ನಿಂತ್ಕೊಂಡು ನೀರು ಕುಡಿತೀರಾ? ಈ ಸಮಸ್ಯೆ ಶುರು ಆಗತ್ತೆ ಅಂತಾರೆ ವೈದ್ಯರು!

ಮನುಷ್ಯ ನಿತ್ಯ ಮೂರು ಲೀಟರ್‌ ನೀರು ಕುಡಿಯಬೇಕು ಎನ್ನುತ್ತಾರೆ. ಈಗ ನಿಂತ್ಕೊಂಡು ನೀರು ಕುಡಿದರೆ ಕೆಲ ಸಮಸ್ಯೆಗಳು ಆಗುತ್ತವೆ ಎನ್ನುವ ಮಾತಿದೆ. ಹಾಗಾದರೆ ಇದು ನಿಜವೇ? ಏನಾಗುತ್ತದೆ?

is it okay to drink water while standing what will happen

ಇಂದು ಆರು ವರ್ಷದ ಮಗುವಿಗೆ ಹೃದಯಾಘಾತ ಆಗುತ್ತಿದೆ. ಡ್ಯಾನ್ಸ್‌ ಮಾಡುತ್ತಿದ್ದಂತೆ, ಮಾತನಾಡುತ್ತಿದ್ದಂತೆ, ಡ್ರೈವಿಂಗ್‌ ಮಾಡುತ್ತಿದ್ದಂತೆ ಪ್ರಾಣ ಬಿಟ್ಟವರು ಎಷ್ಟೋ ಜನ ಇದ್ದಾರೆ, ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ತಗೊಂಡರೂ ಕೂಡ ಸಾಲದು. ಆದರೆ ಆರೋಗ್ಯದ ವಿಚಾರದಲ್ಲಿ ಹಾಗೆ ಮಾಡಬಾರದು, ಹೀಗೆ ಮಾಡಬಾರದು ಎನ್ನುವ ಮಾತು ಕೂಡ ಇದೆ. ಅಂತೆಯೇ ಕೆಲವರು ನಿಂತುಕೊಂಡು ನೀರು ಕುಡಿಯಬಾರದು ಎನ್ನುತ್ತಾರೆ.

ನಿಂತುಕೊಂಡು ನೀರು ಕುಡಿದರೆ ಏನಾಗುತ್ತದೆ? 
ನಾವು ನಿಂತುಕೊಂಡು ನೀರು ಕುಡಿಯುವಾಗ, ಅದು ನಮ್ಮ ಜಾಯಿಂಟ್‌ಗಳ ಮೇಲೆ  ಪ್ರಭಾವ ಬೀರಬಹುದು, ನೋವು ಕೊಡಬಹುದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ನಾವು ನೀರು ಕುಡಿಯುವ ಮೊದಲು ಕುಳಿತುಕೊಳ್ಳಬೇಕು, ಶರೀರಕ್ಕೆ ವಿಶ್ರಾಂತಿ ಕೊಡಬೇಕು ಅಂತ ಹೇಳ್ತಾರೆ. ಆದರೆ ಇದರಲ್ಲಿ ಎಷ್ಟು ಸತ್ಯವಿದೆ? 

Latest Videos

ಪ್ರತಿದಿನ ಬೆಚ್ಚಗಿನ ನಿಂಬೆ ನೀರು ಕುಡಿದರೆ ತೆಳ್ಳಗಾಗುವ ಜೊತೆಗೆ ಹತ್ತಾರು ಪ್ರಯೋಜನ

ಇದು ನಿಜಕ್ಕೂ ಸುಳ್ಳೇ?
ಡಯೆಟಿಷಿಯನ್‌ ಜೂಹಿ ಅರೋರ ಅವರು, "ಪೀಳಿಗೆಗಳಿಂದ ಈ ರೀತಿ ಗಾಸಿಪ್‌ಗಳು ಸೃಷ್ಟಿ ಆಗುತ್ತಿವೆ. ಇದಕ್ಕೆ ವೈಜ್ಞಾನಿಕ ಕಾರಣಗಳು ಇಲ್ಲ. ನಾವು ನೀರು ಕುಡಿದಾಗ, ಆಹಾರ ನಾಳದ ಮೂಲಕ ಹೊಟ್ಟೆಗೆ ಹೋಗುತ್ತದೆ. ನಿಂತುಕೊಂಡು ನೀರು ಕುಡಿಯೋದರಿಂದ ನಮ್ಮ ಮೊಣಕಾಲುಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನೋದು ದೊಡ್ಡ ಸುಳ್ಳು. ನಿಂತುಕೊಂಡು ನೀರು ಕುಡಿಯೋದರಿಂದ ಮೊಣಕಾಲು ಆರೋಗ್ಯ ಹಾಳಾಗುತ್ತದೆ ಎನ್ನೋದಿಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯವಿಲ್ಲ. ಆದರೆ, ಕೆಲವರು ಮಾತ್ರ ನಿಂತುಕೊಂಡು ನೀರು ಕುಡಿಯುವಾಗ ನೀರು ಬಹುಬೇಗ ಹೊಟ್ಟೆಗೆ ಹೋಗುತ್ತದೆ, ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಆಗುತ್ತದೆ ಎಂದು ನಂಬಿದ್ದಾರೆ. ಆದರೆ ಇದು ವಿಶೇಷವಾಗಿ ಮೊಣಕಾಲು ಆರೋಗ್ಯಕ್ಕೆ ಸಂಬಂಧ ಹೊಂದಿಲ್ಲ” ಎಂದು ಹೇಳುತ್ತಾರೆ.

ನಿಂತು ನೀರು ಕುಡಿದರೆ ಏನಾಗುತ್ತದೆ?
ನಾವು ನಿಂತುಕೊಂಡು ನೀರು ಕುಡಿಯುವಾಗ, ನೀರು ಆಹಾರ ನಾಳದ ಮೂಲಕ ವೇಗವಾಗಿ ಹೊಟ್ಟೆಗೆ ಹೋಗುತ್ತದೆ, ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ವ್ಯತ್ಯಯ ಮಾಡುತ್ತದೆ. ನಿಂತುಕೊಂಡು ನೀರು ಕುಡಿಯುವಾಗ, ನರಗಳಿಗೆ ಒತ್ತಡ ಆಗುವುದು, ಇದು ದೇಹದಲ್ಲಿನ ದ್ರವಗಳ ಸಮತೋಲನ ಹಾಳು ಮಾಡುತ್ತದೆ. ಇದರಿಂದ ಮುಂಬರುವ ದಿನಗಳಲ್ಲಿ ಜಂಟಿಗಳಲ್ಲಿ ದ್ರವ ಸಂಗ್ರಹಣೆಗೆ ಕಾರಣವಾಗಬಹುದು, ಇದು ಆರ್ಥ್ರೈಟಿಸ್‌ಗೆ ಕಾರಣವಾಗುತ್ತದೆ.

ಕನ್ನಡಿಗರಿಗೆ ಕುಡಿಯಲು ನೀರಿಲ್ಲ, ಕೃಷ್ಣ-ಭೀಮಾ ನದಿಗೆ ನೀರು ಬಿಡಿ: ಮಹಾರಾಷ್ಟ್ರಕ್ಕೆ ಪತ್ರ ಬರೆದ ಸಿದ್ದರಾಮಯ್ಯ!

ಡಾ. ವಿಪುಲ್ ರುಸ್ತ್ಗಿ ಅವರು, ನಾವು ನಿಂತುಕೊಂಡು ನೀರು ಕುಡಿಯುವಾಗ ಅಗತ್ಯವಿರುವ ಪೋಷಕಾಂಶಗಳು, ವಿಟಮಿನ್‌ಗಳು ಯಕೃತ್ ಮತ್ತು ಜೀರ್ಣಾಂಗಕ್ಕೆ ತಲುಪುವುದಿಲ್ಲ ಎಂದು ಹೇಳಿದ್ದಾರೆ. “ನಿಂತುಕೊಂಡು ನೀರು ಕುಡಿಯುವಾಗ, ದ್ರವವು ಯಾವುದೇ ಫಿಲ್ಟರ್‌ ಇಲ್ಲದೆ, ಹೆಚ್ಚಿನ ಒತ್ತಡದಲ್ಲಿ ಕೆಳಗಿನ ಹೊಟ್ಟೆಗೆ ಹರಿಯುತ್ತದೆ. ಇದರಿಂದ ನೀರಿನ ಅಶುದ್ಧಯು ಮೂತ್ರಪಿಂಡದಲ್ಲಿ ಶೇಖರಣೆ ಆಗುವುದು. ಇದರಿಂದ ಮೂತ್ರಪಿಂಡಗಳ ಕಾರ್ಯಕ್ಕೆ ಹಾನಿ ಆಗುತ್ತದೆ” ಎಂದು ಡಾ. ವಿಪುಲ್ ಅವರು ಹೇಳಿದ್ದಾರೆ. 
 

vuukle one pixel image
click me!