ಮದುವೆಯ ರಾತ್ರಿ ಗಂಡ ತನ್ನ ಪತ್ನಿಯ ನಗ್ನ ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಮಾಜಿ ಪ್ರೇಮಿ ಹಂಚಿಕೊಂಡಿರುವ ವೀಡಿಯೋವನ್ನು ಗಂಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ.
ಭೋಪಾಲ್: ಮದುವೆಯ ರಾತ್ರಿ ಗಂಡ ತನ್ನ ಪತ್ನಿಯ ನಗ್ನ ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಮಾಜಿ ಪ್ರೇಮಿ ಹಂಚಿಕೊಂಡಿರುವ ವೀಡಿಯೋವನ್ನು ಪತಿ ತನ್ನ ತಾಯಿ ಮತ್ತು ಸಹೋದರನಿಗೆ ತೋರಿಸಿದ್ದಾನೆ. ನಂತರ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ. ಅಶ್ಲೀಲ ವೀಡಿಯೊವನ್ನು ಪ್ರಸಾರ ಮಾಡಿದ ವ್ಯಕ್ತಿ ಮತ್ತು ಸಂಬಂಧಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನವವಿವಾಹಿತರು ತಮ್ಮ ವೈವಾಹಿಕ ಜೀವನವನ್ನು ಇನ್ನೂ ಪ್ರಾರಂಭಿಸರಲ್ಲಿಲ್ಲ. ಅಷ್ಟರಲ್ಲೇ ವರನಿಗೆ, ವಧುವಿನ ಮಾಜಿ ಪ್ರೇಮಿ ಯುವತಿಯ ನ್ಯೂಡ್ ವೀಡಿಯೋ ಕಳುಹಿಸಿದ್ದ. 22 ವರ್ಷದ ಯುವಕನ ಮದುವೆ ಐಶ್‌ಬಾಗ್‌ನ 19 ವರ್ಷದ ಯುವತಿಯೊಂದಿಗೆ ನಿಶ್ವಯವಾಗಿತ್ತು. ಆದ್ರೆ ಯುವತಿ ಬೇರೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದಳು. ಫೆಬ್ರವರಿ 24ರಂದು ನಿಶ್ಚಿತಾರ್ಥ ನಡೆದ ಯುವಕ ಹಾಗೂ ಯುವತಿ ವೀಡಿಯೋ ಚಾಟ್‌ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಯುವಕ ಆಕೆಯನ್ನು ಪುಸಲಾಯಿಸಿ ಸ್ಕ್ರೀನ್ ರೆಕಾರ್ಡಿಂಗ್ ಮೂಲಕ ನಗ್ನ ವೀಡಿಯೋವನ್ನು ಮಾಡಿಕೊಂಡಿದ್ದಾನೆ.
ಇನ್ಮುಂದೆ ಇನ್ಸ್‌ಟಾಗ್ರಾಂನಲ್ಲಿ ಬೆತ್ತಲೆ ಚಿತ್ರ ಕಳಿಸಿದ್ರೆ ತನ್ನಿಂತಾನೇ ಬ್ಲರ್!
ಆ ನಂತರ ಯುವತಿ ಎಂಗೇಜ್‌ಮೆಂಟ್ ಕ್ಯಾನ್ಸಲ್ ಮಾಡಿ ತಾನು ಸಂಬಂಧವಿಟ್ಟುಕೊಂಡಿದ್ದ ಯುವಕನ ಜೊತೆ ಓಡಿ ಹೋಗಿದ್ದಳು. ಇಬ್ಬರೂ ಮಂಗಳವಾದ ಮದುವೆಯಾಗಿದ್ದರು. ಈ ವಿಷಯವನ್ನು ತಿಳಿದ ಈ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಯುವತಿಯ ನಗ್ನ ವೀಡಿಯೋವನ್ನು ವರನಿಗೆ ಕಳುಹಿಸಿದ್ದಾನೆ. ಮದುವೆಯ ರಾತ್ರಿ ತನ್ನ ಹೆಂಡತಿಯ ಅಶ್ಲೀಲ ವೀಡಿಯೊವನ್ನು ನೋಡಿದ ವ್ಯಕ್ತಿ ಅದನ್ನು ತನ್ನ ತಾಯಿ ಮತ್ತು ಸಹೋದರನಿಗೆ ತೋರಿಸಿದನು. ಇಬ್ಬರೂ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲು ಸಲಹೆ ನೀಡಿದರು.
ಯುವತಿಯ ವೀಡಿಯೊವನ್ನು ಶೇರ್ ಮಾಡಿದ ವ್ಯಕ್ತಿ, ಅವನ ಸಹೋದರ ಮತ್ತು ತಾಯಿ ಮತ್ತು ಮಹಿಳೆಯ ಮಾಜಿ ಪ್ರಿಯಕರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ವೇಶ್ಯಾವಾಟಿಕೆ: 54 ವರ್ಷದ ಪ್ರಿಯಕರನ ನಗ್ನ ಡ್ಯಾನ್ಸ್ ವೀಡಿಯೋ ಪೋಸ್ಟ್ ಮಾಡಿದ 21ರ ಯುವತಿ ಅರೆಸ್ಟ್