ನ್ಯೂಜಿಲೆಂಡ್‌ನಲ್ಲಿ 2009ರ ಬಳಿಕ ಹುಟ್ಟಿದವರಿಗೆ ತಂಬಾಕು ನಿಷಿದ್ಧ

By Kannadaprabha NewsFirst Published Dec 14, 2022, 2:36 PM IST
Highlights

ಧೂಮಪಾನದ (Smoking) ಮೇಲೆ ಸಂಪೂರ್ಣ ನಿಷೇಧ (Ban)ವನ್ನು ಮುಂದಿನ ವರ್ಷದಿಂದ ಹಂತಹಂತವಾಗಿ ಜಾರಿಗೆ ತರಲು ನ್ಯೂಝಿಲ್ಯಾಂಡ್ ನಿರ್ಧರಿಸಿದೆ. 2008ನೇ ಇಸವಿಯ ಆನಂತರ ಜನಿಸಿದವರೆಲ್ಲರಿಗೂ ಆರಂಭದಲ್ಲಿ ಸಿಗರೇಟುಗಳನ್ನು ಖರೀದಿಸುವುದಕ್ಕೆ ನಿಷೇಧ ಹೇರಲಾಗುವುದು ಎಂದು ತಿಳಿಸಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಿಡ್ನಿ: ಭವಿಷ್ಯದ ಪೀಳಿಗೆಯನ್ನು ತಂಬಾಕು ಪದಾರ್ಥಗಳ ದುಷ್ಪರಿಣಾಮಗಳಿಂದ ಮುಕ್ತವಾಗಿಸುವ ನಿಟ್ಟಿನಲ್ಲಿ ನ್ಯೂಜಿಲೆಂಡ್‌ ಮೊದಲ ಹೆಜ್ಜೆಯನ್ನಿಟ್ಟಿದೆ. 2025ರ ವೇಳೆಗೆ ದೇಶವನ್ನು ಧೂಮಪಾನ ಮುಕ್ತವಾಗಿಸುವ ಉದ್ದೇಶದೊಂದಿಗೆ ಹೊಸ ‘ಧೂಮಪಾನ ವಿರೋಧಿ’ ಕಾನೂನುಗಳನ್ನು ನ್ಯೂಜಿಲೆಂಡ್‌ ಸಂಸತ್ತು ಮಂಗಳವಾರ ಅಂಗೀಕರಿಸಿದೆ. ಈ ಹೊಸ ನಿಯಮಗಳ (Rules) ಪ್ರಕಾರ ನ್ಯೂಜಿಲೆಂಡ್‌ನಲ್ಲಿ 2009ರ ಜ.1ರ ನಂತರ ಹುಟ್ಟಿದ ವ್ಯಕ್ತಿಗೆ ತಂಬಾಕು ಪದಾರ್ಥಗಳನ್ನು ಮಾರಾಟ (Sale) ಮಾಡುವಂತಿಲ್ಲ. ಈ ಕಾನೂನನ್ನು ಉಲ್ಲಂಘಿಸಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಿದಲ್ಲಿ 80 ಲಕ್ಷ ರೂ. ಭಾರೀ ದಂಡ (Fine) ವಿಧಿಸಲಾಗುವುದು ಎಂದು ತಿಳಿಸಲಾಗಿದೆ. 2009ರ ನಂತರ ಹುಟ್ಟಿದವರ ಮೇಲೆ ಹೇರಲಾಗಿರುವ ತಂಬಾಕು ನಿಷೇಧವು ಜೀವನ ಪರ್ಯಂತ ಮುಂದುವರೆಯಲಿದೆ.

ತಂಬಾಕು ವ್ಯಾಪಾರಿಗಳ ಸಂಖ್ಯೆಯನ್ನು ಇಳಿಸಲು ನಿರ್ಧಾರ
ಇದರೊಂದಿಗೆ ಸಿಗರೆಟ್‌ಗಳಲ್ಲಿ ಸೇರಿಸಲಾಗುವ ನಿಕೋಟಿನ್‌ ಪ್ರಮಾಣವನ್ನು ತಗ್ಗಿಸುವುದು ಹಾಗೂ ಅಲ್ಲದೇ ತಂಬಾಕು ಪದಾರ್ಥಗಳನ್ನು ಮಾರುವ ಚಿಲ್ಲರೆ ವ್ಯಾಪಾರಿಗಳ ಸಂಖ್ಯೆಯಲ್ಲಿ ಶೇ.90ರಷ್ಟುಇಳಿಕೆ ಮಾಡುವ ಬಗ್ಗೆಯೂ ಹೊಸ ಕಾನೂನಿನಲ್ಲಿ ಘೋಷಿಸಲಾಗಿದೆ. 2023ರ ವೇಳೆಗೆ ಪರವಾನಗಿ ಪಡೆದ ತಂಬಾಕು ವ್ಯಾಪಾರಿಗಳ ಸಂಖ್ಯೆಯನ್ನು 6000ರಿಂದ 600ಕ್ಕೆ ಇಳಿಕೆ ಮಾಡಲಾಗುವುದು ಎಂದು ಸಂಸತ್ತು ತಿಳಿಸಿದೆ. ಧೂಮಪಾನ, ತಂಬಾಕು ಪದಾರ್ಥಗಳ ಸೇವನೆಯನ್ನು ತ್ಯಜಿಸುವುದರಿಂದ ಜನರು ದೀರ್ಘಕಾಲ ಆರೋಗ್ಯವಾಗಿ (Healthy) ಬದುಕಬಹುದಾಗಿದೆ.

ಶೀಘ್ರದಲ್ಲೇ ಬಿಡಿ ಸಿಗರೇಟ್‌ ಸೇಲ್‌ ನಿಷೇಧ..! ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿ ಸಲಹೆ

ಇದರಿಂದ ಶ್ವಾಸಕೋಶ (Lungs) ಸಂಬಂಧಿ ಕಾಯಿಲೆಗಳು, ವಿವಿಧ ಬಗೆಯ ಕ್ಯಾನ್ಸರ್‌, ಹೃದಯಾಘಾತ (Heartattack), ಸ್ಟೊ್ರೕಕ್‌ ಆಗುವ ಅಪಾಯ ಇಳಿಕೆಯಾಗಿ ಆರ್ಥಿಕತೆಗೆ 41.3 ಸಾವಿರ ಕೋಟಿ ರೂ. ಲಾಭವಾಗಲಿದೆ ಎಂದು ಸಂಸತ್ತು ಹೇಳಿದೆ. ಈ ಹಿಂದೆ 2010ರಲ್ಲಿ ಭೂತಾನ್‌ ಕೂಡಾ ದೇಶಾದ್ಯಂತ ಸಿಗರೇಟ್‌ ಮಾರಾಟದ ಮೇಲೆ ನಿಷೇಧ ಹೇರಿತ್ತು.

ಇದೇ ವೇಳೆ ದೇಶದಲ್ಲಿ ತಂಬಾಕು ಉತ್ಪನ್ನಗಳಲ್ಲಿ ನಿಕೋಟಿನ್‌ನ ಪ್ರಮಾಣವನ್ನು ಕಡಿಮೆಗೊಳಿಸಲು ಕೂಡಾ ಅದು ಯೋಜನೆ ರೂಪಿಸಿದೆ. ಮಸೂದೆಯು ಧೂಮಪಾನ ಸೇವನೆಗೆ ಇರುವ ಕನಿಷ್ಠ ವಯೋಮಿತಿ (Age limit)ಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಲೇ ಹೋಗುತ್ತದೆ. ಆ ಮೂಲಕ ದೇಶದಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವ ವ್ಯಕ್ತಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ. 'ನೂತನ ಮಸೂದೆಯು ಧೂಮಪಾನ ಮುಕ್ತ ಭವಿಷ್ಯದೆಡೆಗೆ ಒಂದು ಹೆಜ್ಜೆಯಾಗಿದೆ' ಎಂದು ಈ ಶಾಸನದ ಹಿಂದಿರುವ ಕ್ತಿಯೆಂದೇ ಪರಿಗಣಿಸಲ್ಪಟ್ಟಿರುವ ಸಂಪುಟ ಸಚಿವೆ ಆಯೇಶಾ ವೆರ್ರಾಲ್ ತಿಳಿಸಿದ್ದಾರೆ.

ಸಿಗರೇಟ್ Vs ಗಾಂಜಾ: ಯಾವುದು ತುಂಬಾ ಅಪಾಯಕಾರಿ? ಸಂಶೋಧನೆ ಹೇಳೋದೇನು?

'ನೂತನ ಮಸೂದೆಯ ಜಾರಿಯಿಂದಾಗಿ ಸಾವಿರಾರು ವ್ಯಕ್ತಿಗಳು ಸುದೀರ್ಘ, ಆರೋಗ್ಯಕರ ಬದುಕನ್ನು ಸಾಗಿಸಬಹುದಾಗಿದೆ. ಇದರಿಂದಾಗಿ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು, ಅಂಗವೈಕಲ್ಯ ಮತ್ತಿತರ ಅನಾರೋಗ್ಯಗಳಿಗೆ ವ್ಯಯಿಸುವ ವೆಚ್ಚವು ಕಡಿಮೆಯಾಗಿ ಆರೋಗ್ಯಪಾಲನಾ ವ್ಯವಸ್ಥೆಗೆ 3.2 ಶತಕೋಟಿ ಡಾಲರ್ ಉಳಿತಾಯವಾಗಲಿದೆ'' ಎಂದು ತಿಳಿದುಬಂದಿದೆ. ನ್ಯೂಝಿಲ್ಯಾಂಡ್‌ನಲ್ಲಿ ಒಟ್ಟು ಜನಸಂಖ್ಯೆಯ ಕೇವಲ 8 ಶೇಕಡಾ ಮಂದಿ ಮಾತ್ರವೇ ಧೂಮಪಾನಿಗಳೆಂದು ಅಂದಾಜಿಸಲಾಗಿದೆ.

ಆದರೆ, ನ್ಯೂಝಿಲ್ಯಾಂಡ್ ಸರಕಾರ ಮಂಗಳವಾರ ಅಂಗೀಕರಿಸಿರುವ ಧೂಮಪಾನ ಮುಕ್ತ ಪರಿಸರ ಮಸೂದೆಯು, 2025ರೊಳಗೆ ದೇಶದಲ್ಲಿನ ಧೂಮಪಾನಿಗಳ ಸಂಖ್ಯೆಯನ್ನು ಶೇ.5ಕ್ಕೆ ಇಳಿಸುವ ಗುರಿಯನ್ನು ಹೊಂದಿದೆ.

ಧಮ್ ಎಳೆಯದೇ ಹೋದ್ರೂ ಮಹಿಳೆಯರನ್ನು ಹೆಚ್ಚು ಕಾಡ್ತಿದೆ Lung Cancer

click me!