ಮಂಟಪಕ್ಕೆ ಸಿದ್ಧಳಾಗಿ ಬಂದು ಕೊನೆಯ ಕ್ಷಣದಲ್ಲಿ ಮದ್ವೆ ಬೇಡವೆಂದು ಓಡಿಹೋದ ವಧು!

By Vinutha Perla  |  First Published Apr 26, 2024, 1:25 PM IST

ಮದುವೆಗೆ ಎಲ್ಲಾ ರೀತಿಯ ಸಿದ್ಧತೆ ನಡೆದಿತ್ತು. ಮಂಟಪ ಡೆಕೊರೇಶನ್‌, ಫುಡ್‌ ಕೆಲಸ ಮುಗಿದಿತ್ತು. ವಧು-ವರರು ಸುಂದರವಾಗಿ ರೆಡಿಯಾಗಿದ್ದರು. ಇನ್ನೇನು ತಾಳಿ ಕಟ್ಟೋ ಶಾಸ್ತ್ರ ಮುಗಿದು ಮದ್ವೆ ಮುಗೀತು ಅನ್ನುವಷ್ಟರಲ್ಲಿ ವಧು ಮಂಟಪದಿಂದ ಎದ್ದು ಓಡಿಹೋಗಿದ್ದಾಳೆ. ಉತ್ತರಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದೆ.


ಕಾನ್ಪುರ: ಮದುವೆ ಅನ್ನೋ ಸಂಬಂಧ ಎಷ್ಟು ಸರಳವಾಗಿದೆಯೋ ಅಷ್ಟೇ ಕಷ್ಟಕರವಾಗಿಯೂ ಇದೆ. ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಹಲವಾರು ಮಂದಿ ಕನ್‌ಫ್ಯೂಶನ್ ಮಾಡಿಕೊಳ್ಳುತ್ತಾರೆ. ವ್ಯಕ್ತಿಯ ಆಯ್ಕೆ ಸರಿಯಾಗಿದೆಯೋ ಇಲ್ಲವೋ ಎಂಬ ಬಗ್ಗೆ ಕೊನೆಯ ವರೆಗೂ ಗೊಂದಲವಿರುತ್ತದೆ. ಹೀಗಾಗಿ ಅದೆಷ್ಟೋ ಮದುವೆ ಮನೆಯಿಂದ ಕೊನೆ ಕ್ಷಣದಲ್ಲಿ ವಧು-ವರರು ಓಡಿ ಹೋಗುತ್ತಾರೆ. ಹಾಗೆಯೇ ಮದುವೆ ಮನೆಯಿಂದ ವಧು ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಮಂಟಪಕ್ಕೆ ಸಿದ್ಧಳಾಗಿ ಬಂಧ ವಧು ಎಲ್ಲಾ ಶಾಸ್ತ್ರಗಳನ್ನು ಪೂರೈಸಿದ್ದಳು. ಆದ್ರೆ ಕೊನೆಯ ಕ್ಷಣದ ವಿಧಿ ವಿಧಾನಗಳನ್ನು ಪೂರೈಸಲು ನಿರಾಕರಿಸಿ ತನ್ನ ರೂಮಿಗೆ ಓಡಿಹೋದಳು. ಮದುವೆಗೆ ಆಗಮಿಸಿದವರೆಲ್ಲಾ ಇದರಿಂದ ಆಶ್ಚರ್ಯಗೊಂಡರು. ವಧುವಿನ ಸಂಬಂಧಿಕರು ಆಕೆಯ ಮನವೊಲಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸಿದರೂ ಯಾವುದೇ ರೀತಿ ಪ್ರಯೋಜನವಾಗಲ್ಲಿಲ್ಲ.

Latest Videos

undefined

ಮಟನ್ ಸಾರು ಕೊಟ್ಟಿಲ್ಲ, ಉಂಗುರ ಬದಲಾಯಿಸಿದ ಬೆನ್ನಲ್ಲೇ ವರನ ಕುಟುಂಬದಿಂದ ಮದುವೆ ರದ್ದು!

ಮದುವೆಗೆ ವಧು ಖುಷಿಯಿಂದಲೇ ಒಪ್ಪಿದ್ದಳು. ವಧು ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಿಂದ ಬಂದಿದ್ದು, ವರನ ಮದುವೆಯ ಮೆರವಣಿಗೆಯು ಸಂಗೀತ ಮತ್ತು ನೃತ್ಯದೊಂದಿಗೆ ಸ್ಥಳಕ್ಕೆ ಆಗಮಿಸಿತು ಮತ್ತು ವಧುವಿನ ಕುಟುಂಬ ಮತ್ತು ಸಂಬಂಧಿಕರು ಅವರನ್ನು ಪ್ರೀತಿಯಿಂದ ಸ್ವಾಗತಿಸಿದರು. ಆದರೆ ಕೊನೆಯ ಕ್ಷಣದಲ್ಲಿ ವಧು ಮದುವೆಯಾಗಲು ನಿರಾಕರಿಸಿದ್ದಾಳೆ.

ವಧುವಿನ ನಿರ್ಧಾರವನ್ನು ಬದಲಾಯಿಸಲು ಸಂಬಂಧಿಕರು ಪ್ರಯತ್ನಿಸಿದರೂ, ಅವಳು ದೃಢವಾಗಿ ಉಳಿದಿದ್ದಳು. ಎರಡೂ ಕಡೆಯವರು ಅಂತಿಮವಾಗಿ ಚೌಬೆಪುರ ಪೊಲೀಸ್ ಠಾಣೆಯನ್ನು ತಲುಪಿದರು, ಅಲ್ಲಿ ಪೊಲೀಸರು ಎರಡೂ ಕಡೆಯ ಹಿರಿಯರ ನಡುವೆ ಮಾತುಕತೆ ನೆಡಸಿದರು.

ಬಲವಂತವಾಗಿ ಸ್ವೀಟ್ ತಿನ್ನಿಸಿದ ವರ, ಮುಖಕ್ಕೆ ಉಗುಳಿ, ಕಾಲಿನಿಂದ ತುಳಿದು ರಂಪಾಟ ಮಾಡಿದ ವಧು!

ಸಭೆಯಲ್ಲಿ, ವಧು ಮದುವೆ ಮೆರವಣಿಗೆಯನ್ನು ತರದಂತೆ ವರನಿಗೆ ತಿಳಿಸಿದ್ದಾಗಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾಳೆ. ಇದರ ನಂತರ, ಎರಡೂ ಕಡೆಯವರು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಲಿಖಿತ ಒಪ್ಪಂದಕ್ಕೆ ಬಂದ ನಂತರ ಶಾಂತಿಯುತವಾಗಿ ತಮ್ಮ ಗ್ರಾಮಕ್ಕೆ ಮರಳಿದರು.

click me!