ಸ್ಟೋರಿ ಇಲ್ಲಿದೆ.

Read Full Story

12:57 PM (IST) Dec 02

IPL 2026 ಆಟಗಾರರ ಹರಾಜಿನ ಲಿಸ್ಟ್‌ ಫೈನಲ್ - 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರ ಪಟ್ಟಿ ಔಟ್, ಕೇವಲ 2 ಭಾರತೀಯರಿಗೆ ಸ್ಥಾನ!

ಬಹುನಿರೀಕ್ಷಿತ 2026ರ ಐಪಿಎಲ್ ಮಿನಿ ಹರಾಜಿಗೆ 1355 ಆಟಗಾರರು ಹೆಸರು ನೋಂದಾಯಿಸಿದ್ದಾರೆ. ಆಸೀಸ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದ್ದು, 2 ಕೋಟಿ ರುಪಾಯಿ ಮೂಲ ಬೆಲೆಯ ಪಟ್ಟಿಯಲ್ಲಿ ಕೇವಲ ಇಬ್ಬರು ಭಾರತೀಯ ಆಟಗಾರರು ಸ್ಥಾನ ಪಡೆದಿರುವುದು ಅಚ್ಚರಿ ಮೂಡಿಸಿದೆ.
Read Full Story

12:17 PM (IST) Dec 02

ಟಿಸಿಎಸ್ ಮತ್ತೊಂದು ಕರಾಳ ಮುಖ - ಕೆಲಸಕ್ಕೆ ಸೇರಿದ ಮೊದಲ ದಿನವೇ ಉದ್ಯೋಗಿಗೆ ಕಾದಿತ್ತು ಶಾಕ್!

ಟಿಸಿಎಸ್ ನೇಮಕಾತಿ ಪ್ರಕ್ರಿಯೆಯಲ್ಲಿ ತಪ್ಪು ಮಾಹಿತಿ ನೀಡಿ, ಸೇರ್ಪಡೆಯ ದಿನವೇ ಉದ್ಯೋಗಿಯೊಬ್ಬರಿಗೆ ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಆಸ್ಟ್ರೇಲಿಯಾ ಶಿಫ್ಟ್ ಬದಲು ಯುಎಸ್ ಶಿಫ್ಟ್‌ಗೆ ನಿಯೋಜಿಸಿದ್ದನ್ನು ಪ್ರಶ್ನಿಸಿದ್ದಕ್ಕೆ, ಎಚ್‌ಆರ್ ವಿಭಾಗವು ರಾಜೀನಾಮೆಗೆ ಒತ್ತಾಯಿಸಿದೆ.

Read Full Story

12:12 PM (IST) Dec 02

ಮೃಗಾಲಯದ 20 ಅಡಿ ಎತ್ತರದ ತಡೆಬೇಲಿ ಹಾರಿ ಬೋನಿಗಿಳಿದ 19 ವರ್ಷದ ಯುವಕನ ಕತೆ ಮುಗಿಸಿದ ಸಿಂಹ

ಪ್ರಾಣಿ ಪಾಲಕನಾಗುವ ಆಸೆಯಿಂದ ಮೃಗಾಲಯವೊಂದರಲ್ಲಿ ಸಿಂಹದ ಆವರಣಕ್ಕೆ ಪ್ರವೇಶಿಸಿದ 19 ವರ್ಷದ ಯುವಕ ಸಿಂಹಿಣಿಯ ದಾಳಿಗೆ ಬಲಿಯಾಗಿದ್ದಾನೆ. 

Read Full Story

11:36 AM (IST) Dec 02

2026ರ ಐಪಿಎಲ್‌ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಾ? ಇಲ್ಲಿದೆ ನೋಡಿ ಹೊಸ ಅಪ್ಡೇಟ್ಸ್‌

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳು ನಗರದ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಾ ಎನ್ನುವ ಕುತೂಹಲ ಜೋರಾಗಿರುವ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಕ್ರೀಡಾಂಗಣದ ಸುರಕ್ಷತೆ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಕೆಎಸ್‌ಸಿಎಗೆ ನೋಟಿಸ್ ನೀಡಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story

11:20 AM (IST) Dec 02

ಚಿತ್ರಮಂದಿರಗಳಲ್ಲಿ ಸರಸ ಸಲ್ಲಾಪ ಮಾಡೋರೆ ಜೋಕೆ - ಅಶ್ಲೀಲ ಸೈಟ್‌ಗಳಲ್ಲಿ ಕಾಣಿಸ್ತಿದೆ ಥಿಯೇಟರ್‌ಗಳ ರೋಮ್ಯಾನ್ಸ್

ಚಿತ್ರಮಂದಿರಗಳಲ್ಲಿ ಪ್ರೇಮಿಗಳ ಖಾಸಗಿ ಕ್ಷಣಗಳ ಸಿಸಿಟಿವಿ ದೃಶ್ಯಗಳು ಸೋರಿಕೆಯಾಗಿ ಅಶ್ಲೀಲ ತಾಣಗಳಲ್ಲಿ ಮಾರಾಟವಾಗುತ್ತಿವೆ. ಥಿಯೇಟರ್ ಲೋಗೋಗಳಿದ್ದರೂ, ಅಧಿಕಾರಿಗಳು ಈ ಬಗ್ಗೆ ಅರಿವಿಲ್ಲವೆಂದು ಹೇಳಿದ್ದು, ಇದಯ  ಸಾರ್ವಜನಿಕ ಸುರಕ್ಷತೆಗಾಗಿ ಅಳವಡಿಸಿದ ಕ್ಯಾಮೆರಾಗಳ ದುರ್ಬಳಕೆಯ ಆತಂಕ ಮೂಡಿಸಿದೆ.

Read Full Story

10:45 AM (IST) Dec 02

ದಿತ್ವಾ ಚಂಡಮಾರುತ; ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ದಿತ್ವಾ ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ ಮತ್ತು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ಭಾರತ 'ಆಪರೇಷನ್ ಸಾಗರ್ ಬಂಧು' ಮೂಲಕ ನೆರವು ನೀಡುತ್ತಿದೆ.
Read Full Story

10:09 AM (IST) Dec 02

ರೋಹಿತ್-ವಿರಾಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್!

ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡ್ತಾರಾ ಎನ್ನುವ ಪ್ರಶ್ನೆ ಜೋರಾಗಿರುವ ಬೆನ್ನಲ್ಲೇ ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಏನದು ನೋಡೋಣ ಬನ್ನಿ.

Read Full Story

09:35 AM (IST) Dec 02

ರೈಲ್ವೆಯ ಹೊಸ OTP ಯೋಜನೆ, ಪ್ರಯಾಣಿಕರು ಇನ್ಮುಂದೆ ಇದನ್ನು ಮಾಡಲೇಬೇಕು!

ಭಾರತೀಯ ರೈಲ್ವೆಯು ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಡಿಸೆಂಬರ್ 1 ರಿಂದ, ಟಿಕೆಟ್ ಖಚಿತಪಡಿಸಲು ಮೊಬೈಲ್‌ಗೆ ಬರುವ OTP ನಮೂದಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಐಆರ್‌ಸಿಟಿಸಿ ಖಾತೆಗೆ ಆಧಾರ್ ಲಿಂಕ್ ಮಾಡುವುದು ಸಹ ತತ್ಕಾಲ್ ಬುಕಿಂಗ್‌ಗೆ ಅವಶ್ಯಕವಾಗಿದೆ.
Read Full Story

09:33 AM (IST) Dec 02

T10 ಲೀಗ್‌ನಲ್ಲೂ RCB ಆಟಗಾರರದ್ದೇ ಹವಾ; ಮತ್ತೊಂದು ಕಪ್ ಗೆದ್ದ ಕಿಲಾಡಿ ಜೋಡಿ!

ಅಬುಧಾಬಿ T10 ಲೀಗ್‌ನ ಫೈನಲ್ ಪಂದ್ಯದಲ್ಲಿ ಯುಎಇ ಬುಲ್ಸ್ ತಂಡ ಟ್ರೋಫಿ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ತಂಡದ ಬ್ಯಾಟರ್ ಟಿಮ್ ಡೇವಿಡ್ ಕೇವಲ 30 ಎಸೆತಗಳಲ್ಲಿ 98 ರನ್ ಗಳಿಸಿ ತಮ್ಮ ತಂಡವನ್ನು ಚಾಂಪಿಯನ್ ಮಾಡಿದರು.

 

Read Full Story

08:28 AM (IST) Dec 02

Video - 19 ನಿಮಿಷ 34 ಸೆಕೆಂಡ್‌ MMSನ ವೈರಲ್ ಹುಡುಗ ಮೆಟ್ರೋ ನಿಲ್ದಾಣದಲ್ಲಿ ಪ್ರತ್ಯಕ್ಷ!

Viral Boy: ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದ 19 ನಿಮಿಷ 34 ಸೆಕೆಂಡ್‌ಗಳ ಎಂಎಂಎಸ್‌ನಲ್ಲಿ ಕಾಣಿಸಿಕೊಂಡಿದ್ದ ಎನ್ನಲಾದ ಯುವಕ ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾನೆ. ಆತನನ್ನು ಗುರುತಿಸಿದ ಕೆಲವರು ವಿಡಿಯೋ ಮಾಡಿದ್ದು, ಈ ಘಟನೆಯು ನೆಟ್ಟಿಗರ ನಡುವೆ ಚರ್ಚೆಗೆ ಕಾರಣವಾಗಿದೆ.

Read Full Story

More Trending News