
ಸ್ಯಾಂಡಲ್‌ವುಡ್ ನಟ ಧ್ರಯ ಸರ್ಜಾ ಅವರು ಪಹಲ್ಗಾಮ್ ಟೆರರಿಸ್ಟ್ ದಾಳಿಯ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. 'ಆ ಬಾಸ್ಟರ್ಡ್ ಬಗ್ಗೆ ಏನು ಮಾತಾಡೋದು..?'ಎಂದು ಬೈದಿದ್ದಾರೆ ನಟ ಧ್ರುವ ಸರ್ಜಾ. ಟೆರರಿಸ್ಟ್ಗಳಿಗೆ ಬಾಸ್ಟರ್ಡ್ ಎಂದು ಬೈದ ಧ್ರುವ ಸರ್ಜಾ, 'ಅವರಿಗೆ ಅರ್ಥ ಆಗೋ ಭಾಷೆನಲ್ಲೋ ನಮ್ಮ ಇಂಡಿಯನ್ ಆರ್ಮಿ ಉತ್ತರ ಕೊಟ್ಟೆ ಕೊಡುತ್ತೆ, ಸಿಂಧು ನದಿ ನೀರನ್ನು ಬಂದ್ ಮಾಡಿದ್ದಾರೆ' ಎಂದಿದ್ದಾರೆ.
ಜೊತೆಗೆ, 'ನಮ್ಮ ಭಗವದ್ಗೀತೆನಲ್ಲೇ ಇದೆ ತಾಳ್ಮೆಯಿಂದ ಇರ್ಬೇಕು. ಬೇಗ ರಿಸಲ್ಟ್ ಸಿಗುತ್ತೆ, ದೇವರ ರೂಪದಲ್ಲಿ ಇಂಡಿಯನ್ ಆರ್ಮಿ ಶಿಕ್ಷೆ ಕೊಡ್ತಾರೆ.. ಫ್ಯಾಮಿಲಿ ನೋಡ್ತಿರ್ತಾರೆ ನಮ್ಮ ಬಾಯಲ್ಲಿ ಬೇರೆಯವರ ಮಾತು ಬಂದ್ರೆ ತಪ್ಪಾಗುತ್ತೆ.. 'ಮಾರ್ಟಿನ್' ಸಮಯದಲ್ಲಿ ಆ ಸ್ಥಳದಲ್ಲೇ ಚಿತ್ರೀಕರಣ ಮಾಡಿದ್ವಿ.
ಜಮ್ಮು ಕಾಶ್ಮೀರ ನಮ್ಮ ಕಿರೀಟ ಯಾವತ್ತಿದ್ರೂ ನಮ್ಮದೇ.. ಎಂದಿದ್ದಾರೆ. ಜೊತೆಗೆ, ನಾವು ಯುದ್ಧ ಪ್ರಾರಂಭ ಮಾಡಿಲ್ಲ.. ಮಾಡಿದ್ದು ಅವ್ರು..' ಎಂದು ಹೇಳಿ ಮುಗಿಸಿದ್ದಾರೆ.
ಕನ್ನಡ ನಾಡಿನ ಹೆಮ್ಮೆ ಡಾ. ರಾಜ್, ನಟ ಸಾರ್ವಭೌಮನಿಗೆ ಕರುನಾಡ ನಮನ
ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಇಡೀ ವಿಶ್ವದೆಲ್ಲೆಡೆ ಕ್ರೋಧ ವ್ಯಕ್ತವಾಗಿದೆ. ಅಮಾಯಕರು, ಏನೂ ತಪ್ಪು ಮಾಡಿಲ್ಲದ ಮುಗ್ಧ ಜೀವಿಗಳು ಸಾವನ್ನಪ್ಪಿರುವ ಬಗ್ಗೆ ಹಲವರು ಸಂತಾಪ ಸೂಚಿಸಿದ್ದಾರೆ. ಭಯೋತ್ಪಾದನೆಯನ್ನು ಬೇರು ಸಹಿತ ಮಟ್ಟಹಾಕಬೇಕೆಂದು ಎಲ್ಲಾ ಕಡೆಯಿಂದ ಕೂಗು ಕೇಳಿಬರುತ್ತಿದೆ. ಈ ಕೂಗು ಮೊದಲಿನಿಂದಲೂ ಇತ್ತು. ಆದರೆ, ಕೆಲವರು ಆ ಬಗ್ಗೆ ಅಪಸ್ವರ ಎತ್ತುತ್ತ, 'ಭಯೋತ್ಪಾದನೆಗೆ ಧರ್ಮವಿಲ್ಲ, ರಾಷ್ಟ್ರೀಯತೆಯಿಲ್ಲ'
ಎಂದು ಬೊಬ್ಬೆಹೊಡೆಯುತ್ತಿದ್ದರು. ಆದರೆ, ಈಗ ಭಯೋತ್ಪಾದನೆ ಧರ್ಮದ ಆಧಾರದಲ್ಲೇ ನಡೆದಿದೆ ಎಂಬುದು ಇಡೀ ಜಗತ್ತಿಗೇ ಗೊತ್ತಾಗಿದೆ. ಆ ಕಾರಣಕ್ಕೆ, ಈಗ ಒಗ್ಗಟ್ಟು ಮೂಡತೊಡಗಿದೆ.
ಭಯೋತ್ಪಾದನೆಯನ್ನು ಈ ಜಗತ್ತಿನಿಂದ ತೊಲಗಿಸಲೇಬೇಕೆಂದು ಅಮೆರಿಕಾ, ರಷ್ಯಾ ಹಾಗೂ ಇಸ್ರೇಲ್ ಸೇರಿದಂತೆ ಹಲವು ದೇಶಗಳು ಈಗ ಬೊಬ್ಬೆ ಹೊಡೆಯತೊಡಗಿವೆ. ಉಗ್ರರ ಉಪಟಳದಿಂದ, ದೇಶದ ಒಳಗಿನ ಹಾಗೂ ಹೊರಗಿನ ಧರ್ಮಾಂಧರ ದಾಳಿಗಳಿಂದ ಭಾರತ ನಿರಂತರವಾಗಿ ನಲುಗುತ್ತಿದೆ. ಆದರೆ, ಅದರಲ್ಲೂ ರಾಜಕೀಯ ಮಾಡುತ್ತ ಇಡೀ ವಿಶ್ವಿಷ್ಟು ದಿನ 'ಧರ್ಮಕ್ಕೂ ಉಗ್ರರಿಗೂ ಸಂಬಂಧವಿಲ್ಲ' ಎಂದೇ ಹೇಳುತ್ತಿತ್ತು. ಆದರೀಗ ಮೊದಲ ಬಾರಿಗೆ ಜಗತ್ತು ಉಗ್ರಕೃತ್ಯಕ್ಕೆ ಧರ್ಮದ ಬಣ್ಣ ಇದೆ ಎಂಬುದನ್ನು ಅರ್ಥ ಮಾಡಿಕೊಂಡಿದೆ. ಹೀಗಾಗಿ ಎಲ್ಲಾ ಕಡೆ ಈ ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಈ ದಾಳಿಯ ಬಗ್ಗೆ ಹಾಗೂ ಅದನ್ನು ನಿರ್ಮೂಲನ ಮಾಡುವ ಬಗ್ಗೆ ಭಾರೀ ಕೂಗು ಎದ್ದಿದೆ.
ಕಾಲು ಮುಟ್ಟಿ ನಮಸ್ಕರಿಸಲು ಸುಧಾರಾಣಿಗೆ ಬಿಡಲೇ ಇಲ್ಲ ಅಣ್ಣಾವ್ರು; ಅಷ್ಟೊಂದು ಕೋಪವಿತ್ತಾ?
ಇದನ್ನೇ ನಟ ಧ್ರವ ಸರ್ಜಾ ಕೂಡ ಹೇಳಿದ್ದಾರೆ. ಈ ಸಮಯದಲ್ಲಿ ಜಗತ್ತಿನಲ್ಲಿ ಉಗ್ರರ ಉಪಟಳದಿಂದ ಮುಕ್ತಿ ಹೊಂದಲು ಸಕಾಲ ಎಂಬ ಅರ್ಥದಲ್ಲಿಯೇ ಅವರೂ ಮಾತನ್ನಾಡಿದ್ದಾರೆ. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಿ ದಿಟ್ಟ ಹೆಜ್ಜೆ ಇಡುತ್ತಿದೆ ಎಂದಿದ್ದಾರೆ ನಟ ಧ್ರುವ ಸರ್ಜಾ. ಸದ್ಯಕ್ಕ, ಪಾಕಿಸ್ತಾನದ ಜೀವನಾಡಿಯಾಗಿರುವ ಸಿಂಧೂ ನದಿಯ ನೀರಿನ್ನು ತಡೆಹಿಡಿಯುವ ನಿರ್ಧಾರ ಮಾಡಿರುವುದು ಸರಿಯಾದ ನಿರ್ಧಾರ ಎಂದಿದ್ದಾರೆ. ನಮ್ಮ ಭಾರತದ ಮುಂದಿನ ನಿರ್ಧಾರ ಏನಿರಬಹುದು ಎಂಬ ಕುತೂಹಲ ವಿಶ್ವದೆಲ್ಲೆಡೆ ಮೂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.