ಈ ರಾಶಿಯವರು ತಮ್ಮ ಬಾಳಿನಲ್ಲಿ ಬಲುಬೇಗ ಸೆಕ್ಸ್ ಅನುಭವ ಹೊಂದುತ್ತಾರಂತೆ!

By Suvarna NewsFirst Published Feb 23, 2020, 2:48 PM IST
Highlights

ಇಂಥವರು ತಮ್ಮ ಜೀವನದಲ್ಲಿ ಬೇಗನೇ ಸೆಕ್ಸ್ ಮಾಡ್ತಾರಂತೆ! ಹಾಗಿದ್ರೆ ಯಾರವರು, ತಿಳಿಯೋಣ.

ನೀವು ಮಿಥುನ ಜನ್ಮರಾಶಿಯವರಾ? ಹಾಗಿದ್ದರೆ ನೀವು ಹದಿನೆಂಟನೇ ವರ್ಷಕ್ಕೆ ಕಾಲಿಡುವ ಮುನ್ನವೇ ಒಂದು ಬಾರಿ ಸೆಕ್ಸ್‌ ಮಾಡಿರುತ್ತೀರಿ! ಇದು ತಮಾಷೆಯಾಗಿ ಕೇಳಿಸಬಹುದು. ಆದರೆ ನಿಜ. ಜಾತಕ- ಭವಿಷ್ಯವಾದಿಗಳ ಪ್ರಕಾರ, ಮಿಥುನ ರಾಶಿಗೂ ಸೆಕ್ಸ್‌ಗೂ ತುಂಬಾ ಹತ್ತಿರದ ನಂಟು ಇದೆ. ಮಿಥುನ ಎಂಬ ಹೆಸರೇ ಸೂಚಿಸುವಂತೆ, ಅದು ಎರಡು ಗಂಡು- ಹೆಣ್ಣುಗಳ ಮಿಲನವನ್ನು ಸಂಕೇತಿಸುವಂಥದು. ಸಹಜವಾಗಿಯೇ ಇವರಿಗೆ ಸೆಕ್ಸ್ ಬಗ್ಗೆ ಕುತೂಹಲ ಹಾಗೂ ದಾಹ ಹೆಚ್ಚು. ಜೀವನದಲ್ಲಿ ಬಲುಬೇಗನೆ ಇದರ ಅನುಭವ ನಿಮಗೆ ಆದರೆ ಆಶ್ಚರ್ಯಪಡಬೇಡಿ.

ಮಿಥುನ ಒಂದೇ ಅಲ್ಲ. ಮೇಷ ರಾಶಿ, ಮಕರ, ಕುಂಭ, ವೃಷಭ ರಾಶಿಗಳೂ ಕೂಡ ಲೈಂಗಿಕಾಸಕ್ತಿಯ ವಿಚಾರದಲ್ಲಿ ತುಂಬಾ ಆಕ್ಟಿವ್‌. ಇವರ ಕುತೂಹಲ ಒಮ್ಮೊಮ್ಮೆ ಮೇರೆ ಮೀರಿ ಹರಿದುಬಿಡಬಹುದು. ಅದಕ್ಕೇ ನಿಮ್ಮ ಮಕ್ಕಳು ಈ ರಾಶಿಯವರಾಗಿದ್ದರೆ ಅವರ ಮೇಲೆ ಒಂದು ಕಣ್ಣು ಇಡಬೇಕು. ಇವರು ಬಲು ಬೇಗನೆ ತಮ್ಮ ಶರೀರದ ಆಕಾಂಕ್ಷೆಗಳನ್ನು ತಣಿಸಿಕೊಳ್ಳಲು ಮುಂದಾಗುತ್ತಾರೆ. ಕನಿಷ್ಠ ಪಕ್ಷ ಲೈಂಗಿಕ ಸಾಹಿತ್ಯವನ್ನು ಇವರು ಬೇಗನೆ ನೋಡಬಹುದು ಅಥವಾ ಇಂಟರ್‌ನೆಟ್‌ನಲ್ಲಿ ಪೋರ್ನ್‌ ಕಂಟೆಂಟ್‌ ಅನ್ನು ಬಲುಬೇಗನೆ ನೋಡಬಹುದು. ಇದರಿಂದ ಇವರ ಕುತೂಹಲ, ಚಟುವಟಿಕೆ ಜಾಸ್ತಿಯಾಗಬಹುದು.

28ರ ಯುವತಿಗೆ ವಿಚಿತ್ರ ಕಾಯಿಲೆ, 130ಕ್ಕೂ ಅಧಿಕ ಪುರುಷರೊಂದಿಗೆ ಮಾಡಿದ್ದಾಳೆ ಸೆಕ್ಸ್!.

ಶುಕ್ರವಾರ ಜನಿಸಿದವರು

ವಾರಗಳಲ್ಲೆಲ್ಲ ಶುಕ್ರವಾರ, ಲಕ್ಷ್ಮೀದೇವಿ ಮನೆಗೆ ಬರುವ ವಾರ ಎಂದು ಪ್ರಸಿದ್ಧ. ಹೀಗಾಗಿ ಅದು ಪವಿತ್ರವೂ ಹೌದು. ಆದರೆ ಶುಕ್ರ ಎಂಬುದಕ್ಕೆ ಪುರುಷನ ವೀರ್ಯ ಎಂದೂ ಅರ್ಥವಿದೆ. ಅಂದು ಹುಟ್ಟಿದವರು ಸ್ವಲ್ಪ ಗಡಸು ಸ್ವಭಾವದವರು, ಅವಸರ ಮಾಡುವವರು. ಶ್ರೀಮಂತರಾಗುವ ಸಂಭವ ಹೆಚ್ಚು. ಆದರೆ ಅವರಿಗೇ ಗೊತ್ತಿಲ್ಲದ ಬಾಲ್ಯದಲ್ಲೇ ಲೈಂಗಿಕ ಸಾಹಸಗಳಿಗೆ ಮುಂದಾಗಬಹುದು. ಇದು ಅವರ ತಪ್ಪೇನೂ ಅಲ್ಲ, ಶುಕ್ರವಾರದಂತೆಯೇ ಮಂಗಳವಾರ ಕೂಡ ಇದೇ ಸ್ವಭಾವದ್ದು. ಅಂದು ಜನಿಸಿದವರೂ ಕೂಡ ದೈಹಿಕವಾಗಿ ತುಂಬ ಆಕ್ಟಿವ್‌. ತುಂಬ ದುಡಿಯುತ್ತಾರೆ. ಹಾಗೇ ಮಂಚದ ಮೇಲೂ ತುಂಬ ಸೊಗಸಾಗಿ ಕೆಲಸ ನೆರವೇರಿಸಬಲ್ಲರು.

ಹುಣ್ಣಿಮೆಯಂದು ಜನಿಸಿದವರು

ಹುಣ್ಣಿಮೆಯ ದಿನ ಅಥವಾ ಹುಣ್ಣಿಮೆಯ ಒಂದು ದಿನ ಹಿಂದು ಮುಂದಾಗಿ ಜನಿಸಿದವರು ತಮ್ಮ ದೇಹದ ಲೈಂಗಿಕ ಸಾಮಥ್ರ್ಯದ ಸಂಪೂರ್ಣ ಶೋಧನೆಗೆ ಬಲು ಬೇಗ ಮುಂದಾಗುವುದು ಖಚಿತ. ಹುಣ್ಣಿಮೆಗೂ ಚಂದ್ರನಿಗೂ ಸಮುದ್ರದ ಉಬ್ಬರ ಇಳಿತಗಳಿಗೂ ಸಂಬಂಧವಿದೆ. ಹಾಗೇ ಹುಣ್ಣಿಮೆಗೂ ಮಾನಸಿಕ ಆರೋಗ್ಯಕ್ಕೂ ಸಂಬಂಧ ಇರುವುದು ಮೊದಲಿನಿಂದಲೇ ರುಜುವಾತಾದ ವಿಷಯ. ಚಂದ್ರಮನ ಗುಣ ಹೊಂದಿದವರು ತಮ್ಮ ಮನಸ್ಸನ್ನು ತಮ್ಮನ್ನು ಆಕರ್ಷಿಸಿದವರ ಮುಂದೆ ಬಲು ಬೇಗನೆ ತೆರೆದಿಡುತ್ತಾರೆ. ಹಾಗೇ ದೇಹವನ್ನೂ ಕೂಡ.

ಫೀಲ್ ಫ್ರೀ : ನನ್ನ ಪತ್ನಿಗೆ ಆ ಫೀಲೇ ಬರೋದಿಲ್ಲ, ಏನ್ಮಾಡಲಿ?

ಮುಂಜಾನೆ, ಸಂಜೆ

ಹಗಲು ಅಥವಾ ರಾತ್ರಿ ಜನಿಸಿದವರಿಗಿಂತಲೂ ಬೆಳಗಿನ ಜಾವ ಅಥವಾ ಸಂಜೆಯ ಹೊತ್ತು- ಅಂದರೆ ಸಂಧ್ಯಾಕಾಲದಲ್ಲಿ ಜನಿಸಿದವರು ಸೆಕ್ಸುಯಲೀ ಆಕ್ಟಿವ್‌ ಇರುವ ಸಾಧ್ಯತೆಗಳು ಅಧಿಕ. ಇದು ಯಾಕೆಂದರೆ ಸಂಧ್ಯಾಕಾಲದಲ್ಲಿ ನಡೆಯುವ ಭೂಮಿಯ ಚಟುವಟಿಕೆಗಳ ಸಂಕ್ರಮಣ ಸ್ಥಿತಿ. ಹಗಲಿನಿಂದ ರಾತ್ರಿಗೆ ಅಥವಾ ರಾತ್ರಿಯಿಂದ ಹಗಲಿಗೆ ಬದಲಾಗುತ್ತಿರುವ ಭೂಮಿಯ ಸ್ಥಿತಿಗತಿ, ಮಾನವ ದೇಹದಲ್ಲೂ ಹಲವು ಪ್ರಚೋದನೆಗಳನ್ನು ಉಂಟುಮಾಡುತ್ತದೆ. ರಾತ್ರಿಯಿಡೀ ವಿಶ್ರಾಂತಿ ಪಡೆದ ದೇಹ ಮುಂಜಾನೆ ಲೈಂಗಿಕ ಚಟುವಟಿಕೆಯಲ್ಲಿ ಹಗುರವಾಗಿ ತೊಡಗಿಕೊಳ್ಳುವದನ್ನು ನೀವೂ ಅನುಭವಿಸಿದ್ದೀರಿ ತಾನೆ?

ಒಂಟಿ ಮಕ್ಕಳು

ನಿಮ್ಮ ಅಪ್ಪ- ಅಮ್ಮನಿಗೆ ನೀವು ಒಂಟಿ ಮಗುವಾಗಿದ್ದರೆ, ಆಗಲೂ ನೀವು ಬಹುಬೇಗನೆ ದೈಹಿಕ ಸಂಗಾತಿಯನ್ನು ಹುಡುಕಿಕೊಳ್ಳುವ ಸಾಧ್ಯತೆಯಿದೆ. ಇದಕ್ಕೆ ವೈಜ್ಞಾನಿಕ ಕಾರಣವನ್ನೂ ಕೊಡಬಹುದು ಅನಿಸುತ್ತದೆ. ಒಂಟಿ ಮಗುವಾಗಿ ಬೆಳೆದವರಿಗೆ ಜೊತೆಗೆ ಆಡುವವರು ಬೇಕು ಅನ್ನಿಸುವುದು ಬಾಲ್ಯದ ಸಹಜ ಸಂಗತಿ, ಈ ಬಾಲ್ಯವೇ ಮುಂದೆ ಯವ್ವನದಲ್ಲಿ ಎಕ್ಸ್‌ಟೆನ್ಸನ್‌ ಆಗುವುದು ತಾನೆ. ಯವ್ವನದಲ್ಲಿ ಅದು ಸಾಮಾನ್ಯ ಸಾಂಗತ್ಯಕ್ಕಿಂತಲೂ ದೈಹಿಕ ಹುಡುಕಾಟ, ಲೈಂಗಿಕ ಸುಖಗಳತ್ತ ವಿಸ್ತರಿಸುತ್ತದೆ.

click me!