ಡಾ ರಾಜ್‌ ನನಗೆ ಜಡೆ ಹಾಕಿಕೊಟ್ಟಿದ್ದರು, ಹುಬ್ಬಿನ ಗೆರೆ ತೀಡಿದ್ದರು; ಹೀಗಂದ್ರು ನಟಿ ಜಯಮಾಲಾ!

By Shriram Bhat  |  First Published Apr 26, 2024, 12:53 PM IST

ಮೇರು ನಟ ಡಾ ರಾಜ್‌ಕುಮಾರ್ ಅವರು ಕಲಾವಿದರಾಗಿ ಮಾತ್ರವಲ್ಲ, ಮಾನವೀಯತೆಯ ಮೂರ್ತಿಯಾಗಿ ಸಹ ಜನರ ಮೆಚ್ಚುಗೆ ಗಳಿಸಿದ್ದರು. ಅಂದು ಅವರ ಜತೆಯಲ್ಲಿ ನಟಿಸಿದ್ದ ನಟನಟಿಯರು, ಆರತಿ, ಭಾರತಿ, ಜಯಂತಿ, ಜಯಮಾಲಾ, ಲಕ್ಷ್ಮೀ, ಗೀತಾ...


ಡಾ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದ ಮೇರು ಕಲಾವಿದರು ಮಾತ್ರವಲ್ಲ, ಸಹಕಲಾವಿದರ ಅಚ್ಚುಮೆಚ್ಚಿನ ವ್ಯಕ್ತಿ ಕೂಡ ಆಗಿದ್ದರು. ಡಾ ರಾಜ್‌ ಅವರನ್ನು ಕನ್ನಡದ ಆಸ್ತಿ ಎಂದೇ ಎಲ್ಲರೂ ಭಾವಿಸಿದ್ದಾರೆ. ಲೆಜೆಂಡ್ ನಟ ಮಾತ್ರವಲ್ಲ, ಮಾನವೀಯತೆಯ ಸಾಕಾರ ಮೂರ್ತಿಯಂತಿದ್ದರು ಡಾ ರಾಜ್‌ಕುಮಾರ್ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. ಅವರ ಸಿನಿಮಾಗಳಲ್ಲಿ ಜತೆ ನಟಿಸಿದ ಸಹಕಲಾವಿದರಂತೂ ಅವರ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಅದರಂತೆ ನಟಿ ಜಯಮಾಲಾ ಸಹ ಡಾ ರಾಜ್‌ಕುಮಾರ್ ಜೊತೆಗಿನ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 

ಗಿರಿಕನ್ಯೆ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ನಟಿ ಜಯಮಾಲಾ ಅವರು ಹಂಚಿಕೊಂಡಿದ್ದರು. ಅವರಿಗೆ ಜಡೆ ಕೂಡ ಹಾಕಿಕೊಳ್ಳಲು ಬರುತ್ತಿರಲಿಲ್ಲವಂತೆ. ಡಾ ರಾಜ್‌ಕುಮಾರ್ ಅವರೇ ಖುದ್ದಾಗಿ ನಟಿ ಹಾಗೂ ಆ ಚಿತ್ರದ ನಾಯಕಿ ಜಯಮಾಲಾ ಅವರಿಗೆ ಜಡೆ ಹಾಕಿಕೊಟ್ಟಿದ್ದರಂತೆ. ಜತೆಗೆ, ಹುಬ್ಬಿನ ಗೆರೆಯನ್ನು ಅವರೇ ಸ್ವತಃ ತೀಡಿದ್ದರಂತೆ. ಜಯಮಾಲಾ ಅವರಿಗೆ ಯಾವ ಬಣ್ಣದ ಲಿಪ್‌ಸ್ಟಿಕ್ ಚೆನ್ನಾಗಿ ಒಪ್ಪುತ್ತದೆ, ಯಾವುದು ಒಪ್ಪೋದಿಲ್ಲ ಎಂಬ ಬಗ್ಗೆ ಬಗ್ಗೆ ಡಾ ರಾಜ್‌ ಸಲಹೆ ನೀಡುತ್ತಿದ್ದರಂತೆ. ಡಾ ರಾಜ್‌ಕುಮಾರ್ ಅವರು ಸಹ-ಕಲಾವಿದರನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ ಎನ್ನಬಹುದು. 

Latest Videos

undefined

ರಾಮಾಯಣ ಮಾಡ್ಬೇಕು, ರಾಮನಾಗಿ ನಾನು, ಸೀತೆಯಾಗಿ ನೀನು ನಟಿಸ್ಬೇಕು ಎಂದಿದ್ರಂತೆ ಡಾ ರಾಜ್‌ಕುಮಾರ್!

ಈ ಬಗ್ಗೆ ಮಾತನಾಡಿರುವ ನಟ ಜಯಮಾಲಾ ಅವರು ' ಎಲ್ಲೋ ಕೆಸರಿನಲ್ಲಿ ಹುಟ್ಟಿದ ಕಮಲವನ್ನು ಜಯದ ಮಾಲೆಯಾಗಿ ಪರಿವರ್ತನೆ ಮಾಡಲು ಆ ಮಹಾನ್ ಕಲಾವಿದ ಎಷ್ಟೊಂದು ಸಹಾಯ ಮಾಡಿದ್ದರು, ಅದೆಷ್ಟು ಶ್ರಮ ಪಟ್ಟಿದ್ದರು. ಬಹುಶಃ ಯಾವುದೋ ಜನ್ಮದ ಋಣಾನುಬಂಧ ಇರ್ಬೇಕು ಗಿರಿಕನ್ಯೆ ಚಿತ್ರದ ಮೊದಲ ಶಾಟ್ 'ಬಿಡಲಾರೆ ಎಂದೂ ನಿನ್ನ..' ಎಂಬ ಹಾಡಿನ ಮೊದಲ ಸಾಲಾಗಿತ್ತು. ಅದನ್ನು ನಾನು ಈಗಲೂ 'ಮರೆಯಲಾರೆ ಎಂದೂ ನಿನ್ನ..' ಎಂದು ಡಾ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡು ಹಾಡುತ್ತಾ ಇರುತ್ತೇನೆ' ಎಂದಿದ್ದಾರೆ ನಟಿ ಜಯಮಾಲಾ. 

ಸಮರ್ಜಿತ್ ಲಂಕೇಶ್ 'ಗೌರಿ' ಪ್ರೀ ಟೀಸರ್ ಬಿಡುಗಡೆ ಮಾಡಿದ ಅನಿಲ್ ಕುಂಬ್ಳೆ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್

ಒಟ್ಟಿನಲ್ಲಿ ಹೇಳಬೇಕು ಎಂದರೆ, ಮೇರು ನಟ ಡಾ ರಾಜ್‌ಕುಮಾರ್ ಅವರು ಕಲಾವಿದರಾಗಿ ಮಾತ್ರವಲ್ಲ, ಮಾನವೀಯತೆಯ ಮೂರ್ತಿಯಾಗಿ ಸಹ ಜನರ ಮೆಚ್ಚುಗೆ ಗಳಿಸಿದ್ದರು. ಅಂದು ಅವರ ಜತೆಯಲ್ಲಿ ನಟಿಸಿದ್ದ ನಟನಟಿಯರು, ಆರತಿ, ಭಾರತಿ, ಜಯಂತಿ, ಜಯಮಾಲಾ, ಲಕ್ಷ್ಮೀ, ಗೀತಾ ಅಥವಾ ನಟರಾದ ಶ್ರೀನಿವಾಸ್‌ ಮೂರ್ತಿ, ವಿಷ್ಣುವರ್ಧನ್, ಅಂಬರೀಷ್, ಅನಂತ್‌ನಾಗ್ ಮುಂತಾದ ಎಲ್ಲ ಕಲಾವಿದರು ಡಾ ರಾಜ್‌ಕುಮಾರ್ ಸಹೃದಯದ ಬಗ್ಗೆ ಮೆಚ್ಚುಗೆ ಮಾತನಾಡುತ್ತಾರೆ. ಇವೆಲ್ಲ ಕಾರಣಗಳಿಂದ ಡಾ ರಾಜ್‌ಕುಮಾರ್ ಅಷ್ಟೊಂದು ದೊಡ್ಡ ವ್ಯಕ್ತಿತ್ವವಾಗಿ ಬೆಳೆದು ಕರ್ನಾಟಕದ 'ಅಣ್ಣಾವ್ರು' ಎನಿಸಿಕೊಂಡರು. 

ಶುಭಮಂಗಳ: ಈ ಶತಮಾನದ ಮಾದರಿ ಹೆಣ್ಣಿಗೆ 'ಮಂಗಳಾರತಿ' ಮಾಡಿದ್ರಾ ಪುಟ್ಟಣ್ಣ ಕಣಗಾಲ್?

click me!